ದೆಹಲಿಯ ಮೇಲೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಸಂಸತ್ತಿನಲ್ಲಿ “ಸೋಲಿಸಲು” ತಮ್ಮ ಪಕ್ಷದ ರಾಜ್ಯಸಭಾ ಸಂಸದರು ದೆಹಲಿಗೆ ‘ಹಾರಿ ಬರುತ್ತಿದ್ದಾರೆ’ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ’ಬ್ರಿಯೆನ್ ತಿಳಿಸಿದ್ದಾರೆ.

ದೆಹಲಿಯ ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ 2021 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಈಗ ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಾಗಿದೆ. ಯೋಜಿತ ಕಾನೂನು ಚುನಾಯಿತ ಸರ್ಕಾರಕ್ಕೆ ಹೋಲಿಸಿದರೆ ದೆಹಲಿಯ ಕೇಂದ್ರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ.

ಬಂಗಾಳ ಮತ್ತು ಇತರ ರಾಜ್ಯಗಳಲ್ಲಿನ ಚುನಾವಣೆ ಮುಗಿಯುವವರೆಗೆ ಮಸೂದೆಯ ಬಗ್ಗೆ ಚರ್ಚೆಯನ್ನು ಮುಂದೂಡಬೇಕೆಂದು ಕೇಳಿಕೊಂಡು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿರುವ ಓ’ಬ್ರಿಯೆನ್, ಇದನ್ನು “ಪ್ರಜಾಪ್ರಭುತ್ವದ, ಸಂವಿಧಾನ ಮತ್ತು ಸಂಸತ್ತುಗಳ ಹೃದಯಕ್ಕೆ ತಿವಿದ ಚೂರಿ’ ಎಂದು ಟ್ವೀಟ್ ಮಾಡಿದ್ದಾರೆ.

“ಐದು ರಾಜ್ಯಗಳಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿವೆ. ಆದರೂ ಚುನಾಯಿತ ದೆಹಲಿ ಸರ್ಕಾರವನ್ನು ನಿರುತ್ಸಾಹಗೊಳಿಸುವ #ಜಿಎನ್‌ಸಿಟಿ ಮಸೂದೆಯನ್ನು ಒತ್ತಾಯದಿಂದ ಹೇರುವುದುನ್ನು (ಬುಲ್ಡೊಜಿಂಗ್) ನಿಲ್ಲಿಸಲು ತೃಣಮೂಲ ರಾಜ್ಯಸಭಾ ಸಂಸದರು ದೆಹಲಿಗೆ ವಿಮಾನದ ಮೂಲಕ ಧಾವಿಸಿ ಬರುತ್ತಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಂಸತ್ತುಗಳ ಹೃದಯಕ್ಕೆ ಮತ್ತೊಂದು ಚೂರಿ ಹಾಕುವ ಯತ್ನವಿದು. ಗೃಹ ಸಚಿವರು ಚುನಾಚಣೆಯಲ್ಲಿ ಬ್ಯೂಸಿ. ಅವರಿಗೆ ಮಸೂದೆ ಮಂಡಿಸಲೂ ಟೈಮಿಲ್ಲ, ಇದು ಪ್ರಜಾಪ್ರಭುತ್ವದ ಕ್ರೂರ ವ್ಯಂಗ್ಯ” ಎಂದು ತೃಣಮೂಲ ರಾಜ್ಯಸಭಾ ಸದಸ್ಯ ಟ್ವೀಟ್ ಮಾಡಿದ್ದಾರೆ.

ಮಸೂದೆಯು “ಅತ್ಯಂತ ಮಹತ್ವದ ಶಾಸನ” ವಾಗಿದ್ದು, ಇದು ಭಾರತದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಮತ್ತು ಅದು “ನ್ಯಾಯದ ಸಂಪೂರ್ಣ ಗರ್ಭಪಾತ” ಎಂದು ಒ’ಬ್ರಿಯೆನ್ ಮಂಗಳವಾರ ರಾಜ್ಯಸಭಾ ಅಧ್ಯಕ್ಷರಿಗೆ ತಿಳಿಸಿದ್ದಾರೆ.

ಶನಿವಾರದಿಂದ ಪ್ರಾರಂಭವಾಗುತ್ತಿರುವ ಬಂಗಾಳ ಚುನಾವಣೆಯಿಂದಾಗಿ ತೃಣಮೂಲ ಸದಸ್ಯರು ಸಂಸತ್ತಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ಮಂಗಳವಾರ ಹೇಳಿದ್ದರು. ಆದರೆ ಇಂದು ಅವರು ರಾಜ್ಯಸಭಾ ಸದಸ್ಯರಿಗೆ ತುರ್ತಾಗಿ ದೆಹಲಿ ತಲುಪಿ ರಾಜ್ಯಸಭೆಯಲ್ಲಿ ಮಸೂದೆ ಸೋಲಿಸಲು ಟಿಎಂಸಿ ಕರೆ ನಿಡಿದೆ.


ಇದನ್ನೂ ಓದಿ: ‘ಪ್ರಜಾಪ್ರಭುತ್ವ ನಾಶ ಮಾಡುವ ಮಸೂದೆ’: ದೆಹಲಿ ಮಸೂದೆ ವಿರುದ್ಧ ಖರ್ಗೆ ವಾಗ್ದಾಳಿ

LEAVE A REPLY

Please enter your comment!
Please enter your name here