Homeಅಂತರಾಷ್ಟ್ರೀಯಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ: ಕಮಲಾ ಹ್ಯಾರಿಸ್

ಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ: ಕಮಲಾ ಹ್ಯಾರಿಸ್

"ಅವರು ಸುಳ್ಳಿನಲ್ಲಿ, ಮೋಸದಲ್ಲಿ ತೊಡಗಲಿದ್ದಾರೆ. ಅವರು ಅಮೆರಿಕಾದ ಜನರ ಮೇಲೆ ಪರಿಣಾಮ ಬೀರುವ ನೈಜ ಸಮಸ್ಯೆಗಳಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ" ಎಂದು ಕ್ಯಾಲಿಫೋರ್ನಿಯಾ ಮೂಲದ ಸೆನೆಟರ್ ಹ್ಯಾರಿಸ್ 'ದಿ ಗ್ರಿಯೊ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

- Advertisement -
- Advertisement -

ರಾಜಕೀಯ ವಿರೋಧಿಗಳ ಸುಳ್ಳು ಮತ್ತು ಗೊಂದಲಗಳನ್ನು ನಿರೀಕ್ಷಿಸಿದ್ದೇನೆ. ತಾನು ಉಪಾಧ್ಯಕ್ಷ ಹುದ್ದೆಗೆ ಅರ್ಹಳಲ್ಲ ಎಂಬ ಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ ಎಂದು ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.

“ಅವರು ಸುಳ್ಳಿನಲ್ಲಿ, ಮೋಸದಲ್ಲಿ ತೊಡಗಲಿದ್ದಾರೆ. ಅವರು ಅಮೆರಿಕಾದ ಜನರ ಮೇಲೆ ಪರಿಣಾಮ ಬೀರುವ ನೈಜ ಸಮಸ್ಯೆಗಳಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ” ಅವರು ಕೆಟ್ಟ ರಾಜಕೀಯ ಮಾಡಲು ಮುಂದಾಗುತ್ತಾರೆ ಎಂದು ಕ್ಯಾಲಿಫೋರ್ನಿಯಾ ಮೂಲದ ಸೆನೆಟರ್ ಹ್ಯಾರಿಸ್ ‘ದಿ ಗ್ರಿಯೊ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಮುಂಬರುವ ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲ ಕಪ್ಪು ಮತ್ತು ದಕ್ಷಿಣ ಏಷ್ಯಾದ ಮಹಿಳಾ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಘೋಷಣೆ ಮಾಡಿದ್ದಾರೆ. ತದನಂತರ ಹ್ಯಾರಿಸ್ ವಿರುದ್ಧ ಜನಾಂಗೀಯ ದಾಳಿಗಳು ಆರಂಭವಾಗಿವೆ. ಅವರು ವಲಸಿಗರಾಗಿದ್ದು, ಅವರ ಪೌರತ್ವದ ಬಗ್ಗೆ ಹಲವರು ಪ್ರಶ್ನೆಯೆತ್ತಿದ್ದಾರೆ.

ತಮ್ಮ ಪಕ್ಷದ ಹಿಂದಿನ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಇದೇ ರೀತಿಯ ಪಿತೂರಿ ಸಿದ್ಧಾಂತವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ್ದರು. ಈಗಲೂ ನನ್ನ ಹೆತ್ತವರು ವಲಸಿಗರು ಎಂದು ದೂರುತ್ತಿದ್ದಾರೆ. ಈ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲುತ್ತೇನೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಹ್ಯಾರಿಸ್ ಅವರ ಅರ್ಹತೆಯನ್ನು ನಾನು ಪರಿಶೀಲಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದರೂ, ಟ್ರಂಪ್‌ರ  ಹಿರಿಯ ಕಾನೂನು ಸಲಹೆಗಾರ ಜೆನ್ನಾ ಎಲ್ಲಿಸ್ ಟ್ರಂಪ್ ಅವರ ಮಾತನ್ನು ರಿಟ್ವೀಟ್ ಮಾಡಿ ಅದನ್ನು ಸ್ಪಷ್ಟಪಡಿಸುವಂತೆ ಕಮಲಾ ಹ್ಯಾರಿಸ್ ಅವರನ್ನು ಕೇಳಿದ್ಧಾರೆ.

“ಇದು ಮುಕ್ತ ಪ್ರಶ್ನೆ, ಹ್ಯಾರಿಸ್ ಇದಕ್ಕೆ ಉತ್ತರಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಎಬಿಸಿ ನ್ಯೂಸ್‌ಗೆ ತಿಳಿಸಿದರು.

ಟ್ರಂಪ್ ಹಿರಿಯ ಸಲಹೆಗಾರರಾದ ಸ್ಟೀವ್ ಕೊರ್ಟೆಸ್ ಹ್ಯಾರಿಸ್ ವಿರುದ್ಧದ ಸುಳ್ಳು ಹೇಳಿಕೆ ನೀಡಿದ್ದರು. ಈ ಕುರಿತು ಟ್ರಂಪ್ ಖಂಡಿಸದಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ಅದು ಅಧ್ಯಕ್ಷರ ಜವಾಬ್ದಾರಿಯಲ್ಲ ಎಂದು ಟ್ರಂಪ್ ಹೇಳಿದ್ದರು.


ಓದಿ: ಕಮಲಾ ಹ್ಯಾರಿಸ್ ಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಟ್ರಂಪ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...