Homeಮುಖಪುಟಸಂಜಯ ನಗರದ 'ಪೊಲೀಸ್-ಯುವಕರ ನಡುವಿನ ಹೊಡೆದಾಟ' ಪ್ರಕರಣ ಸಿಐಡಿಗೆ

ಸಂಜಯ ನಗರದ ‘ಪೊಲೀಸ್-ಯುವಕರ ನಡುವಿನ ಹೊಡೆದಾಟ’ ಪ್ರಕರಣ ಸಿಐಡಿಗೆ

ಸಂಜಯನಗರದಲ್ಲಿ ಯುವಕರಿಬ್ಬರು ಪೊಲೀಸರ ಮೇಲೆ ದಾಳಿ ನಡೆಸಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಆದರೆ ಮರುದಿನ ಪೊಲೀಸರೇ ಆ ಯುವಕರಿಗೆ ತೀವ್ರವಾಗಿ ಹಲ್ಲೆ ನಡೆಸಿದ ವಿಡಿಯೋ ಹೊರಬಂದಿತ್ತು. ಅಷ್ಟೇ ಅಲ್ಲದೇ ಮಹಜರು ಮಾಡಲು ಕರೆದುಕೊಂಡು ಹೋಗಿ ಪೊಲೀಸರು ಕಾರಣವಿಲ್ಲದೇ ಅವರ ಕಾಲಿಗೆ ಗುಂಡು ಹೊಡೆದಿದ್ದಾರೆಂದು ಆರೋಪಿಸಲಾಗಿತ್ತು.

- Advertisement -
- Advertisement -

ಬೆಂಗಳೂರಿನ ಸಂಜಯ ನಗರದಲ್ಲಿ ಯುವಕರಿಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಈಗಾಗಲೇ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಐಡಿ ತನಿಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಿದ್ದಾರೆ.

ದೌರ್ಜನ್ಯ ಕುರಿತು ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್ ಮತ್ತು ಪ್ರಕಾಶ್‌ಬಾಬು ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಈ ನಡುವೆ ಇದರ ಸಂಬಂಧದ 3 ಪ್ರಕರಣಗಳನ್ನು (ಮೊಕದ್ದಮೆ ಸಂಖ್ಯೆ 43/2020, 44 ಮತ್ತು 45) ತನಿಖೆ ನಡೆಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಐಡಿಗೆ ಹಸ್ತಾಂತರಿಸಿದ್ದಾರೆ.

ಸಂಜಯ ನಗರದಲ್ಲಿ ನಡೆದ ಘಟನೆಯ ನಂತರ ಯುವಕರಿಬ್ಬರನ್ನು ಬಂಧಿಸಿದ ಪೊಲೀಸರು ಅವರಿಬ್ಬರು ತಪ್ಪಿಸಿಕೊಳ್ಳಲು  ಪ್ರಯತ್ನಿಸಿದರು ಎಂದು ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಯುವಕನೊಬ್ಬನ ಕಾಲಿಗೆ ಗುಂಡು ಹಾರಿಸಿದ್ದರು. ಈ ವೇಳೆ ಪೊಲೀಸರು ಕೂಡಾ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಇಡೀ ಘಟನೆಗೂ ಮುಂಚೆ ಪೊಲೀಸರು ಯುವಕರ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡಿ ವೈರಲಾಗಿತ್ತು. ವಿಡಿಯೊದಲ್ಲಿ ಪೊಲೀಸರು ಯುವಕನ ಮೇಲೆ ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ. ಇದರ ನಂತರ ಸಾರ್ವಜನಿಕರು ಪೊಲೀಸರ ವರ್ತನೆಗೆ ಛೀಮಾರಿ ಹಾಕಿದ್ದರು.

ಬೆಂಗಳೂರಿನ ಸಂಜಯ್ ನಗರ ವ್ಯಾಪ್ತಿಯಲ್ಲಿ ಒಬ್ಬ ಪೊಲೀಸ್ ಪೇದೆಯ ಮೇಲೆ ಯುವಕರು ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಬಂಧಿಸಿರುವ ಇಬ್ಬರು ಯುವಕರ ಮೇಲೆ…

Posted by Venkatesh Bubberjung on Thursday, March 26, 2020

ಘಟನೆಯ ಬಗ್ಗೆ ಬೆಂಗಳೂರಿನ ಕಮೀಷನರ್ ಮಾತನಾಡಿ “ಅವರು ಹಲ್ಲೆ ನಡೆಸಿದ್ದು ಅವರಿಬ್ಬರಿಗಲ್ಲ ಇಡೀ ಪೊಲೀಸ್ ಸಮೂಹಕ್ಕೆ ಎಂದಿದ್ದರು. ಸಧ್ಯಕ್ಕೆ ಸಿಐಡಿಗೆ ವರ್ಗಾವಣೆಯಾಗಿರುವ ಪ್ರಕರಣವೂ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.

ಪ್ರಕರಣದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿರುವ ಜನಾಧಿಕಾರ ಪರಿಷತ್ ನ ಆದರ್ಶ್ ಅಯ್ಯರ್ ಮಾತನಾಡಿ “ಮಾರ್ಚ 29 ಕ್ಕೆ ಈ ಪ್ರಕರಣದ ಬಗ್ಗೆ ಪಿಐಎಲ್ ಹಾಕಿದ್ದೆವು, 30 ಕ್ಕೆ ವಿಚಾರಣೆಯಾಗಿತ್ತು. ಈ ಬಗ್ಗೆ ಆರೋಪವಿರುವವರೇ ಪ್ರಕರಣವನ್ನು ನಡೆಸಿದರೆ ಸರಿಯಾಗುವುದಿಲ್ಲ ಎಂದು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ನಾವು ಕೋರ್ಟಿನಲ್ಲಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿಸುವಂತೆ ಆಗ್ರಹಿಸಿದ್ದೆವು, ಅಲ್ಲದೆ ಇದರೊಂದಿಗೆ ಒಟ್ಟು ಮೂರು ಆಗ್ರಹವನ್ನು ಕೊರ್ಟಿನಲ್ಲಿ ಆಗ್ರಹಿದ್ದೆವು. ಯುವಕ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಆತನ ಕಾಲಿಗೆ ಗುಂಡು ಹೊಡೆಯಲಾಗಿದೆ, ಇದರಿಂದಾಗಿ ಆತನ ಜೀವನ ಪೂರ್ತಿಯಾಗಿ ಕಷ್ಟಪಡಬೇಕಾಗುತ್ತದೆ. ಇದಕ್ಕಾಗಿ ಆತನಿಗೆ ಪರಿಹಾರ ನೀಡಬೇಕು ಎಂದು ಎರಡನೆ ಆಗ್ರಹವಾಗಿದೆ. ಮೂರನೇ ಆಗ್ರಹ ಯುವಕರಿಬ್ಬರ ಮೇಲಿರುವ ಮೂರು ಪ್ರಕರಣವನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಲಾಗಿತ್ತು” ಎಂದು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್‌ ನೋಟಿಸ್

0
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ನೋಟಿಸ್ ಜಾರಿ ಮಾಡಿದೆ...