ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ (ಇಂದು) ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಕಾಯಿದೆಯು ಭಾರತೀಯ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆಯೇ ಎಂದು ವಿಚಾರಣೆ ನಡೆಸಲಿದೆ.
ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದು, ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ, ವಿಶೇಷವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಂತಹ ದೇಶಗಳಲ್ಲಿ ಕಿರುಕುಳಕ್ಕೊಳಗಾದವರಿಗೆ ಭಾರತೀಯ ಪೌರತ್ವವನ್ನು ಖಾತರಿಪಡಿಸುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸರ್ಕಾರವು ತಿದ್ದುಪಡಿಯನ್ನು ‘ಸಹಾನುಭೂತಿ ಮತ್ತು ಸೇರ್ಪಡೆ’ ಎಂದು ವಿವರಿಸಿದ್ದರೂ, ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು, ತಿದ್ದುಪಡಿಯಿಂದ ಮುಸ್ಲಿಂ ಸಮುದಾಯವನ್ನು ಪಟ್ಟಿಯಿಂದ ಹೊರಗಿಟ್ಟಿದ್ದು ‘ತಾರತಮ್ಯ’ ಎಂದು ಕರೆದಿದೆ.
ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟದ ಕೇಂದ್ರ ಶಾಹೀನ್‌ಬಾಗ್‌ನಲ್ಲಿ ಬುಲ್ಡೋಜರ್‌ಗಳು: ದ್ವೇಷ ರಾಜಕಾರಣಕ್ಕೆ ಮುಂದಾದ ಬಿಜೆಪಿ
ಅಸಾದುದ್ದೀನ್ ಓವೈಸಿ, ಜೈರಾಮ್ ರಮೇಶ್, ರಮೇಶ್ ಚೆನ್ನಿತಲ ಮತ್ತು ಮಹುವಾ ಮೊಯಿತ್ರಾ ಅವರಂತಹ ರಾಜಕಾರಣಿಗಳು ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ, ದ್ರಾವಿಡ ಮುನ್ನೇತ್ರ ಕಳಗಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಅಸೋಮ್ ಗಣ ಪರಿಷತ್‌ನಂತಹ ರಾಜಕೀಯ ಪಕ್ಷಗಳು ಕೂಡಾ ಕಾಯ್ದೆಯ ವಿರುದ್ಧ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ಪ್ರಕರಣ ಈಗ ಎಲ್ಲಿ ನಿಂತಿದೆ?
ವಲಸಿಗರ ಸಾಂದ್ರತೆ ಹೆಚ್ಚಿರುವ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪೌರತ್ವ ಅರ್ಜಿಗಳನ್ನು ಸ್ವೀಕರಿಸಲು ಅಧಿಕಾರ ನೀಡುವ 2021ರ ಮೇ 28 ರಂದು ಒಕ್ಕೂಟ ಸರ್ಕಾರದ ನಿರ್ದೇಶನದ ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಕೋರಿದೆ. ಒಕ್ಕೂಟ ಸರ್ಕಾರವು ಪ್ರತಿ ಪ್ರತಿಕ್ರಿಯೆ ಸಲ್ಲಿಸಿದಾಗಿನಿಂದ ನ್ಯಾಯಾಲಯವು ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲ.
ಕಾಯ್ದೆಯ ಸವಾಲುಗಳೇನು?
ನ್ಯಾಯಾಲಯವು ಪ್ರಾಥಮಿಕವಾಗಿ ಆರ್ಟಿಕಲ್ 14 ರ ವಿರುದ್ಧವಾಗಿ ಕಾಯಿದೆಯ ಸಿಂಧುತ್ವವನ್ನು ಪರಿಶೀಲಿಸುತ್ತಿದೆ ಎಂದು ಹೇಳಲಾಗುತ್ತದೆ. ಭಾರತೀಯ ಭೂಪ್ರದೇಶದಲ್ಲಿ ಜಾತಿ, ನಂಬಿಕೆ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ರಕ್ಷಣೆ ನೀಡುವ ವಿಷಯದಲ್ಲಿ ಈ ಕಾಯ್ದೆ ಸಂವಿಧಾನದ ಉಲ್ಲಂಘನೆ ಮಾಡುತ್ತದೆಯೇ ಅಥವಾ ಕಾನೂನಿನ ಮುಂದೆ ಸಮಾನತೆಯ ಹಕ್ಕನ್ನು ನಿರಾಕರಿಸುತ್ತದೆಯೇ ಎಂಬುದನ್ನು ಸುಪ್ರೀಂಕೋರ್ಟ್ ಪರಿಶೀಲನೆ ಮಾಡಲಿದೆ.
ಇದನ್ನೂ ಓದಿ: ದ್ವೇಷ ಪ್ರಚೋದನೆ; ಕನ್ನಡ ಸುದ್ದಿವಾಹಿನಿಗಳ ವಿರುದ್ಧ 17 ದೂರು ನೀಡಿದರೂ ಪೊಲೀಸರಿಂದ ಸಿಗದ ಪ್ರತಿಕ್ರಿಯೆ- ಸಿಎಎಚ್‌ಎಸ್
ಕೆಲವು ಧರ್ಮಗಳನ್ನು ಹೆಸರಿಸಿ, ಮುಸ್ಲಿಂ ಸಮುದಾಯವನ್ನು ಹೊರತುಪಡಿಸುವ ವಿಷಯದಲ್ಲಿ ಈ ಕಾಯಿದೆ ತಾರತಮ್ಯ ಮಾಡಿದೆಯೇ ಎಂಬುದು ಸಿಎಎಗೆ ಪ್ರಾಥಮಿಕ ಸವಾಲಾಗಿದೆ. ಮುಖ್ಯವಾಗಿ ನೆರೆಯ ಮೂರು ರಾಷ್ಟ್ರಗಳಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ರಕ್ಷಣೆ ಮಾತ್ರ ಕಾನೂನಿನ ಗುರಿಯಾಗಿದ್ದರೆ, ಇತರ ನೆರೆಯ ದೇಶಗಳನ್ನು ಮತ್ತು ಮುಸ್ಲಿಂ ಸಮುದಾಯವನ್ನು ಹೊರಗಿಡುವುದು ಕಾನೂನಿಗೆ ಸವಾಲಾಗಿ ಪರಿಣಮಿಸುತ್ತದೆ.


