Homeಅಂಕಣಗಳುಎರಡು ದಶಕಗಳ ಯಶಸ್ವಿ ಓಟಕ್ಕೆ ಪೂರ್ಣ ವಿರಾಮ ಇಟ್ಟ ಸೆರೆನಾ!

ಎರಡು ದಶಕಗಳ ಯಶಸ್ವಿ ಓಟಕ್ಕೆ ಪೂರ್ಣ ವಿರಾಮ ಇಟ್ಟ ಸೆರೆನಾ!

- Advertisement -
- Advertisement -

ಸ್ಟೆಫಿ ಗ್ರಾಫ್ – ದಶಕಗಳ ಕಾಲ ಮಹಿಳಾ ಟೆನಿಸ್ ಲೋಕವನ್ನು ಆಳಿದ್ದ, ಟೆನಿಸ್ ಪ್ರಿಯರ ಪಾಲಿಗೆ ದಂತಕಥೆಯೇ ಆಗಿದ್ದ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯೆನಿಸಿದ್ದರು. ಟೆನಿಸ್ ರಾಕೆಟ್‌ನೊಂದಿಗೆ ಅಂಗಳಕ್ಕೆ ಇಳಿದರೆ ಎದುರಾಳಿ ಯಾರೇ ಇರಲಿ ಫಲಿತಾಂಶ ಮಾತ್ರ ಮೊದಲೇ ನಿರ್ಧರಿತ ಎಂಬಂತೆ ಆತ್ಮವಿಶ್ವಾಸದಿಂದ ರಾಕೆಟ್ ಬೀಸುತ್ತಿದ್ದ ಸ್ಟೆಫಿ, 22 ಗ್ರಾಂಡ್ ಸ್ಲಾಮ್ ಪ್ರಶಸ್ತಿ ವಿಜೇತೆ. ಸತತ 377 ವಾರಗಳ ಕಾಲ ಅಗ್ರ ರ್‍ಯಾಂಕಿಂಗ್ ಕಾಯ್ದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದ ಸ್ಟೆಫಿ ಗ್ರಾಫ್ 1999ರಲ್ಲಿ ನಿವೃತ್ತಿ ಘೋಷಿಸಿದ್ದರು. ಅವರ ನಿವೃತ್ತಿಯ ನಿರ್ಧಾರವನ್ನು ಜೀರ್ಣಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸುಲಭವಾಗಿರಲಿಲ್ಲ.

ಸ್ಟೆಫಿ ಗ್ರಾಫ್

1999 ಮಹಿಳಾ ಟೆನಿಸ್ ಲೋಕದ ಮಹತ್ವದ ವರ್ಷ. ಏಕೆಂದರೆ ಸ್ಟೆಫಿ ನಿವೃತ್ತಿ ಘೋಷಿಸಿದ್ದು ಹಾಗೂ ಸೆರೆನಾ ವಿಲಿಯಮ್ಸ್ ಮೊದಲ ಗ್ರಾಂಡ್ ಸ್ಲಾಮ್ ಗೆಲುವಿನೊಂದಿಗೆ ತನ್ನ ಓಟಕ್ಕೆ ಮುನ್ನುಡಿ ಬರೆದದ್ದೂ ಇದೇ ವರ್ಷ. 1999 ಫ್ರೆಂಚ್ ಓಪನ್ ಗ್ರಾಂಡ್‌ಸ್ಲಾಮ್ ಟೂರ್ನಿ ಅದು. ಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘ ವಿಶ್ರಾಂತಿಯ ನಂತರ ಅಂಗಳಕ್ಕೆ ಮರಳಿದ್ದ ಸ್ಟೆಫಿ ಗ್ರಾಫ್ ಆಟದ ಬಗ್ಗೆ ದೊಡ್ಡ ಅನುಮಾನ ಕಾಡಿದ್ದು ಸುಳ್ಳಲ್ಲ. ಆದರೆ, ನಿವೃತ್ತಿಗೂ ಮುನ್ನ ಫ್ರೆಂಚ್ ಓಫನ್ ಗ್ರಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಅವರು ತಮ್ಮದಾಗಿಸಿಕೊಂಡಿದ್ದರು. ಆದರೆ, ಆಸ್ಟ್ರೇಲಿಯಾ ಓಪನ್‌ನಲ್ಲಿ ಸೋಲಿನೊಂದಿಗೆ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು.

ಈ ವೇಳೆ ಸ್ಟೆಫಿ ನಂತರ ಯಾರು ಎಂಬ ಪ್ರಶ್ನೆ ಟೆನಿಸ್ ಲೋಕದಲ್ಲಿ ದೊಡ್ಡ ಸದ್ದು ಮಾಡಿತ್ತು. ಸ್ಟೆಫಿ ರೀತಿಯ ಮತ್ತೋರ್ವ ಆಟಗಾರ್ತಿ ಎದ್ದು ಬರುವುದು ಅಸಾಧ್ಯ ಎಂದೇ ಹಲವರು ವ್ಯಾಖ್ಯಾನಿಸಿದ್ದರು. ಇಂತಹ ವ್ಯಾಖ್ಯಾನಗಳ ನಡುವೆಯೇ ಅದೇ ವರ್ಷ ಹೊರಹೊಮ್ಮಿದ್ದ ಹೊಸ ಪ್ರತಿಭೆಯೇ ಸೆರಾನಾ ವಿಲಿಯಮ್ಸ್. ತದನಂತರದ ಕಾಲದಲ್ಲಿ ಸ್ಟೆಫಿ ಗ್ರಾಫ್ ಉತ್ತರಾಧಿಕಾರಿಯಂತೆ ಬೆಳೆದ ಮತ್ತು ಆಕೆಯನ್ನೂ ಮೀರಿದ ಸಾಧನೆಗೈದ ಸೆರೆನಾ ವಿಲಿಯಮ್ಸ್ ಹತ್ತಾರು ಕಾರಣಗಳಿಗಾಗಿ ವಿಶೇಷ ಎನಿಸಿಕೊಂಡಿದ್ದಾರೆ.

ಯುಎಸ್ ಓಪನ್‌ನಲ್ಲಿ ಆರಂಭವಾಗಿತ್ತು ಆ ಓಟ

“ನಾನು ಯಾವುದರಲ್ಲೂ ಸೋಲಲು ಇಷ್ಟಪಡುವುದಿಲ್ಲ. ಆದರೆ, ನಾನು ಹೆಚ್ಚಾಗಿ ಬೆಳೆದಿರುವುದು ವಿಜಯಗಳಿಂದಲ್ಲ, ಹಿನ್ನಡೆಗಳಿಂದ” ಎಂಬುದು ಸೆರೆನಾ ವಿಲಿಯಮ್ಸ್ ಅವರ ಪ್ರಖ್ಯಾತ ಹೇಳಿಕೆಗಳಲ್ಲೊಂದು. ಸೆರೆನಾ ಬದುಕು ಮತ್ತು ವೃತ್ತಿ ಜೀವನ ಸಹ ಈ ಹೇಳಿಕೆಯಂತೆಯೇ ಸಾಕಷ್ಟು ವರ್ಣಮಯವಾದದ್ದು.

ಸೆಪ್ಟೆಂಬರ್ 26, 1981ರಲ್ಲಿ ಅಮೆರಿಕದ ಮಿಚಿಗನ್‌ನಲ್ಲಿ ಜನಿಸಿದ್ದ ಸೆರೆನಾ ವಿಲಿಯಮ್ಸ್ 1995ರಿಂದಲೇ ತನ್ನ ಸಹೋದರಿ ವೀನಸ್ ವಿಲಿಯಮ್ಸ್ ಜೊತೆಗೂಡಿ ವೃತ್ತಿಪರ ಟೆನಿಸ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಮೊದಮೊದಲು ಗೆಲುವಿಗಿಂತ ಸೋಲುಂಡಿದ್ದೇ ಹೆಚ್ಚು. 1999 ಯುಎಸ್ ಓಪನ್ ಅರ್ಹತಾ ಸುತ್ತು ಆರಂಭವಾಗಿದ್ದ ಸಂದರ್ಭದಲ್ಲಿ ಸೆರಾನಾ ವಿಲಿಯಮ್ಸ್ ಇನ್ನೂ 17ರ ಪೋರಿ. ಈ ಮಹತ್ವದ ಗ್ರಾಂಡ್‌ಸ್ಲಾಮ್ ಟೂರ್ನಿಗೆ ಈ ಟೀನೇಜರ್ ಅರ್ಹತೆ ಪಡೆಯುತ್ತಾಳೆ ಎಂದು ಸಹ ಯಾರೂ ಭಾವಿಸಿರಲಿಕ್ಕಿಲ್ಲ. ಆದರೆ, ಎಲ್ಲರ ಊಹೆಗೂ ಮೀರಿ ಆಟವಾಡಿದ್ದ ಸೆರಾನಾ ವಿಲಿಯಮ್ಸ್ ನೋಡನೋಡುತ್ತಿದ್ದಂತೆ ಆ ಪ್ರಶಸ್ತಿಯನ್ನು ಜಯಿಸಿಯೇಬಿಟ್ಟಿದ್ದಳು.

ವೀನಸ್ ವಿಲಿಯಮ್ಸ್

ಸ್ಟೆಫಿ ಗ್ರಾಫ್ ಎಂಬ ಧ್ರುವತಾರೆ ನಾಲ್ಕರ ಘಟ್ಟದಲ್ಲೇ ಸೋತು ನಿರಾಸೆ ಅನುಭವಿಸಿದ್ದ ಆ ಟೂರ್ನಿಯಲ್ಲಿ ಹೊಸದೊಂದು ನಕ್ಷತ್ರ ಉದಯವಾಗಿತ್ತು. ಆ ತಾರೆಯೇ ಸೆರೆನಾ ವಿಲಿಯಮ್ಸ್!

ಯುಎಸ್ ಓಪನ್ ಗ್ರಾಂಡ್‌ಸ್ಲಾಮ್ ಫೈನಲ್ ಪಂದ್ಯದಲ್ಲಿ ಸೆರೆನಾ ಎದುರಾಳಿಯಾಗಿದ್ದು ಆಕೆಯ ಸಹೋದರಿ ವೀನಸ್ ವಿಲಿಯಮ್ಸ್ ಎಂಬುದು ಮತ್ತೊಂದು ವಿಶೇಷ. ಫೈನಲ್‌ನಲ್ಲಿ ಇಬ್ಬರ ಆಟವನ್ನು ನೋಡಿದ್ದ ವೀಕ್ಷಕರು ಆಗಲೇ ಅಕ್ಕ-ತಂಗಿ ಇಬ್ಬರೂ ದಶಕಗಳ ಕಾಲ ಟೆನಿಸ್ ಜಗತ್ತನ್ನು ಆಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ನಿಜವೂ ಆಗಿತ್ತು. ಇನ್ನು ಮಹಿಳಾ ಸಿಂಗಲ್ಸ್ ಮಾತ್ರವಲ್ಲದೆ ಡಬಲ್ಸ್ ವಿಭಾಗದಲ್ಲೂ ವೀನಸ್ ವಿಲಿಯಮ್ಸ್ ಜೊತೆಗೂಡಿದ್ದ ಸೆರೆನಾ ಆ ಟೂರ್ನಿಯಲ್ಲಿ ಮತ್ತೊಂದು ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಆ 17ರ ಪೋರಿ ತದನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ನಂತರದ್ದೆಲ್ಲವೂ ಇತಿಹಾಸ. ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಒಟ್ಟಾಗಿ 14 ಗ್ರಾಂಡ್‌ಸ್ಲಾಮ್ ಡಬಲ್ಸ್ ಪ್ರಶಸ್ತಿಗಳಿಗಳನ್ನು ಜಯಿಸಿದ್ದಾರೆ ಎಂಬುದೂ ದಾಖಲೆಯೇ ಸರಿ.

ಸೆರೆನಾ ಗೆಲುವಿನ ಹಾದಿ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ 2000ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ತದನಂತರ ಫಾರ್ಮ್‌ನಲ್ಲಿ ಅಲ್ಪ ಕುಸಿತ ಕಂಡಿದ್ದ ಸೆರಾನಾ 2002ರಲ್ಲಿ ಮತ್ತೆ ಮಿಂಚಿನ ಆಟ ಪ್ರದರ್ಶಿಸಿದ್ದರು. ಆ ವರ್ಷದ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು.

2003ರಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಗೆಲುವಿನೊಂದಿಗೆ ಓಟ ಆರಂಭಿಸಿದ್ದ ಸೆರೆನಾ ಆ ವರ್ಷದ ಎಲ್ಲಾ ನಾಲ್ಕೂ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಮೂಲಕ ವೃತ್ತಿ ಜೀವನದಲ್ಲಿ ಹೊಸ ಮೈಲುಗಲ್ಲು ನೆಟ್ಟರು.

2008 ಬೀಜಿಂಗ್ ಒಲಂಪಿಕ್ ಕ್ರೀಡಾಕೂಟದಲ್ಲಿ ಎರಡನೇ ಡಬಲ್ಸ್ ಟೆನಿಸ್ ಚಿನ್ನದ ಪದಕ, ಅದೇ ವರ್ಷ ಮೂರನೇ ಬಾರಿಗೆ ಯುಎಸ್ ಓಪನ್ ಗೆಲುವು, 2009ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ತಮ್ಮ 10ನೇ ಗ್ರಾಂಡ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು. ಸೆರೆನಾ ವಿಲಿಯಮ್ಸ್ ಅವರ ಶಕ್ತಿಯುತ ಸರ್ವ್ ಮತ್ತು ರಿಟರ್ನ್‌ಳಿಗೆ ಎದುರಾಳಿಗಳು ತರಗೆಲೆಗಳಾದರು. 2017ರ ಆಸ್ಟ್ರೇಲಿಯಾ ಓಪನ್ ಗೆಲುವಿನೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯೆನಿಸಿದ್ದ ಸ್ಟೆಫಿ ಗ್ರಾಫ್ ಅವರ ದಾಖಲೆಯನ್ನು ಮುರಿದು ಸೆರೆನಾ ವಿಲಿಯಮ್ಸ್ ಒಟ್ಟಾರೆ 23 ಸಿಂಗಲ್ಸ್ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಇದು ಮಹಿಳಾ ಮತ್ತು ಪುರುಷರ ಟೆನಿಸ್‌ನಲ್ಲಿ ಆಟಗಾರರೊಬ್ಬರ ವ್ಯಕ್ತಿಯ ಅಧಿಕ ಗ್ರಾಂಡ್‌ಸ್ಲಾಮ್.

ಆದರೆ, ಈ ಪ್ರಶಸ್ತಿಯೊಂದಿಗೆ ಸೆರೆನಾ ಅವರ ಆಟದ ಮೇಲೆ ಮುಸುಕು ಆವರಿಸಲಾರಂಭಿಸಿತು. 2017ರಲ್ಲಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ತದನಂತರ ಅಂಗಳದಿಂದ ದೀರ್ಘಕಾಲ ವಿಶ್ರಾಂತಿ ಪಡೆದಿದ್ದರು.

2018ರಲ್ಲಿ ಸೆರೆನಾ ಮತ್ತೆ ಟೆನಿಸ್‌ಗೆ ಮರಳಿದ್ದರೂ, ವಿಂಬಲ್ಡನ್ ಮತ್ತು ಯುಎಸ್ ಓಪನ್ ಫೈನಲ್‌ನಲ್ಲಿ ಸೋಲನುಭವಿಸಿದ್ದರು. ಮತ್ತೊಮ್ಮೆ 2019ರಲ್ಲೂ ಸೆರೆನಾ ವಿಂಬಲ್ಡನ್ ಮತ್ತು ಯುಎಸ್ ಓಪನ್ ಫೈನಲ್‌ಗೆ ಏರಿ ಸೋಲನುಭವಿಸಬೇಕಾಯ್ತು. ಕಳೆದ ಐದು ವರ್ಷಗಳಿಂದ ಪ್ರಮುಖ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಸತತ ಸೋಲನುಭವಿಸುತ್ತಿರುವ ಸೆರೆನಾ ಕೊನೆಗೂ ವಯಸ್ಸಿನ ಕಾರಣಕ್ಕೆ ಟೆನಿಸ್ ಅಂಗಳದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಅವರು ಅಂಗಳದಿಂದ ದೂರ ಉಳಿಯಬಹುದು. ಆದರೆ, ಟೆನಿಸ್ ಪ್ರೇಮಿಗಳ ಮನಸ್ಸಿನಲ್ಲಿ ಅವರ ಆಟ ಎಂದಿಗೂ ಅಜರಾಮರ.

ಸೆರೆನಾರನ್ನೂ ಬಿಟ್ಟಿರಲಿಲ್ಲ ವಿವಾದ

ಎಲ್ಲ ಯಶಸ್ವಿ ಕ್ರೀಡಾಪಟುಗಳಂತೆ ಸೆರೆನಾ ವಿಲಿಯಮ್ಸ್ ಅವರನ್ನೂ ಕೆಲವೊಂದು ವಿವಾದಗಳು ಬೆಂಬಿಡದೆ ಕಾಡಿದ್ದವು. ಅಂಗಳದಲ್ಲಿ ಎದುರಾಳಿ ಆಟಗಾರ್ತಿ ತೀವ್ರ ಪೈಪೋಟಿ ಒಡ್ಡುತ್ತಿದ್ದಾಗ ಸೆರೆನಾ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ವರ್ತಿಸಿದ್ದಿದೆ. ಎದುರಾಳಿಯನ್ನು, ಪ್ರೇಕ್ಷಕರನ್ನು ನಿಂದಿಸಿದ್ದಿದೆ. ಅವರ ವರ್ಣಮಯ ವೃತ್ತಿ ಹಾದಿಗೆ ಇದೊಂದು ಕಪ್ಪು ಚುಕ್ಕೆ.

2009 ನವೆಂಬರ್‌ನಲ್ಲಿ ಯುಎಸ್ ಓಪನ್‌ನಲ್ಲಿ ಕಿಮ್ ಕ್ಲಿಸ್ಟರ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ತಾಳ್ಮೆ ಕಳೆದುಕೊಂಡಿದ್ದರು. ಈ ಪಂದ್ಯದಲ್ಲಿ ಅವರು ’ಲೈನ್ಸ್ ವುಮನ್’ರ ತೀರ್ಪಿಗೆ ಅಸಮ್ಮತಿ ಸೂಚಿಸಿ ನಿಂದಿಸಿದ್ದರು. ಅಲ್ಲದೆ, ಬೆದರಿಕೆಯ ಮಾತುಗಳನ್ನು ಪ್ರಯೋಗಿಸಿದ್ದರು. ಆಟದ ಮಧ್ಯೆ ಟೆನಿಸ್ ರಾಕೆಟ್‌ಅನ್ನು ನೆಲಕ್ಕೆ ಎಸೆದು ಅಂಗಳದಿಂದಲೇ ಹೊರನಡೆದಿದ್ದರು.

ಪರಿಣಾಮ ಸೆರೆನಾ ಕ್ರೀಡಾ ಸ್ಫೂರ್ತಿ ಮರೆತು ಹದ್ದುಮೀರಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದ ಸಂಘಟಕರು ಸೆರೆನಾ ವಿಲಿಯಮ್ಸ್‌ಗೆ ಬರೋಬ್ಬರಿ 175,000 ಅಮೆರಿಕನ್ ಡಾಲರ್ ದಂಡ ವಿಧಿಸಿದ್ದರು. ಅಲ್ಲದೆ, ಮುಂದಿನ 2 ವರ್ಷಗಳಲ್ಲೂ ಇದೇ ತರಹ ಗ್ರಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಕೆಟ್ಟ ನಡವಳಿಕೆಯನ್ನು ಪ್ರದರ್ಶಿಸಿದರೆ 2010, 2011, 2012 ಯುಎಸ್ ಓಪನ್ ಕ್ರೀಡೆಗಳಿಂದ ನಿಷೇಧ ಹೇರಲಾಗುವುದು ಎಂದು ಕಠಿಣ ಎಚ್ಚರಿಕೆಯನ್ನು ನೀಡಿದ್ದರು.

ಸೆರೆನಾಗೆ ವಿಧಿಸಲಾಗಿದ್ದ ಈ ದಂಡ ಟೆನಿಸ್ ಲೋಕದಲ್ಲಿ ಈವರೆಗಿನ ಅತಿದೊಡ್ಡ ದಂಡದ ಮೊತ್ತ ಎಂದೇ ಹೇಳಲಾಗುತ್ತದೆ. ಆದರೆ, ಈ ಯಾವ ವಿವಾದಗಳು ಅವರ ಗೆಲುವಿನ ನಾಗಾಲೋಟಕ್ಕೆ ತಡೆಯಾಗಿರಲಿಲ್ಲ ಎಂಬುದು ಉಲ್ಲೇಖಾರ್ಹ.

ಸೆರೆನಾ ವಿಲಿಯಮ್ಸ್ ಒಟ್ಟಾರೆ ಸಾಧನೆ

ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ತಮ್ಮ ವೃತ್ತಿಜೀವನದಲ್ಲಿ 73 ಸಿಂಗಲ್ಸ್ ಮತ್ತು 23 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಟೆನಿಸ್ ಅಸೋಸಿಯೇಷನ್ (WTA) ಪ್ರಕಾರ, 1995ರಲ್ಲಿ ವೃತ್ತಿಪರರಾಗಿ ಹೊರಹೊಮ್ಮಿದ 40 ವರ್ಷ ವಯಸ್ಸಿನ ಸೆರೆನಾ ಈವರೆಗೆ ತಮ್ಮ ವೃತ್ತಿ ಜೀವನದಲ್ಲಿ ಒಟ್ಟಾರೆ $94,588,910 ಬಹುಮಾನವನ್ನು ಗೆದ್ದಿದ್ದಾರೆ. ಸೆರೆನಾ 23 ಬಾರಿ ಸಿಂಗಲ್ಸ್ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ, ಒಟ್ಟು 365 ಗ್ರಾಂಡ್‌ಸ್ಲಾಮ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂಬುದು ಮತ್ತೊಂದು ವಿಶೇಷ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.


ಇದನ್ನೂ ಓದಿ: ಅರ್ಷದೀಪ್‌‌ಗೆ ‘ಖಾಲಿಸ್ತಾನಿ’ ಎಂದು ನಿಂದನೆ: ಕೇಂದ್ರ ಸರ್ಕಾರದಿಂದ ವಿಕಿಪೀಡಿಯಕ್ಕೆ ಸಮನ್ಸ್ ಜಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...