ಉತ್ತರ ಪ್ರದೇಶದ ವಾರಣಾಸಿ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪ್ರಾರ್ಥನೆ ಮಾಡಲು ಬಯಸುವ ಹಿಂದೂ ಮಹಿಳೆಯರ ಅರ್ಜಿಯಗಳನ್ನು ಆಲಿಸಲು ಜಿಲ್ಲಾ ನ್ಯಾಯಾಲಯ ಸೋಮವಾರ ಒಪ್ಪಿಗೆ ನೀಡಿದೆ. ಕೋರ್ಟ್‌ನ ಈ ತೀರ್ಪನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮುಸ್ಲಿಂ ಅರ್ಜಿದಾರರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನ್ಯಾಯಾಲಯ ಇಂದು ನೀಡಿದ ತೀರ್ಪಿನಂತೆ ಸೆಪ್ಟೆಂಬರ್ 22ರಂದು ಮಹಿಳೆಯರ ಅರ್ಜಿ ವಿಚಾರಣೆ ನಡೆಯಲಿದೆ. ಮಹಿಳೆಯರು ತಮ್ಮ ಅರ್ಜಿಯಲ್ಲಿ ಮಸೀದಿ ಸಂಕೀರ್ಣದ ಒಂದು ಭಾಗದಲ್ಲಿ ವರ್ಷಪೂರ್ತಿ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಪರಿಗಣಿಸಬಾರದು ಎಂದು ಮಸೀದಿ ಸಮಿತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಮಸೀದಿ ಸಮಿತಿ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಮಹಿಳೆಯರ ಅರ್ಜಿ ವಿಚಾರಣೆಗೆ ಅನುಮತಿ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತೀರ್ಪಿನ ಮೊದಲು, ಯಾವುದೇ ರೀತಿಯ ಹಿಂಸಾತ್ಮಕ ಪರಿಸ್ಥಿತಿಯನ್ನು ತಪ್ಪಿಸಲು ಮತ್ತು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಾರಣಾಸಿಯಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಹಳೆಯ ಚಿತ್ರಗಳು ವೈರಲ್!
ಮಹಿಳೆಯರು ಮಸೀದಿ ಸಂಕೀರ್ಣದಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳಿವೆ ಎಂದು ಪ್ರತಿಪಾದಿಸಿದ್ದಾರೆ. ಮುಸ್ಲಿಂ ಅರ್ಜಿದಾರರು ಮತ್ತು ಮುಖ್ಯವಾಗಿ ಮಸೀದಿ ನಿರ್ವಾಹಕರು, ಮಹಿಳೆಯರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕಾನೂನು ಹೋರಾಟ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‌ನವರೆಗೆ ಹೋರಾಡಲು ಸಿದ್ಧ ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಮಹಿಳೆಯರ ಅರ್ಜಿಯ ಆಧಾರದ ಮೇಲೆ ಮಸೀದಿಯ ಚಿತ್ರೀಕರಣಕ್ಕೆ ಕೆಳ ನ್ಯಾಯಾಲಯವು ಆದೇಶ ನೀಡಿತ್ತು. ಚಿತ್ರೀಕರಣದ ವರದಿಯನ್ನು ವಾರಣಾಸಿ ನ್ಯಾಯಾಲಯಕ್ಕೆ ಮುಚ್ಚಿದ ಕವರ್‌ನಲ್ಲಿ ಸಲ್ಲಿಸಲಾಗಿತ್ತು. ಆದರೆ ಹಿಂದೂ ಅರ್ಜಿದಾರರು ಕೆಲವೇ ಗಂಟೆಗಳ ನಂತರ ವಿವಾದಾತ್ಮಕವಾಗಿ ವಿವರಗಳನ್ನು ಸೋರಿಕೆ ಮಾಡಿದ್ದರು.
ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮೊದಲು ಅಂಗಾಗ ಶುದ್ಧೀಕರಣ ಆಚರಣೆ(ವುಝೂ)ಗಳಿಗಾಗಿ ಬಳಸಲಾಗುವ ಮಸೀದಿಯೊಳಗಿನ ಕೊಳದಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂದು ಸಂಘಪರಿವಾರ ಮತ್ತು ಮಾಧ್ಯಮಗಳು ವರದಿ ಮಾಡಿದ್ದವು. ಹೀಗಾಗಿ ನ್ಯಾಯಾಲಯವು ಕೊಳವನ್ನು ಸೀಲ್ ಮಾಡುವಂತೆ ಆದೇಶ ನೀಡಿ ಮಸೀದಿಯಲ್ಲಿ ದೊಡ್ಡ ನಮಾಜ್ ಕೂಟಗಳನ್ನು ನಿಷೇಧಿಸಿತು. ಕೂಟಗಳನ್ನು 20 ಜನರಿಗೆ ಸೀಮಿತಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಪೂಜೆಯ ಹಕ್ಕಿಗಾಗಿ ಸಲ್ಲಿಸಿದ್ದ ‘ಅರ್ಜಿ ವಿಚಾರಣೆ’ಗೆ ಅಂಗೀಕರಿಸಿದ ನ್ಯಾಯಾಲಯ
ಮಸೀದಿಯೊಳಗಿನ ಚಿತ್ರೀಕರಣವನ್ನು ಜ್ಞಾನವಾಪಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಈ ಕ್ರಮವು 1947 ಆಗಸ್ಟ್ 15ರಿಂದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ಥಾನಮಾನವನ್ನು ಕಾಯ್ದುಕೊಳ್ಳುವ 1991 ರ ಪೂಜಾ ಸ್ಥಳಗಳ ಕಾಯಿದೆಗೆ ವಿರುದ್ಧವಾಗಿ ಚಿತ್ರೀಕರಣ ನಡೆಯುತ್ತಿದೆ ಎಂದು ವಾದಿಸಿದ್ದರು.
“ವಿಷಯದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ವಾರಣಾಸಿಯ ಸಿವಿಲ್ ನ್ಯಾಯಾಧೀಶರ ಮುಂದೆ ಸಿವಿಲ್ ಮೊಕದ್ದಮೆಯನ್ನು ಯುಪಿ ನ್ಯಾಯಾಂಗ ಸೇವೆಯ ಹಿರಿಯ ಮತ್ತು ಅನುಭವಿ ನ್ಯಾಯಾಂಗ ಅಧಿಕಾರಿಯ ಮುಂದೆ ವಿಚಾರಣೆ ನಡೆಸಬೇಕು” ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.


