ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್‌ರವರು ನಿರ್ದೇಶಿಸಿರುವ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ ಕುರಿತು “ಗೌರಿ” ಸಾಕ್ಷ್ಯಚಿತ್ರವು 2022ರ ಟೊರೊಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿ ಜಯಿಸಿದೆ.
ಅಲ್ಲದೆ ಈ ಸಾಕ್ಷ್ಯಚಿತ್ರವು ಮಾಂಟ್ರಿಯಲ್‌ನ ಸೌತ್ ಏಷ್ಯಾ ಫಿಲ್ಮ್ ಫೆಸ್ಟಿವಲ್‌ಗೂ ಸಹ ಆಯ್ಕೆಯಾಗಿದೆ. ಡಾಕ್ ನ್ಯೂಯಾರ್ಕ್, ಆಮ್‌ಸ್ಟರ್‌ಡ್ಯಾಮ್‌ನ ಇಂಟರ್‌ನ್ಯಾಶನಲ್ ಡಾಕ್ಯುಮೆಂಟರಿ ಫಿಲ್ಮ್ ಫೆಸ್ಟಿವಲ್, ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್ ಮತ್ತು ಪ್ರಪಂಚದಾದ್ಯಂತದ ಇತರ ಸಿನಿಮೋತ್ಸವಗಳಿಗೆ ಈ ಸಾಕ್ಷ್ಯಚಿತ್ರವನ್ನು ಪರಿಗಣಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿಗಳು ನಡೆದ ವರದಿಯಾಗಿವೆ. 30 ಕ್ಕೂ ಹೆಚ್ಚು ಪತ್ರಕರ್ತರನ್ನು ಕಳೆದ ದಶಕದಲ್ಲಿ ಹತ್ಯೆ ಮಾಡಲಾಗಿದೆ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು 180 ರಲ್ಲಿ 150ಕ್ಕೆ ಕುಸಿದಿದೆ. ಭಿನ್ನಮತೀಯರು ಮತ್ತು ಪತ್ರಕರ್ತರ ಮೇಲಿನ ದಾಳಿಗಳು ಹೊಸದಲ್ಲ ಮತ್ತು ಭಾರತಕ್ಕೆ ಸೀಮಿತವಾಗಿಲ್ಲ, ಆದರೆ ಕಳೆದ ದಶಕದಲ್ಲಿನ ಈ ದಾಳಿಗಳು ತೀವ್ರ ರೂಪದಲ್ಲಿದ್ದು ಚಿಂತಿಸಬೇಕಾದ ವಿಷಯಗಳಾಗಿವೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.

ಈ ಸಾಕ್ಷ್ಯ ಚಿತ್ರವು ಭಾರತದಲ್ಲಿ ಪತ್ರಕರ್ತರು ದಿನನಿತ್ಯವು ಎದುರಿಸುತ್ತಿರುವ ಮೌಖಿಕ, ದೈಹಿಕ ದಾಳಿಗಳನ್ನು ತೆರೆದಿಡುತ್ತಿದೆ. ತಮ್ಮ ದಿಟ್ಟ ವರದಿಗಳ ಕಾರಣಕ್ಕಾಗಿ ಗೌರಿಯವರು ತಮ್ಮ ಮೇಲಿನ 80ಕ್ಕೂ ಹೆಚ್ಚು ಪ್ರಕರಣಗಳನ್ನು ರಾಜ್ಯಾದ್ಯಂತ ಓಡಾಡುತ್ತಾ ಹೇಗೆ ಅದನ್ನೊಂದು ಅವಕಾಶವನ್ನಾಗಿ ಬಳಸಿಕೊಂಡರು ಎಂಬುದರ ವಿವರಣೆ ಇಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಆಂಸ್ಟರ್‌ಡ್ಯಾಮ್‌ನ ಫ್ರೀ ಪ್ರೆಸ್ ಅನ್‌ಲಿಮಿಟೆಡ್ “ಗೌರಿ” ಸಾಕ್ಷ್ಯಚಿತ್ರವನ್ನು ನಿರ್ಮಾಣಕ್ಕೆ ಕೈಜೋಡಿಸಿದೆ. ಈ ಸಂಸ್ಥೆಯು ತಮ್ಮ ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳ ಪ್ರಸ್ತಾಪಗಳಿಗೆ ಕರೆ ನೀಡಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು, ಆ ಪೈಕಿ ನಾಲ್ಕು ಚಿತ್ರಗಳನ್ನು ಫ್ರೀ ಪ್ರೆಸ್ ಆಯ್ಕೆ ಮಾಡಿದ್ದು, ಅದರಲ್ಲಿ ‘ಗೌರಿ’ ಅವರ ಕುರಿತ ತಮ್ಮ ಸಾಕ್ಷ್ಯಾಚಿತ್ರವೂ ಒಂದಾಗಿದೆ.
ಇದನ್ನೂ ಓದಿ: ಗೌರಿ ಲಂಕೇಶ್ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವ ಕವಿತಾ ಲಂಕೇಶ್: ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ



ಕವಿತಾ ಲಂಕೇಶ್ ಅವರಿಗೆ ಅಭಿನಂದನೆಗಳು.
Congratulations kavitha madam….✊
Congratulations kavitha madam….✊
ಹೃತ್ಪೂರ್ವಕ ಧನ್ಯವಾದಗಳು ತಮಗೆ 🎉🎉