ಆಡಳಿತದಲ್ಲಿ ಧರ್ಮ ಬೆರೆಸುವ ಯಾರೊಂದಿಗೂ ನನಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಸ್ಪಷ್ಟಪಡಿಸಿದ್ದಾರೆ.
ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಮುದ್ರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಹಿಂದೆ ಆಮ್ ಆದ್ಮಿ ಪಕ್ಷದ ಬೆಂಬಲಿಗರಾಗಿದ್ದ ವಿಶಾಲ್ ದದ್ಲಾನಿಯವರ ಹೇಳಿಕೆಗಳು ಬಂದಿದೆ.
ತಮ್ಮ ಟ್ವೀಟ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅಥವಾ ನೋಟಿನ ವಿಷಯವನ್ನು ಪ್ರಸ್ತಾಪಿಸದ ವಿಶಾಲ್ ದದ್ಲಾನಿಯವರು ಬಹಳ ಸ್ಪಷ್ಟವಾಗಿ ಇನ್ನು ಮುಂದೆ ಆಪ್ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.
“ನಾವು ಜಾತ್ಯಾತೀತ, ಸಮಾಜವಾದಿ ಗಣರಾಜ್ಯ ಎಂದು ನಮ್ಮ ಭಾರತದ ಸಂವಿಧಾನ ಹೇಳುತ್ತದೆ. ಆದ್ದರಿಂದ, ಆಡಳಿತದಲ್ಲಿ ಧರ್ಮಕ್ಕೆ ಯಾವುದೇ ಸ್ಥಾನವಿರುವಂತಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಸರ್ಕಾರದ ಆಡಳಿತದಲ್ಲಿ ಯಾವುದೇ ಧರ್ಮದ ಯಾವುದೇ ಭಾಗವನ್ನು ತರುವ ಯಾರೊಂದಿಗೂ ನನಗೆ ಯಾವುದೇ ಸಂಬಂಧವಿರುವುದಿಲ್ಲ” ಎಂದು ದದ್ಲಾನಿ ಟ್ವೀಟ್ ಮಾಡಿದ್ದಾರೆ.
The Constitution of India states that we are a Secular Socialist Republic.
Hence, religion must have NO PLACE in governance.
To be completely clear, I have nothing to do with anyone who brings any part of any religion to any aspect of government.
Jai Hind. 🙏🏽
— VISHAL DADLANI (@VishalDadlani) October 26, 2022
ಕನ್ನಡ ಚಿತ್ರನಟ ಚೇತನ್ ಕೂಡ ಕೇಜ್ರಿವಾಲ್ ಮನವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. “ಎಎಪಿ ಪಕ್ಷದ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ಅವರು ಬ್ಯಾಂಕ್ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ಫೋಟೋಗಳನ್ನು ಮುದ್ರಿಸಿ ಎಂದು ಆಗ್ರಹ ನೀಡಿದ್ದಾರೆ, ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಕೂಡ ವಾದಿಸಿದ್ದಾರೆ. ಎಷ್ಟು ಅಸಂಬದ್ಧವಾದ ಹೇಳಿಕೆ! ಇಂತಹ ಅಸಾಂವಿಧಾನಿಕ ಮೂಢನಂಬಿಕೆಯ ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ, ಆಪ್ ರೀತಿಯ ಇನ್ನೊಂದರ ಅಗತ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) October 26, 2022
ಅರವಿಂದ್ ಕೇಜ್ರಿವಾಲ್‌ರವರು ನೋಟುಗಳಲ್ಲಿ ದೇವರ ಚಿತ್ರವಿರಬೇಕೆಂದು ಬುಧವಾರ ಪ್ರತಿಪಾದಿಸಿದ್ದರು. “ಲಕ್ಷ್ಮಿ ಸಮೃದ್ಧಿಯ ದೇವತೆ ಮತ್ತು ಗಣೇಶನು ತೊಂದರೆಗಳನ್ನು ದೂರವಿಡುವ ದೇವರಾಗಿದ್ದು, ಈ ದೇವರುಗಳ ಚಿತ್ರ ನೋಟುಗಳ ಮೇಲೆ ಇದ್ದರೆ, ಇಡೀ ದೇಶವು ಅವರ ಆಶೀರ್ವಾದವನ್ನು ಪಡೆಯುತ್ತದೆ” ಎಂದು ಅವರು ಹೇಳಿದರು.
ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದರಿಂದ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿದೆ ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದ ಅವರು, “ಆರ್ಥಿಕತೆ ಸುಧಾರಿಸುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಹಂತಗಳಿವೆ. ಇದರಲ್ಲಿ ಹೆಚ್ಚಿನ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುವುದು ಮತ್ತು ದೇಶದಲ್ಲಿ ಮೂಲಸೌಕರ್ಯವನ್ನು ಸುಧಾರಿಸುವುದು ಸೇರಿವೆ” ಎಂದು ಅವರು ಹೇಳಿದರು.
ಆದರೆ, ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ, ಅದಕ್ಕಾಗಿ ನಮಗೆ ದೇವರ ಆಶೀರ್ವಾದ ಬೇಕು. ಉದ್ಯಮಿಗಳು ತಮ್ಮ ಕೆಲಸದ ಸ್ಥಳದಲ್ಲಿ ಗಣೇಶ ಮತ್ತು ಲಕ್ಷ್ಮಿ ವಿಗ್ರಹಗಳನ್ನು ಇಟ್ಟುಕೊಂಡು, ದಿನದ ಕೆಲಸವನ್ನು ಪ್ರಾರಂಭಿಸುವ ಮೊದಲು ಪ್ರತಿದಿನ ಪೂಜೆ ಮಾಡುತ್ತಾರೆ. ಅದೇ ರೀತಿ ಕರೆನ್ಸಿ ನೋಟುಗಳಲ್ಲಿ ದೇವರ ಫೋಟೋ ಹಾಕಿದರೆ ದೇಶದ ಆರ್ಥಿಕತೆ ಸುಧಾರಣೆಗೆ ಕೈಗೊಂಡಿರುವ ಪ್ರಯತ್ನ ಫಲ ನೀಡುವುದು ಖಚಿತ ಎಂದು ಮುಖ್ಯಮಂತ್ರಿ ಹೇಳಿದರು.
ಅರವಿಂದ್ ಕೇಜ್ರಿವಾಲ್‌ರವರ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ನೋಟಿನ ಮೇಲೆ ಲಕ್ಷ್ಮಿ-ಗಣೇಶನ ಚಿತ್ರ ಮುದ್ರಿಸಿದರೆ ರೂಪಾಯಿ ಕುಸಿತ ಸುಧಾರಿಸುತ್ತದೆ: ಅರವಿಂದ್ ಕೇಜ್ರಿವಾಲ್



ಅರವಿಂದ ಕೇಜ್ರಿವಾಲ್ ಈ ಹಿಂದೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿ ಆಗಿದ್ದವರು ಮತ್ತು, ಈಗ ಒಂದು ಸರ್ಕಾರದ ಮುಖ್ಯಸ್ಥ. ಅವರಿದ್ದ ಮತ್ತು ಈಗಿರುವ ಸ್ಥಾನ, ಧರ್ಮ ನಿರಪೇಕ್ಷ ಮನಸ್ಥಿತಿಯನ್ನು ಅನಿವಾರ್ಯವಾಗಿ ಬಯಸುವತ್ತದೆ. ನೋಟಿನ ಮೇಲೆ ಗಣೇಶ ಮತ್ತು ಲಕ್ಷ್ಮಿ ಚಿತ್ರ ಹಾಕಿದರೆ, ಇಂದಿನ ಭಾರತದ ಸಮಸ್ಯೆಗಳಿಗೆ ಪರಿಹಾರ ಸಿಕ್ಕುತ್ತದೆ ಎಂದು ಹೇಳುವ ಇವರು, ತಮ್ಮ ಹಿಂದಿನ ಮತ್ತು ಈಗಿನ ಕೆಲಸಗಳನ್ನು ತರ್ಕಬದ್ಧವಾಗಿ ಮಾಡಿರುವ ಬಗ್ಗೆ ಹಾಗೂ, ಮುಂದೆ ಮಾಡುವ ಬಗ್ಗೆ ಕೂಡಾ ಗಂಭೀರ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಇದು ಖೇದಕರ.
Kejrival ra igina helike , avara hindina helikegalu , samarthanegalu adalitha vaikharigalanna anumanadinda noduva hagide.
ಹಿಂದೂಗಳ ವೋಟ್ ಬ್ಯಾಂಕ್ ಪಾಲಿಟಿಕ್ಸ್.