Homeರಾಜಕೀಯತೆಲಂಗಾಣ: ಬಿಜೆಪಿಯಿಂದ ಆಪರೇಷನ್‌ ಕಮಲಕ್ಕೆ ಯತ್ನ; ಕೇಂದ್ರ ಸಚಿವರ ಆಪ್ತ ಸೇರಿದಂತೆ ಮೂವರ ಬಂಧನ

ತೆಲಂಗಾಣ: ಬಿಜೆಪಿಯಿಂದ ಆಪರೇಷನ್‌ ಕಮಲಕ್ಕೆ ಯತ್ನ; ಕೇಂದ್ರ ಸಚಿವರ ಆಪ್ತ ಸೇರಿದಂತೆ ಮೂವರ ಬಂಧನ

- Advertisement -
- Advertisement -

ಬಿಜೆಪಿ ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ತಮ್ಮನ್ನು ತನ್ನ ತೆಕ್ಕೆಗೆ ಸೆಳೆಯಲು ಯತ್ನಿಸಿದೆ ಎಂಬ ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರ ಆರೋಪದ ಕುರಿತು ತನಿಖೆ ಆರಂಭಿಸಿರುವುದಾಗಿ ಸೈಬರಾಬಾದ್ ಪೊಲೀಸರು ಬುಧವಾರ ತಿಳಿಸಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಪಕ್ಷದ ಶಾಸಕರಾದ ಪಿ.ರೋಹಿತ್ ರೆಡ್ಡಿ, ಭೀಮ್ ಹರ್ಷವರ್ಧನ್ ರೆಡ್ಡಿ, ಪಿ.ರೇಗಾ ಕಾಂತ ರಾವ್, ಗುವ್ವಾಲ ಬಾಲರಾಜು ಅವರು ಸೈಬರಾಬಾದ್‌ನ ಅಜೀಜ್ ನಗರ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿ ಸೇರುವಂತೆ ಆಮಿಷ ಒಡ್ಡಲಾಗುತ್ತಿದೆ ಎಂದು ಶಾಸಕರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ ತಿಳಿಸಿದ್ದಾರೆ. “ಅವರ ದೂರಿನ ಆಧಾರದ ಮೇಲೆ, ನಾವು ಫಾರ್ಮ್‌ಹೌಸ್‌ಗೆ ತಲುಪಿದ್ದೇವೆ. ಹಿಮಾಚಲ ಪ್ರದೇಶದ ಹಿಂದೂ ಪೂಜಾರಿ ಮತ್ತು ತಿರುಪತಿಯ ಅವರ ಶಿಷ್ಯ ಮತ್ತು ಸ್ಥಳೀಯ ಹೈದರಾಬಾದ್ ಮೂಲದ ಉದ್ಯಮಿ ಸೇರಿದಂತೆ ಮೂವರು ವ್ಯಕ್ತಿಗಳನ್ನು ಕಂಡುಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ: ಸಾಲ ನೀಡುವ ಆ್ಯಪ್ ಏಜೆಂಟ್‌‌ ಕಿರುಕುಳ; 4 ಸಾವಿರ ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

ಬಿಜೆಪಿ ಸೇರುವಂತೆ ಶಾಸಕರಿಗೆ ಹಣ, ಗುತ್ತಿಗೆ, ಹುದ್ದೆಗಳ ಆಮಿಷ ಒಡ್ಡಲಾಗಿತ್ತು ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮಗುರು ಡಿ ಸಿಂಹಯಾಜಿ, ಅವರ ಶಿಷ್ಯ ಸತೀಶ್ ಶರ್ಮಾ ಮತ್ತು ಉದ್ಯಮಿ ನಂದಕುಮಾರ್ ಎಂಬ ಮೂವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಾಧಿ ಮಾಡಿ ಪ್ರತಿಭಟನೆ!

ತೆಲಂಗಾಣ ರಾಷ್ಟ್ರ ಸಮಿತಿಯ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ್ ರೆಡ್ಡಿ, ನಂದಕುಮಾರ್ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ಆಪ್ತರು ಎಂದು ಹೇಳಿದ್ದಾರೆ.

ಎನ್‌ಡಿಟಿವಿ ಪ್ರಕಾರ, ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾದ ಫಾರ್ಮ್‌ಹೌಸ್ ಮಾಲೀಕ ಪಿ. ರೋಹಿತ್ ರೆಡ್ಡಿ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ರಾಜಕಾರಣದ ಗುರಿ: ಟಿಆರ್‌ಎಸ್ ಅನ್ನು ‘ಭಾರತ ರಾಷ್ಟ್ರ ಸಮಿತಿ’ಯನ್ನಾಗಿ ಪರಿವರ್ತಿಸಿದ ತೆಲಂಗಾಣ ಸಿಎಂ ಕೆಸಿಆರ್‌

ಬುಧವಾರ ತಡರಾತ್ರಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ನಾಲ್ವರು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.

ಶಾಸಕರ ಕಳ್ಳಬೇಟೆಯಲ್ಲಿ ಬಿಜೆಪಿ ಪಾತ್ರದ ಬಗ್ಗೆ ಎಂದು ಜಿ. ಕಿಶನ್ ರೆಡ್ಡಿ ನಿರಾಕರಿಸಿದ್ದಾರೆ. “ಬಿಜೆಪಿ ಇದರಲ್ಲಿ ಭಾಗಿಯಾಗಿಲ್ಲ” ಎಂದು ಅವರು ಹೇಳಿದ್ದು, ನಮಗೆ ಈ ಶಾಸಕರು ಏಕೆ ಬೇಕು? ಇದು ಮುನುಗೋಡು ಕ್ಷೇತ್ರವನ್ನು ಗೆಲ್ಲಲು ಟಿಆರ್‌ಎಸ್ ಸೃಷ್ಟಿಸಿರುವ ತಿರುವು ಎಂದು ಹೇಳಿದ್ದಾರೆ.

ನಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರಕ್ಕೆ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.

ಇತ್ತೀಚೆಗೆ, ಆಮ್ ಆದ್ಮಿ ಪಕ್ಷ ಕೂಡ ಬಿಜೆಪಿಯು ದೆಹಲಿ ಮತ್ತು ಪಂಜಾಬ್‌ನಲ್ಲಿ ತನ್ನ ಶಾಸಕರನ್ನು ಪಕ್ಷ ಬದಲಾಯಿಸಲು ಆಮಿಷವೊಡ್ಡಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದೆ. ಪಕ್ಷವು ಎರಡು ರಾಜ್ಯಗಳ ಅಸೆಂಬ್ಲಿಗಳಲ್ಲಿ ವಿಶ್ವಾಸ ಮತಗಳನ್ನು ಪ್ರಸ್ತಾಪಿಸಿತು ಮತ್ತು ಅವುಗಳನ್ನು ಗೆದ್ದಿತು.

ಇದನ್ನೂ ಓದಿ: ತೆಲಂಗಾಣ: ಉಚಿತ ಮದ್ಯ ಮತ್ತು ಕೋಳಿ ವಿತರಿಸಿದ ಟಿಆರ್‌ಎಸ್ ನಾಯಕ!

ಈ ಎರಡೂ ಪ್ರಕರಣಗಳಲ್ಲಿ ಬಿಜೆಪಿ ಶಾಸಕರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಆಮಿಷ ಒಡ್ಡಿದೆ ಎಂಬ ಆರೋಪವನ್ನು ನಿರಾಕರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...