Homeರಾಷ್ಟ್ರೀಯತೆಲಂಗಾಣ: ಸಾಲ ನೀಡುವ ಆ್ಯಪ್ ಏಜೆಂಟ್‌‌ ಕಿರುಕುಳ; 4 ಸಾವಿರ ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

ತೆಲಂಗಾಣ: ಸಾಲ ನೀಡುವ ಆ್ಯಪ್ ಏಜೆಂಟ್‌‌ ಕಿರುಕುಳ; 4 ಸಾವಿರ ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಸಾಲ ವಾಪಸಾತಿ ಏಜೆಂಟರ ಕಿರುಕುಳದಿಂದಾಗಿ ತೆಲಂಗಾಣದ ವನಪಾರ್ಥಿಯ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ದಾಸರಿ ಶೇಖರ್ ಎಂದು ಗುರುತಿಸಲಾಗಿದ್ದು, ಕಳೆದ ತಿಂಗಳು ಅವರು ತಮ್ಮ ಫೋನಿನಲ್ಲಿ ಸಾಲ ನೀಡುವ ಅಪ್ಲಿಕೇಶನ್‌ನಿಂದ ಎರಡು ಕಂತಿನಂತೆ 4,000 ರೂ.ಗಳನ್ನು ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ನಂತರ ಅಪ್ಲಿಕೇಶನ್‌ನ ಸಾಲ ವಾಪಾಸು ಪಡೆಯು ರಿಕವರಿ ಏಜೆಂಟರು ಶೇಖರ್‌ ಅವರು ಸಾಲ ಕಟ್ಟಿಲ್ಲ ಎಂದು ಆರೋಪಿಸಿ ಅವರ ಸಂಬಂಧಿಕರಿಗೆ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ. ಇದರ ನಂತರ ಅವರು ಶೇಖರ್‌ ಅವರ ಮೊಬೈಲ್‌ಗೆ ನಗ್ನ ಚಿತ್ರವನ್ನು ಕಳುಹಿಸಿದ್ದು, ಅದನ್ನು ಅವರ ಎಲ್ಲ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಬೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಾನಸಿಕ ಒತ್ತಡದಿಂದ ಭಾನುವಾರ ರಾತ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶೇಖರ್ ಅವರ ಹೆಂಡತಿಯಿಂದ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಅಪ್ಲಿಕೇಷನ್‌ ಬಳಸಿ ಸುಲಿಗೆ; ₹ 500 ಕೋಟಿ ಚೀನಾಕ್ಕೆ ಕಳುಹಿಸಿದ ಯುಪಿ ಗ್ಯಾಂಗ್‌ ಅರೆಸ್ಟ್‌‌!

ಸಾಲ ನೀಡುವ ಅಪ್ಲಿಕೇಷನ್‌ನ ಸುಳಿಯಲ್ಲಿ ಸಿಕ್ಕಿ ಹಲವರು ಪ್ರಾಣ ತೆತ್ತಿರುವ ಸರಣಿ ಘಟನೆಗಳು ನಡೆಯುತ್ತಿದ್ದು, ಶೇಖರ್‌ ಅವರ ಸಾವು ಇದಕ್ಕೆ ಹೊಸ ಸೇರ್ಪಡೆಯಾಗಿದೆ. ಕೊರೊನಾ ಸಾಂ‌ಕ್ರಮಿಕದ ವೇಳೆ ತ್ವರಿತ ಮತ್ತು ಸುಲಭವಾಗಿ ಸಾಲ ನೀಡುವುದಾಗಿ ಹೇಳಿ ಜನರಿಗೆ ಆಮಿಷವೊಡ್ಡುವ ಸಾಲ ನೀಡುವ ಅಪ್ಲಿಕೇಶನ್‌ಗಳಲ್ಲಿ ಏರಿಕೆ ಕಂಡುಬಂದಿದೆ.

ಈ ಅಪ್ಲಿಕೇಷನ್‌‌ಗಳು ನೀಡುವ ಸಾಲಗಳು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರಗಳು ಮತ್ತು ಹಲವು ಶುಲ್ಕವನ್ನು ಒಳಗೊಂಡಿರುತ್ತವೆ. ಜೊತಗೆ ಸಾಲ ವಾಪಾಸಾತಿ ಏಜೆಂಟರು ಸಾಲಗಾರರ ಮೊಬೈಲ್‌ನಲ್ಲಿದ್ದ ಎಲ್ಲಾ ನಂಬರ್‌ಗಳನ್ನು ಕೂಡಾ ಪಡೆದು, ಅವರ ಸಾಲಗಾರರ ಸಂಪರ್ಕದಲ್ಲಿರುವ ಜನರಿಗೆ ಪೋನ್‌ ಮಾಡುವುದು ಸೇರಿದಂತೆ ವಿವಿಧ ರೀತಿಯ ಕಿರುಕುಳಗಳನ್ನು ನೀಡುತ್ತಾರೆ. ಇಷ್ಟೆ ಅಲ್ಲದೆ, ಸಾಲ ವಾಪಾಸಾತಿ ಏಜೆಂಟರು ಸಾಲ ಪಡೆದವರ ಚಿತ್ರಗಳನ್ನು ಪಡೆದು ಅದನ್ನು ನಗ್ನ ಚಿತ್ರಗಳೊಂದಿಗೆ ಎಡಿಟ್‌ ಮಾಡಿ ಅವರ ಕುಟುಂಬ ಸದಸ್ಯರು ಮತ್ತು ಸಂಪರ್ಕದಲ್ಲಿ ಇರುವ ಇತರರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ ಅನೇಕ ನಿದರ್ಶನಗಳಿವೆ.

ಜುಲೈನಲ್ಲಿ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಸಾಲದ ಅಪ್ಲಿಕೇಶನ್ ಏಜೆಂಟರಿಂದ ಕಿರುಕುಳಕ್ಕೊಳಗಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರು. ಸೆಪ್ಟೆಂಬರ್‌ನಲ್ಲಿ ಸಾಲ ಅಪ್ಲಿಕೇಶನ್ ಏಜೆಂಟರಿಂದ ಕಿರುಕುಳದಿಂದಾಗಿ ಆಂಧ್ರಪ್ರದೇಶದ ರಾಜಮಂಡ್ರಿಯ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ದುಷ್ಕರ್ಮಿಗಳು ದಂಪತಿಗಳ ಮಾರ್ಫೆಡ್ ವೀಡಿಯೊಗಳು ಮತ್ತು ಫೋಟೋಗಳನ್ನು ವೈರಲ್‌ ಮಾಡುವುದಾಗಿ ಬೆದರಿಸಿದ್ದರು.

ಇದನ್ನೂ ಓದಿ: ತ್ವರಿತ ಸಾಲ ನೀಡುವ ಆ್ಯಪ್‌ಗಳ ವಂಚನೆ: ಚೀನಿ ಪ್ರಜೆ ಸೇರಿದಂತೆ ಒಟ್ಟು ನಾಲ್ಕು ಜನರ ಬಂಧನ


ಜೀವ ಅಮೂಲ್ಯವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಬಂದರೆ ನಿಮಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಸಹಾಯ (24-ಗಂಟೆ): 080 65000111, 080 65000222
24×7 ಸಹಾಯವಾಣಿ: 98204667260
ಭಾರತದಾದ್ಯಂತ ಸಹಾಯವಾಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...