Homeಮುಖಪುಟ100ಕ್ಕೂ ಹೆಚ್ಚು ಅಪ್ಲಿಕೇಷನ್‌ ಬಳಸಿ ಸುಲಿಗೆ; ₹ 500 ಕೋಟಿ ಚೀನಾಕ್ಕೆ ಕಳುಹಿಸಿದ ಯುಪಿ ಗ್ಯಾಂಗ್‌...

100ಕ್ಕೂ ಹೆಚ್ಚು ಅಪ್ಲಿಕೇಷನ್‌ ಬಳಸಿ ಸುಲಿಗೆ; ₹ 500 ಕೋಟಿ ಚೀನಾಕ್ಕೆ ಕಳುಹಿಸಿದ ಯುಪಿ ಗ್ಯಾಂಗ್‌ ಅರೆಸ್ಟ್‌‌!

ಚೀನಾ ಮೂಲದವರು ನಡೆಸುತ್ತಿದ್ದ ₹ 500 ಕೋಟಿ ತ್ವರಿತ ಸಾಲ ಮತ್ತು ಸುಲಿಗೆ ದಂಧೆಯಲ್ಲಿ ಭಾಗಿಯಾಗಿದ್ದಕ್ಕಾಗಿ ದೇಶಾದ್ಯಂತ 22 ಜನರನ್ನು ಬಂಧಿಸಲಾಗಿದೆ.

- Advertisement -
- Advertisement -

ಚೀನಾದ ಕೆಲವು ಪ್ರಜೆಗಳು ನಡೆಸುತ್ತಿದ್ದ ₹ 500 ಕೋಟಿ ತ್ವರಿತ ಸಾಲ ಮತ್ತು ಸುಲಿಗೆ ದಂಧೆಯಲ್ಲಿ ಭಾಗಿಯಾಗಿದ್ದಕ್ಕಾಗಿ ದೇಶಾದ್ಯಂತ 22 ಜನರನ್ನು ಬಂಧಿಸಲಾಗಿದೆ.

ಈ ದಂಧೆಯಲ್ಲಿ 100ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಬಳಸಲಾಗಿದ್ದು, ಬಳಕೆದಾರರಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಇವುಗಳ ಮೂಲಕ ಸಂಗ್ರಹಿಸಲಾಗುತ್ತಿತ್ತು. ಬಳಿಕ ಅದನ್ನು ಚೀನಾ ಮತ್ತು ಹಾಂಗ್ ಕಾಂಗ್ ಮೂಲದ ಸರ್ವರ್‌ಗಳಿಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎರಡು ತಿಂಗಳ ಕಾಲ ನಡೆದ ಗ್ಯಾಂಗ್ ಕಾರ್ಯಾಚರಣೆಯ ಬಳಿಕ ದೆಹಲಿ ಪೊಲೀಸರು ಕದೀಮರನ್ನು ಬಂಧಿಸಿದ್ದಾರೆ. ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಈ ಜಾಲ ಹರಡಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಲಕ್ನೋದ ಕಾಲ್ ಸೆಂಟರ್ ಮೂಲದ ಗ್ಯಾಂಗ್ ಸಣ್ಣ ಪ್ರಮಾಣದ ಸಾಲವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸುತ್ತಿತ್ತು. ಬಳಕೆದಾರರು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ ಮತ್ತು ಅಪ್ಲಿಕೇಶನ್‌ಗೆ ತಮ್ಮ ಅನುಮತಿಗಳನ್ನು ನೀಡಿದ ನಂತರ, ಈ ಗ್ಯಾಗ್‌ ಕೆಲವೇ ನಿಮಿಷಗಳಲ್ಲಿ ಬಳಕೆದಾರರ ಖಾತೆಗೆ ಸಾಲದ ಹಣವನ್ನು ನೀಡುತ್ತಿತ್ತು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಕಲಿ ಗುರುತಿನ ಚೀಟಿಯಲ್ಲಿ ಪಡೆದ ವಿವಿಧ ಸಂಖ್ಯೆಗಳಿಂದ ಈ ಗ್ಯಾಂಗ್ ಬಳಕೆದಾರರಿಗೆ ಕರೆ ಮಾಡಿ, ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮಾರ್ಫ್ ಮಾಡಿದ ನಗ್ನ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿತ್ತು ಎಂದು ಉಪ ಪೊಲೀಸ್ ಆಯುಕ್ತ (ಐಎಫ್‌ಎಸ್‌ಒ) ಕೆಪಿಎಸ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಸ್ಥಾನಮಾನದ ಭಯ ಮತ್ತು ಕಳಂಕ್ಕೆ ಹೆದರಿ ಬಳಕೆದಾರರು ಹಣವನ್ನು ಪಾವತಿಸುತ್ತಿದ್ದರು. ಈ ಹಣವನ್ನು ಹವಾಲಾ ಮೂಲಕ ಅಥವಾ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಿದ ನಂತರ ಚೀನಾಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗ್ಯಾಂಗ್ ಅನೇಕ ಖಾತೆಗಳನ್ನು ಬಳಸಿದೆ ಎಂದು ವರದಿಯಾಗಿದೆ. ಪ್ರತಿ ಖಾತೆಯೂ ದಿನಕ್ಕೆ ₹ 1 ಕೋಟಿಗೂ ಹೆಚ್ಚು ಹಣವನ್ನು ರಿಸೀವ್ ಮಾಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಳಸಲಾದ ಅಪ್ಲಿಕೇಶನ್‌ಗಳನ್ನು ಕ್ಯಾಶ್ ಪೋರ್ಟ್, ರುಪೇ ವೇ, ಲೋನ್ ಕ್ಯೂಬ್, ವಾವ್ ರೂಪಾಯಿ, ಸ್ಮಾರ್ಟ್ ವಾಲೆಟ್, ಜೈಂಟ್ ವಾಲೆಟ್, ಹೈ ರೂಪಾಯಿ, ಸ್ವಿಫ್ಟ್ ರೂಪಾಯಿ, ವಾಲೆಟ್‌ವಿನ್, ಫಿಶ್‌ಕ್ಲಬ್, ಯೆಹ್‌ಕ್ಯಾಶ್, ಇಮ್ ಲೋನ್, ಗ್ರೋಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕಾಶ್, ಫಾರ್ಚೂನ್ ಟ್ರೀ, ಸೂಪರ್‌ಕಾಯಿನ್, ರೆಡ್ ಮ್ಯಾಜಿಕ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿರಿ: ಮೊಟ್ಟೆ ಎಸೆದವ ಆರ್‌ಎಸ್‌ಎಸ್ಸೋ/ಬಿಜೆಪಿಯೋ, ಕಾಂಗ್ರೆಸ್ಸೋ, ಜೆಡಿಎಸ್ಸೋ?

ಪೊಲೀಸರು ಕನಿಷ್ಠ 51 ಮೊಬೈಲ್ ಫೋನ್‌ಗಳು, 25 ಹಾರ್ಡ್ ಡಿಸ್ಕ್‌ಗಳು, ಒಂಬತ್ತು ಲ್ಯಾಪ್‌ಟಾಪ್‌ಗಳು, 19 ಡೆಬಿಟ್ ಕಾರ್ಡ್‌ಗಳು/ಕ್ರೆಡಿಟ್ ಕಾರ್ಡ್‌ಗಳು, ಮೂರು ಕಾರುಗಳು ಮತ್ತು ₹ 4 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಚೀನಾದ ಪ್ರಜೆಗಳ ಸೂಚನೆ ಮೇರೆಗೆ ಈ ದಂಧೆ ನಡೆಸಲಾಗಿದೆ ಎಂದು ಬಂಧಿತರು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಕೆಲವು ಚೀನೀ ಪ್ರಜೆಗಳನ್ನು ಗುರುತಿಸಿದ್ದಾರೆ. ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಪೊಲೀಸರು ತಮ್ಮ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಈ ದಂಧೆಕೋರರು ತಮ್ಮ ರಿಕವರಿ ಕಾಲ್ ಸೆಂಟರ್‌ಗಳನ್ನು ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಇಲ್ಲಿಯವರೆಗೆ ₹ 500 ಕೋಟಿಗೂ ಹೆಚ್ಚು ಹಣವನ್ನು ಚೀನಾ ಪ್ರಜೆಗಳು ಕಬಳಿಸಿದ್ದಾರೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...