Homeಮುಖಪುಟಉತ್ತರಪ್ರದೇಶ: ಡ್ರಿಪ್‌ನಲ್ಲಿ ರಕ್ತಕಣಗಳ ಬದಲಿಗೆ ಹಣ್ಣಿನ ಜ್ಯೂಸ್ ನೀಡಿದ ಆಸ್ಪತ್ರೆಗೆ ಬುಲ್ಡೋಜರ್‌ ಬೆದರಿಕೆ

ಉತ್ತರಪ್ರದೇಶ: ಡ್ರಿಪ್‌ನಲ್ಲಿ ರಕ್ತಕಣಗಳ ಬದಲಿಗೆ ಹಣ್ಣಿನ ಜ್ಯೂಸ್ ನೀಡಿದ ಆಸ್ಪತ್ರೆಗೆ ಬುಲ್ಡೋಜರ್‌ ಬೆದರಿಕೆ

- Advertisement -
- Advertisement -

ರಕ್ತದ ಪ್ಲೇಟ್‌ಲೆಟ್‌ಗಳ ಬದಲು ಹಣ್ಣಿನ ರಸವನ್ನು ಡ್ರಿಪ್‌ನಲ್ಲಿ ನೀಡಿದೆ ಎಂದು ಎಂದು ಆರೋಪಿಸಲಾಗಿರುವ ಉತ್ತರ ಪ್ರದೇಶದ ಖಾಸಿಗಿ ಆಸ್ಪತ್ರೆ ಇದೀಗ ಬುಲ್ಡೋಜರ್‌‌ ಬೆದರಿಕೆ ಎದುರಿಸುತ್ತಿದೆ. ರಾಜ್ಯದ ಪ್ರಯಾಗ್‌ರಾಜ್‌ನಲ್ಲಿರುವ “ಗ್ಲೋಬಲ್‌ ಹಾಸ್ಪಿಟಲ್ ಮತ್ತು ಟ್ರಾಮ್ ಸೆಂಟರ್‌‌‌” ಅನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮಗೊಳಿಸುವ ಬಗ್ಗೆ ಸರ್ಕಾರ ನೋಟಿಸ್ ನೀಡಿದೆ.

ಆಸ್ಪತ್ರೆಯನ್ನು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಮತ್ತು ಅದನ್ನು ಶುಕ್ರವಾರದ ವೇಳೆಗೆ ಖಾಲಿ ಮಾಡಬೇಕು ಎಂದು ನೋಟಿಸ್ ತಿಳಿಸಿದೆ. ಆಸ್ಪತ್ರೆ ಕಡೆಯಿಂದ ತಪ್ಪುಗಳಾಗಿರುವ ಬಗ್ಗೆ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದು ಬಂದ ನಂತರ ಆಸ್ಪತ್ರೆಯನ್ನು ಕಳೆದ ವಾರ ಮುಚ್ಚಲಾಗಿದ್ದು, ಪ್ರಸ್ತುತ ಅಲ್ಲಿ ಯಾವುದೆ ರೋಗಿಗಳು ಇಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನೆಲಸಮಗೊಳಿಸುವ ಬಗ್ಗೆ ಈ ಹಿಂದೆ ನೀಡಿದ್ದ ನೋಟಿಸ್‌ಗೆ ಆಸ್ಪತ್ರೆಯ ಅಧಿಕಾರಿಗಳು ಉತ್ತರಿಸಿರಲಿಲ್ಲ ಎಂದು ಹೇಳಿರುವ ನೋಟಿಸ್‌, ಈ ವರ್ಷದ ಆರಂಭದಲ್ಲಿ ಆಸ್ಪತ್ರೆಯನ್ನು ನೆಲಸಮಗೊಳಿಸುವ ಬಗ್ಗೆ ಆದೇಶವನ್ನು ರವಾನಿಸಲಾಗಿದೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಡ್ರಿಪ್‌ನಲ್ಲಿ ರಕ್ತ ಕಣಗಳ ಬದಲಿಗೆ ಹಣ್ಣಿನ ಜ್ಯೂಸ್ ನೀಡಿದ ಆಸ್ಪತ್ರೆ; ರೋಗಿ ಸಾವು

ಆಸ್ಪತ್ರೆಗೆ ದಾಖಲಾಗಿದ್ದ 32 ವರ್ಷದ ಡೆಂಗ್ಯೂ ರೋಗಿಗೆ ರಕ್ತಕಣಗಳ ಬದಲಿಗೆ ಮೂಸಂಬಿ ಜ್ಯೂಸ್‌ ಅನ್ನು ಡ್ರಿಪ್‌ನಲ್ಲಿ ನೀಡಲಾಗಿದ್ದು, ಇದರಿಂದಾಗಿ ರೋಗಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿತ್ತು. ಡ್ರಿಪ್‌ ನೀಡಿದ ನಂತರ ರೋಗಿಯ ಆರೋಗ್ಯ ಹದಗೆಟ್ಟಿತ್ತು, ಇದರ ನಂತರ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಲ್ಲಿ ಅವರು ಸಾವನ್ನಪ್ಪಿದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ರೋಗಿಯನ್ನು ಸೇರಿಸಿದ್ದ ಆಸ್ಪತ್ರೆಯ ವೈದ್ಯರು ವಿವಾದಿತ ರಕ್ತಕಣಗಳ ಯುನಿಟ್‌ನಲ್ಲಿ ರಾಸಾಯನಿಕಗಳ ಮಿಶ್ರಣ ಮತ್ತು ಮೊಸಾಂಬಿ ಜ್ಯೂಸ್‌ನಂತಹ ಸಿಹಿ ಏನೊ ಇದೆ ಎಂದು ಹೇಳಿದ್ದಾರೆ ಎಂದು ಕುಟುಂಬಿಕರು ಹೇಳಿದ್ದಾರೆ.

ಆದರೆ ವಿವಾದಿತ ‘‘ರಕ್ತಕಣಗಳ ಚೀಲ”ದಲ್ಲಿ ನಿಜವಾಗಿಯೂ ಜ್ಯೂಸ್‌ ಇತ್ತೆ ಎಂಬ ವೈದ್ಯಕೀಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ. ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ರೋಗಿಯ ಕುಟುಂಬವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು.

ಇದನ್ನೂ ಓದಿ:  ಪತ್ನಿಯ ಸಹಾಯದಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಸ್ವಯಂ ಘೋಷಿತ ದೇವಮಾನವನ ಬಂಧನ

ಈ ಮಧ್ಯೆ, ಡೆಂಗ್ಯೂ ರೋಗಿಯ ಮರಣದ ಒಂದು ದಿನದ ನಂತರ, ಪ್ರಯಾಗ್‌ರಾಜ್ ಪೊಲೀಸರು “ನಕಲಿ ರಕ್ತಕಣ”ಗಳನ್ನು ಪೂರೈಸುವ ಗ್ಯಾಂಗ್‌ನ 10 ಜನರನ್ನು ಬಂಧಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...