Homeಮುಖಪುಟಉತ್ತರ ಪ್ರದೇಶ: ಡ್ರಿಪ್‌ನಲ್ಲಿ ರಕ್ತ ಕಣಗಳ ಬದಲಿಗೆ ಹಣ್ಣಿನ ಜ್ಯೂಸ್ ನೀಡಿದ ಆಸ್ಪತ್ರೆ; ರೋಗಿ ಸಾವು

ಉತ್ತರ ಪ್ರದೇಶ: ಡ್ರಿಪ್‌ನಲ್ಲಿ ರಕ್ತ ಕಣಗಳ ಬದಲಿಗೆ ಹಣ್ಣಿನ ಜ್ಯೂಸ್ ನೀಡಿದ ಆಸ್ಪತ್ರೆ; ರೋಗಿ ಸಾವು

- Advertisement -
- Advertisement -

ಡೆಂಗ್ಯೂ ರೋಗಿಗೆ ರಕ್ತ ಕಣಗಳ ಬದಲಿಗೆ ಮೂಸಂಬಿ ರಸವನ್ನು ನೀಡಿರುವ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌‌ ಜಿಲ್ಲೆಯಲ್ಲಿ ನಡೆದಿದೆ. ವಿವಾದಿತ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಗುರುವಾರ ಸೀಲ್ ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಆದೇಶದ ಮೇರೆಗೆ ಪ್ರಯಾಗರಾಜ್‌ನ ಝಲ್ವಾ ಪ್ರದೇಶದಲ್ಲಿರುವ ಗ್ಲೋಬಲ್ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ರಕ್ತಕಣಗಳನ್ನು ತನಿಖೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರದೀಪ್ ಪಾಂಡೆ ಎಂಬ ರೋಗಿಯನ್ನು ಅಕ್ಟೋಬರ್ 17 ರಂದು ಡೆಂಗ್ಯೂಗೆ ತುತ್ತಾದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಕಣಗಳ ಪ್ಯಾಕೆಟ್‌ಗಳನ್ನು ಬೇರೆ ವೈದ್ಯಕೀಯ ಸಂಸ್ಥೆಯ ಕಡೆಯಿಂದ ತರಲಾಗಿದೆ ಎಂದು  ಆಸ್ಪತ್ರೆಯ ಮಾಲೀಕ ಸೌರಭ್ ಮಿಶ್ರಾ ಹೇಳಿಕೊಂಡಿದ್ದಾರೆ. ಮೂರು ಯೂನಿಟ್‌‌ಗಳನ್ನು ಅವರಿಗೆ ನೀಡಿದ ನಂತರ ರೋಗಿಗೆ ಪರಿಸ್ಥಿತಿ ಹದಗೆಟ್ಟಿದೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ದಲಿತ ವ್ಯಕ್ತಿಯ ಕೊಲೆ; ಆರೋಪ

ರೋಗಿ ಪಾಂಡೆ ಅವರ ರಕ್ತ ಕಣಗಳ ಸಂಖ್ಯೆ 17,000 ಕ್ಕೆ ಇಳಿದ ನಂತರ ಅವರಿಗೆ ರಕ್ತ ಕಣಗಳನ್ನು ನೀಡುವ ಬಗ್ಗೆ ಸಂಬಂಧಿಕರಿಗೆ ಹೇಳಲಾಗಿತ್ತು ಎಂದು ಸೌರಭ್‌ ಮಿಶ್ರಾ ಹೇಳಿದ್ದಾರೆ. “ಅವರ ಸಂಬಂಧಿಕರು ಎಸ್‌ಆರ್‌ಎನ್ ಆಸ್ಪತ್ರೆಯಿಂದ ಐದು ಯೂನಿಟ್ ರಕ್ತ ಕಣಗಳನ್ನು ತಂದರು. ಅದರಲ್ಲಿ ಮೂರು ಯೂನಿಟ್‌‌ಗಳನ್ನು ರೋಗಿಗೆ ನೀಡಿದ ನಂತರ ಅವರ ಪರಿಸ್ಥಿತಿ ಹದಗೆಟ್ಟಿತು. ಈ ವೇಳೆ ನಾವು ರಕ್ತಕಣಗಳನ್ನು ನೀಡುವುದನ್ನು ನಿಲ್ಲಿಸಿದೆವು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರು

ನಂತರ ಪಾಂಡೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಅಲ್ಲಿ ಅವರು ನಿಧನರಾಗಿದ್ದಾರೆ.

ಅಕ್ಟೋಬರ್ 19 ರಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊವೊಂದು ಎಸ್‌ಆರ್‌ಎನ್ ಆಸ್ಪತ್ರೆ ನೀಡಿದ ಪ್ಯಾಕೆಟ್ ಜೊತೆಗಿರುವ ವ್ಯಕ್ತಿಯೊಬ್ಬನನ್ನು ಕಾಣಬಹುದಾಗಿದೆ. ಪ್ಯಾಕೆಟ್‌ನಲ್ಲಿ ಪ್ಲಾಸ್ಮಾ ಬದಲಿಗೆ ಸಿಹಿ ನಿಂಬೆ ರಸವಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕನನ್ನು ಹೊಡೆದು ಕೊಂದ ಸವರ್ಣೀಯ ಶಿಕ್ಷಕ

ಈ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ ಮತ್ತು ಕೆಲವು ಶಂಕಿತರನ್ನು ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಸಿಂಗ್ ಹೇಳಿದ್ದಾರೆ. “ಕೆಲವು ದಿನಗಳ ಹಿಂದೆ, ನಕಲಿ ಬ್ಲಡ್ ಬ್ಯಾಂಕ್ ಅನ್ನು ಕೂಡಾ ಭೇದಿಸಲಾಯಿತು. ಇಲ್ಲಿ ಮೂಸಂಬಿ ರಸವನ್ನು ಸರಬರಾಜು ಮಾಡಲಾಗಿದೆಯೇ ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...