Homeಅಂತರಾಷ್ಟ್ರೀಯಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ '2024ರ ಯುನೆಸ್ಕೋ ಪತ್ರಿಕಾ...

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿ’

- Advertisement -
- Advertisement -

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು ಆಯ್ಕೆ ಮಾಡಲಾಗಿದೆ. ವಿದೇಶಿ ಮಾಧ್ಯಮಗಳಿಗೆ ಗಾಝಾಗೆ ತೆರಳದಂತೆ ಇಸ್ರೇಲ್‌ ನಿರ್ಬಂಧ ವಿಧಿಸಿತ್ತು. ಸ್ಥಳೀಯ ಪತ್ರಕರ್ತರು ಗಾಝಾ ಪಟ್ಟಿಯ ಕಣ್ಣುಗಳು ಮತ್ತು ಕಿವಿಗಳಾಗಿದ್ದರು. ಇಸ್ರೇಲ್‌ ದಾಳಿ ಮೂಲಕ ಗಾಝಾದಲ್ಲಿ 30,000ಕ್ಕೂ ಅಧಿಕ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದೆ. ಈ ವೇಳೆ ಪತ್ರಕರ್ತರ ಸರಣಿ ಸಾವುಗಳು ನಡೆದಿದೆ. ಆದರೂ ಎದೆಗುಂದದೆ ಪ್ಯಾಲೆಸ್ತೀನ್‌ ಪತ್ರಕರ್ತರು ಇಸ್ರೇಲ್‌ನ ಕೃತ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದರು.

UNESCO ಗಾಝಾದಲ್ಲಿ 26 ಪತ್ರಕರ್ತರ ಸಾವುಗಳ ಬಗ್ಗೆ ಉಲ್ಲೇಖಿಸಿದೆ, ಆದರೆ ವಾಸ್ತವ ಸಂಖ್ಯೆ ಅದಕ್ಕಿಂತ ಹೆಚ್ಚಿರಬಹುದು. ಅಲ್ ಜಝೀರಾ ಮಾಧ್ಯಮದ ಪ್ರಕಾರ ಗಾಝಾದಲ್ಲಿ 100ಕ್ಕಿಂತ ಹೆಚ್ಚು ಪತ್ರಕರ್ತರು ಮೃತಪಟ್ಟಿದ್ದಾರೆ. ಅಲ್ ಜಝೀರಾದ ಗಾಝಾ ಬ್ಯೂರೋ ಮುಖ್ಯಸ್ಥ ವೇಲ್ ದಹದೌಹ್ ತನ್ನ ಕುಟುಂಬದ ಅನೇಕ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಅವರು ಕೂಡ ಇಸ್ರೇಲ್‌ ದಾಳಿ ವೇಳೆ ಗಾಯಗೊಂಡಿದ್ದಾರೆ.

ಅಲ್‌ ಜಝೀರಾ ಚಾನೆಲ್‌ನ ಕ್ಯಾಮರಾಮ್ಯಾನ್ ಸಮೀರ್ ಅಬುದಾಕ ದಕ್ಷಿಣ ಗಾಝಾದಲ್ಲಿ ವರದಿ ಮಾಡುವಾಗ ಮೃತಪಟ್ಟಿದ್ದಾರೆ. ಇದಲ್ಲದೆ ಇಸ್ರೇಲ್‌ ದೇಶವು ಅಲ್‌ಜಝೀರಾ ಮಾಧ್ಯಮದ ಪ್ರಸಾರ ಮತ್ತು ಕಾರ್ಯಚರಣೆಯನ್ನು ಸಂಫೂರ್ಣವಾಗಿ ನಿಷೇಧಿಸಿದೆ.

ಪ್ರಶಸ್ತಿ ಕುರಿತು ತೀರ್ಪುಗಾರರ ಸಮಿತಿಯ ಮುಖ್ಯಸ್ಥರಾದ ಮಾರಿಸಿಯೊ ವೀಬೆಲ್ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಹತಾಶತೆಯ ಈ ಸಮಯದಲ್ಲಿ, ಈ ಬಿಕ್ಕಟ್ಟಿನ ಬಗ್ಗೆ ವರದಿ ಮಾಡುತ್ತಿರುವ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ಒಗ್ಗಟ್ಟಿನ ಬಗ್ಗೆ ಬಲವಾದ ಸಂದೇಶವನ್ನು ಕಳುಹಿಸಲು ನಾವು ಬಯಸುತ್ತೇವೆ. ಮಾನವೀಯವಾಗಿ ಅವರ ಧೈರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬದ್ಧತೆಗೆ ನಾವು ದೊಡ್ಡ ಋಣವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

UNESCO/Guillermo Cano ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ, ಕಠಿಣ ಮತ್ತು ಅಪಾಯಕಾರಿ ಸಂದರ್ಭಗಳನ್ನು ಎದುರಿಸುತ್ತಿರುವ ಪತ್ರಕರ್ತರ ಧೈರ್ಯವನ್ನು ಮೆಚ್ಚಿ ಈ ಗೌರವವನ್ನು ನೀಡಲಾಗುತ್ತದೆ ಎಂದು UNESCO ನಿರ್ದೇಶಕ-ಜನರಲ್ ಆಡ್ರೆ ಅಜೌಲೆ ಹೇಳಿದ್ದಾರೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು 194 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

ಹಮಾಸ್‌ ಇಸ್ರೇಲ್‌ ಮೇಲೆ ಅ.7ರಂದು ನಡೆಸಿದ ವೈಮಾನಿಕ ದಾಳಿಗೆ 1,200 ಜನರು ಮೃತಪಟ್ಟಿದ್ದರು.  ಆ ಬಳಿಕ ಇಸ್ರೇಲ್‌ ಯುದ್ಧ ಘೋಷಿಸಿ ಗಾಝಾ ಮೇಲೆ ನಡೆಸಿದ ದಾಳಿಯಲ್ಲಿ 30,000ಕ್ಕೂ ಅಧಿಕ ಗಾಝಾದ ನಾಗರಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇದನ್ನು ಓದಿ: ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೇವರಾಗಿದ್ದರೆ ರಾಜಕೀಯ ಮಾಡಬಾರದು’: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್‌

0
'ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ' ಎಂಬ ಪ್ರಧಾನಿ ಮೋದಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇವರುಗಳು ರಾಜಕೀಯ ಮಾಡಬಾರದು ಮತ್ತು ಗಲಭೆಗಳನ್ನು ಪ್ರಚೋದಿಸಬಾರದು, ನಾವು ದೇವಾಲಯ...