Homeಮುಖಪುಟತ್ವರಿತ ಸಾಲ ನೀಡುವ ಆ್ಯಪ್‌ಗಳ ವಂಚನೆ: ಚೀನಿ ಪ್ರಜೆ ಸೇರಿದಂತೆ ಒಟ್ಟು ನಾಲ್ಕು ಜನರ ಬಂಧನ

ತ್ವರಿತ ಸಾಲ ನೀಡುವ ಆ್ಯಪ್‌ಗಳ ವಂಚನೆ: ಚೀನಿ ಪ್ರಜೆ ಸೇರಿದಂತೆ ಒಟ್ಟು ನಾಲ್ಕು ಜನರ ಬಂಧನ

ಆರೋಪಿಗಳು ತಮ್ಮ ಸಾಲ ನೀಡುವ ಅಪ್ಲಿಕೇಷನ್‌ ಅನ್ನು ಸಾಲಗಾರರ ಸಂಪರ್ಕದಲ್ಲಿರುವವರ ಫೋನ್ ಸಂಖ್ಯೆ ಸೇರಿದಂತೆ ಇತರ ಮೊಬೈಲ್ ಮಾಹಿತಿಗಳನ್ನು ಕೂಡಾ ಪಡೆಯುವಂತೆ ಅಭಿವೃದ್ದಿಪಡಿಸಿದ್ದರು.

- Advertisement -
- Advertisement -

ತ್ವರಿತ ಸಾಲ ನೀಡುವ ಆ್ಯಪ್‌ಗಳ ವಂಚನೆ ಪ್ರಕರಣದಲ್ಲಿ ಚೀನಾದ ಪ್ರಜೆ ಸೇರಿದಂತೆ ಒಟ್ಟು ನಾಲ್ಕು ಜನರನ್ನು ತೆಲಂಗಾಣದ ಸೈಬರಾಬಾದ್‌‌ನಲ್ಲಿ ಬಂಧಿಸಲಾಗಿದೆ. ಚೀನಾ ಪ್ರಜೆಯ ನೇತೃತ್ವದಲ್ಲಿ ನಡೆಯುತ್ತಿದ್ದ “ಕ್ಯೂಬೆವೊ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್” (ಸ್ಕೈಲೈನ್) ಎಂಬ ಕಾಲ್ ಸೆಂಟರ್‌ ಮೇಲೆ ಸೈಬರಾಬಾದ್‌ನ ಸೈಬರ್‌ ಅಪರಾಧ ಪೊಲೀಸರು ದಾಳಿ ನಡೆಸಿದ್ದರು.

ಇದರ ಮುಖ್ಯ ಕಚೇರಿ “ಸ್ಕೈಲೈನ್ ಇನ್ನೋವೇಶನ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರಿನಲ್ಲಿದ್ದು, ದೆಹಲಿಯಲ್ಲಿದೆ. ಜಿಕ್ಸಿಯಾ ಜಾಂಗ್ ಮತ್ತು ಉಮಾಪತಿ ಅಜಯ್ ಎಂಬವರು ಇದರ ನಿರ್ದೇಶಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರ ಮತ್ತು ಆರ್‌ಬಿಐ ನಡುವಿನ ಸಂಘರ್ಷ

ಇವರು ಒಟ್ಟು 11 ರೀತಿಯ ತ್ವರಿತ ಸಾಲಗಳನ್ನು ನೀಡುತ್ತಿದ್ದು, ಭಾರಿ ಮರುಪಾವತಿಯನ್ನು ಪಡೆಯುತ್ತಿದ್ದರು. ಸಾಲ ಪಾವತಿಸದ ಸಾಲಗಾರರಿಗೆ ತಾವು ನಡೆಸುತ್ತಿದ್ದ ಕಾಲ್ ಸೆಂಟರ್‌ಗಳ ಮೂಲಕ ವ್ಯವಸ್ಥಿತವಾಗಿ ನಿಂದನೆ, ಕಿರುಕುಳ, ಬೆದರಿಕೆಗಳನ್ನು ಹಾಕುತ್ತಿದ್ದರು. ಅಲ್ಲದೆ ಸಾಲ ಪಡೆದವರ ಸಂಬಂಧಿಕರು ಮತ್ತು ಕುಟುಂಬ ಸದಸ್ಯರಿಗೆ ನಕಲಿ ಕಾನೂನು ನೋಟಿಸ್ ಕಳುಹಿಸಿ ಸಾಲಗಾರರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಸಾಲ ನೀಡುವ ಅಪ್ಲಿಕೇಷನ್‌ ಅನ್ನು ಸಾಲಗಾರರ ಸಂಪರ್ಕದಲ್ಲಿರುವವರ ಫೋನ್ ಸಂಖ್ಯೆ ಸೇರಿದಂತೆ ಇತರ ಮೊಬೈಲ್ ಮಾಹಿತಿಗಳನ್ನು ಕೂಡಾ ಪಡೆಯುವಂತೆ ಅಭಿವೃದ್ದಿಪಡಿಸಿದ್ದರು. ಅಲ್ಲದೆ ಇದು ಗ್ರಾಹಕರ ಐಡಿ ಪ್ರೂಫ್‌‌, ಪ್ಯಾನ್ ಕಾರ್ಡ್, ಕೆವೈಸಿ ದಾಖಲೆ, ಬ್ಯಾಂಕ್ ಖಾತೆಗಳು ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸುತ್ತದೆ.

ಇದನ್ನೂ ಓದಿ: ಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಆರೋಪಿಗಳು ಸಾಲಗಾರರಿಂದ ಮರುಪಾವತಿಗಾಗಿ ದೇಶದ ವಿವಿಧ ಭಾಗಗಳಲ್ಲಿ ಇನ್ನೂ ನಾಲ್ಕು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿದ್ದಾರೆ. ಅವುಗಳ ಪಟ್ಟಿ ಹೀಗಿದೆ, ಗೋವಾದಲ್ಲಿ ನೋಂದಾಯಿಸಿದ ಆದರೆ ಗುರ್‌ಗಾಂವ್‌ನಲ್ಲಿರುವ ಟೋಪ್‌ಫನ್ ಟೆಕ್ನೋಲಜಿ ‌ಪ್ರೈ.ಲಿ ಮತ್ತು ಫಾಸ್‌ಮೆಟ್ ಟೆಕ್ನೋಲಜಿ ಪ್ರೈ.ಲಿ, ಹಾಗೂ ಹೈದರಾಬಾದ್‌ನಲ್ಲಿರುವ ಕ್ಯೂಬೆವೊ ಟೆಕ್ನಾಲಜಿ ಪ್ರೈ.ಲಿ ಮತ್ತು ಬೆಸ್ಟ್ ಶೈನ್ ಟೆಕ್ನೋಲಜಿ ಪ್ರೈ.ಲಿ. ಇಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲೂ ಇವರಿಗೆ ಕಾಲ್‌ಸೆಂಟರ್‌ಗಳಿವೆ ಎನ್ನಾಗಿದೆ.

ಇತ್ತೀಗಷ್ಟೆ ತ್ವರಿತ ಮತ್ತು ಯಾವುದೆ ಕಿರಿಕಿರಿಯಿಲ್ಲದ ಪ್ರಕ್ರಿಯೆಯ ಮೂಲಕ ಸಾಲ ನೀಡುತ್ತೆವೆಂದು ಭರವಸೆ ನೀಡುವ ಅನಧೀಕೃತ ಡಿಜಿಟಲ್ ಫ್ಲಾಟ್‌ಫಾರ್ಮ್‌ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿತ್ತು. ಆರ್‌ಬಿಐ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತ್ವರಿತ ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಜನರು ಡಿಜಿಟಲ್ ಲೆಂಡಿಂಗ್ ಹಗರಣಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿತ್ತು.

ಇದನ್ನೂ ಓದಿ: ಸಾಲ ನೀಡುವ ಅನಧೀಕೃತ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳ ಬಗ್ಗೆ ಎಚ್ಚರಿಕೆ ನೀಡಿದ ಆರ್‌‌ಬಿಐ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...