Homeಮುಖಪುಟಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು.

- Advertisement -
- Advertisement -

ಗುಡ್ ಲೈಫ್ ಬಾಸುಮತಿ ಅಕ್ಕಿ ಬಳಸಿ, ಹೆಲ್ದಿ ಲೈಫ್ ತುಪ್ಪ, ಬೆಸ್ಟ್ ಫಾರ್ಮ್ಸ್ ಮಸಾಲಾ, ಡಿಲೈಟ್ ಮಾಂಸ ಹಾಕಿ ಬಿರಿಯಾನಿ ಮಾಡಿ ಊಟ ಮಾಡಿ, ಎನ್ಸೋಮಾಟಿಕ್ ಸೋಪಿನಲ್ಲಿ ಕೈತಟ್ಟೆ ತೊಳೆದುಕೊಂಡೆವು ಎಂದುಕೊಳ್ಳೋಣ. ಈ ಎಲ್ಲಾ ಆಹಾರ ಪದಾರ್ಥಗಳನ್ನೂ ಯಾವುದೋ ಗುಡಿ ಕೈಗಾರಿಕೆಯಲ್ಲೇ ತಯಾರಾಗಲ್ಪಟ್ಟದ್ದು ಎಂದರೂ ಮತ್ತು ಈ ದವಸ ಧಾನ್ಯಗಳನ್ನು ಯಾವುದೋ ಸಣ್ಣ ರೈತರ ಹೊಲದಲ್ಲೇ ಬೆಳೆದದ್ದಾದರೂ ರಿಲಾಯನ್ಸ್ ಕಂಪನಿಯ ಅಂಬಾನಿಗೆ ಸಂಬಂಧ ಹೆಣೆಯುವುದು ಹೇಗೆ ಎಂದು ಅಮಾಯಕ ಗ್ರಾಹಕನೊಬ್ಬ ಕೇಳಬಹುದು. ಮಾರುಕಟ್ಟೆಯ ಮರ್ಮ ಬಲ್ಲವರಿಗೆ ನಾವು ಬಳಸಿದ ದವಸಧಾನ್ಯಗಳೆಲ್ಲವೂ ರಿಲಾಯನ್ಸ್ ಕಂಪನಿಯ ಖಾಸಗೀ ಲೇಬಲ್‌ಗಳಾಗಿವೆ (ಪ್ರೈವೇಟ್ ಲೇಬಲ್) ಎಂಬುದು, ದೈತ್ಯ ರೀಟೇಲ್ ವ್ಯಾಪಾರವನ್ನು ಡೀಟೇಲಾಗಿ ಅಧ್ಯಯನ ಮಾಡಿದರೆ ತಿಳಿದುಬರುವ ವಿಷಯ.

ಬ್ರಾಂಡ್ ಅವರದ್ದೇ ಆದರೂ ಅದನ್ನು ಅವರು ತಯಾರು ಮಾಡುವುದಿಲ್ಲ ಅಥವಾ ಅದನ್ನು ಬೆಳೆಯುವುದಿಲ್ಲ. ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು. ರೈತರ ಹೊಲದಲ್ಲಿ ರೈತ ಕುಟುಂಬವನ್ನೇ ಕೂಲಿ ಕಾರ್ಮಿಕರಾಗಿ ದುಡಿಸಿಕೊಂಡು ನಮಗೆ ಬೇಕಾದ ಬೆಳೆಯನ್ನು ಬೆಳೆದು ಅವನಿಗೆ ಕೇಜಿಗೆ ಒಂದೋ ಎರಡೋ ರುಪಾಯಿ ಕೊಟ್ಟು ಪಡೆದುಕೊಳ್ಳುವುದಕ್ಕೆ ಈಗ ಹೊಸದಾಗಿ ಬಂದಿರುವ ಕಾಂಟ್ರಾಕ್ಟ್ ಕೃಷಿ ಸಂಪೂರ್ಣವಾಗಿ ಸಹಾಯಮಾಡುತ್ತದೆ.

ಹಾಗೆಯೇ ದೇಶದ 1.3 ಕೋಟಿ ಕಿರಾಣಿ ಅಂಗಡಿಗಳನ್ನು ದೈತ್ಯ ರೀಟೇಲ್ ಬ್ರಾಂಡ್‌ಗಳ ಅಡಿಯಲ್ಲಿ ದುಡಿಸಿಕೊಳ್ಳುವುದು ಮತ್ತು ಅವರ ಮೂಲಕ ರಿಲಾಯನ್ಸ್ ಅಂತ ಕಂಪನಿಗಳ ಬ್ರಾಂಡುಗಳನ್ನೇ ಮಾರಾಟ ಮಾಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುತ್ತಿದೆ. ಫೇಸ್ಬುಕ್ ಮೂಲಕ ಆರ್ಡರ್ ಮಾಡಿ ವಾಟ್ಸಾಪ್ ಮೂಲಕ ಹಣ ಕೊಟ್ಟು, ಚಿಲ್ಲರೆ ವ್ಯಾಪಾರಿಗಳಿಗೆ ಮೊದಮೊದಲು ಸಾಲ ಕೊಟ್ಟು, ಹೆಚ್ಚು ಮಾರ್ಜಿನ್ ಹಣ ಬಿಟ್ಟುಕೊಟ್ಟು ತಮಗೆ ದುಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಫೇಸ್ಬುಕ್, ವಾಟ್ಸಾಪ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳು ಚಿಲ್ಲರೆ ವ್ಯಾಪಾರಕ್ಕಿಳಿದಿರುವ ರಿಲಾಯನ್ಸ್ ಕಂಪನಿಗೆ ಹಣ ಹೂಡಿರುವುದು. ಇದರ ಜೊತೆಗೆ ಖಾಸಗಿ ಕಂಪನಿಯವರು ಬ್ಯಾಂಕ್ ಕೂಡಾ ಮಾಡಬಹುದೆಂದು ಆರ್‌ಬಿಐ ವರದಿ ಹೇಳುತ್ತದೆ. ಹಿಂದೆ ಬರ್ಟೋಲ್ಟ್ ಬ್ರೆಕ್ಟ್ ಹೀಗೆಂದಿದ್ದ: ’ಬ್ಯಾಂಕಿಗೆ ಕನ್ನಾ ಹಾಕುವುದು ಬೇಡ, ಬ್ಯಾಂಕನ್ನೇ ಶುರು ಮಾಡುವುದು ಒಳ್ಳೆಯದು’ ಎಂದು. ಆಗ ಜನರೇ ಸಾಲಾಗಿ ನಿಂತು ಹಣಹಾಕಿ ಹೋಗುತ್ತಾರೆ. ಅದನ್ನು ನಮ್ಮ ವ್ಯಾಪಾರಕ್ಕೆ ತಕ್ಕಂತೆ ಬಳಸಿ ಏಕಸ್ವಾಮ್ಯತೆಯನ್ನು ಸ್ಥಾಪಿಸಬಹುದು.

ನಮ್ಮಲ್ಲಿ ಸುಮಾರು 14 ಕೋಟಿ ರೈತ ಕುಟುಂಬ, ಸುಮಾರು 12 ಕೋಟಿ ಕೃಷಿ ಅವಲಂಬಿತ ಕೂಲಿಕಾರ್ಮಿಕರು, 6.3 ಕೋಟಿ ಗುಡಿ ಕೈಗಾರಿಕೆಗಳು, 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಇದ್ದಾರೆ. ಈ ರೀತಿ ಈ ದೇಶದ ಶೇ. 90ರಷ್ಟು ಜನ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಅಲ್ಲದೇ ತಮ್ಮದೇ ಆದ ರೀತಿಯಲ್ಲಿ ಸ್ವತಂತ್ರರೂ, ಸಾರ್ವಭೌಮರೂ ಆಗಿದ್ದಾರೆ. ಅವರಿಗೆ ಕಷ್ಟಗಳಿಲ್ಲವೆಂದಲ್ಲ. ಆದರೆ ತನ್ನ ಹೊಲದಲ್ಲಿ ತನಗೇನು ಬೆಳೆಯಬೇಕೆಂಬುದು ಗೊತ್ತು. ತನ್ನ ಆಹಾರ ಸಂಸ್ಕೃತಿಗೆ ತಕ್ಕಂತೆ ಬೆಳೆದು ತಮ್ಮ ಜೀವನಶೈಲಿಯಂತೆ ಕೃಷಿಮಾಡುವವರು ಬಹುಪಾಲು. ಅಲ್ಲಿ, ಕಂಪನಿಯ ಬೀಜ ಕೊಟ್ಟು, ಕಂಪನಿಯ ಗೊಬ್ಬರ, ಕೀಟನಾಶಕಗಳನ್ನು ಕೊಟ್ಟು, ತಮಗೆ ಬೇಕಾದುದನ್ನೇ ಬೆಳೆದುಕೊಳ್ಳಲು ದೈತ್ಯ ಕಂಪನಿಗೆಳಿಗೆ ಅವಕಾಶ ಕೊಟ್ಟಾಗ ಆಹಾರ ವೈವಿಧ್ಯತೆ ಉಳಿಸಿಕೊಳ್ಳಲು ಅಸಾಧ್ಯ. ಆಲೂಗಡ್ಡೆಯಲ್ಲಿ ಸಾವಿರಾರು ರೀತಿಯ, ಹಲವು ಬಣ್ಣದ, ಹಲವು ಗಾತ್ರದ ವಿನ್ಯಾಸದ ತಳಿಗಳಿವೆ. ಆದರೆ ಪೆಪ್ಸಿ ಕಂಪನಿಗೆ ಒಪ್ಪಂದ ಮಾಡಿಕೊಂಡಾಗ ಆ ಕಂಪನಿಯ ಚಿಪ್ಸಿಗೆ ಬೇಕಾದ ಒಂದೇ ಗಾತ್ರದ ಆಲೂಗಡ್ಡೆಯನ್ನು ಬೆಳೆಯುವಂತಾಗುತ್ತದೆ.

ಇತ್ತೀಚೆಗೆ ಬಂದ ಇನ್ನೆರಡು ಕೃಷಿ ಕಾನೂನುಗಳಲ್ಲಿ ಎಪಿಎಂಸಿ ಮಾರುಕಟ್ಟೆಯ ನಿಯಮಗಳನ್ನು ಮಾರ್ಪಾಟು ಮಾಡಿ ರೈತರು ಮುಕ್ತವಾಗಿ ತಮ್ಮ ಬೆಳೆಯನ್ನು ದೇಶದಲ್ಲಿ ಎಲ್ಲಿ ಯಾರಿಗೆ ಬೇಕಾದರೂ ಮಾರಬಹುದು ಎಂದು ಹೇಳಲಾಗುವ ಕಾನೂನು ಒಂದಾದರೆ, ಇನ್ನೊಂದು ವ್ಯಾಪಾರಿಗಳು ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಇತಿಮಿತಿ ತೆಗೆದುಹಾಕಿರುವುದಾಗಿದೆ.

ಇತಿಮಿತಿ ಇಲ್ಲದೇ ಅತ್ಯಂತ ಹೆಚ್ಚು ಆಹಾರ ಧಾನ್ಯವನ್ನು ಗೋದಾಮಿನಲ್ಲಿಟ್ಟುಕೊಳ್ಳುವುದನ್ನು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿರುವುದು ವಿಪರ್ಯಾಸ. ಸುಮಾರು 50 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಸರ್ಕಾರ ತಾನೇ ನಿಗದಿ ಮಾಡಿಕೊಂಡಿರುವ ನಿಯಮಾವಳಿಗಿಂತ ಹೆಚ್ಚು ಶೇಖರಿಸಿ, ಇಲಿ ಹೆಗ್ಗಣಗಳಿಗೆ ಉಣಬಡಿಸಿ ಸುಮಾರು ಒಂದು ಲಕ್ಷ ಕೋಟಿ ಹಣ ಪೋಲು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿದೆ. ಅಲ್ಲದೇ ಈ ಆಹಾರ ಧಾನ್ಯವನ್ನು ಏನು ಮಾಡಲೆಂದು ತೋಚದೇ ಸ್ಯಾನಿಟೈಸರ್ ಮಾಡೋಣ, ಸಾರಾಯಿ ಮಾಡಿ ಪೆಟ್ರೋಲಿಗೆ ಸೇರಿಸೋಣ ಎಂದೆಲ್ಲಾ ಆಲೋಚಿಸುತ್ತಿದೆ. ತಾವು ಮಾಡಿದ ತಪ್ಪನ್ನೇ ಖಾಸಗಿಯವರಿಗೂ ಅವಕಾಶ ಕೊಟ್ಟಾಗ ಸಮಾನತೆ ಉಂಟಾಗಬಹುದೆನ್ನುವ ಆಲೋಚನೆ ಇರಬಹುದು.

ಈ ಎರಡು ಕಾನೂನುಗಳ ನಡುವೆ ಸರ್ಕಾರ 23 ಬೆಳೆಗೆ ನಿಗದಿಪಡಿಸುವ ಕನಿಷ್ಟ ಬೆಲೆ ದಕ್ಕದಂತಾಗಬಹುದು ಎನ್ನುವುದು ರೈತಾಪಿ ವರ್ಗದ ಆತಂಕ.

ಹೌದು, ದೇಶದ ಸುಮಾರು 700 ಮಿಲಿಯನ್ ಟನ್ ಒಟ್ಟು ಆಹಾರ ಉತ್ಪಾದನೆಯಲ್ಲಿ ಶೇ. 10ಕ್ಕಿಂತ ಕಮ್ಮಿ ದವಸ ಧಾನ್ಯಗಳನ್ನು ಅದರಲ್ಲೂ ಅಕ್ಕಿ ಮತ್ತು ಗೋಧಿಯನ್ನು, ಪಂಜಾಬ್ ಮತ್ತು ಹರಿಯಾಣಗಳಿಂದ ತಾನು ಘೋಷಿಸಿದ ಕನಿಷ್ಟ ಬೆಲೆಯನ್ನು ಕೊಟ್ಟು ಸರ್ಕಾರ ಕೊಂಡುಕೊಳ್ಳುತ್ತದೆ.

ಉಳಿದ ಶೇ. 90ರಷ್ಟು ಆಹಾರ ಬೆಳೆಗೆ ಘೋಷಿಸಿದ ಬೆಲೆ ಸಿಗುತ್ತಿಲ್ಲ. ಶೇ. 80ರಷ್ಟು ರೈತರಿಗೆ ಈ ಘೋಷಣೆ ಮಾಡಿದ 23 ಬೆಳೆಗಳಿಗೆ ಕನಿಷ್ಟ ಬೆಲೆ ಎಂಬುವುದೊಂದಿದೆ ಎನ್ನುವುದೇ ಗೊತ್ತಿಲ್ಲ.

ಸರ್ಕಾರದ ನಿಯಮಾವಳಿಗಳ ಪ್ರಕಾರ 80 ಚದರ ಕಿ.ಮೀ.ಗೊಂದು ಎಪಿಎಂಸಿ ಇರಬೇಕಾಗಿತ್ತು. ಆದರೆ 500 ಚದರ ಕಿ.ಮೀಗೊಂದು ಎಪಿಎಂಸಿ ಯಾರ್ಡ್ ಇರುವುದ ಈಗಿನ ವಾಸ್ತವ. ನಿಜವಾಗಿಯೂ ಮೊದಲು ಸರ್ಕಾರ ಮಾಡಬೇಕಾಗಿದ್ದುದು ರೈತ ನೂರಾರು ಕಿ.ಮೀವರೆಗೆ ತನ್ನ ಬೆಳೆಯನ್ನು ಸಾಗಿಸಿ ಮಾರಾಟ ಮಾಡುವ ದುರ್ವ್ಯವಸ್ಥೆಯನ್ನು ಮೊಟಕುಗೊಳಿಸಲು ತಾನೇ ಹಾಕಿದ ನಿಯಮಾವಳಿಯಂತೆ 5 ಕಿ.ಮೀ ಒಳಗೆ ಎಪಿಎಂಸಿ ಇದ್ದಲ್ಲಿ ಮತ್ತು ಕನಿಷ್ಟ ಬೆಲೆ ಪಾಲನೆಯಾದಲ್ಲಿ ರೈತರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ಇದನ್ನು ಬಿಟ್ಟು ಇನ್ನೂ ಕಟ್ಟಬೇಕಾಗಿದ್ದ ವ್ಯವಸ್ಥೆಯನ್ನೇ ಅರ್ಧಕ್ಕೇ ಕೆಡವಿದರೆ ಹೇಗೆ?

ಅಲ್ಲದೇ, ಅದಾನಿ ಆಹಾರ ದಾಸ್ತಾನು ಮಾಡಿರುವ ಸೈಲೋಸ್‌ಗಳನ್ನೇ ವ್ಯಾಪಾರೀ ಸ್ಥಳವೆಂದು ಪರಿಗಣಿಸಿ ಖಾಸಗಿ ಮಂಡಿಗಳಿಗೆ ತೆರಿಗೆ ಇಲ್ಲ, ಆದರೆ ಸರ್ಕಾರಿ ಮಂಡಿಗಳಿಗೆ ತೆರಿಗೆಯುಂಟು ಎಂದು ನಿಯಮ ತಂದರೆ ತೆರಿಗೆ ಹಾಕುವ ಮಂಡಿಗಳಿಗೆ ಬರುವವರು ಉಂಟೇ? ಸರ್ಕಾರ ಘೋಷಿಸಿದ ಕನಿಷ್ಟ ಬೆಲೆಗೆ ಕೂಡಾ ಡಾ. ಎಂ. ಎಸ್. ಸ್ವಾಮಿನಾಥನ್ ಅವರು ಹೇಳಿದ ಸಿ2+50% ಆಧಾರವಾಗಿಸದೆ ಎ2+ಎಫ್‌ಎಲ್ ಎನ್ನುವ ಬೇರೆಯದ್ದೇ ಸೂತ್ರ ಬಳಸಿರುವುದು ರೈತರಿಗೆ ಮಾಡಿರುವ ಅನ್ಯಾಯವೇ. ಸ್ವಾಮಿನಾಥನ್ ಹೇಳಿದ್ದ ಸೂತ್ರಕ್ಕೂ ಇಂದು ಅಳವಡಿಸಿದ್ದ ಸೂತ್ರಕ್ಕೂ ಶೇ. 25ರಷ್ಟು ವ್ಯತ್ಯಾಸವಿದೆ.

ಇಕ್ರಿಯಾರ್ ಸಂಸ್ಥೆಯ ಅಧ್ಯಯನದಂತೆ ಭಾರತದ ರೈತರೂ ಪ್ರತಿವರ್ಷ 3 ಲಕ್ಷ ಕೋಟಿ ತಮ್ಮ ಬೆವರಿಗೆ ದಕ್ಕಬೇಕಾದ ಹಣವನ್ನು ದಕ್ಕಿಸಿಕೊಳ್ಳುತ್ತಿಲ್ಲ ಎನ್ನುತ್ತದೆ. ಅಲ್ಲದೇ ನ್ಯಾಷನಲ್ ಸ್ಯಾಂಪಲ್ ಸರ್ವೆ ಪ್ರಕಾರ ತಿಂಗಳ ರೈತರ ಆದಾಯ ಸುಮಾರು 6000 ರುಪಾಯಿ ಎನ್ನುವುದು ಸರ್ಕಾರಿ ಗುಮಾಸ್ತನ ಸಂಬಳಕ್ಕಿಂತ ನಾಲಕ್ನೇ ಒಂದಕ್ಕಿಂತ ಕಮ್ಮಿ ಇರುವುದು ಕಂಡುಬರುತ್ತದೆ.

ಹೊರನೋಟಕ್ಕೆ ಈ ಕಾನೂನುಗಳು ರೈತಪರ ಎಂದು ಕಂಡುಬಂದರೂ ದೇಶದ ಒಟ್ಟು 1.2 ಹೆಕ್ಟೇರ್ ತಲಾವಾರು ಭೂಮಿ ಒಡೆತನದ 14 ಕೋಟಿ ರೈತಕುಟುಂಬ ಹಾಗೆಯೇ 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು 6.3 ಕೋಟಿ ಗುಡಿಕೈಗಾರಿಕೆ ಅಲ್ಲದೇ ಸುಮಾರು 12 ಕೋಟಿ ಕೃಷಿ ಅವಲಂಭಿತ ಕೂಲಿ ಕಾರ್ಮಿಕರನ್ನು ಒಂದೋ ಎರಡೋ ದೈತ್ಯ ಕಂಪನಿಗೆ ಮಾರಿಬಿಡುವಂತೆ ಕಂಡುಬರುತ್ತದೆ. ಫ್ರಾನ್ಸ್ ಅನಟೋಲಿ ಒಂದು ಕಡೆ ಸರ್ಕಾರದ ಕಾನೂನನ್ನು ವ್ಯಂಗ್ಯವಾಗಿ ಹೀಗೆ ಉಲ್ಲೇಖಿಸುತ್ತಾನೆ: ’ಸರ್ಕಾರ ಕಾನೂನೊಂದನ್ನು ಮಾಡಿ, ಬಡವನಿರಬಹುದು ಬಲ್ಲಿದನಿರಬಹುದು, ಬೀದಿ ಬದಿಯಲ್ಲಿ ಯಾರೂ ಮಲಗಬಾರದು, ಭಿಕ್ಷೆ ಯಾರೂ ಬೇಡಬಾರದು ಎಂದರೆ ಅದು ನಿಷ್ಪಕ್ಷಪಾತವಾದ ಭೇದ-ಭಾವವಿಲ್ಲದ ಕಾನೂನೆಂದು ಹೊರನೋಟಕ್ಕೆ ಕಂಡುಬಂದರೂ ನಿಜವಾಗಿಯೂ ಅದರ ಪರಿಣಾಮ ನಿರ್ಗತಿಕರ ಮೇಲೆ ಬೀಳುವಂತದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ’.


  • ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು. ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ರೈತರ ಹಕ್ಕೊತ್ತಾಯ ಬಗೆಹರಿಸುವ ಸ್ವತಂತ್ರ ಸಮಿತಿಯಲ್ಲಿ ಪಿ.ಸಾಯಿನಾಥ್, ಬಿಕೆಯು ಪ್ರತಿನಿಧಿಗಳು ಇರಲಿ: ಸುಪ್ರೀಂ ಕೋರ್ಟ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...