Homeಮುಖಪುಟ'ಪೊಲೀಸರು ನಮಗೆ ಮತ ಹಾಕಲು ಬಿಡಲಿಲ್ಲ': ಗಂಭೀರ ಆರೋಪ ಮಾಡಿದ ಸಂಭಾಲ್‌ನ ಮುಸ್ಲಿಂ ಮತದಾರರು

‘ಪೊಲೀಸರು ನಮಗೆ ಮತ ಹಾಕಲು ಬಿಡಲಿಲ್ಲ’: ಗಂಭೀರ ಆರೋಪ ಮಾಡಿದ ಸಂಭಾಲ್‌ನ ಮುಸ್ಲಿಂ ಮತದಾರರು

- Advertisement -
- Advertisement -

ದೇಶದ 93 ಲೋಕಸಭೆ ಕ್ಷೇತ್ರಗಳಲ್ಲಿ ಇಂದು 3ನೇ ಹಂತದ ಮತದಾನ ನಡೆದಿದೆ. ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರು ಮತದಾನ ಮಾಡದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಕೆಲವೊಂದು ವಿಡಿಯೋಗಳು ಹರಿದಾಡಿದ್ದು, ನಾವು ಮತ ಹಾಕಲೆಂದು ಮತಗಟ್ಟೆಗೆ ತೆರಳಿದಾಗ ನಮ್ಮನ್ನು ಮತ ಹಾಕದಂತೆ ಪೊಲೀಸರು ಹಾಗೂ ಕೆಲ ಮತಗಟ್ಟೆ ಅಧಿಕಾರಿಗಳು ತಡೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಲಾಠಿ ಏಟು ಕೊಟ್ಟು ಓಡಿಸುತ್ತಿದ್ದಾರೆ, ನಮ್ಮ ಗುರುತಿನ ಚೀಟಿ ಮತ್ತು ಮತದಾನದ ರಸೀದಿಗಳನ್ನು ಕಸಿದುಕೊಳ್ಳಲಾಗಿದೆ ಎಂದು ಮುಸ್ಲಿಮ್‌ ಮತದಾರರು ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಪೋಲಿಸರ ಲಾಠೀ ಚಾರ್ಜ್‌ನಿಂದ ಕೆಲವು ಮತದಾರರಿಗೆ ಮೂಗಿಗೆ ಏಟು ಬಿದ್ದು ಗಾಯಗಳು ಆಗಿರುವುದನ್ನು ತೋರಿಸುತ್ತದೆ,  ಪೋಲೀಸರ ದಬ್ಬಾಳಿಕೆಯಿಂದಾಗಿ ಕೆಲವು ವಯೋವೃದ್ಧ ಮತದಾರರು ಪ್ರಜ್ಞಾಹೀನರಾಗಿರುವುದನ್ನು ಮತ್ತು ಅವರನ್ನು ಎತ್ತಿಕೊಂಡು ಹೋಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮತಗಟ್ಟೆಯಿಂದ ಪೊಲೀಸರು ಓಡಿಸಿದ ನಂತರ ಹೆಚ್ಚಿನ ಸಂಖ್ಯೆಯ ಮತದಾರರು ಮತಗಟ್ಟೆಯಿಂದ ಹೊರಬರುವುದನ್ನು ಮತ್ತೊಂದು ವೀಡಿಯೊ ತೋರಿಸುತ್ತದೆ. ಕೆಲವು ಮುಸ್ಲಿಂ ಮಹಿಳೆಯರು ತಮಗೆ ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಹೇಳಿಕೊಂಡು ಪೂಲಿಂಗ್ ಬೂತ್‌ನಿಂದ ದೂರ ಸರಿಯುವುದನ್ನು ವೀಡಿಯೊ ತೋರಿಸುತ್ತದೆ. ಇದಲ್ಲದೆ ಎಸ್‌ಪಿ ಬೆಂಬಲಿಗರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸಂಭಾಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಂದರಕಿ, ಬಿಲಾರಿ, ಚಂದೌಸಿ, ಸಂಭಾಲ್ ಮತ್ತು ಅಸ್ಮೋಲಿ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಪೊಲೀಸರು ಥಳಿಸುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಪೊಲೀಸ್ ಮತ್ತು ಸರಕಾರದ  ಈ ನಡವಳಿಕೆ ಸರಿಯಲ್ಲ. ಈ ಹಂತದಲ್ಲಿ ಬಿಜೆಪಿ ನಿರ್ನಾಮವಾಗಲಿದೆ. ಸಂಭಾಲ್‌ನಲ್ಲಿ ಪೊಲೀಸರು ಜನರನ್ನು ಥಳಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನಾನು ತಿಳಿದಿದ್ದೇನೆ. ಮಂತ್ರಿಗಳು ಅವರ ಸಂಗಡಿಗರು ಮತ್ತು ಕುಟುಂಬ ಸದಸ್ಯರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದ್ದರಿಂದ, ಜನರು ಹೊರಗೆ ಬಂದು ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾನು ಮನವಿ ಮಾಡಲು ಬಯಸುತ್ತೇನೆ. ಚುನಾವಣಾ ಆಯೋಗವು ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಸಂಭಾಲ್ ಮುಸ್ಲಿಂ ಕೇಂದ್ರಿತ ಕ್ಷೇತ್ರವಾಗಿದೆ. ಆಡಳಿತಾರೂಢ ಬಿಜೆಪಿ ಪರಮೇಶ್ವರ ಲಾಲ್ ಸೈನಿಯನ್ನು ಇಲ್ಲಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಸಮಾಜವಾದಿ ಪಕ್ಷವು ಜಿಯಾವುರ್ ರಹಮಾನ್ ಬಾರ್ಕ್ ಅವರನ್ನು ಕಣಕ್ಕಿಳಿಸಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮಾಜಿ ಶಾಸಕ ಸೌಲತ್ ಅಲಿ ಅವರನ್ನು ಕಣಕ್ಕಿಳಿಸಿದೆ.

 

 

ಇದನ್ನು ಓದಿ: ಸುಳ್ಳು ಸುದ್ದಿ, ದ್ವೇಷ ಹಬ್ಬಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ವಿರುದ್ಧ ಚು.ಆಯೋಗಕ್ಕೆ ದೂರು ನೀಡಿದ ನಿಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪೂಂಚ್‌ನ ನ್ಯಾಷನಲ್ ಕಾನ್ಫರೆನ್ಸ್‌ ರ‍್ಯಾಲಿಯಲ್ಲಿ ಚಾಕುವಿನಿಂದ ದಾಳಿ; 3 ಮಂದಿಗೆ ಗಾಯ

0
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ನ್ಯಾಚನಲ್ ಕಾನ್ಫರೆನ್ಸ್‌ ಪಕ್ಷದ ರೋಡ್ ಶೋ ವೇಳೆ ಅಪರಿಚಿತ ದುಷ್ಕರ್ಮಿಗಳ ಚಾಕು ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೆಂಧರ್ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ...