Homeಕರ್ನಾಟಕಬಿಜೆಪಿಯ 'ಕೋಮು ದ್ವೇಷದ ಪೋಸ್ಟ್‌'ನ್ನು ತೆಗೆದು ಹಾಕುವಂತೆ 'ಎಕ್ಸ್‌'ಗೆ ಸೂಚಿಸಿದ ಚು.ಆಯೋಗ

ಬಿಜೆಪಿಯ ‘ಕೋಮು ದ್ವೇಷದ ಪೋಸ್ಟ್‌’ನ್ನು ತೆಗೆದು ಹಾಕುವಂತೆ ‘ಎಕ್ಸ್‌’ಗೆ ಸೂಚಿಸಿದ ಚು.ಆಯೋಗ

- Advertisement -
- Advertisement -

ಬಿಜೆಪಿ ಕರ್ನಾಟಕ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕೋಮು ದ್ವೇಷದ ಪೋಸ್ಟ್‌ನ್ನು ತೆಗೆದುಹಾಕಲು ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಸೂಚನೆಯನ್ನು ನೀಡಿದೆ.

ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಆದೇಶದಲ್ಲಿ ಜಂಟಿ ನಿರ್ದೇಶಕರು ಮತ್ತು ನೋಡಲ್‌ ಅಧಿಕಾರಿಯಾಗಿರುವ ಅನುಜ್‌ ಚಂದಕ್‌ ಈ ಕುರಿತು ಸೂಚನೆಯನ್ನು ನೀಡಿದ್ದಾರೆ. ಆದೇಶದಲ್ಲಿ ಬಿಜೆಪಿಯ ದ್ವೇಷದ ಪೋಸ್ಟ್‌ನ ಲಿಂಕ್‌ನ್ನು ಉಲ್ಲೇಖಿಸಿದ್ದಾರೆ. ಬಿಜೆಪಿಯ ಈ ಪೋಸ್ಟ್‌ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಆಕ್ಷೇಪಾರ್ಹ ಪೋಸ್ಟ್‌ನ್ನು ತೆಗೆದುಹಾಕುವಂತೆ  ಈಗಾಗಲೇ 5-5-2024 ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಾವಳಿಯಡಿ ಎಕ್ಸ್‌ಗೆ ನಿರ್ದೇಶನ ನೀಡಲಾಗಿದೆ. ಆದರೆ ಪೋಸ್ಟ್‌ನ್ನು ತೆಗೆದುಹಾಕಲಾಗಿಲ್ಲ. ಆದ್ದರಿಂದ ತಕ್ಷಣ ಈ ದ್ವೇಷ ಪೂರಿತ ವಿಡಿಯೋವನ್ನು ತೆಗೆದು ಹಾಕುವಂತೆ ಎಕ್ಸ್‌ಗೆ ಚುನಾವಣಾ ಆಯೋಗ ಸೂಚನೆಯನ್ನು ನೀಡಿದೆ.

ಆ್ಯನಿಮೇಟೆಡ್ ವಿಡಿಯೋ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿತ್ತು.

ವಿಡಿಯೋದಲ್ಲೇನಿತ್ತು?

ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನ ಅಧಿಕೃತ ಖಾತೆಯಲ್ಲಿ ಸುಳ್ಳು ಪ್ರತಿಪಾದಿಸುವ, ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರೇರೇಪಿಸುವ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಎಚ್ಚರ..ಎಚ್ಚರ..ಎಚ್ಚರ.. ಎಂಬ ತಲೆ ಬರಹದಲ್ಲಿ ಬಿಜೆಪಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕಾರ್ಟೂನ್‌ಗಳಿವೆ. ಈ ಇಬ್ಬರು ಎಸ್ಸಿ,ಎಸ್‌ಟಿ, ಒಬಿಸಿ ಎಂದು ಬರೆದ ಮೊಟ್ಟೆ ಬಳಿ ಮುಸ್ಲಿಂ ಎಂದು ಬರೆದ ದೊಡ್ಡ ಮೊಟ್ಟೆಯನ್ನು ತಂದು ಇಡುತ್ತಾರೆ. ಈ ಮೊಟ್ಟೆಯಿಂದ ಹೊರಬಂದ ಮುಸ್ಲಿಂ ಎಂದು ಬರೆದ ಹಕ್ಕಿಗೆ ರಾಹುಲ್‌ ಗಾಂಧಿ ಆಹಾರವನ್ನು ತಂದು ಸುರಿಯುವುದು, ಬಳಿಕ ಎಸ್ಸಿ, ಎಸ್‌ಟಿ ಒಬಿಸಿ ಎಂದು ಬರೆದ ಹಕ್ಕಿಯನ್ನು ಮುಸ್ಲಿಂ ಎಂದು ಬರೆದ ಹಕ್ಕಿ ಹೊರದಬ್ಬುವ ದ್ವೇಷ ಪೂರಿತ ಅಂಶಗಳು ಉಲ್ಲೇಖಿಸಲಾಗಿತ್ತು.

ಬಿಜೆಪಿ ಕರ್ನಾಟಕ ತನ್ನ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷವನ್ನು ಹಬ್ಬಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವಿವಿಧ ಸಂಘಟನೆಗಳ ನಿಯೋಗವು ಚುನಾವಣಾ ಆಯೋಗಕ್ಕೆ ನಿನ್ನೆ ದೂರನ್ನು ನೀಡಿತ್ತು. ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್ (CAHS), ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (AIDWA), ನಾವೆದ್ದು ನಿಲ್ಲದಿದ್ರೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಪ್ರತಿನಿಧಿಗಳು ನಿಯೋಗದ ಭಾಗವಾಗಿದ್ದರು.

ಇದನ್ನು ಓದಿ: ಸುಳ್ಳು ಸುದ್ದಿ, ದ್ವೇಷ ಹಬ್ಬಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ವಿರುದ್ಧ ಚು.ಆಯೋಗಕ್ಕೆ ದೂರು ನೀಡಿದ ನಿಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೂಂಚ್‌ನ ನ್ಯಾಷನಲ್ ಕಾನ್ಫರೆನ್ಸ್‌ ರ‍್ಯಾಲಿಯಲ್ಲಿ ಚಾಕುವಿನಿಂದ ದಾಳಿ; 3 ಮಂದಿಗೆ ಗಾಯ

0
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ನ್ಯಾಚನಲ್ ಕಾನ್ಫರೆನ್ಸ್‌ ಪಕ್ಷದ ರೋಡ್ ಶೋ ವೇಳೆ ಅಪರಿಚಿತ ದುಷ್ಕರ್ಮಿಗಳ ಚಾಕು ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೆಂಧರ್ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ...