Homeಮುಖಪುಟತೆಲಂಗಾಣ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಾಧಿ ಮಾಡಿ ಪ್ರತಿಭಟನೆ!

ತೆಲಂಗಾಣ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಾಧಿ ಮಾಡಿ ಪ್ರತಿಭಟನೆ!

- Advertisement -
- Advertisement -

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡಿನಲ್ಲಿ ಫ್ಲೋರೈಡ್ ಮಿಟಿಗೇಷನ್‌ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆಯ ವಿಳಂಬವನ್ನು ವಿರೋಧಿಸಿ, ಅಪರಿಚಿತ ವ್ಯಕ್ತಿಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ರಸ್ತೆ ಬದಿಯಲ್ಲಿ ಅಣಕು ಸಮಾಧಿ ಮಾಡಿ ಪ್ರತಿಭಟಿಸಿರುವ ಘಟನೆ ಗುರುವಾರ ನಡೆದಿದೆ.

ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಒಂದು ಬ್ಯಾನರ್‌ನಲ್ಲಿ ನಡ್ಡಾ ಅವರ ಚಿತ್ರವನ್ನು ಹಾಕಲಾಗಿದ್ದು, ಅದರ ಮೇಲಿನ ಬ್ಯಾನರ್‌ನಲ್ಲಿ ‘ಪ್ರಾದೇಶಿಕ ಫ್ಲೋರೈಡ್ ಮಿಟಿಗೇಷನ್‌ ಮತ್ತು ಸಂಶೋಧನಾ ಕೇಂದ್ರ’ ಎಂದು ಬರೆಯಲಾಗಿದೆ. ಜೊತೆಗೆ ಬ್ಯಾನರ್‌ನ ಮುಂದೆ ಸಮಾಧಿಯೊಂದನ್ನು ರಚಿಸಲಾಗಿದ್ದು, ಅದಕ್ಕೆ ಹೂವು, ಅರಶಿನ ಮತ್ತು ಕುಂಕುಮವನ್ನು ಹಾಕಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿ ವಕ್ತಾರ ನಾಚರಾಜು ವೆಂಕಟ ಸುಭಾಷ್ ಅವರು ಅಣಕು ಸಮಾಧಿಯನ್ನು ಆಡಳಿತರೂಢ ಟಿಆರ್‌‌ಎಸ್‌ ಕಾರ್ಯಕರ್ತರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಬಿಜೆಪಿ, ಇದರ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ: ರಾಷ್ಟ್ರ ರಾಜಕಾರಣದ ಗುರಿ: ಟಿಆರ್‌ಎಸ್ ಅನ್ನು ‘ಭಾರತ ರಾಷ್ಟ್ರ ಸಮಿತಿ’ಯನ್ನಾಗಿ ಪರಿವರ್ತಿಸಿದ ತೆಲಂಗಾಣ ಸಿಎಂ ಕೆಸಿಆರ್‌

“ಕೆಲವು ಟಿಆರ್‌‌ಎಸ್ ಕಾರ್ಯಕರ್ತರು ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮಾಧಿಯನ್ನು ಮಾಡಿದ್ದಾರೆ. ಕೇವಲ ಉಪಚುನಾವಣೆಗಾಗಿ ಶುದ್ಧ ಸಾರ್ವಜನಿಕ ಇಮೇಜ್ ಹೊಂದಿರುವ ನಾಯಕ ಮತ್ತು ಜನಪ್ರತಿನಿಧಿಯೊಬ್ಬರನ್ನು ಗುರಿಯಾಗಿಸುವುದು, ಹುಚ್ಚುತನದ ಮತ್ತೊಂದು ಹಂತವಾಗಿದೆ. ತೆಲಂಗಾಣದಲ್ಲಿ ರಾಜಕೀಯ ಮತ್ತೊಂದು ಹಂತಕ್ಕೆ ಕುಸಿದಿದೆ” ಎಂದು ಬಿಜೆಪಿ ವಕ್ತಾರ ನಾಚರಾಜು ವೆಂಕಟ ಸುಭಾಷ್  ಹೇಳಿದ್ದಾರೆ.

ಮುನುಗೋಡು ಅಸೆಂಬ್ಲಿ ಸ್ಥಾನಕ್ಕೆ ನವೆಂಬರ್ 3 ರಂದು ಉಪಚುನಾವಣೆ ನಡೆಯುವ ಮೊದಲು ಈ ವಿಶಿಷ್ಠ ಪ್ರತಿಭಟನೆ ನಡೆಯುತ್ತಿದೆ. ಉಪ ಚುನಾವಣೆಯು ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಯ ದಿಕ್ಸೂಚಿ ಚುನಾವಣೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ತೆಲಂಗಾಣ: ಉಚಿತ ಮದ್ಯ ಮತ್ತು ಕೋಳಿ ವಿತರಿಸಿದ ಟಿಆರ್‌ಎಸ್ ನಾಯಕ!

ಮುನುಗೋಡೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಕಣದಲ್ಲಿದ್ದರೂ, ಬಿಜೆಪಿ ಮತ್ತು ಟಿಆರ್‌ಎಸ್ ನಡುವೆ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ. ಆಗಸ್ಟ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರನ್ನೇ ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ ಪಾಲ್ವಾಯಿ ಶ್ರವಂತಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...