HomeUncategorizedನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್: ಜೂನ್ 26ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ

ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್: ಜೂನ್ 26ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ

ಜಸ್ಟೀಸ್ ಫಾರ್ ತಬ್ರೇಝ್ ಹ್ಯಾಸ್ ಟ್ಯಾಗ್‍ನಲ್ಲಿ ನ್ಯಾಯಕ್ಕಾಗಿ ಸೇರೋಣ, ದ್ವೇಷದ ವಿರುದ್ಧ ಸೇರೋಣ ಎಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಮೇಣದ ದೀಪ ಮೆರವಣಿಗೆ ನಡೆಯಲಿದೆ.

- Advertisement -
- Advertisement -

ಜಾರ್ಖಂಡ್‍ನಲ್ಲಿ ಬರ್ಬರ ಗುಂಪು ಥಳಿತದಿಂದ ತಬ್ರೇಝ್ ಅನ್ಸಾರಿ ಹತ್ಯೆಯಾದ ಬಳಿಕ ಪ್ರಜ್ಞಾವಂತರ ಆಕ್ರೋಶದ ಕಟ್ಟೆಯೊಡೆದಿದೆ. ಧಾರ್ಮಿಕ ಮತಾಂಧರ ಕ್ರೂರತನದಿಂದ ದೇಶಾದ್ಯಂತ ಹೆಚ್ಚುತ್ತಿರುವ ಗುಂಪು ಹತ್ಯೆಗಳನ್ನು ವಿರೋಧಿಸಿ ಜೂನ್ 26ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಮುಝಾಫರ್ ನಗರ್ ಕಾಲಿಂಗ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್ ಎಂಬ ಹೋರಾಟವನ್ನು ಜೂನ್ 26ರ ಸಂಜೆ 6 ಗಂಟೆಗೆ ಮುಝಾಫರ್‍ನಗರದ ಟೌನ್ ಪಾರ್ಕಾಝಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪಾಟ್ನಾ ಕಾಲಿಂಗ್ ಫಾರ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್ ಹೋರಾಟ ಪಾಟ್ನಾದ ಕಾರ್ಗಿಲ್ ಚೌಕ್‍ನಲ್ಲಿ ನಡೆಯಲಿದೆ. ಹಿಂದೂಸ್ಥಾನವನ್ನು ಲಿಂಚಿಂಗ್‍ಸ್ಥಾನ ಮಾಡಬೇಡಿ ಎಂದು ಆಗ್ರಹಿಸಲಾಗಿದೆ.

ಲಕ್ನೋ ಕಾಲಿಂಗ್ ಫಾರ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್ ಹೋರಾಟ ಲಕ್ನೋದ ಘಂಟಾಘರ್ ನಲ್ಲಿ ಜೂನ್ 26ರ ಸಂಜೆ ನಡೆಯಲಿದೆ.

ಜಸ್ಟೀಸ್ ಫಾರ್ ತಬ್ರೇಝ್ ಹ್ಯಾಸ್ ಟ್ಯಾಗ್‍ನಲ್ಲಿ ನ್ಯಾಯಕ್ಕಾಗಿ ಸೇರೋಣ, ದ್ವೇಷದ ವಿರುದ್ಧ ಸೇರೋಣ ಎಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಮೇಣದ ದೀಪ ಮೆರವಣಿಗೆ ನಡೆಯಲಿದೆ. ಈ ಹೋರಾಟವನ್ನು ಇಂಡಿಯಾ ಎಗೆನೆಸ್ಟ್ ಲಿಂಚ್ ಟೆರ್ರರ್ ಎಂದು ಕರೆಯಲಾಗಿದೆ.

ಗುಂಪು ಥಳಿತ, ಹತ್ಯೆಯನ್ನು ವಿರೋಧಿಸಿ ಹೈದರಾಬಾದ್‍ನ ಚಾರ್‍ಮಿನಾರ್‍ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಡಿಯೋಬಾಂಡ್ ಕಾಲಿಂಗ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ಡಿಯೋಬಾಂಡ್‍ನ ಉರ್ದು ದರ್ವಾಝ ದಲ್ಲಿ ಸಂಜೆ 7;30ಕ್ಕೆ ಪ್ರತಿಭಟನೆ ನಡೆಯುತ್ತಿದೆ.

ಜಾತಿ ಧರ್ಮಗಳ ಹಂಗು ಮೀರಿ ಮಾನವರೆಲ್ಲರೂ ತಾವಿರುವೆಡೆಯಲ್ಲಿ ಪ್ರತಿಭಟನೆಯನ್ನು ನಡೆಸಿ ಗುಂಪು ಹತ್ಯೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಗಳನ್ನು ಒತ್ತಾಯಿಸಲು ಮನವಿ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...