Homeಕರ್ನಾಟಕ‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

‘ಬಡವರ ಮಕ್ಳು ಬೆಳೀಬೇಕ್‌ ಕಣ್ರಯ್ಯ’ ಹೇಳಿಕೆ ವೈರಲ್‌ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್‌ ಫೋಟೋ ಈಗ ಟ್ರೆಂಡ್ ಆಗಿದೆ.

- Advertisement -
- Advertisement -

ನಟ ರಾಕ್ಷಸ ಖ್ಯಾತಿಯ ಧನಂಜಯ ಅವರು ಅಭಿನಯಿಸಿ, ನಿರ್ಮಾಣ ಮಾಡಿರುವ ‘ಹೆಡ್‌ ಬುಷ್‌’ ಸಿನಿಮಾದಲ್ಲಿ ‘ವೀರಗಾಸೆ ಕಲೆಗೆ ಅಪಮಾನ ಎಸಗಲಾಗಿದೆ’ ಎಂದು ಹಿಂದುತ್ವವಾದಿಗಳು ದೂರು ನೀಡಿರುವ ಬೆನ್ನಲ್ಲೇ, ಹಳೆಯ ಸಿನಿಮಾ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗತೊಡಗಿವೆ.

‘ಹೆಡ್‌ ಬುಷ್‌’ನಲ್ಲಿ ವಿವಾದ ಸೃಷ್ಟಿಸಲಾಗಿದೆ ಎನ್ನುವವರು ‌ಈ ದೃಶ್ಯಗಳಿಗೆ ಹಿಂದೇಕೆ ಆಕ್ಷೇಪಗಳನ್ನು ವ್ಯಕ್ತಪಡಿಸಲಿಲ್ಲ. ಇಲ್ಲಿ ಯಾರು ಯಾವ ಸಿನಿಮಾವನ್ನು ಮಾಡಿದ್ದಾರೆ, ಸಿನಿಮಾ ಮಾಡಿದವರ ಸಾಮಾಜಿಕ ಹಿನ್ನೆಲೆ ಏನು ಮುಖ್ಯವಾಗುತ್ತಿದೆ ಎಂಬ ಟೀಕೆಗಳನ್ನು ಸಿನಿಮಾ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

‘ನಟ ಉಪೇಂದ್ರ ಅವರ ಸಿನಿಮಾಗಳಲ್ಲಿ ಹಿಂದೂ ದೇವರುಗಳಿಗೆ ಅವಹೇಳನ ಮಾಡಲಾಗಿದೆ’ ಎಂಬ ಚರ್ಚೆಯ ಜೊತೆಗೆ ಹಲವು ಸಿನಿಮಾಗಳ ದೃಶ್ಯಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ ಅವರು ಇತ್ತೀಚೆಗೆ ನೀಡಿದ್ದ ‘ಬಡವರ ಮಕ್ಳು ಬೆಳೀಬೇಕ್‌ ಕಣ್ರಯ್ಯ’ ಹೇಳಿಕೆ ವೈರಲ್‌ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್‌ ಫೋಟೋ ಈಗ ಟ್ರೆಂಡ್ ಆಗಿದೆ. ಆ ಮೂಲಕ ಡಾಲಿ ಧನಂಜಯ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

“ಮೊದಲು ಮಾನವನಾಗು” ಎಂದು ಡಾಲಿ ಧನಂಜಯ ಅವರು ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆಯವರಿಗೆ ಬುದ್ಧಿ ಹೇಳಿದ್ದರಿಂದ ಒಂದು ವರ್ಗದ ಜನರು ಧನಂಜಯ ವಿರುದ್ಧ ಹಗೆ ಸಾಧಿಸುತ್ತಿದ್ದಾರೆಂಬ ಪೋಸ್ಟ್‌ಗಳು ಹರಿದಾಡಿವೆ. ಅದರ ಜೊತೆಗೆ ಹಳೆಯ ಸಿನಿಮಾ  ದೃಶ್ಯಗಳು ಗಮನ ಸೆಳೆಯುತ್ತಿವೆ.

“ಉಪೇಂದ್ರ ‘ಗಣೇಶ’ನಿಗೆ ಗನ್‌ ಹಿಡಿದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಡೈರೆಕ್ಟರ್‌ ಗುರುಪ್ರಸಾದ್‌ ಮಠದೊಳಗೇ ಕಾವಿಧಾರಿಗಳು ಎಣ್ಣೆ ಹೊಡಿತಾರೆ ಅಂದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಧನಂಜಯ್‌ ಅವರಿಂದ ಅಪಚಾರಿ ಆಗ್ಬಿಟ್ಟಿದೆ ನೋಡಿ” ಎಂಬ ಪೋಸ್ಟರ್‌ ವೈರಲ್ ಆಗುತ್ತಿದೆ.

“ಇದು ಹಿಂದು ಧರ್ಮಕ್ಕೆ ಮಾಡಿದ ಅವಮಾನ ಅಲ್ವಾ?” ಎಂಬ ಮತ್ತೊಂದು ದೃಶ್ಯವನ್ನು ಉಪೇಂದ್ರ ಅವರ ಸಿನಿಮಾದಿಂದ ಆಯ್ದು ಹಂಚಿಕೊಳ್ಳಲಾಗುತ್ತಿದೆ.

ತುಳಸಿಕೃಷ್ಣ ಎಂಬವರು ಹಲವು ಸಿನಿಮಾ ದೃಶ್ಯಗಳನ್ನು ಪಟ್ಟಿ ಮಾಡಿದ್ದಾರೆ.

ಬೇಡರ ಕಣ್ಣಪ್ಪ: ಅಣ್ಣಾವ್ರು ಬೇಡರ ಕಣ್ಣಪ್ಪ ಪಾತ್ರಧಾರಿಯಾಗಿ ಶಿವಲಿಂಗದ ಮೇಲೆ ಕಾಲಿಡ್ತಾರೆ.
ಉಪೇಂದ್ರ: ಉಪೇಂದ್ರರವರು ಪುರೋಹಿತರಿಗೆ ಎಣ್ಣೆ ಕುಡಿಸಿ, ಗಣೇಶನನ್ನು ನೀರಿಗೆ ಎಸೀತಾರೆ.
A: ಉಪೇಂದ್ರ, I am God, God is great ಅಂತ ತಮ್ಮನ್ನು ತಾವೇ ದೇವರು ಅಂತಾರೆ.
ಅಪ್ಪಾಜಿ: ವೀರಗಾಸೆ ವೇಷಧಾರಿಯಾಗಿ ವಿಲನ್‌ಗಳು ಗೋವಿಂದ, ಗೋವಿಂದ ಅಂತ ಕ್ಯಾಪ್ಟನ್‌ರನ್ನು ಸಾಯಿಸುತ್ತಾರೆ.
ಉಳಿದವರು ಕಂಡಂತೆ: ಹುಲಿ ವೇಷಧಾರಿಯನ್ನು ರಕ್ಷಿತ್ ಶೆಟ್ಟಿ ಹೊಡೆಯುತ್ತಾರೆ.
ಗರುಡ ಗಮನ ವೃಷಭ ವಾಹನ: ಮಾದೇವನ ಹಾಡು ಬರುವಾಗ ರಾಜ್.ಬಿ.ಶೆಟ್ಟಿ ಕೊಲೆ ಮಾಡಿ ಕುಣಿಯುತ್ತಾರೆ.
ಕಾಂತಾರ: ವಿಲನ್ ದೈವದ ಕುತ್ತಿಗೆ ಹಿಸುಕಿ ಮೇಲಕ್ಕೆ ಎತ್ತುತ್ತಾನೆ.
ಜನುಮದ ಜೋಡಿ: ಓ ಊರ ದ್ಯಾವ್ರೆ ಹಾಡು.. ದೇವರಿಗೆ, ನೀ ಎಕ್ಕುಟ್ಟೋಗ, ನಿನ್ ಮನೆ ಕಾಯ್ವೋಗ, ನಿನ್ ತಲೆ ಹೊಡೆಯ, ಹಾಳಾದೋನೆ, ನೀನ್ ನೆಗುದ್ ಬೀಳ, ನಿಂಗ್ ಉಳ ಬೀಳ.

“ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ. ನೀವು ಯಾವುದೇ ಚಿತ್ರ ಹೆಸರಿಸಿ, ಅದರಲ್ಲಿ ತಪ್ಪು ಹುಡುಕಬಹುದು. ಇವೆಲ್ಲವನ್ನು ಆ ಸಂದರ್ಭಕ್ಕೆ ಆ ಪಾತ್ರದ ರಿಯಾಕ್ಷನ್ ಅಂತ ಒಪ್ಪಿಕೊಂಡಿದ್ದೇವೆ. ಈಗ ಡಾಲಿ ವೀರಗಾಸೆ ವೇಷದಲ್ಲಿರುವ ವಿಲನ್‌ಗಳನ್ನು ಹೊಡೆದರೆ, ವೀರಗಾಸೆಗೆ ಅಪಮಾನ ಮಾಡುತ್ತಿರುವವರನ್ನು ಹೊಡೆದಂತೆ ಎಂದುಕೊಳ್ಳಬಹುದಲ್ಲವೆ. ಇಲ್ಲ, ಇಲ್ಲಿ ವಿರೋಧಿಸುತ್ತಿರುವವರಿಗೆ ವೀರಗಾಸೆ ಮುಖ್ಯವಲ್ಲ, ಅದರ ಮೇಲೆ ಪ್ರೀತಿಯು ಇಲ್ಲ, ಡಾಲಿ ಮೇಲಿನ ದ್ವೇಷ ಅಷ್ಟೆ” ಎಂದು ತುಳಸಿ ಕೃಷ್ಣ ತಿಳಿಸಿದ್ದಾರೆ.

May be an image of 3 people and text that says "'ಕಠಾರಿವೀರ ಸುರಸುಂದರಾಂಗಿ' ಸಿನಿಮಾದಲ್ಲಿ ಉಪೇಂದ್ರ ಹಿಂದೂ ದೇವರ ಪಾತ್ರಧಾರಿಗಳನ್ನು ಬೂಟುಕಾಲಲ್ಲಿ ಒದ್ದು ಫೈಟ್ ಮಾಡುವಾಗ.. ಈ ಧರ್ಮರಕ್ಷಕ ಪಡೆಗಳ ವೀರಾಧಿವೀರರು ಯಾವ ಇಲಿ ಬಿಲದೊಳಗೆ ಬೆಚ್ಚಗೆ ಮಲಗಿದ್ರು? 'ಬಡವರಮನೆ ಯಿಂದ ಬಂದ ಡಾಲಿ ಧನಂಜಯ್ ಮೇಲೆ ನಿಮ್ಮ ಪ್ರತಾಪ ತೋರಿಸ್ತ ಇದೀರ? ಯಾಕೆ ಬಡವರ ಮನೆ ಮಕ್ಳು HERO ಆಗ್ಬಾರ್ದ?"‘ಕಠಾರಿವೀರ ಸುರಸುಂದರಾಂಗ’ ಸಿನಿಮಾದ ಸಿನಿಮಾ ದೃಶ್ಯದ ಕುರಿತು ಚರ್ಚೆಯಾಗುತ್ತಿದೆ. ಉಪೇಂದ್ರ ಅವರು ಹಿಂದೂ ದೇವರುಗಳಿಗೆ ಬೂಟು ಕಾಲಲ್ಲಿ ಒದ್ದು ಫೈಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

May be an image of 6 people, people standing, fire and text that says 'ಶೂದ್ರರ ಹುಲಿವೇಷಧಾರಿಗೆ ಹೊಡೆದಾಗ ಧರ್ಮಕ್ಕೆ ಅಪಚಾರವಾಗಲಿಲ್ಲ!! ದಲಿತರ ಗುಳಿಗದೈವಕ್ಕೆ ಧಣಿಯ ಗುಲಾಮರು ಹೊಡೆದಾಗ ಧರ್ಮಕ್ಕೆ ಅಪಮಾನವಾಗಲಿಲ್ಲ. ವೀರಗಾಸೆ ವೇಷ ಧರಿಸಿ ಜಯರಾಜ್ ಕೊಲ್ಲಲು ಬಂದ ಖಳರಿಗೆ ನಾಯಕ ಹೊಡೆದಾಗ ಧರ್ಮಕ್ಕೆ ಅಪಮಾನವಾಗಿದೆ ನೋಡಿ. ಬಡವರ ಮಕ್ಕಳನ್ನ ಬೆಳೆಯೋಕೆಲ್ಲಿ ಬಿಡ್ತೀರ?'May be an image of 2 people and text that says 'ವಿಕ್ರಾಂತ್ ರೋಣ ಸಿನಿಮದಲ್ಲಿ ಕೋಲ ದೈವ ಪಾತ್ರಗಳಿಗೆ ನಾಮರ್ದ'ರು ಅಂದು, ನಾಯಕ ಬಡಿದು ಕೊಲ್ಲುತ್ತಾನೆ.. ಧರ್ಮರಕ್ಷಕ ಪುಡುಂಗಿಗಳು ಆವತ್ತು ಎಲ್ಲಿ ದನ ಮೇಯ್ಸೋಕೆ ಹೋಗಿದ್ರು? 'ಡಾಲಿ' ಬಡವರ ಮನೆಯಿಂದ ಬಂದ ಹುಡುಗ.. ಅದೇ ಉರಿ ನಿಮಗೆ.'‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ‘ಹುಲಿ ವೇಷಧಾರಿ’ಗೆ ಹೊಡೆಯುವ ದೃಶ್ಯವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.

ಹೋರಾಟಗಾರ್ತಿ ನಜ್ಮಾ ಅವರು ಬರೆದಿರುವ ಟಿಪ್ಪಣಿಯನ್ನು ಅನೇಕರು ಶೇರ್‌ ಮಾಡಿದ್ದಾರೆ.

“ನಾನು ಹುಟ್ಟಿರದೆ ಆರಾಮಾಗಿರಕ್ಕೆ ಅನ್ಲಿಲ್ಲ ನಮ್ ಧನಂಜಯ,
ರಿಸ್ಕ್ ಎಷ್ಟಾದ್ರೂ ತಗೊಂಡು ಮುಂದುಕ್ ಹೋಗ್ಬೇಕು ಅಂದ;
ಕಾಸಿರೋರೆ ಜಗತ್ ಆಳ್ಬೇಕು ಅನ್ಲಿಲ್ಲ ನಮ್ ಧನಂಜಯ,
ಬಡವರ್ ಮನೆ ಮಕ್ಳು ಬೆಳೇಬೇಕು ಅಂದ,
ಜಾತಿ ಧರ್ಮ ಅಂತ ಕಿತ್ತಾಡಿ ಸಾಯ್ರಿ ಅನ್ಲಿಲ್ಲ ನಮ್ ಧನಂಜಯ,
ಏನಾದರೂ ಆಗು ಮೊದಲು ಮಾನವನಾಗು ಅಂದ,
ಕಂಡೋರ್ ಹೊಟ್ಟೆ ಮ್ಯಾಲೆ ಹೊಡೆದು ಸಂಪಾದ್ನೇ ಮಾಡು ಅನ್ಲಿಲ್ಲ ನಮ್ ಧನಂಜಯ,
ಕಷ್ಟ ಪಟ್ಟು ದುಡ್ಡು ಮುಂದೆ ಬನ್ನಿ ಅಂದ,
ಮೇಲು-ಕೀಳು, ದೊಡ್ಡೋರು-ಚಿಕ್ಕೋರು ಅನ್ಲಿಲ್ಲ ನಮ್ ಧನಂಜಯ,
ಎಲ್ರು ನಮ್ಮವ್ರು ಕಂತೆ ಒಟ್ಟಿಗೆ ನಡೀರ್ಲಾ ಅಂದ,
ಸಿನೆಮಾ ಅಂದ್ರೆ ಬರಿ ಬಣ್ಣ ಹಚ್ಚೋದಲ್ಲ ಅಂದ ನಮ್ಮ ಧನಂಜಯ,
ಸಿನ್ಮಾ ಅಂದ್ರೆ ಬದ್ಕು-ಬವಣೆ ಕನ್ರಲಾ ಅಂದ” ಎಂಬ ಸಾಲುಗಳನ್ನು ನಜ್ಮಾ ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...