Homeರಾಷ್ಟ್ರೀಯಉತ್ತರ ಪ್ರದೇಶ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ವಿಡಿಯೊ ಮಾಡಿದ ಪತಿ; ಮಹಿಳೆ ಸಾವು

ಉತ್ತರ ಪ್ರದೇಶ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ವಿಡಿಯೊ ಮಾಡಿದ ಪತಿ; ಮಹಿಳೆ ಸಾವು

- Advertisement -
- Advertisement -

ವ್ಯಕ್ತಿಯೊಬ್ಬ ತನ್ನ ಹೆಂಡತಿ ನೇಣು ಬಿಗಿದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಚಿತ್ರೀಕರಿಸಿ, ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ ನಂತರ ಆ ವೀಡಿಯೊವನ್ನು ಆಕೆಯ ಕುಟುಂಬಕ್ಕೆ ತೋರಿಸಿದ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ಶೋಬಿತಾ ಗುಪ್ತಾ ಅವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ಅವರು ತಮ್ಮ ಪತಿಯೊಂದಿಗೆ ಜಗಳವಾಡಿದ್ದಾಗಿ ತಿಳಿದು ಬಂದಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಂಜಯ್ ಗುಪ್ತಾ ಅವರು ರೆಕಾರ್ಡ್‌ ಮಾಡಿರುವ ಮೊಬೈಲ್ ಫೋನ್ ವೀಡಿಯೊದಲ್ಲಿ ಶೋಬಿತಾ ತನ್ನ ಕುತ್ತಿಗೆಗೆ ಸ್ಕಾರ್ಫ್ ಹಾಕಿಕೊಂಡು ಹಾಸಿಗೆಯ ಮೇಲಿರುವ ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದು ದಾಖಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ರಕ್ತಸಿಕ್ತ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿ ಪತ್ತೆ- ಅತ್ಯಾಚಾರದ ಶಂಕೆ

ತನ್ನ ಪತ್ನಿ ನೇಣು ಹಾಕಿಕೊಳ್ಳುತ್ತಿದ್ದರೂ ಸಂಜಯ್ ಗುಪ್ತಾ ಯಾವುದೇ ಹಂತದಲ್ಲೂ ಅವರನ್ನು ತಡೆಯಲು ಪ್ರಯತ್ನಿಸುವುದಿಲ್ಲ. ಜೊತೆಗೆ ಆತ,“ಇದು ನಿನ್ನ ಮನಸ್ಥಿತಿ. ನೀನು ತುಂಬಾ ಕಳಪೆ ಮನಸ್ಥಿತಿಯನ್ನು ಹೊಂದಿದ್ದಿ” ಎಂದು ಹೇಳುವುದು ಕೇಳುತ್ತದೆ.

ಶೋಬಿತಾ ಕುಣಿಕೆಯನ್ನು ಹಿಡಿದು ಹಾಸಿಗೆಯ ಮೇಲೆ ನಿಂತು ಅವನತ್ತ ಕಣ್ಣು ಹಾಯಿಸಿದ ವೇಳೆ, ವೀಡಿಯೊ ಕೊನೆಗೊಳ್ಳುತ್ತದೆ.

ಶೋಬಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಂಗಳವಾರ ಮಧ್ಯಾಹ್ನ ತನ್ನ ಅಳಿಯನಿಂದ ಕರೆ ಬಂದಿತ್ತು ಎಂದು ಶೋಬಿತಾ ಅವರ ತಂದೆ ರಾಜ್ ಕಿಶೋರ್ ಗುಪ್ತಾ ಹೇಳುತ್ತಾರೆ. ಅವರು ಮಗಳ ಮನೆಗೆ ದಾವಿಸಿದ ವೇಳೆ ಹಾಸಿಗೆಯ ಮೇಲೆ ಮೃತ ದೇಹವಿತ್ತು ಎಂದು ಕುಟುಂಬ ಹೇಳಿದ್ದು, ಸಂಜಯ್ ಗುಪ್ತಾ ತನ್ನ ಪತ್ನಿಗೆ ಕೃತಕ ಉಸಿರಾಟ ನೀಡುತ್ತಿದ್ದನು ಎಂದು ವರದಿಯಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಡ್ರಿಪ್‌ನಲ್ಲಿ ರಕ್ತ ಕಣಗಳ ಬದಲಿಗೆ ಹಣ್ಣಿನ ಜ್ಯೂಸ್ ನೀಡಿದ ಆಸ್ಪತ್ರೆ; ರೋಗಿ ಸಾವು

ಸಂಜಯ್ ಗುಪ್ತಾ ತಾನು ತೆಗೆದ ವೀಡಿಯೊವನ್ನು ತನ್ನ ಅತ್ತೆಯವರಿಗೆ ತೋರಿಸಿ, ಆಕೆಯ ಮೊದಲ ಆತ್ಮಹತ್ಯೆ ಪ್ರಯತ್ನದ ಸಮಯಲ್ಲಿ ನಾನು ಅವಳನ್ನು ಉಳಿಸಿದೆ ಎಂದು ಹೇಳಿಕೊಂಡಿದ್ದಾನೆ. ಆತನ ವರ್ತನೆ ಅತ್ಯಂತ ಪ್ರಶ್ನಾರ್ಹವಾಗಿತ್ತು ಎಂದು ಶೋಬಿತಾ ತಂದೆ ಹೇಳಿದ್ದಾರೆ.

“ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಕೆಯ ಎದೆಯನ್ನು ಪಂಪ್ ಮಾಡುವುದನ್ನು ನಾವು ನೋಡಿದ್ದೇವೆ. ಮಗಳು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಹೇಳುವ ವೀಡಿಯೊವನ್ನು ಸಂಜಯ್ ನಮಗೆ ತೋರಿಸಿದ್ದಾನೆ. ಅದರಲ್ಲಿ ಅವನು ಅವಳನ್ನು ತಡೆಯುವ ಬದಲಿಗೆ ವೀಡಿಯೊ ಮಾಡುತ್ತಿದ್ದಾನೆ. ಘಟನೆಯು 12.30 ಕ್ಕೆ ಸಂಭವಿಸಿದೆ, ಅದರ ನಂತರ ಆಕೆ ಸಾವನ್ನಪ್ಪಿದ್ದು, ಅನುಮಾನಾಸ್ಪದವಾಗಿದೆ” ಎಂದು ರಾಜ್ ಕಿಶೋರ್ ಗುಪ್ತಾ ಹೇಳಿದ್ದಾರೆ.

ಶೋಬಿತಾ ಅವರನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದಿದಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಘೋಷಿಸಿದೆ. ಆ ಬಳಿಕ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದರು. ಆರೋಪಿ ತನ್ನ ಪತ್ನಿಯನ್ನು ಉಳಿಸಬಹುದಿತ್ತು, ಆದರೆ ಅವನು ಅವಳನ್ನು ತಡೆಯಲಿಲ್ಲ ಎಂಬುವುದು ಅರಗಿಸಿಕೊಳ್ಳಲು ಸಾಧ್ಯವಾಗದೆ ಆಕೆಯ ಕುಟುಂಬ ಆಘಾತದಲ್ಲಿದೆ ಎಂದು ಎನ್‌ಡಿಟಿವಿ ಹೇಳಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ದಲಿತ ವ್ಯಕ್ತಿಯ ಕೊಲೆ; ಆರೋಪ

“ನಮಗೆ ನ್ಯಾಯ ಬೇಕು” ಎಂದು ಅವರು ಹೇಳಿದ್ದು, “ಅವಳನ್ನು ತಡೆಯುವ ಬದಲು, ಅವನು ವೀಡಿಯೊ ತೆಗೆದುಕೊಂಡು ಅವಳೊಂದಿಗೆ ಶಾಂತವಾಗಿ ಮಾತನಾಡುತ್ತಿದ್ದನು” ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.

ಪತ್ನಿಯ ಸಾವಿನಲ್ಲಿ ಸಂಜಯ್ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ನಾವು ಅವನನ್ನು ವಿಚಾರಣೆಗಾಗಿ ಕರೆದೊಯ್ದಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...