ಆರೆಸ್ಸೆಸ್‌ನ ಅಂಗಸಂಸ್ಥೆಯಾದ ‘ಹಿಂದೂ ಮುನ್ನಣಿ’ಯ ದುಷ್ಕರ್ಮಿಯೊಬ್ಬ ಕೋಮು ಗಲಭೆ ನಡಸುವ ಉದ್ದೇಶದಿಂದ ತನ್ನ ಮನೆಗೆ ತಾನೇ ಬಾಂಬ್ ಎಸೆದು ತಮಿಳುನಾಡು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ. ಕೋಮು ಗಲಭೆ ನಡೆಸುವುದಕ್ಕಾಗಿ ‘ತನ್ನ ಮನೆಯ ಮೇಲೆ ಬಾಂಬ್ ದಾಳಿ’ ನಡೆದಿದೆ ಎಂದು ದುಷ್ಕರ್ಮಿಯು ಸುಳ್ಳು ದೂರು ನೀಡಿದ್ದನು.
ಘಟನೆಯು ತಮಿಳುನಾಡಿನ ಕುಂಭಕೋಣಂನಲ್ಲಿ ನವೆಂಬರ್ 21 ರ ಸೋಮವಾರ ನಡೆದಿದ್ದು, ಬಂಧನಕ್ಕೊಳಗಾದ ದುಷ್ಕರ್ಮಿಯನ್ನು ಹಿಂದೂ ಮುನ್ನಣಿ ಕುಂಭಕೋಣಂ ನಗರದ ಕಾರ್ಯದರ್ಶಿಯಾದ ಸಕ್ಕರೆಪಾಣಿ (40) ಎಂದು ಗುರುತಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೋಮವಾರ ಬೆಳಿಗ್ಗೆ ಅಪರಿಚಿತ ದುಷ್ಕರ್ಮಿಗಳು ತಮ್ಮ ಮನೆ ಮುಂದೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ದುಷ್ಕರ್ಮಿ ಕುಂಭಕೋಣಂ ಪೂರ್ವ ಪೊಲೀಸ್ ಠಾಣೆಗೆ ಕರೆ ಮಾಡಿದ್ದನು. ಮನೆಯ ಮುಂದೆ ದೊಡ್ಡ ಶಬ್ದ ಉಂಟಾಗಿದ್ದು, ಮನೆಯ ಹೊರಗೆ ಒಡೆದ ಗಾಜಿನ ತುಂಡುಗಳು ಕಂಡುಬಂದಿವೆ ಎಂದು ದೂರಿದ್ದನು.
ಇದನ್ನೂ ಓದಿ: ಪಕ್ಷದ ಮಹಿಳಾ ನಾಯಕಿಗೆ ಅಶ್ಲೀಲ ನಿಂದನೆ, ಕೊಲೆ ಬೆದರಿಕೆ ಹಾಕಿದ ತಮಿಳುನಾಡು ಬಿಜೆಪಿ ನಾಯಕ
ಘಟನೆಯ ಬಗ್ಗೆ ತಿಳಿದ ಕುಂಭಕೋಣಂ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರವಳಿ ಪ್ರಿಯಾ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾದ (ಎಡಿಎಸ್‌ಪಿ) ಜಯಚಂದ್ರನ್ ಮತ್ತು ಸ್ವಾಮಿನಾಥನ್ ಮತ್ತು ವಿಧಿವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರನ್ ಅವರು ಸಕ್ಕರೆಪಾಣಿ ಮನೆಗೆ ಆಗಮಿಸಿ ತನಿಖೆ ಆರಂಭಿಸಿದ್ದರು
ಇದೇ ವೇಳೆ ಉತ್ತರ ತಂಜಾವೂರಿನ ಬಿಜೆಪಿ ಅಧ್ಯಕ್ಷ ಸತೀಶ್ ಕುಮಾರ್ ಮತ್ತು ಇತರ ಹಿಂದೂ ಮುನ್ನಣಿ ಪದಾಧಿಕಾರಿಗಳು ಕೂಡಾ ಸಕ್ಕರೆಪಾಣಿ ಮನೆಗೆ ಭೇಟಿ ನೀಡಿ, ಪೊಲೀಸರೊಂದಿಗೆ ಸಂವಾದ ನಡೆಸಿದ್ದು, ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದರು.
ಆದರೆ, ತನಿಖಾಧಿಕಾರಿಗಳು ಸಕ್ಕರೆಪಾಣಿ ಮತ್ತು ಅವನ ಹೇಳಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ವೇಳೆ ಅವನ ಮನೆಯನ್ನೂ ಶೋಧಿಸಿದ್ದರು. ಆತನನ್ನು ಕೂಡಾ ವಿಚಾರಣೆಗೊಳಪಡಿಸಿದ ನಂತರ, ಆತನ ಮನೆಗೆ ಎಸೆದಿದ್ದ ಬಾಟಲಿಯಲ್ಲಿ ಬಳಸಲಾದ ವಿಕ್ಸ್ ಮತ್ತು ಪೊಲೀಸರು ಆತನ ಮನೆಯಿಂದ ವಶಪಡಿಸಿದ ಬಟ್ಟೆಗೆ ಹೊಂದಿಕೆಯಾಗಿರುವುದನ್ನು ಪೊಲೀಸರು ಕಂಡುಕೊಂಡಿದ್ದರು. ಈ ಮಾಹಿತಿಯನ್ನು ಬಳಸಿಕೊಂಡು ಪೊಲೀಸರು ಆತನನ್ನು ಮತ್ತೆ ವಿಚಾರಣೆಗೆ ಒಳಪಡಿಸಿದಾಗ, ಪ್ರಚಾರಕ್ಕಾಗಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ ಎಂದು ಬಿಂಬಿಸಿದ್ದಾಗಿ ಸಕ್ಕರೆರಾಣಿ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಗುಜರಾತ್: ಬಂಡಾಯವೆದ್ದ 12 ನಾಯಕರಿಗೆ ಬಿಜೆಪಿಯಿಂದ ಗೇಟ್‌ಪಾಸ್
ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಪಡೆಯುವ ಉದ್ದೇಶವು ಈ ಬಾಂಬ್ ದಾಳಿಯಲ್ಲಿ ಇತ್ತು ಎಂದು ವರದಿಗಳು ಉಲ್ಲೇಖಿಸಿವೆ. ಜೀವ ಬೆದರಿಕೆ ಇದೆ ಎಂದು ಈ ಹಿಂದೆ ಹಲವಾರು ಮುಖಂಡರಿಗೆ ಮತ್ತು ಬಲಪಂಥೀಯ ಹಿಂದೂ ಸಂಘಟನೆಗಳ ಸದಸ್ಯರಿಗೆ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಒದಗಿಸಲಾಗಿತ್ತು.
ತಪ್ಪೊಪ್ಪಿಕೊಂಡ ನಂತರ ಮೆಲಕಾವೇರಿ ಗ್ರಾಮ ಆಡಳಿತಾಧಿಕಾರಿ (ವಿಎಒ) ತಿರುಜ್ಞಾನಸಂಬಂಧಮ್ ಅವರು ಸಕ್ಕರೆಪಾಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಂತರ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 436 (ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ಕಿಡಿಗೇಡಿತನ), 53 (ಕಠಿಣ ಸೆರೆವಾಸ), 153 (ಗಲಭೆಗೆ ಪ್ರಚೋದನೆ ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿರುವುದು), 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 504 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶಪೂರ್ವಕ ಕೃತ್ಯ) ಮತ್ತು 505(2) (ಸಾರ್ವಜನಿಕ ಕಿಡಿಗೇಡಿತನವನ್ನು ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿದ್ದಾರೆ.



ಎಲೆಕ್ಷನ್ ಹತ್ತಿರ ಬರುವಾಗ ಇಂತಹ ಪ್ರಚೋದೀತ ಘಟನೆಗಳು ಸರ್ವೇಸಾಮಾನ್ಯ ಅದು ನಿಗದಿತವಾಗಿ ಇಂತಹ ಸಂಘಟನೆಗಳೇ ಹೆಚ್ಚಾಗಿ ಮಾಡುವುದು ಅಂತ ಸಾಮಾನ್ಯವಾಗಿ ಗೊತ್ತಿದೆ . ಹಾಗಾಗಿ ಮೊದಲು ಮತದಾರರು ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಾರೆ ಅವರಿಗೆ ಇವೆಲ್ಲ ಹೆಚ್ಚಿನ ಕೆಲಸ ಇಂಥವರ ಮೇಲೆ ಮೊದಲೇ ಪೊಲೀಸ್ ನವರು ಒಂದು ಕಣ್ಣು ಇಡುವುದೇ ಒಳ್ಳೆಯದು.