Homeರಂಜನೆಕ್ರೀಡೆಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ - ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?

ಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ – ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?

- Advertisement -
- Advertisement -

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿ ಗುಂಪಿನ ಲೀಗ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡವು ಕ್ಯಾಮರೂನ್ ವಿರುದ್ಧ ಏಕೈಕ ಗೋಲಿನಿಂದ (1-0) ಗೆಲುವು ದಾಖಲಿಸಿದೆ. ಆದರೆ ಗೋಲು ಬಾರಿಸಿದ ಸ್ವಿಜರ್ಲ್ಯಾಂಡ್ ಆಟಗಾರ ಬ್ರೀಲ್ ಎಂಬೋಲೊ ಸಂಭ್ರಮಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಲ್ ಜನಾಬ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ 48ನೇ ನಿಮಿಷದಲ್ಲಿ ಸ್ವಿಜರ್ಲ್ಯಾಂಡ್ ಆಟಗಾರ ಬ್ರೀಲ್ ಎಂಬೋಲೊ ಗೋಲು ಗಳಿಸಿದ ಕಾರಣದಿಂದ ಆ ತಂಡ ಗೆಲುವು ದಾಖಲಿಸಿ 3 ಅಂಕ ಸಂಪಾದಿಸಿದತು. ಆದರೆ ಗೋಲು ಗಳಿಸಿದ ನಂತರ ಅವರು ಸಂಭ್ರಮಾಚರಣೆಯ ಬದಲಿಗೆ ತನ್ನ ಎರಡೂ ಕೈ ಎತ್ತಿ ಶರಣಾಗತಿಯಲ್ಲಿರುವಂತೆ ಕಂಡುಬಂದರು. ಅವರು ಮೂಲತಃ ಕ್ಯಾಮರೂನ್ ದೇಶದವರಾಗಿದ್ದು ತನ್ನ ಸ್ವದೇಶದ ವಿರುದ್ಧವೇ ಗೋಲು ಗಳಿಸಿದ್ದು ಅವರು ಸಂಭ್ರಮಿಸದಿರಲು ಕಾರಣವಾಗಿತ್ತು.

ಕ್ಯಾಮರೂನ್‌ನ ರಾಜಧಾನಿ ಯೌಂಡೆಯಲ್ಲಿ ಜನಿಸಿದ ಬ್ರೀಲ್ ಎಂಬೋಲೊ ಬಾಸೆಲ್ ನಗರದಲ್ಲಿ ಬೆಳೆದಿದ್ದರು. ಎಂಟು ವರ್ಷಗಳ ಹಿಂದಿನವರೆಗೆ ಸ್ವಿಸ್ ಪೌರತ್ವವನ್ನು ಪಡೆದಿರದಿದ್ದ ಅವರು ಇದೀಗ ಸ್ವಿಟ್ಜರ್ಲೆಂಡ್‌ನ ಫಾರ್ವರ್ಡ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಜಿ ಗುಂಪಿನಲ್ಲಿ ಈ ದೇಶಗಳ ಜೊತೆಗೆ ಬಲಿಷ್ಠ ಬ್ರೆಜಿಲ್ ಮತ್ತು ಸೆರ್ಬಿಯಾ ತಂಡಗಳಿದ್ದು, ಈ ಪಂದ್ಯದಲ್ಲಿ ಗೆಲ್ಲುವುದು ಎರಡೂ ತಂಡಕ್ಕೂ ಅನಿವಾರ್ಯವಾಗಿತ್ತು. ಆದರೆ ಬ್ರೀಲ್ ಎಂಬೋಲೊ ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಸ್ವಿಜರ್ಲ್ಯಾಂಡ್ ಶುಭಾರಂಭ ಮಾಡಿದ್ದು ಮತ್ತೊಂದು ಪಂದ್ಯ ಗೆಲ್ಲುವ ಮೂಲಕ 16ರ ಹಂತ ಪ್ರವೇಶಿಸಲು ತುದಿಗಾಲಲ್ಲಿ ಕಾಯುತ್ತಿದೆ.

ಕ್ಯಾಮರೂನ್ ದೇಶವು ಇಂದಿನ ಸೋಲಿನೊಂದಿಗೆ ವಿಶ್ವಕಪ್‌ ಪುಟ್ಬಾಲ್ ಪಂದ್ಯದಲ್ಲಿ ಸತತ 8ನೇ ಸೋಲು ಕಂಡ ಅಪಖ್ಯಾತಿ ಒಳಗಾಯಿತು. ಅದರಲ್ಲಿಯೂ ತನ್ನದೇ ದೇಶದ ಆಟಗಾರ ಗೋಲಿನಿಂದ ಪಂದ್ಯ ಸೋತಿದ್ದು ಕ್ಯಾಮರೂನ್ ಅಭಿಮಾನಿಗಳಿಗೆ ತೀವ್ರ ನಿರಾಸೆ ತರಿಸಿತು.

ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡದ ಚಿಂತಕ ಸುರೇಶ್ ಕಂಜರ್ಪಣೆಯವರು, “ಇಂದಿನ ಫುಟ್ಬಾಲ್ ಪಂದ್ಯದ ಕತೆ ಇದು. ಸ್ವಿಟ್ಜರ್ಲೆಂಡ್‌‌ – ಕ್ಯಾಮರೂನ್ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌‌ ನ ಎಂಬೋಲೋ ಏಕ ಮಾತ್ರ ಗೋಲು ಹೊಡೆದು ಪಂದ್ಯ ಗೆಲ್ಲಿಸಿದ್ದಾನೆ. ವಿಪರ್ಯಾಸವೆಂದರೆ ಈತ ಕ್ಯಾಮರೂನ್ ಸಂಜಾತ. ಈಗ ಸ್ವಿಸ್ ಪ್ರಜೆ! ಆತನ ಮಾನಸಿಕ ಸ್ಥಿತಿ ಎರಡನೇ ಚಿತ್ರದಲ್ಲಿದೆ. ಗೋಲು ಹೊಡೆದ ಮೇಲೆ ಆತ ಸಂಭ್ರಮಿಸದೇ ಕೈ ಎತ್ತಿ ಸುಮ್ಮನೆ ನಿಂತಿದ್ದಾನೆ. ನಮ್ಮಲ್ಲಾಗಿದ್ದರೆ ಇಷ್ಟರೊಳಗೆ ಟು ರುಪೀಸ್ ಪಡೆ ಟ್ರೋಲ್ ಮಾಡಿ, ಆತನನ್ನು ಪಾಕಿಸ್ತಾನಕ್ಕೋ, ಕೈಲಾಸಕ್ಕೋ ಕಳಿಸುತ್ತಿತ್ತು” ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಏಷ್ಯಾ ದೇಶಗಳ ಗೆಲುವು: ಫೈನಲ್‌ವರೆಗೆ ಸಾಗಬೇಕಾದ ಹಾದಿ ಹೀಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...