ಇತಿಹಾಸಕಾರರು ಭಾರತೀಯ ಸನ್ನಿವೇಶದಲ್ಲಿ ಇತಿಹಾಸವನ್ನು ಪುನಃ ಬರೆಯುವಂತೆ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಕೇಳಿಕೊಂಡಿದ್ದು, ಇಂತಹ ಪ್ರಯತ್ನ ಮಾಡುವವರಿಗೆ ತಮ್ಮ ಸರ್ಕಾರವು ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
“ನಾನು ಇತಿಹಾಸದ ವಿದ್ಯಾರ್ಥಿ, ನಮ್ಮ ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸಲಾಗಿಲ್ಲ ಮತ್ತು ತಿರುಚಲಾಗಿದೆ ಎಂದು ನಾನು ಬಹಳಷ್ಟು ಬಾರಿ ಕೇಳಿದ್ದೇನೆ. ಬಹುಶಃ ಇದು ನಿಜವಿರಬಹುದು, ಆದರೆ ಈಗ ನಾವು ಇದನ್ನು ಸರಿಪಡಿಸಬೇಕಾಗಿದೆ” ಎಂದು ದೆಹಲಿಯಲ್ಲಿ ನಡೆದ ಅಸ್ಸಾಂ ಸರ್ಕಾರದ ಸಮಾರಂಭದಲ್ಲಿ ಅಮಿತ್ ಶಾ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
17ನೇ ಶತಮಾನದ ಅಹೋಮ್ ಸಾಮ್ಯಾಜ್ಯದ ಸೇನಾಪತಿ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನಾಚರಣೆಯ ಮೂರು ದಿನಗಳ ಆಚರಣೆಯ 2ನೇ ದಿನದಂದು ಅವರು ಮಾತನಾಡುತ್ತಿದ್ದರು. ಲಚಿತ್ ಬರ್ಫುಕನ್ ಅವರ ನೆನಪಿಗಾಗಿ ನವೆಂಬರ್ 24 ಅನ್ನು ಲಚಿತ್ ದಿವಸ್ ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮೈಸೂರು ರಾಕೆಟ್‌ಗಳ ಉತ್ಖನನ; ಆಸಕ್ತಿ ಕೆರಳಿಸುವ ಇತಿಹಾಸ
“ಇತಿಹಾಸವನ್ನು ಸರಿಯಾಗಿ ಮತ್ತು ವೈಭವಯುತವಾಗಿ ಪ್ರಸ್ತುತಪಡಿಸುವುದನ್ನು ಈ ಯಾರು ತಡೆಯುತ್ತಾರೆ ಎಂದು ನಾನು ನಿಮ್ಮನ್ನು ಕೇಳುತ್ತಿದ್ದೇನೆ” ಎಂದು ಅಮಿತ್ ಶಾ ಹೇಳಿದ್ದಾರೆ.
“ಇತಿಹಾಸವು ಸರಿಯಲ್ಲ ಎಂಬ ಈ ನಿರೂಪಣೆಯನ್ನು ಬಿಟ್ಟುಬಿಡಿ. ಆದರೆ ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸಿ ಎಂದು ಇಲ್ಲಿ ಕುಳಿತಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ನಾನು ವಿನಂತಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಒಮ್ಮೆ ಬರೆದರೆ ಸಾಕು, ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡಲಾಗುತ್ತದೆ ಎಂಬ ಕಲ್ಪನೆ ಕೂಡಾ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ವಿಜ್ಞಾನ ಭವನದಲ್ಲಿ ಹಾಜರಿದ್ದ ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳ ಸಂಶೋಧನೆಗೆ ಒಕ್ಕೂಟ ಸರ್ಕಾರವು ಬೆಂಬಲ ನೀಡಲಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಇತಿಹಾಸದ ಅವಜ್ಞೆ; ದೇಶ ವಿಭಜನೆಗೆ ಸಿಕ್ಕಸಿಕ್ಕವರ ಮೇಲೆ ಆರೋಪ ಹೊರಿಸುವ ಮುನ್ನ..
“ಮುಂದೆ ಬನ್ನಿ, ಸಂಶೋಧನೆ ಮಾಡಿ ಮತ್ತು ಇತಿಹಾಸವನ್ನು ಪುನಃ ಬರೆಯಿರಿ. ಈ ರೀತಿಯಾಗಿ ನಾವು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡಬಹುದು” ಎಂದು ಅವರು ಹೇಳಿದ್ದಾರೆ.
ಜನರಿಗೆ ಹೆಚ್ಚಿನ ಪ್ರಯೋಜನ ಆಗುವಂತೆ ಇತಿಹಾಸದ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಮೊಘಲ್ ವಿಸ್ತರಣೆಯನ್ನು ತಡೆಯುವಲ್ಲಿ ಲಚಿತ್ ವಹಿಸಿದ ಪಾತ್ರವನ್ನು ಗುರುತಿಸಿದ ಅಮಿತ್ ಶಾ, “ಸರಿಘಾಟ್ ಯುದ್ಧದಲ್ಲಿ ಅವರ ಅನಾರೋಗ್ಯದ ಹೊರತಾಗಿಯೂ ಮೊಘಲರನ್ನು ಸೋಲಿಸಿದರು” ಎಂದು ಹೇಳಿದ್ದಾರೆ.



ಮನೋವಿಕಾರಿಯೊಬ್ಬನ ವಿರೂಪೀ ಹೇಳಿಕೆಯಿದು. ಮೊಗಲರು ಈ ದೇಶಕ್ಕೆ ಕೊಟ್ಟ ಅನುಪಮ ಕೊಡುಗೆಗಳ ಬಗ್ಗೆ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ವಿಷಯಗಳೇನು ಎಂಬುದು ಈ ತಡಿಪಾರ್ ನರಹಂತಕ ಮೊದಲು ಕಂಡುಕೊಳ್ಳಲಿ. ಹಾಗೆಯೇ ಹಿಟ್ಲರ್ ಅಭಿಮಾನಿಗಳಾದ ಆರೆಸ್ಸಿಗರು ಸ್ವಾತಂತ್ರ್ಯ ಸಂಗ್ರಾಮಲ್ಲಿ ಬ್ರಿಟಿಷರ ಜೊತೆಗೂಡಿ ದೇಶಕ್ಕೆ ದ್ರೋಹ ಬಗೆದದ್ದು,ಸಾವರ್ಕರ್ ಬ್ರಿಟಿಷರ ಪಿಂಚಣಿಯಲ್ಲಿ ಬದುಕು ನಡೆಸಿದ ಇತಿಹಾಸ ಕೂಡಾ ಈ ದೇಶದ ಪ್ರತೀ ಪ್ರಜೆಗೂ ತಿಳಿಸುವಂತಾಗಲಿ.