NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರಾಜೀನಾಮೆ ಪ್ರಕಟಿಸಿದ ಬೆನ್ನಲ್ಲೆ ‘ರವೀಶ್ ಕುಮಾರ್ ಅಫಿಶಿಯಲ್’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ತಮ್ಮ ಮೊದಲ ವಿಡಿಯೋದಲ್ಲಿ “ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಿರುವ ಸಮಯದಲ್ಲಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪತ್ರಕರ್ತರನ್ನು ಬೆಂಬಲಿಸುವುದನ್ನು ಮುಂದುವರಿಸಬೇಕೆಂದು” ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
“ದೇಶದ ನ್ಯಾಯಾಂಗವು ತತ್ತರಿಸಿದ ಸಮಯದಲ್ಲಿ, ಅಧಿಕಾರದಲ್ಲಿರುವ ಜನರು ಅನೇಕರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದಾಗ, ದೇಶದ ಜನರು ನನ್ನ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದರು. ನನ್ನ ಪ್ರೇಕ್ಷಕರಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಕೆಲಸವನ್ನು ಹೊಸ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದ ಮೂಲಕ ಮುಂದುವರೆಸುತ್ತಿದ್ದು, ಅದನ್ನು ಬೆಂಬಲಿಸುತ್ತೀರೆಂದು ನಂಬಿದ್ದೇನೆ” ಎಂದು ರವೀಶ್ ತಮ್ಮ ಯುಟ್ಯೂಬ್ ವೀಡಿಯೊದಲ್ಲಿ ಹೇಳಿದ್ದಾರೆ.
माननीय जनता,
मेरे होने में आप सभी शामिल हैं। आपका प्यार ही मेरी दौलत है। आप दर्शकों से एकतरफ़ा और लंबा संवाद किया है। अपने यू- ट्यूब चैनल पर। यही मेरा नया पता है। सभी को गोदी मीडिया की ग़ुलामी से लड़ना है।
आपका
रवीश कुमार https://t.co/39BKNJdoro— ravish kumar (@ravishndtv) December 1, 2022
ನನ್ನ ಅಸ್ತಿತ್ವದಲ್ಲಿ ನೀವೆಲ್ಲರೂ ಸೇರಿದ್ದೀರಿ. ನಿಮ್ಮ ಪ್ರೀತಿಯೇ ನನ್ನ ಸಂಪತ್ತು. ಇದು ನಿಮ್ಮ youtube ಚಾನಲ್‌ನಲ್ಲಿನ ನನ್ನ ಹೊಸ ವಿಳಾಸವಾಗಿದೆ. ಗೋದಿ ಮೀಡಿಯಾದ ದಾಸ್ಯದ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ನಾನು ರಾಜೀನಾಮೆ ನೀಡಿದ್ದೇನೆ. ಈ ರಾಜೀನಾಮೆ ನಿಮ್ಮ ಗೌರವಾರ್ಥವಾಗಿದೆ. ಕೋಟ್ಯಾಂತರ ವೀಕ್ಷಕರ ಆತ್ಮಗೌರವ ಒಬ್ಬರ ಕೆಲಸ ಮತ್ತು ಅಸಹಾಯಕತೆಗಿಂತ ಬಹಳ ದೊಡ್ಡದು. ನಿನ್ನ ಪ್ರೀತಿಯ ಮುಂದೆ ತಲೆಬಾಗುತ್ತೇನೆ ಎಂದು ಅವರು ಹೇಳಿದ್ದಾರೆ.
ರವೀಶ್ ಕುಮಾರ್ ಅಫಿಶಿಯಲ್ ಯೂಟ್ಯೂಬ್ ಚಾನೆಲ್‌ಗೆ ಈಗಾಗಲೇ 10 ಲಕ್ಷದಷ್ಟು ಚಂದಾದಾರರಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ಸಂಖ್ಯೆ ಭಾರೀ ಹೆಚ್ಚಾಗುವ ಸಾಧ್ಯತೆಯಿದೆ.
ರವೀಶ್ ಕುಮಾರ್ 1996 ರಲ್ಲಿ NDTV ಸೇರಿದ್ದರು. NDTV ಇಂಡಿಯಾ (ಹಿಂದಿ ಆವೃತ್ತಿ)ಯಲ್ಲಿ ಹಮ್ ಲೋಗ್, ರವೀಶ್ ಕಿ ರಿಪೋರ್ಟ್, ದೇಶ್ ಕಿ ಬಾತ್ ಮತ್ತು ಪ್ರೈಮ್ ಟೈಮ್‌ನಂತಹ ಹಲವಾರು ಸುದ್ದಿ ಆಧಾರಿತ ಕಾರ್ಯಕ್ರಮಗಳ ನಿರೂಪಕರಾಗಿದ್ದರು. ಅವರು 2019 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಜೊತೆಗೆ ಎರಡು ಬಾರಿ ಪತ್ರಿಕೋದ್ಯಮದಲ್ಲಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಗೌರಿ ಲಂಕೇಶ್ ಸ್ಮಾರಕ ಪ್ರಶಸ್ತಿಗೂ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..



Well-done sir
Wel done sir