ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ‘ನಿಮ್ಮ ಅಕ್ಕಪಕ್ಕದಲ್ಲಿ ಬಾಂಗ್ಲಾದೇಶಿಯವರು ಮತ್ತು ರೋಹಿಂಗ್ಯಗಳು ವಾಸಿಸಿದರೆ ಏನು ಮಾಡುತ್ತೀರಿ? ಕಡಿಮೆ ಬೆಲೆಯ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಬಂಗಾಳಿಗಳಿಗೆ ಮೀನು ಬೇಯಿಸಿಕೊಡುತ್ತೀರಾ’ ಎಂಬ ಕೋಮು ಪ್ರಚೋದಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ನಟ ಹಾಗೂ ಬಿಜೆಪಿ ಸಂಸದ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ.
ಗುಜರಾತಿನ ವಲ್ಸಾಡ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಸಭೆಯಲ್ಲಿ ಮಾತನಾಡಿದ ಅವರು, “ಗ್ಯಾಸ್ ಸಿಲಿಂಡರ್ ದುಬಾರಿಯಾಗಿದ್ದರೆ ಮತ್ತು ಅದರ ಬೆಲೆ ಇಳಿಯುತ್ತದೆ. ಜನರಿಗೆ ಉದ್ಯೋಗವೂ ದೊರೆಯಲಿದೆ. ಆದರೆ ರೋಹಿಂಗ್ಯ ವಲಸಿಗರು ಮತ್ತು ಬಾಂಗ್ಲಾದೇಶಿಗರು ದೆಹಲಿಯಂತೆ ನಿಮ್ಮ ಸುತ್ತಲು ವಾಸಿಸಲು ಪ್ರಾರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ನೀವು ಏನು ಮಾಡುತ್ತೀರಿ? ಮೊದಲು ಬಂಗಾಳಿಗಳಿಗೆ ಮೀನು ಬೇಯುಸುತ್ತೀರಾ?” ಎಂದು ಹೇಳಿದ್ದರು.
ಮುಂದುವರೆದು ಗುಜರಾತಿನ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ. ಆದರೆ ಇಂತಹುಗಳನ್ನು ಸಹಿಸುವುದಿಲ್ಲ. ಆ ವ್ಯಕ್ತಿ ತಮ್ಮ ಬಾಯಿಗೆ ಡೈಪರ್ ಹಾಕಿಕೊಂಡು ಸುಮ್ಮನಿರಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಗುರಿಯಾಗಿಸಿ ಟೀಕಿಸಿದ್ದರು.
Mr. @SirPareshRawal:
Bengalis don’t need you to “cook fish” for them.
Remember you too have made your career in Maharashtra where we lovingly fed you dhokla & fafda.
Withdraw & apologize for these despicable remarks you made against Bengal on orders of BJP in Gujarat.@GargaC pic.twitter.com/JkDZF5A1eY
— Saket Gokhale (@SaketGokhale) December 2, 2022
ಇದರಿಂದ ಸಿಟ್ಟಿಗೆದ್ದ ಬಂಗಾಳಿಗರು ಪರೇಶ್ ವಿರುದ್ಧ ಕಿಡಿಕಾರಿದ್ದರು. ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಪ್ರತಿಕ್ರಿಯೆ ನೀಡಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.
“ಪರೇಶ್ ರಾವಲ್ ಸರ್, ಬಂಗಾಳಿಗಳು ಅವರಿಗೆ ಮೀನು ಬೇಯಿಸಲು ನಿಮ್ಮ ಅಗತ್ಯವಿಲ್ಲ. ನೀವು ಸಹ ಮಹಾರಾಷ್ಟ್ರದಲ್ಲಿ ನಿಮ್ಮ ವೃತ್ತಿಜೀವನವನ್ನು ಆರಂಭಿಸಿದ್ದೀರಿ ಎಂಬುದನ್ನು ನೆನಪಿಡಿ, ಅಲ್ಲಿ ನಾವು ನಿಮಗೆ ಪ್ರೀತಿಯಿಂದ ಧೋಕ್ಲಾ ಮತ್ತು ಫಾಫ್ಡಾವನ್ನು ನೀಡಿದ್ದೇವೆ. ಗುಜರಾತ್‌ನಲ್ಲಿ ಬಿಜೆಪಿಯ ಆದೇಶದ ಮೇರೆಗೆ ನೀವು ಬಂಗಾಳದ ವಿರುದ್ಧ ಮಾಡಿದ ಈ ಹೇಯ ಟೀಕೆಗಳನ್ನು ಹಿಂತೆಗೆದುಕೊಳ್ಳಿ ಮತ್ತು ಕ್ಷಮೆಯಾಚಿಸಿ” ಎಂದು ಒತ್ತಾಯಿಸಿದ್ದರು.
ಟೀಕೆಗಳು ವ್ಯಕ್ತವಾದ ನಂತರ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ. ಇದು ಮೀನಿನ ವಿಷಯವಲ್ಲ. ಅವರು ಸ್ಪಷ್ಟೀಕರಣ ನೀಡಬೇಕೆಂಬ ಟ್ವಿಟರ್ ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಾವಲ್, “ಖಂಡಿತವಾಗಿ ಮೀನಿನ ವಿಚಾರ ಒಂದು ಸಮಸ್ಯೆಯಲ್ಲ. ಗುಜರಾತಿಗಳು ಕೂಡ ಮೀನನ್ನು ಬೇಯಿಸುತ್ತಾರೆ ಮತ್ತು ಸೇವಿಸುತ್ತಾರೆ. ಬಂಗಾಳಿ ಹೇಳಿಕೆಯ ವಿಚಾರದಲ್ಲಿ ನಾನು ಉಲ್ಲೇಖಿಸಿದ್ದು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನು. ಅದರೂ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
of course the fish is not the issue AS GUJARATIS DO COOK AND EAT FISH . BUT LET ME CLARIFY BY BENGALI I MEANT ILLEGAL BANGLA DESHI N ROHINGYA. BUT STILL IF I HAVE HURT YOUR FEELINGS AND SENTIMENTS I DO APOLOGISE. 🙏 https://t.co/MQZ674wTzq
— Paresh Rawal (@SirPareshRawal) December 2, 2022
ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋಗಳಲ್ಲಿ ಪದೇ ಪದೇ ಆಂಬುಲೆನ್ಸ್‌ಗಳು ಬರುವುದೇಕೆ? ಇದು ಭದ್ರತಾ ವೈಫಲ್ಯವಲ್ಲವೇ?


