Homeರಂಜನೆಕ್ರೀಡೆರೋಚಕ ಗೆಲುವಿನ ಮೂಲಕ ಪ್ರೊ ಕಬ್ಬಡ್ಡಿಯಲ್ಲಿ ಶುಭಾರಂಭ ಮಾಡಿದ ಬೆಂಗಳೂರು ಬುಲ್ಸ್

ರೋಚಕ ಗೆಲುವಿನ ಮೂಲಕ ಪ್ರೊ ಕಬ್ಬಡ್ಡಿಯಲ್ಲಿ ಶುಭಾರಂಭ ಮಾಡಿದ ಬೆಂಗಳೂರು ಬುಲ್ಸ್

- Advertisement -
- Advertisement -

ಇಂದು ನಡೆದ ಪ್ರೊ.ಕಬ್ಬಡ್ಡಿ ಸೀಸನ್ 7ರ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮೂರು ಬಾರಿ ಚಾಂಪಿಯನ್ ಆಗಿರುವ ಪಟ್ನಾ ಪೈರೇಟ್ಸ್ ತಂಡವನ್ನು 34-32 ಅಂಕಗಳಿಂದ ಬಗ್ಗು ಬಡಿಯುವ ಮೂಲಕ ಶುಭಾರಂಭ ಮಾಡಿತು.

ಹೈದರಾಬಾದ್ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಕಬ್ಬಡ್ಡಿ ಪಂದ್ಯದಲ್ಲಿ ಆರಂಭದಲ್ಲಿ ಬೆಂಗಳೂರು 5 ಪಾಯಿಂಟ್ ಮುನ್ನಡೆ ಇತ್ತು. ಆದರೆ ನಂತರ ಪಟ್ನಾ ಚೆನ್ನಾಗಿ ಆಟವಾಡಿ ಮುನ್ನಡೆ ಸಾಧಿಸಿತು. ಪವನ್ ಕುಮಾರ್ ಶೆಹ್ರಾವತ್ ಎರಡು ಬಾರಿ ಔಟಾಗಿ 15 ನಿಮಿಷಕ್ಕೂ ಹೆಚ್ಚು ನಿಮಿಷ ಬೆಂಚ್ ಕಾಯಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಡು ಆರ್ ಡೈ ರೈಡ್ ಮಾಡಿದ ಬೆಂಗಳೂರು ಬುಲ್ಸ್ ತಂಡದ ನಾಯಕ ರೋಹಿತ್ ಕುಮಾರ್ ಯಶಸ್ವಿಯಾಗಿ ಬೋನಸ್ ಮಾಡಿದರೂ ಔಟಾದರು ಮತ್ತು ರಿವ್ಯೂ ಕೇಳಿ ತಂಡದ ರಿವ್ಯೂ ಕೂಡ ಕಳೆದುಕೊಂಡರು.

ಪಂದ್ಯದ ಮೊದಲಾರ್ಧ ಮುಗಿದಾಗ ಪಟ್ನಾ 17-13 ಅಂಕಗಳಿಮದ ನಾಲ್ಕು ಪಾಯಿಂಟ್ ಗಳಿಂದ ಮುನ್ನಡೆ ಗಳಿಸಿತ್ತು. ದ್ವಿತೀಯಾರ್ಧದಲ್ಲಿಯೂ ಪಟ್ನಾ ಸತತವಾಗಿ ಪಾಯಿಂಟ್ಸ್ ಗಳನ್ನು ಏರಿಸಿಕೊಳ್ಳತೊಡಗಿದಾಗ ಸತತ ನಾಲ್ಕು ಸೂಪರ್ ಟ್ಯಾಕಲ್ ಮೂಲಕ ಬೆಂಗಳೂರು ಯಶಸ್ವಿಯಾಗಿ ಕಮ್ ಬ್ಯಾಕ್ ಮಾಡಿತು.

ಪಂದ್ಯ ಮುಗಿಯಲು ಕೊನೆಯ ಆರು ನಿಮಿಷವಿದ್ದಾಗ ಅಂಕ 24-24 ಇದ್ದು ಎರಡು ತಂಡಗಳು ಸಮಬಲ ಸಾಧಿಸಿದ್ದವು. ಆಗ ಪವನ್ ಕುಮಾರ್ ಆಕರ್ಷಕ ರೈಡಿಂಗ್ ನಿಂದಾಗಿ ಕೊನೆಯ ನಾಲ್ಕು ನಿಮಿಷ ಬರುವ ವೇಳೆಗೆ 30-36 ಕ್ಕೆ ಬಂದಿತು. ಬೆಂಗಳೂರು 04 ಪಾಯಿಂಟ್ ಗಳ ಮುನ್ನಡೆ ಸಾಧಿಸಿತು. ಅಂತಿಮವಾಗಿ ರಕ್ಷಣಾತ್ಮಕ ಆಟವಾಡಿದ ಬೆಂಗಳೂರು 34-32 ಅಂದರೆ 02 ಅಂಕಗಳಿಂದ ಜಯಗಳಿಸಿ ಗೆಲುವಿನ ಖಾತೆ ತೆರೆಯಿತು.

ಆಶೀಸ್ ಸಾಂಗ್ವಾನ್

ಬೆಂಗಳೂರು ತಂಡದ ಪರವಾಗಿ ಅದ್ಭುತ ಡಿಫೆಂಡಿಗ್ ಮಾಡಿ ಅಮಿತ್ ಶೇರಾನ್ 05 ಮತ್ತು ಆಶೀಸ್ ಸಾಂಗ್ವಾನ್ 04 ಅಂಕಗಳಿಸಿ ಗಮನ ಸೆಳೆದರು. ರೈಡಿಂಗ್ ವಿಭಾಗದಲ್ಲಿ ಪವನ್ ಕುಮಾರ್ ಶೆಹ್ರಾವತ್ 09 ಪಾಯಿಂಟ್ ಗಳಿಸಿ ತಂಡಕ್ಕೆ ಆಸರೆಯಾದರು. ಪಟ್ನಾ ತಂಡದ ಪರವಾಗಿ ಪರ್ದೀಪ್ ನರ್ವಾಲ್ 10 ರೈಡಿಂಗ್ ಪಾಯಿಂಟ್ ಗಳಿಸಿ ಹೋರಾಡಿದರೂ ಗೆಲುವು ಸಾಧ್ಯವಾಗಲಿಲ್ಲ.

ಪರ್ದೀಪ್ ನರ್ವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...