Homeಮುಖಪುಟಗೌರಿ ಲಂಕೇಶ್ ಅಭಿನಯಿಸಿರುವ ‘ಜೋರ್ಡಾನ್’ ಚಿತ್ರ ಈ ವಾರ ತೆರೆಗೆ

ಗೌರಿ ಲಂಕೇಶ್ ಅಭಿನಯಿಸಿರುವ ‘ಜೋರ್ಡಾನ್’ ಚಿತ್ರ ಈ ವಾರ ತೆರೆಗೆ

ಗೌರಿ ಲಂಕೇಶ್‌ರವರು ಈ ಮುನ್ನ ಲೇಖಕ ಯೋಗೇಶ್ ಮಾಸ್ಟರ್ ನಿರ್ದೇಶನದ ಮರಳಿ ಮನೆಗೆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು.

- Advertisement -
- Advertisement -

ದಿಟ್ಟ ಪರ್ತಕರ್ತೆ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತೆ ಗೌರಿಲಂಕೇಶ್‌ರವರು ಹತ್ಯೆಯಾಗಿ 5 ವರ್ಷಗಳಾಗಿವೆ. ಅವರು ಬದುಕಿದ್ದಾಗ ಅಭಿನಯಿಸಿದ್ದ ‘ಜೋರ್ಡಾನ್’ ಕನ್ನಡ ಚಲನಚಿತ್ರವು ಜನವರಿ 30 ರಂದು ಬಿಡುಗಡೆಯಾಗುತ್ತಿದೆ.

ಈ ಚಿತ್ರದಲ್ಲಿ ಗೌರಿ ಲಂಕೇಶ್‌ರವರು ಅಂಚಿಗೆ ತಳ್ಳಲ್ಪಟ್ಟ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ ಎನ್‌ಜಿಓ ಸ್ಥಾಪಕಿ ಲಕ್ಷ್ಮಿ ಶ್ರೀವತ್ಸ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಖಾಸಗಿ ಶಾಲೆಗಳ ದುಬಾರಿ ಶಿಕ್ಷಣ ಕೈಗೆಟುಕದ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಗೌರಿ ಲಂಕೇಶ್ ಖಾಸಗಿ ಶಾಲೆಯೊಂದನ್ನು ತೆರೆಯುತ್ತಾರೆ. ಈ ಸಂದರ್ಭದಲ್ಲಿ ಅವರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲು ಚಿತ್ರದ ನಾಯಕ ಮೈಕಲ್ ಎಂಬ ಯುವಕ ಕೈಜೋಡಿಸುತ್ತಾರೆ. ಜೋರ್ಡಾನ್ ಚಿತ್ರವು ಸ್ಲಂನಲ್ಲಿ ವಾಸಿಸುವ 12 ವರ್ಷದ ಬಾಲಕನ ಸುತ್ತ ಹೆಣೆದಿದ್ದು, ತಳಸಮುದಾಯದ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತದೆ.

ವಿನೋದ್ ಧಯಾಳನ್ ನಿರ್ದೇಶನದ ಈ ಚಿತ್ರವು ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೋರ್ಡಾನ್ ಪ್ರೇರಣೆಯಿಂದ ಚಿತ್ರಕ್ಕೆ ಜೋರ್ಡಾನ್ ಎಂದು ಹೆಸರಿಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಹೇಂದ್ರ ಪ್ರಸಾದ್ ನಾಯಕನಾಗಿ ಅಭಿನಯಿಸಿದ್ದಾರೆ. ಸಂಪತ್ ಮೈತ್ರೇಯ ಮತ್ತು ಸಿತಾರ ಸಹ ಚಿತ್ರದಲ್ಲಿದ್ದಾರೆ.

ಗೌರಿ ಲಂಕೇಶ್‌ರವರು ಈ ಮುನ್ನ ಲೇಖಕ ಯೋಗೇಶ್ ಮಾಸ್ಟರ್ ನಿರ್ದೇಶನದ ಮರಳಿ ಮನೆಗೆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. ಜೋರ್ಡಾನ್ ಅವರ ಎರಡನೇ ಚಿತ್ರವಾಗಿದ್ದು ದುರಾದೃಷ್ಟವಶಾತ್ ಅವರನ್ನು ನೋಡುವ ಕೊನೆಯ ಚಿತ್ರವೂ ಆಗಿದೆ.

ಇದನ್ನೂ ಓದಿ: ‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...