ಬ್ರಿಟೀಷ್ ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ನಿಗದಿಪಡಿಸಿದೆ. ಒಕ್ಕೂಟ ಸರ್ಕಾರವು ಕಾನೂನನ್ನು ಮರುಪರಿಶೀಲಿಸುವ ಯಾವುದೇ ಬೆಳವಣಿಗೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬಹುದು ಎಂದು ಪಿಟಿಐ ವರದಿ ಮಾಡಿದೆ.
ಸುಪ್ರೀಂಕೋರ್ಟ್ ಕಳೆದ ವರ್ಷದ ಮೇ 11 ರಂದು ಕಾನೂನನ್ನು ಮರುಪರಿಶೀಲಿಸುವವರೆಗೆ ತಡೆ ನೀಡಿತ್ತು. ಇದೀಗ ಎಂಟು ತಿಂಗಳ ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮೇ 11 ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, “ಸೂಕ್ತವಾದ” ಸರ್ಕಾರಿ ವೇದಿಕೆಯು ಅದನ್ನು ಮರುಪರಿಶೀಲಿಸುವವರೆಗೆ ದೇಶದ್ರೋಹದ ಮೇಲಿನ ದಂಡನಾ ಕಾನೂನನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ದೇಶದ್ರೋಹ ಕಾನೂನು ಅನ್ವಯ ಯಾವುದೇ ಹೊಸ ಎಫ್‌ಐಆರ್ ದಾಖಲಿಸದಂತೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಸೂಚಿಸಿದೆ.
ಕಾನೂನಿನ ವಿರುದ್ಧದ 12 ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ಪೀಠವು ಪಟ್ಟಿ ಮಾಡಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 124A ಅಡಿಯ ಕಾನೂನು “ಸರ್ಕಾರದ ಬಗ್ಗೆ ಅಸಮಾಧಾನ” ಸೃಷ್ಟಿಸುವ ಜನರಿಗೆ ಜೀವಾವಧಿ ಶಿಕ್ಷೆಯಂತಹ ಗರಿಷ್ಠ ಜೈಲು ಶಿಕ್ಷೆಯನ್ನು ನೀಡುತ್ತದೆ. ಇದನ್ನು 1890 ರಲ್ಲಿ ದೇಶದ ಸ್ವಾತಂತ್ರ್ಯಕ್ಕೆ 57 ವರ್ಷಗಳ ಮೊದಲು ಐಪಿಸಿಗೆ ತರಲಾಯಿತು.
ಬ್ರಿಟಿಷರ ಆಳ್ವಿಕೆಯಲ್ಲಿ ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಈ ಕಾನೂನನ್ನು ಜಾರಿಗೊಳಿಸಲಾಗಿತ್ತು.
ಕಾನೂನನ್ನು ತಡೆಹಿಡಿಯುವಂತೆ ತೀರ್ಪು ನೀಡಿದ್ದ ವೇಳೆ, ಕಾನೂನಿನ ಅಡಿಯಲ್ಲಿ ಹೊಸ ಎಫ್‌ಐಆರ್‌ಗಳು ದಾಖಲಿಸದಂತೆ, ದೇಶದ್ರೋಹದ ಬಗ್ಗೆ ನಡೆಯುತ್ತಿರುವ ತನಿಖೆಗಳು ಮತ್ತು ಬಾಕಿ ಉಳಿದಿರುವ ವಿಚಾರಣೆಗಳನ್ನು ನಿಲ್ಲಿಸಲು ಆದೇಶಿಸಲಾಗಿತ್ತು.


