ನಿನ್ನೆಯಷ್ಟೇ ಲೋಕಸಭೆಯಲ್ಲಿ ಆರ್.ಟಿ.ಐ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಅದಕ್ಕೆ ಬಹುಮತವೂ ಲಭಿಸಿದೆ. ಮುಂದಿನ ವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಈ ಕುರಿತು ಪ್ರಮುಖರು ಏನು ಹೇಳಿದ್ದಾರೆ ನೊಡೋಣ ಬನ್ನಿ.
ಅವರು ತಮ್ಮ ವಿದೇಶ ಪ್ರವಾಸಗಳಲ್ಲಿ ತಮ್ಮ ಕ್ರೋನಿ ಸ್ನೇಹಿತರಿಗೆ ಮಾಡಿಕೊಟ್ಟ ವ್ಯಾಪಾರದ ಒಪ್ಪಂದಗಳ ಮಾಹಿತಿಯನ್ನು ಮರೆಮಾಚುತ್ತಾರೆ. ಯಾವ ಸಾರ್ವಜನಿಕ ವಲಯದ ಸಂಸ್ಥೆಗಳು ಹಿಂಬಾಗಿಲಿನಿಂದ ಗಣಿಗಾರಿಕೆ ಒಪ್ಪಂದಗಳನ್ನು ಯಾವ ಮಿತ್ರರಿಗೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಅವರು ಮರೆಮಾಚುತ್ತಾರೆ. ಅವರು ರಫೇಲ್ ಒಪ್ಪಂದದ ಮಾಹಿತಿಯನ್ನು, ವಿಶೇಷವಾಗಿ ಆಫ್‌ಸೆಟ್ ಒಪ್ಪಂದಗಳನ್ನು ಅದಾನಿಗೆ ಕೊಡುವುದನ್ನು ಮರೆಮಾಚುತ್ತಾರೆ. ಹಾಗಾಗಿ ಅವರು ಆರ್‌ಟಿಐಯನ್ನು ಕೊಲ್ಲಲು ಪ್ರಯತ್ನಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ – ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟಿನ ಹಿರಿಯ ವಕೀಲರು.
ಮಾಹಿತಿ ಹಕ್ಕು ಕಾಯ್ದೆಯನ್ನು ಮಟ್ಟಹಾಕಲು ಹೊರಟಿರುವ ಕೇಂದ್ರ ಸರ್ಕಾರದ ಪ್ರಯತ್ನ ಬಹಳ ಗಂಭೀರ ವಿಷಯವಾಗಿದೆ. ಇದು ಯುಪಿಎ ಅವಧಿಯಲ್ಲಿ ತಂದ ಪ್ರಮುಖ ಶಾಸನಗಳಲ್ಲಿ ಒಂದಾಗಿದೆ. ಇದು ನಮ್ಮ ಜನರನ್ನು ಸಬಲೀಕರಣಗೊಳಿಸಲು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಹಕಾರಿಯಾಗಿದೆ. ಕಳೆದ ಒಂದು ದಶಕದಲ್ಲಿ ಸುಮಾರು 60 ಲಕ್ಷ ಜನರು ಇದರ ಲಾಭ ಪಡೆದಿದ್ದಾರೆ. – ಅಶೋಕ್ ಗೆಹ್ಲೋಟ್, ರಾಜಸ್ಥಾನದ ಮುಖ್ಯಮಂತ್ರಿ.
ಆರ್‌ಟಿಐ ಕಾಯ್ದೆಯು ಅಪರಿಮಿತ ಭ್ರಷ್ಟಾಚಾರ ಮತ್ತು ದುರಾಡಳಿತದ ಅಧಿಕಾರಕ್ಕೆ ಸವಾಲಾಗಿ ಪರಿಣಮಿಸಿದೆ ಎಂಬುದಕ್ಕೆ 80 ಕ್ಕೂ ಹೆಚ್ಚು ಆರ್‌ಟಿಐ ಕಾರ್ಯಕರ್ತರ ಹತ್ಯೆಯೇ ಸಾಕ್ಷಿಯಾಗಿದೆ! ಪ್ರಸ್ತಾವಿತ ತಿದ್ದುಪಡಿಗಳು ಮಾಹಿತಿ ಆಯೋಗಗಳ ಸ್ವಾತಂತ್ರ್ಯವನ್ನು ತೀವ್ರವಾಗಿ ದುರ್ಬಲಗೊಳಿಸುತ್ತವೆ. ಹಾಗಾಗಿ ಅದನ್ನು ತೀವ್ರವಾಗಿ ವಿರೋಧಿಸಬೇಕು – ಅತಿಶಿ ಮರ್ಲೀನಾ, ಆಮ್ ಆದ್ಮಿ ಪಕ್ಷ ದೆಹಲಿ.
ಬಹಳಷ್ಟು ಮೋದಿ ಅಭಿಮಾನಿಗಳು ಈಗ ಎಚ್ಚರವಾಗಿ ಕೇಂದ್ರ ಸರ್ಕಾರದ ಆರ್.ಟಿ.ಐ ಕಾಯ್ದೆಗೆ ತಂದ ತಿದ್ದುಪಡಿಗಳನ್ನು ವಿರೋಧಿಸುತ್ತಿದ್ದಾರೆ. ಕಳೆದು ಐದು ವರ್ಷಗಳಲ್ಲಿ ಈ ಸರ್ಕಾರವು ಹೇಗೆ ಸ್ವತಂತ್ರ ಸಂಸ್ಥೆಗಳನ್ನು ನಾಶ ಮಾಡುತ್ತಿದೆ ಎಂಬುದರ ಬಗ್ಗೆ ನಾನು ಸೇರಿದಂತೆ ನಮ್ಮ ಥರ ಯೋಚಿಸುವವರು ದನಿ ಎತ್ತಿದೆವು. ಆಗ ಈ ಮೋದಿ ಅಭಿಮಾನಿಗಳು ನಮ್ಮನ್ನು ಟ್ರೋಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಈಗ ಸಮಯ ಮೀರಿ ಹೋಗಿದೆ. ವಿರೋಧವು ಮುಗಿದಿದೆ – ಧೃವ್ ರಾಠೀ, ಖ್ಯಾತ ಯೂಟ್ಯೂಬರ್, ಯುವ ಚಿಂತಕ.
ಮೋದಿ ಲೋಕಪಾಲ್ ರನ್ನು ಕೊಂದರು.
ಮೋದಿ ವಿಶಲ್ ಬ್ಲೋವರ್ಸ್ ಕಾಯ್ದೆಯನ್ನು ಕೊಂದರು
ಮೋದಿ ಈಗ ಆರ್‌ಟಿಐ ಕಾಯ್ದೆಯನ್ನು ಸಹ ಕೊಂದಿದ್ದಾರೆ
ಭಾರತದಲ್ಲಿ ಭ್ರಷ್ಟಾಚಾರ ಮತ್ತು ಕ್ರೋನಿ ಬಂಡವಾಳಶಾಹಿಗೆ ಮೋದಿ ಅತಿದೊಡ್ಡ ಸಹಾಯಕರಾಗಿದ್ದಾರೆ ಎಂಬ ಬಗ್ಗೆ ಯಾವುದೇ ಸಂದೇಹವಿದೆಯೇ? – ಶ್ರೀವತ್ಸ, ಸಾಮಾಜಿಕ ಕಾರ್ಯಕರ್ತ..


