Homeರಾಷ್ಟ್ರೀಯಮಹಿಳೆಯೆ ಸ್ವತಃ ಸೀಟಿನಲ್ಲಿ ಮೂತ್ರ ವಿಸರ್ಜಿಸಿ, ನನ್ನ ಮೇಲೆ ಆರೋಪ ಮಾಡಿದ್ದಾರೆ: ಕೋರ್ಟ್‌ನಲ್ಲಿ ಶಂಕರ್‌ ಮಿಶ್ರಾ

ಮಹಿಳೆಯೆ ಸ್ವತಃ ಸೀಟಿನಲ್ಲಿ ಮೂತ್ರ ವಿಸರ್ಜಿಸಿ, ನನ್ನ ಮೇಲೆ ಆರೋಪ ಮಾಡಿದ್ದಾರೆ: ಕೋರ್ಟ್‌ನಲ್ಲಿ ಶಂಕರ್‌ ಮಿಶ್ರಾ

- Advertisement -
- Advertisement -

ಏರ್ ಇಂಡಿಯಾ ವಿಮಾನದಲ್ಲಿ ವೃದ್ಧ ಸಹ-ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂದು ಆರೋಪಕ್ಕೊಳಗಾಗಿರುವ ಶಂಕರ್ ಮಿಶ್ರಾ, “ವೃದ್ಧ ಮಹಿಳೆ ಸ್ವತಃ ಅವರದೇ ಸೀಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ, ನನ್ನ ಮೇಲೆ ಆರೋಪ ಹೊರಿಸಿದ್ದಾರೆ” ಎಂದು ದೆಹಲಿಯ ಪಾಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಲಭಿಸಿದೆ.

ತಾನು ನಿರಪರಾಧಿ ಎಂದು ಮನವಿ ಮಾಡಿದ ಶಂಕರ್ ಮಿಶ್ರಾ, ತಾನು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಹಿಳೆ ತನ್ನ ಆರೋಗ್ಯದ ಕಾರಣದಿಂದ ಸ್ವತಃ ತನ್ನ ಸೀಟಿಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಮಹಿಳೆಯು 30 ವರ್ಷಗಳಿಂದ ಭರತನಾಟ್ಯ ನರ್ತಕಿಯಾಗಿದ್ದು, ಅವರಿಗೆ ಮೂತ್ರ ಅಸಂಯಮ ಸಹಜ” ಎಂದು ಶಂಕರ್ ಮಿಶ್ರಾ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಶಂಕರ್ ಮಿಶ್ರಾ ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಾಲಯ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ ಸಂದರ್ಭದಲ್ಲಿ ಈ ವಾದ ನಡೆದಿದೆ. ಕಳೆದ ವಾರ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಶಂಕರ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಲಾಗಿತ್ತು.

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿದ್ದ ಸಹ-ಪ್ರಯಾಣಿಕರಾಗಿದ್ದ ಮಹಿಳೆಯೊಬ್ಬರ ಮೇಲೆ ಶಂಕರ್‌‌ ಮಿಶ್ರಾ ಮೂತ್ರ ವಿಸರ್ಜಿಸಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ ನಂತರ ಅವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಲಾಯಿತು. ವಿಷಯ ಬೆಳಕಿಗೆ ಬಂದಾಗಿನಿಂದ ಅವರು ತಲೆಮರೆಸಿಕೊಂಡಿದ್ದರು.

ಮಹಿಳೆ ತನ್ನ ದೂರು ಸಲ್ಲಿಸಿ ವಿಮಾನ ಸಿದ್ದಬ್ಬಂದಿಯ ನಿಷ್ಕ್ರಿಯತೆಯನ್ನು ಎತ್ತಿತೋರಿಸಿದ್ದಾರೆ. ‘ಮೂತ್ರ ವಿಸರ್ಜನೆ’ ಘಟನೆಯನ್ನು ಗಮನಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಘಟನೆಯನ್ನು ನಿರ್ವಹಿಸಿದ ರೀತಿ ‘ವೃತ್ತಿಪರವಾಗಿಲ್ಲ’ ಎಂದು ಹೇಳಿದೆ.

ಈ ಮಧ್ಯೆ, ಶಂಕರ್‌‌ ಮಿಶ್ರಾ ಅವರ ಉದ್ಯೋಗದಾತರಾದ ವೆಲ್ಸ್ ಫಾರ್ಗೋ ಕಂಪನಿಯ ಉಪಾಧ್ಯಕ್ಷರಾಗಿ ಅವರ ಸೇವೆಗಳನ್ನು ಕೊನೆಗೊಳಿಸಿದೆ.

ಇದನ್ನೂ ಓದಿ: ‘ಮದ್ಯ ಖರೀದಿ ವಯಸ್ಸನ್ನು 21 ರಿಂದ 18ಕ್ಕೆ’ | ಕರಡು ಅಧಿಸೂಚನೆ ಹೊರಡಿಸಿದ ಬೊಮ್ಮಾಯಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read