Homeಮುಖಪುಟದಾಖಲೆ ಕುಸಿತ ಕಂಡ ಅದಾನಿ; ಸಾಲ ನೀಡಿರುವ ವಿವರ ಒದಗಿಸುವಂತೆ ಬ್ಯಾಂಕುಗಳಿಗೆ RBI ಸೂಚನೆ

ದಾಖಲೆ ಕುಸಿತ ಕಂಡ ಅದಾನಿ; ಸಾಲ ನೀಡಿರುವ ವಿವರ ಒದಗಿಸುವಂತೆ ಬ್ಯಾಂಕುಗಳಿಗೆ RBI ಸೂಚನೆ

- Advertisement -
- Advertisement -

ಗೌತಮ್ ಅದಾನಿ ಸಮೂಹವು ವಂಚನೆ, ಅವ್ಯವಹಾರ ಹಗರಣ ನಡೆಸಿದೆ ಎಂದು ಅಮೆರಿಕದ ಮೂಲದ ಹಿಂಡೆನ್‌ಬರ್ಗ್‌ ಸಂಸ್ಥೆ ವರದಿ ಬಿಡುಗಡೆ ಮಾಡಿದ ಪರಿಣಾಮ ಅದಾನಿ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ದಾಖಲೆಯ ಕುಸಿತ ಕಂಡಿವೆ. 100 ಬಿಲಿಯನ್ ಡಾಲರ್ ಅಂದರೆ 8.2 ಲಕ್ಷ ಕೋಟಿ ರೂಗಳನ್ನು ಈ ಒಂದು ವಾರದಲ್ಲಿ ಅದಾನಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೆ ಸ್ಥಳೀಯ ಬ್ಯಾಂಕ್‌ಗಳು ಅದಾನಿ ಸಮೂಹದ ಕಂಪನಿಗಳಿಗೆ ನೀಡಿರುವ ಸಾಲದ ವಿವರಗಳನ್ನು ತಿಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ ಎಂದು ಸರ್ಕಾರ ಮತ್ತು ಬ್ಯಾಂಕಿಂಗ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಇನ್ನು ಇಂದು ಸಹ ಅದಾನಿ ಎಂಟರ್‌ಪ್ರೈಸಸ್ 20% ನಷ್ಟು ಕುಸಿತ ಕಂಡಿದೆ. ಅದಾನಿ ಪವರ್‌ನ ಷೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಲೋವರ್ ಸರ್ಕ್ಯೂಟ್‌ನಲ್ಲಿ ಸಿಲುಕಿಕೊಂಡಿವೆ. ಅದಾನಿ ಪವರ್‌ನ ಮಾರುಕಟ್ಟೆ ಮೌಲ್ಯ 90,888 ಕೋಟಿ ರೂ.ಗೆ ಕುಸಿದಿದೆ. ಷೇರುಗಳು ಬಿಎಸ್‌ಇಯಲ್ಲಿ ಶೇ.5ರಷ್ಟು ಇಳಿಕೆ ಕಂಡಿವೆ.

ನಿನ್ನೆ ಅದಾನಿ ಎಂಟರ್‌ಪ್ರೈಸಸ್ ತನ್ನ ರೂ. 20,000 ಕೋಟಿ ಫಾಲೋ-ಆನ್ ಸಾರ್ವಜನಿಕ ಕೊಡುಗೆ (ಎಫ್‌ಪಿಒ) ರದ್ದುಗೊಳಿಸಿದೆ ಎಂದು ತಿಳಿಸಿದೆ. ಕಂಪನಿಯು ತನ್ನ ಎಫ್‌ಪಿಒ ಭಾಗವಾಗಿ ಪಡೆದ ಆದಾಯವನ್ನು ಮರುಪಾವತಿ ಮಾಡುತ್ತದೆ ಎಂದು ಹೇಳಿದೆ.

ಅಭೂತಪೂರ್ವ ಪರಿಸ್ಥಿತಿ ಮತ್ತು ಪ್ರಸ್ತುತ ಮಾರುಕಟ್ಟೆಯ ಏರಿಳಿತವನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ಪೂರ್ಣಗೊಂಡ ಎಫ್‌ಪಿಒ ವಹಿವಾಟನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದೆ.

ಬುಧವಾರೂ ಅದಾನಿ ಗ್ರೂಪ್ ಷೇರುಗಳು ಮತ್ತು ಬಾಂಡ್‌ಗಳ ಮೌಲ್ಯ ಕುಸಿತದ ಹಾದಿಯಲ್ಲಿ ಸಾಗಿತು. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು 28% ಮತ್ತು ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯವು 19% ಕುಸಿಯಿತು, ಇದು ಎರಡಕ್ಕೂ ದಾಖಲೆಯ ಕೆಟ್ಟ ದಿನವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ನಷ್ಟದಿಂದಾಗಿ ಭಾರತದ ನಂಬರ್ ಒನ್ ಸ್ಥಾನದಿಂದ ಅದಾನಿ ಕೆಳಗಿಳಿದಿದ್ದು, ಆ ಸ್ಥಾನಕ್ಕೆ ಮುಖೇಶ್ ಅಂಬಾನಿ ಏರಿದ್ದಾರೆ.

ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; ತನಿಖೆಗೆ ಆಗ್ರಹಿಸಿದ ವಿರೋಧ ಪಕ್ಷಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು

0
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ 2019ಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ ಓರ್ವ ಮುಸ್ಲಿಂ...