Homeದಲಿತ್ ಫೈಲ್ಸ್ಜಾತಿ ತಾರತಮ್ಯ ನಿಷೇಧಿಸಿ ಅಮೆರಿಕದ ಸಿಯಾಟಲ್‌ ಸಿಟಿ ಕೌನ್ಸಿಲ್‌ನಿಂದ ಮಹತ್ವದ ಸುಗ್ರೀವಾಜ್ಞೆ

ಜಾತಿ ತಾರತಮ್ಯ ನಿಷೇಧಿಸಿ ಅಮೆರಿಕದ ಸಿಯಾಟಲ್‌ ಸಿಟಿ ಕೌನ್ಸಿಲ್‌ನಿಂದ ಮಹತ್ವದ ಸುಗ್ರೀವಾಜ್ಞೆ

- Advertisement -
- Advertisement -

ಉತ್ತರ ಅಮೆರಿಕಾದಲ್ಲಿನ ಭಾರತೀಯ ಮೂಲದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ನಿರ್ಧಾರವನ್ನು ಸಿಯಾಟಲ್ ಸಿಟಿ ಕೌನ್ಸಿಲ್ ಮಂಗಳವಾರ ಕೈಗೊಂಡಿದೆ. ನಗರದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ಮಹತ್ವದ ಸುಗ್ರೀವಾಜ್ಞೆಯನ್ನು 6-1 ಮತಗಳಿಂದ ಮತ ಅಂತರದಲ್ಲಿ ಅಂಗೀಕರಿಸಲಾದೆ.

ನಗರಸಭೆ ಸದಸ್ಯರಾದ ಕ್ಷಮಾ ಸಾವಂತ್ ಅವರು ಜನವರಿ 24ರಂದು ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಿದ್ದರು. ಸಿಟಿ ಕೌನ್ಸಿಲ್‌ನಲ್ಲಿ ಸುಗ್ರೀವಾಜ್ಞೆಯನ್ನು ಪರಿಚಯಿಸಿದಾಗಿನಿಂದಲೂ ಇದಕ್ಕೆ ಅಮೆರಿಕ ಮತ್ತು ಭಾರತದಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿದೆ.

ಜನವರಿ 30ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸುಗ್ರೀವಾಜ್ಞೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. “ಯಾವುದೇ ರೂಪದಲ್ಲಿ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡುವ ಪ್ರಗತಿಪರ ಹೆಜ್ಜೆ ಇದಾಗಿದೆ” ಎಂದು ಬಣ್ಣಿಸಿದ್ದರು.

ಉತ್ತರ ಅಮೆರಿಕದ ಪ್ರಭಾವಿ ಸೌತ್ ಏಷ್ಯನ್ ಬಾರ್ ಅಸೋಸಿಯೇಷನ್ (SABA) ಸಹ 17 ಫೆಬ್ರವರಿ 2023 ರಂದು ಸುಗ್ರೀವಾಜ್ಞೆಗೆ ಬೆಂಬಲವನ್ನು ಸೂಚಿಸಿತು.

“ಇದು ಸಹಜವಾಗಿ, ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಎಲ್ಲಾ ಕಂಪನಿಗಳು, ಸರ್ಕಾರಿ ಕಚೇರಿಗಳು ತಮ್ಮ ನೀತಿಗಳಲ್ಲಿ ಜಾತಿಯ ಪ್ರಾತಿನಿಧ್ಯವನ್ನು ಹೊಂದಿರಬೇಕು, ಜಾತಿ ಸಂವೇದನೆಗೆ ತರಬೇತಿ ನಡೆಸಬೇಕು ಮತ್ತು ಯಾವುದೇ ಜಾತಿ ತಾರತಮ್ಯ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು” ಎಂದು ಜಾತಿ ತುಳಿತಕ್ಕೊಳಗಾದ ಸಮುದಾಯಗಳನ್ನು ಪ್ರತಿನಿಧಿಸುವ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ (ಎಐಸಿ) ಸದಸ್ಯ ಅನಿಲ್ ವಾಗ್ಡೆ (ಅಮೆರಿಕ) ತಿಳಿಸಿರುವುದಾಗಿ ‘ಸೌಂತ್‌ ಫಸ್ಟ್‌’ ಜಾಲತಾಣ ವರದಿ ಮಾಡಿದೆ.

ಸಿಯಾಟಲ್ ಇಂಡಿಯನ್-ಅಮೆರಿಕನ್ಸ್ (CSAI), ಸಮಾನತೆ ಲ್ಯಾಬ್ಸ್, ಟೆಕ್ಸಾಸ್‌ನ ಅಂಬೇಡ್ಕರ್ ಬೌದ್ಧರ ಸಂಘ, ಬೋಸ್ಟನ್ ಸ್ಟಡಿ ಗ್ರೂಪ್, ಅಂಬೇಡ್ಕರ್ ಕಿಂಗ್ಸ್ ಸ್ಟಡಿ ಸರ್ಕಲ್ ಮತ್ತು ಅಂಬೇಡ್ಕರ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ (AANA) ಜೊತೆಯಲ್ಲಿ ಎಐಸಿ ತಂಡವು ನಿರಂತರವಾಗಿ ಕೆಲಸ ಮಾಡಿದೆ. ಅದರ ಫಲವಾಗಿ ಸುಗ್ರಿವಾಜ್ಞೆ ಜಾರಿ ಸಾಧ್ಯವಾಗಿದೆ.

“ಈಗ ಕಾನೂನಿನ ಬಗ್ಗೆ ಅಜ್ಞಾನ ಹೊಂದಿರಬಾರದು. ಯಾವುದೇ ಕಂಪನಿಯು ಜಾತಿ ವಿಚಾರ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೇಮಕಾತಿಯಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಜಾತಿ ತಾರತಮ್ಯ ನಡೆಯುವುದಿಲ್ಲ ಎಂಬುದನ್ನು ಕಂಪನಿಗಳು ಖಚಿತಪಡಿಸಬೇಕು” ಎಂದಿದ್ದಾರೆ.

“ಪ್ರಬುದ್ಧ ಮೇಲ್ಜಾತಿಯ ಜನರೂ ಸೇರಿದಂತೆ ಸಿಖ್, ಮುಸ್ಲಿಂ, ಬೌದ್ಧರು ಮತ್ತು ಹಿಂದೂಗಳು ಈ ಸುಗ್ರೀವಾಜ್ಞೆಯನ್ನು ಬೆಂಬಲಿಸಿದ್ದಾರೆ” ಎಂದು ವಾಗ್ಡೆ ತಿಳಿಸಿದ್ದಾರೆ.

ಅಮೆರಿಕದಲ್ಲಿ ಜಾತಿ ತಾರತಮ್ಯ

ಅಮೆರಿಕದಂತಹ ದೇಶದಲ್ಲಿ ಭಾರತೀಯ ಮೂಲದ ದಲಿತರು, ಅಲ್ಲಿನ ಮೇಲ್ಜಾತಿಗಳಿಂದ ತಾರತಮ್ಯಗಳನ್ನು ಎದುರಿಸುತ್ತಿರುವ ಕುರಿತು ಹಲವಾರು ಪ್ರಕರಣಗಳು ವರದಿಯಾಗಿವೆ.

“ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದು ಹೇಳಿಕೊಂಡ ಉದ್ಯೋಗಿಗಳ ಒತ್ತಡಕ್ಕೆ ಮಣಿದ ಗೂಗಲ್ ಸಂಸ್ಥೆಯು, ಅಮೆರಿಕ ಮೂಲದ ದಲಿತ ಹೋರಾಟಗಾರ್ತಿ ತೇನ್ಮೋಳಿ ಸೌಂದರರಾಜನ್ ಅವರ ಭಾಷಣವನ್ನು ರದ್ದು ಮಾಡಿದ್ದ ಘಟನೆ ಕಳೆದ ವರ್ಷ ನಡೆದಿತ್ತು.

ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ತೇನ್ಮೋಳಿ ಅವರು ’ಹಿಂದೂ ಫೋಬಿಕ್’ ಮತ್ತು ’ಹಿಂದೂ ವಿರೋಧಿ’ ಆಗಿದ್ದಾರೆ ಎಂದಿದ್ದ ಗೂಗಲ್‌ನ ಕೆಲವು ಉದ್ಯೋಗಿಗಳು, ಕಂಪನಿಗೆ ಸಾಮೂಹಿಕ ಇಮೇಲ್‌ಗಳನ್ನು ಕಳುಹಿಸಿರುವ ವಿಷಯವನ್ನು ’ವಾಷಿಂಗ್ಟನ್ ಪೋಸ್ಟ್’ ಬಹಿರಂಗಪಡಿಸಿತ್ತು.

ಹಿಂದುತ್ವ ಪರ ಗುಂಪುಗಳ ಅಪಪ್ರಚಾರದಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂಬುದೂ ಬೆಳಕಿಗೆ ಬಂದಿತ್ತು. ಗೂಗಲ್‌ನ ಹಿರಿಯ ಮ್ಯಾನೇಜರ್ ತನುಜಾ ಗುಪ್ತಾ ಅವರು ತೇನ್ಮೋಳಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದೇ ಅಪರಾಧವಾಗಿಬಿಟ್ಟಿತ್ತು!

ತೇನ್ಮೋಳಿ ಅವರ ಭಾಷಣವನ್ನು ವಿರೋಧಿಸಿರುವ ಗೂಗಲ್ ಉದ್ಯೋಗಿಗಳು, “ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದುಬಿಟ್ಟದ್ದರು. 8,000 ಜನರಿರುವ ದಕ್ಷಿಣ ಏಷ್ಯಾದ ಉದ್ಯೋಗಿಗಳ ಗುಂಪಿಗೆ ಮೇಲ್ ಹೋಯಿತು ಎಂದು ಹೇಳಿತ್ತು ವಾಷಿಂಗ್‌ಟನ್ ಪೋಸ್ಟ್ ವರದಿ.

ಫೇಸ್‌ಬುಕ್ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ಸುಮಾರು 450,000 ಡಾಲರ್ ಪ್ಯಾಕೇಜ್‌ನೊಂದಿಗೆ ಸಿದ್ಧಾಂತ್ ಎಂಬ ದಲಿತ ಯುವಕ ಕೆಲಸಕ್ಕೆ ಸೇರುತ್ತಾರೆ. ಅಮೆರಿಕಕ್ಕೆ ತೆರಳಿದ ಅವರಿಗೆ
ಕಹಿ ಅನುಭವವಾಗುತ್ತದೆ. ದಲಿತರು ತಮ್ಮ ಹಿನ್ನೆಲೆಯನ್ನು ವ್ಯಕ್ತಪಡಿಸಲು ಹಿಂಜರೆಯುತ್ತಾರೆ. “ಗುರುತನ್ನು ಹೇಳಿಕೊಳ್ಳುವುದು ಅಪಾಯಕಾರಿ. ಹೆಸರುಗಳನ್ನು ಬದಲಿಸಿಕೊಂಡು ಬದುಕಬೇಕಾಗುತ್ತದೆ” ಎಂಬುದು ಸಿದ್ಧಾಂತ್ ಅನುಭವ.

ಇದನ್ನೂ ಓದಿರಿ: ತೇನ್ಮೋಳಿ ಬಾಷಣ ರದ್ದುಪಡಿಸಿದ ಗೂಗಲ್; ’ಸಾಫ್ಟ್’ ಜಾತಿವಾದಕ್ಕೆ ಮದ್ದೇನು?

ಸಿಸ್ಕೋ ಸಂಸ್ಥೆಯ ಪ್ರಕರಣ ಹೊರಬಂದ ಬಳಿಕ ಅನೇಕ ದಲಿತ ಟೆಕ್ಕಿಗಳು ಹೊರಬಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈಕ್ವಾಲಿಟಿ ಲ್ಯಾಬ್ಸ್ ಸಂಸ್ಥೆಯು (ದಕ್ಷಿಣ ಏಷ್ಯಾದ ನಾಗರಿಕ ಹಕ್ಕುಗಳ ಗುಂಪು) ಗೂಗಲ್, ನೆಟ್‌ಫ್ಲಿಕ್ಸ್, ಅಮೆಜಾನ್, ಫೇಸ್‌ಬುಕ್ ಮೊದಲಾದ ಸಂಸ್ಥೆಗಳ ನೌಕರರು ತಮ್ಮ ಸಹೋದ್ಯೋಗಿಗಳ ವಿರುದ್ಧ ಮಾಡಿದ 250ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ ಎಂದು wired.com ವರದಿ ಮಾಡಿದೆ.

“ಹೊರಗಿನವರಿಗೆ ಜಾತಿಯ ಕುಂದುಕೊರತೆಗಳನ್ನು ಗುರುತಿಸುವುದು ಕಷ್ಟ. ಜಾತಿಯು ಅದೃಶ್ಯವಾದದ್ದು ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿ” ಎಂದು ’ಕಮಿಂಗ್ ಔಟ್ ಆಸ್ ದಲಿತ್’ ಎಂಬ ಆತ್ಮಚರಿತ್ರೆ ಬರೆದ ಲೇಖಕಿ ಯಾಶಿಕಾ ದತ್ ಹೇಳುತ್ತಾರೆ.

“ಜಾತಿ ಅಗೋಚರವಾದದ್ದು, ನಮ್ಮ ಸುತ್ತಲೂ ಅನೇಕ ಸಂಕೇತಗಳು, ರಹಸ್ಯ ಭಾಷೆಗಳು ಅಸ್ತಿತ್ವದಲ್ಲಿವೆ. ವ್ಯಕ್ತಿಯ ಸರ್ ನೇಮ್, ಗ್ರಾಮದ ಬಗ್ಗೆ ಗಮನ ಹರಿಸುವುದೆಲ್ಲ ಜಾತಿಯನ್ನು ಹುಡುಕುವುದಕ್ಕಾಗಿಯಷ್ಟೇ. ಭುಜದ ಮೇಲೆ ತಟ್ಟುವುದು ಸ್ನೇಹಪೂರ್ವಕ ಶುಭಾಶಯವಾಗಿರಬಹುದು ಅಥವಾ ಬ್ರಾಹ್ಮಣರು ಧರಿಸುವ ಜನಿವಾರದ ಅನ್ವೇಷಣೆಯೂ ಆಗಿರಬಹುದು” ಎನ್ನುತ್ತದೆ wired.com ವರದಿ.

ಈ ನಿಟ್ಟಿನಲ್ಲಿ ಸಿಯಾಟಲ್ ಸಿಟಿ ಕೌನ್ಸಿಲ್ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಮಹತ್ವದ್ದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...