Homeಮುಖಪುಟಇದನ್ನು ಇಲ್ಲಿಗೆ ಮುಗಿಸಿಕೊಳ್ಳಿ, ಇಲ್ಲದಿದ್ದರೆ ಕೊಲೆಯಾಗುತ್ತೀರಿ.. ಉನ್ನಾವೋ ಕುಟುಂಬಕ್ಕೆ ಪೊಲೀಸರಿಂದಲೇ ಧಮಕಿ

ಇದನ್ನು ಇಲ್ಲಿಗೆ ಮುಗಿಸಿಕೊಳ್ಳಿ, ಇಲ್ಲದಿದ್ದರೆ ಕೊಲೆಯಾಗುತ್ತೀರಿ.. ಉನ್ನಾವೋ ಕುಟುಂಬಕ್ಕೆ ಪೊಲೀಸರಿಂದಲೇ ಧಮಕಿ

- Advertisement -
- Advertisement -

ಉನ್ನಾವೋ ಅತ್ಯಾಚಾರದ ಸಂತ್ರಸ್ತೆಯ ಪರವಾಗಿ ಆಕೆಯ ಚಿಕ್ಕಪ್ಪ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ, ಇದನ್ನು ಇಲ್ಲಿಗೆ ಮುಗಿಸಿಕೊಳ್ಳಿ, (ರಾಜಿಯಾಗಿಬಿಡಿ) ಇಲ್ಲದಿದ್ದರೆ ನಿಮ್ಮನ್ನು ಕೊಲ್ಲಬೇಕಾಗುತ್ತದೆ ಎಂದು ಉನ್ನಾವೋ ಸಂತ್ರಸ್ತ ಕುಟುಂಬಕ್ಕೆ ಪೊಲೀಸರು ಧಮಕಿ ಹಾಕಿದ್ದಾರು ಎಂದು ಸಂತ್ರಸ್ತೆಯ ಚಿಕ್ಕಪ್ಪ ದೂರಿದ್ದಾರೆ.

ಅಲ್ಲದೇ ಆತ ಜೈಲಿನಿಂದಲೇ “ನಿಮಗೆ ಬದುಕುವ ಆಸೆಯಿದ್ದರೆ ಕೋರ್ಟಿನಲ್ಲಿ ನಿಮ್ಮ ಹೇಳಿಕೆಗಳನ್ನು ವಾಪಸ್ ಪಡೆದುಕೊಳ್ಳಿ” ಎಂದು ಫೋನ್ ಮಾಡಿ ಧಮಕಿ ಹಾಕಿದ್ದ ಎಂತಲೂ ಆರೋಪಿಸಿದ್ದಾರೆ. ಮೊನ್ನೆ ನಡೆದ ಕಾರು ಅಪಘಾತವನ್ನು ಸಹ ಆತನ ಪೂರ್ವಯೋಜಿತವಾಗಿ ನಡೆಸಿರುವುದು ಎಂದು ಹರಿಹಾಯ್ದಿದ್ದಾರೆ.

ಕೇಸನ್ನು ವಾಪಸ್ ಪಡೆಯುವಂತೆ ಪದೇ ಪದೇ ಒತ್ತಾಯಿಸಲಾಗುತ್ತಿದೆ. ಪೊಲೀಸರು ಸಹ ಆತನ ಪರವಾಗಿದ್ದರು. ಈ ಕೇಸಿನಲ್ಲಿ ರಾಜಿಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಈ ಹಾದಿಯಲ್ಲಿ ಸಂತ್ರಸ್ತೆಯ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಈಗ ಕಾರು ಅಪಘಾತದಲ್ಲಿಯೂ ಇಬ್ಬರು ಮರಣ ಹೊಂದಿದ್ದಾರೆ, ಇದರಲ್ಲಿ ಇಡೀ ಬಿಜೆಪಿ ಪಕ್ಷವೇ ಆ ಅತ್ಯಾಚಾರ ಆರೋಪಿ ಶಾಸಕನ ಹಿಂದಿದೆ ಎಂದು ಸಂತ್ರಸ್ತೆಯ ಚಿಕ್ಕಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಉನ್ನಾವೋ ತೊರೆದು ದೆಹಲಿ ಸೇರಿಕೊಳ್ಳಿ, ಆದಷ್ಟು ಬೇಗ ರಾಜಿಯಾಗಿಬಿಡಿ, ಇಲ್ಲದಿದ್ದರೆ ನೀವು ಏನನ್ನು ಮಾಡಲಾಗುವುದಿಲ್ಲ ಹಾಗೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಕುಲದೀಪ್ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ಸಂಬಂಧಿ ಎನ್.ಡಿ.ಟಿ.ವಿ ತಿಳಿಸಿರುವುದಾಗಿ ವರದಿ ಮಾಡಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...