ಉರಿಗೌಡ ನಂಜೆಗೌಡ ಎನ್ನುವವರು ಟಿಪ್ಪು ಸುಲ್ತಾನ್‌ಅನ್ನು ಕೊಂದರು ಎನ್ನುವ ಹೊಸ ಕಥೆಯನ್ನು ಬಿಜೆಪಿ ಪದೇ ಪದೇ ಹೇಳುತ್ತಿದೆ. ಈ ವಿಚಾರದಲ್ಲಿ ಬಿಜೆಪಿಯವರು ಗೋಬೇಲ್ಸ್ ಥಿಯರಿ ಅಳವಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕ, ”ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೋಬೇಲ್ಸ್ ಥಿಯರಿಯನ್ನು ಅಳವಡಿಸಿಕೊಂಡಿರುವ ಬಿಜೆಪಿ, ಸುಳ್ಳು ಪಾತ್ರಗಳನ್ನು ಸೃಷ್ಟಿಸಿ ಒಕ್ಕಲಿಗ ಸಮುದಾಯಕ್ಕೆ ದೇಶದ ಸ್ವತಂತ್ರದ ವಿರುದ್ದ ಕೆಲಸ ಮಾಡಿದವರು ಎಂಬ ಹಣೆಪಟ್ಟಿ ಕಟ್ಟುತ್ತಿದೆ” ಎಂದು ವ್ಯಾಖ್ಯಾನಿಸಿದೆ.
ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೋಬೇಲ್ಸ್ ಥಿಯರಿಯನ್ನು ಅಳವಡಿಸಿಕೊಂಡಿರುವ @BJP4Karnataka ಸುಳ್ಳು ಪಾತ್ರಗಳನ್ನು ಸೃಷ್ಟಿಸಿ ಒಕ್ಕಲಿಗ ಸಮುದಾಯಕ್ಕೆ ದೇಶದ ಸ್ವತಂತ್ರದ ವಿರುದ್ದ ಕೆಲಸ ಮಾಡಿದವರು ಎಂಬ ಹಣೆಪಟ್ಟಿ ಕಟ್ಟುತ್ತಿದೆ.@CTRavi_BJP ಹೇಳುವ ಕಟ್ಟುಕತೆಗೆ ಸಾಕ್ಷಿ ಎಲ್ಲಿದೆ? pic.twitter.com/GmIqAbN5zy
— Karnataka Congress (@INCKarnataka) March 6, 2023
ಕಾಂಗ್ರೆಸ್ ಟ್ವೀಟ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಸಿಟಿ ರವಿಯವರು ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ”ಉರಿಗೌಡ, ನಂಜೇಗೌಡ ಒಕ್ಕಲಿಗರು ಎನ್ನುವುದು ಅವರಿಗೆ ಹೊಟ್ಟೆಉರಿನಾ? ಒಕ್ಕಲಿಗರಲ್ಲಿ ಶೌರ್ಯ ಪ್ರದರ್ಶನ ಮಾಡುವವರು ಇರಬಾರದಾ? ಟಿಪ್ಪು ಹುಲಿಯನ್ನು ಕೊಂದ ಎನ್ನುವುದು ಗಿಣಿಕಥೆ, ಹುಲಿ ಕೊಂದಿದ್ದನ್ನು ನೀವು ನೋಡಿದ್ದೀರಾ? ಟಿಪ್ಪುವನ್ನ ಉರಿಗೌಡ ನಂಜೇಗೌಡ ಕೊಂದಿರುವುದಕ್ಕೆ ಐತಿಹಾಸಿಕ ದಾಖಲೆಗಳೇ ಇವೆ. ಇವು ಹೊರಗಡೆ ಬಂದರೆ ಒಕ್ಕಲಿಗರಲ್ಲಿ ಸ್ವಾಭಿಮಾನ, ಶೈರ್ಯ ಉಕ್ಕುತ್ತದೆ ಹಾಗಾಗಿ ಅದನ್ನು ಅದಮಿಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ” ಎಂದು ಸಿಟಿ ರವಿ ಹೇಳಿದ್ದಾರೆ.
ಇದನ್ನೂ ಓದಿ: ‘ಉರಿಗೌಡ, ನಂಜೇಗೌಡ’ರು ಜೀವಿಸಿದ್ದ ಯಾವುದೇ ಕುರುಹು ಇಲ್ಲ: ಆದರೂ ಸುಳ್ಳು ಹೇಳುತ್ತಿರುವ ಬಿಜೆಪಿ
”ಟಿಪ್ಪುವನ್ನು ಕೊಂದವರು ಉರಿಗೌಡ ಮತ್ತು ದೊಡ್ಡ ನಂಜೇಗೌಡ” ಎಂಬ ಸುಳ್ಳು ಕಥೆಯನ್ನು ಹುಟ್ಟಿದ್ದು ವಾಟ್ಸಾಪ್ ಯುನಿವರ್ಸಿಟಿಯಲ್ಲಿ, ಬಿಜೆಪಿ ಹಾಗೂ ಅದರ ಬೆಂಬಲಿಗರು ಅದನ್ನೇ ಪ್ರತಿಪಾದಿಸತೊಡಗಿದ್ದಾರೆ. ಈ ಕಥೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮುನ್ನೆಲೆಗೆ ತಂದರು. ಆನಂತರ ಕೆಲವು ಬಿಜೆಪಿ ನಾಯಕರು ಹಾಗೂ ಅವರ ಬೆಂಬಲಿಗರು ಅದೇ ನಿಜವೇನೋ ಎನ್ನುವಂತೆ ಪದೇ ಪದೇ ಹೇಳಲು ಶುರು ಮಾಡಿದ್ದಾರೆ.
ಈ ಸುಳ್ಳು ಕಥೆಯನ್ನು ಬಿಜೆಪಿಯವರು ಪದೇ ಪದೇ ಹೇಳುವ ಮೂಲಕ ಎಲ್ಲರಿಗೂ ಅದೇ ಸತ್ಯ ಇರಬಹುದು ಎನ್ನುವಂತೆ ಮಾಡುತ್ತಿದ್ದಾರೆ. ಇದನ್ನು ಗೋಬೇಲ್ಸ್ ಥಿಯರಿ ಎಂದು ಹೇಳುತ್ತಾರೆ. ಆದರೆ ಈ ಸುಳ್ಳಿನ ಕಥೆಯ ಮೂಲಕ ಬಿಜೆಪಿಯವರು ಒಕ್ಕಲಿಗರನ್ನು ಮುಸ್ಲಿಂ ವಿರುದ್ಧ ನಿಲ್ಲಿಸುವುದು ಮಾತ್ರವಲ್ಲದೇ, ಒಕ್ಕಲಿಗರು ಬ್ರಿಟಿಷರ ಪರ ಇದ್ದರೆಂದು ಸುಳ್ಳನ್ನು ಪ್ರತಿಪಾದಿಸುತ್ತ, ದೇಶದ ಸ್ವತಂತ್ರದ ವಿರುದ್ದ ಕೆಲಸ ಮಾಡಿದವರು ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ನಾಯಕರು ಚುನಾವಣಾ ಉದ್ದೇಶದಿಂದ ಇಂತಹದ್ದೊಂದು ಸುಳ್ಳು ಕಥೆಯ ಮೂಲಕ ಒಕ್ಕಲಿಗರ ಮತ ಸೆಳೆಯಲು ಮುಂದಾಗಿರಬಹುದು. ಆದರೆ, ಒಕ್ಕಲಿಗರು ಈ ಸುಳ್ಳು ಕಥೆ ಬಗ್ಗೆ ಬಹಳ ಗಂಭಿರವಾಗಿ ಯೋಚಿಸಬೇಕಾಗಿದೆ. ಏಕೆಂದರೆ ಈ ಸುಳ್ಳು ಕಥೆಯಲ್ಲಿ ಟಿಪ್ಪುವನ್ನು ಒಕ್ಕಲಿಗರು ಕೊಂದರು ಎನ್ನುವುದಾದರೆ, ಒಕ್ಕಲಿಗರು ಈ ದೇಶದ ವಿರುದ್ಧ ಕೆಲಸ ಮಾಡಿದವರು, ಬ್ರಿಟಿಷರ ಪರವಾಗಿ ಕೆಲಸ ಮಾಡಿದವರು ಎಂದಾಗುತ್ತದೆ. ಬಿಜೆಪಿಯವರು ಅವಸರದಲ್ಲಿ ಕಟ್ಟಿದ ಸುಳ್ಳಿನ ಕಥೆಯಲ್ಲಿ ಒಕ್ಕಲಿಗರನ್ನು ಹೀರೋ ಮಾಡಲು ಹೋಗಿ ದೇಶದ್ರೋಹಿಗಳು ಎನ್ನುವಂತೆ ತೋರಿಸಲಾಗುತ್ತಿದೆ. ಈ ಸುಳ್ಳು ಕಥೆಯ ಬಗ್ಗೆ ಒಕ್ಕಲಿಗ ಸಮುದಾಯದ ನಾಯಕರು ಮಾತನಾಡುವುದು ಅತ್ಯವಶ್ಯಕವಾಗಿದೆ.



Yes article is right