‘ನಮ್ಮ ತಪ್ಪಿನಿಂದ ಪುಲ್ವಾಮ ದಾಳಿ ಸಂಭವಿಸಿತು’ ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರು ಮತ್ತು ಬಿಜೆಪಿ ಮುಖಂಡರಾದ ಸತ್ಯಪಾಲ್ ಮಲಿಕ್ ಹೇಳಿಕೆಗೆ ಪ್ರಧಾನಿ ಮೋದಿ ಉತ್ತರಿಸುವಂತೆ ಪ್ರತಿಪಕ್ಷಗಳ ಒತ್ತಾಯಿಸಿವೆ. ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ ಮತ್ತು ಆಪ್ ಪಕ್ಷಗಳು ಈ ಕುರಿತು ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ.
“ನಾಲ್ಕು ವರ್ಷಗಳ ಅವಧಿಯ ನಂತರ, ಪುಲ್ವಾಮ ಭಯೋತ್ಪಾದಕ ದಾಳಿಯ ವಿಚಾರಣೆ ಎಲ್ಲಿಗೆ ತಲುಪಿದೆ? ಎನ್ಎಸ್ಎ ಮುಖ್ಯಸ್ಥರಾದ ಅಜಿತ್ ದೋವಲ್ ಮತ್ತು ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಉತ್ತರದಾಯಿತ್ವವನ್ನು ಎಲ್ಲಿ, ಯಾವಾಗ, ಹೇಗೆ ಮತ್ತು ಯಾರು ಸರಿಪಡಿಸುತ್ತಾರೆ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯ ಶ್ರೀನಾಟೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಜೈರಾಂ ರಮೇಶ್ ಮತ್ತು ಪವನ್ ಖೇರಾರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಜಮ್ಮು ಕಾಶ್ಮೀರಕ್ಕೆ 300 ಕೆಜಿ ಆರ್‌ಡಿಎಕ್ಸ್ ಹೇಗೆ ಬಂದಿತು? ಅಲ್ಲಿ ಸಾಕಷ್ಟು ಗುಪ್ತಚರ ಮಾಹಿತಿ ಇತ್ತು, ಜೈಶ್‌ನಿಂದ ಬೆದರಿಕೆ ಇತ್ತು, ಆದರೂ ಸೈನಿಕರನ್ನು ರಸ್ತೆಯಿಂದ ಏಕೆ ಕರೆದೊಯ್ಯಲಾಯಿತು? ಯೋಧರಿಗೆ ವಿಮಾನಗಳನ್ನು ಏಕೆ ನೀಡಲಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಜೈರಾಂ ರಮೇಶ್ ಮಾತನಾಡಿ, “ಸತ್ಯಪಾಲ್ ಮಲಿಕ್ ಅವರು 4 ರಾಜ್ಯಗಳ ಗವರ್ನರ್ ಆಗಿರುವುದರಿಂದ, ಅವರ ಈ ಆರೋಪಗಳು ಗಂಭೀರವಾಗಿವೆ. ಅವರು ಹಿರಿಯ ನಾಯಕರಾಗಿದ್ದು, ಇಂದಿಗೂ ಬಿಜೆಪಿ ಸದಸ್ಯರಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಪ್ರತಿಯೊಂದು ಪ್ರಮುಖ ವಿಷಯದಲ್ಲೂ ಮೌನ ತಂತ್ರವನ್ನು ಅನುಸರಿಸುತ್ತಿದೆ. ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಈ ಸರ್ಕಾರವು ಕನಿಷ್ಟ ಆಡಳಿತ ಮತ್ತು ಗರಿಷ್ಠ ಮೌನದ ತತ್ವವನ್ನು ನಂಬುತ್ತದೆ” ಎಂದು ಅವರು ಟೀಕಿಸಿದ್ದಾರೆ.
“ಮೋದಿಜೀಯವರಿಗೆ ಭ್ರಷ್ಟಾಚಾರದಿಂದ ಹೆಚ್ಚೆನೂ ಸಮಸ್ಯೆಯಿಲ್ಲ ಎಂದು ಸತ್ಯಪಾಲ್ ಮಲಿಕ್ ಜೀ ಹೇಳಿದ್ದಾರೆ. ನಾನು ಇದನ್ನು ಹೇಳುತ್ತಿಲ್ಲ, ಆದರೆ ಅವರದೇ ಪಕ್ಷದ ಮುಖಂಡರು ಹೇಳಿದ್ದಾರೆ. ಅದೇ ಸಂದರ್ಶನದಲ್ಲಿ ಬಿಜೆಪಿಯ ಕೆಲವು ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಹಣ ವಸೂಲಿ ಮಾಡುತ್ತಾರೆ ಎಂದಿದ್ದಾರೆ. ಅವರು ಎಲ್ಲಾ ಹಣವನ್ನು ತಮ್ಮಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೆ ಮೇಲಿನವರಿಗೆ ಹಣವನ್ನು ಕಳುಹಿಸುತ್ತಾರೆ ಮತ್ತು ಅಲ್ಲಿಂದ ತಮ್ಮ ಸ್ನೇಹಿತರ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾರೆ” ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
“ಈಗ ರಾಷ್ಟ್ರಪತಿಗಳ ಅಧಿಕೃತ ಅಪಾಯಿಂಟ್‌ಮೆಂಟ್‌ಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆ ಮತ್ತು ಹುಚ್ಚಾಟಿಕೆಯ ಪ್ರಕಾರ ನಿಗದಿಪಡಿಸಲಾಗಿದೆ ಎಂದು ನಮಗೆ ತಿಳಿದಿದೆ! ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ! ” ಎಂದು ಟಿಎಂಸಿ ಪಕ್ಷ ಟ್ವೀಟ್ ಮಾಡಿದೆ.
We already know that @BJP4India misuses Central Agencies to serve its interests.
Now, we learn that even the President's official appointments are fixed as per PM @narendramodi's will & whim!
India’s Democracy is endangered! https://t.co/a8cjn5TZXA
— All India Trinamool Congress (@AITCofficial) April 15, 2023
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಟ್ವೀಟ್ ಮಾಡಿ, “ಆರೋಪಗಳು ಗಂಭೀರವಾಗಿದೆ ಮತ್ತು ಅವು ನಿಜವಾಗಿದ್ದರೆ, ಮೋದಿಯವರ ಅಡಿಯಲ್ಲಿ ರಾಷ್ಟ್ರೀಯ ಭದ್ರತೆ, ಭ್ರಷ್ಟಾಚಾರ ಮತ್ತು ಒಕ್ಕೂಟದ ತತ್ವದ ಸ್ಥಿತಿ ಅಪಾಯದಲ್ಲಿದೆ.. ಕುದುರೆಯ ಬಾಯಿಯಿಂದ ಬರುವ ಈ ಅತ್ಯಂತ ನಿರ್ಣಾಯಕ ಆರೋಪಗಳನ್ನು ಸ್ವತಂತ್ರವಾಗಿ ಮತ್ತು ನ್ಯಾಯಯುತವಾಗಿ ತನಿಖೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
Allegations by former J&K Governor Satyapal Malik are serious, and if true, are a damning indictment of the state of national security, corruption & federalism under Modi.
These extremely critical allegations coming from the horse’s mouth must be probed independently and fairly. pic.twitter.com/B5v3T5BuzR
— D. Raja (@ComradeDRaja) April 15, 2023
ಸಮಾಜವಾದಿ ಪಕ್ಷದ ವಕ್ತಾರ ಮನೋಜ್ ಸಿಂಗ್ ಕಾಕಾ ಪುಲ್ವಾಮಾ ಘಟನೆಯನ್ನು ತಡೆಯುವಲ್ಲಿ ಮೋದಿ ಸರ್ಕಾರದ ಅಸಮರ್ಥತೆಯನ್ನು ಉಲ್ಲೇಖಿಸಿದ್ದಾರೆ. “ಸಿಆರ್‌ಪಿಎಫ್‌ನ ವೀರ ಸೈನಿಕರು ವಿಮಾನವನ್ನು ಕೇಳಿದಾಗ ಅದನ್ನು ಏಕೆ ನೀಡಲಿಲ್ಲ? ನಮ್ಮ ಸೈನಿಕರು ಹುತಾತ್ಮತೆಗೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
CRPF के वीर जवानों जब एयरक्राफ़्ट माँगा तो क्यों नहीं दिया गया ?
हमारे शहीदों के शहादत का ज़िम्मेदार कौन ? pic.twitter.com/56Di7MK0qs— Manoj KAKA (@ManojSinghKAKA) April 14, 2023
ಇದನ್ನೂ ಓದಿ: ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಬಿಜೆಪಿ ಕೆಟ್ಟದಾಗಿ ಸೋಲಲಿದೆ: ಸತ್ಯಪಾಲ್ ಮಲಿಕ್


