Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

- Advertisement -
- Advertisement -

ಪ್ರಿನ್ಸ್ ಮಾತನಾಡುವುದನ್ನ ನಿಲ್ಲಿಸಿದಾಗ ಎಲ್ಲರೂ ಅವನ ಕಡೆಗೆ ಉಲ್ಲಾಸದಿಂದ ಎವೆಯಿಕ್ಕದೇ ನೋಡುತ್ತಿದ್ದರು. ಅಗ್ಲಾಯ ಕೂಡ; ಎಲ್ಲರಿಗಿಂತ ಹೆಚ್ಚು ಸಂತೋಷದಿಂದಿರುವಂತೆ ಕಂಡವಳು ಅವರ ತಾಯಿ ಲಿಜಬೆಥ ಪ್ರೊಕೊಫಿಯೆವ್ನ.

“ಚೆನ್ನಾಗಿದೆ!” ಅವಳು ಕೂಗಿ ಹೇಳಿದಳು, “’ಅವನೀಗ ತನ್ನೆಲ್ಲಾ ಕೌಶಲ್ಯವನ್ನು ಪ್ರದರ್ಶಿಸುವಂತೆ’ ನಾವು ಮಾಡಿದ್ದೇವೆ, ಪ್ರತೀಕಾರದಿಂದ! ನನ್ನ ಪ್ರೀತಿಯ ಮಕ್ಕಳೇ, ಈ ಯುವಕನನ್ನು ಒಬ್ಬ ಬಡವ ಮತ್ತು ಆಶ್ರಯಕ್ಕಾಗಿ ಬಂದ ಕೆಲಸಕ್ಕೆ ಬಾರದವನು ಮತ್ತು ಅವನನ್ನು ಪೋಷಿಸಬೇಕು ಎಂದು ನೀವೆಲ್ಲಾ ಆತನ ಬಗ್ಗೆ ಕರುಣೆ ತೋರಿಸಲು ಕಲ್ಪಿಸಿಕೊಳ್ಳುತ್ತಿದ್ದಿರಿ ಎಂದು ನನಗನ್ನಿಸುತ್ತಿದೆ. ನಾವೆಲ್ಲರೂ ಎಂತಹ ಮೂರ್ಖರುಗಳಾದೆವು, ಮತ್ತು ನಿಮ್ಮ ತಂದೆ ಎಂಥಹ ವಿಶೇಷವಾದ ದೊಡ್ಡ ಮೂರ್ಖ! ಸರಿಯಾಗಿ ಮಾಡಿದೆ ಪ್ರಿನ್ಸ್! ಜನರಲ್ ನಿಜವಾಗಲೂ ಪರೀಕ್ಷೆಗೆ ಒಳಪಡಿಸಿ ನಿನ್ನ ಬಗ್ಗೆ ಪರಾಮರ್ಶಿಸು ಎಂದು ಹೇಳಿದ್ದ. ನೀನು ನನ್ನ ಮುಖ ಓದಿ ನನ್ನ ಬಗ್ಗೆ ಹೇಳಿದ್ದೆಲ್ಲವೂ ಅಕ್ಷರಶಃ ನಿಜ. ನಾನು ಮಗುವಿನ ರೀತಿಯೇ, ಅದು ನನಗೆ ಗೊತ್ತು. ನೀನು ಹೇಳುವುದಕ್ಕಿಂತ ಬಹಳ ಮೊದಲೇ ಅದು ನನಗೆ ಅರಿವಾಗಿತ್ತು; ನನ್ನ ಚಿಂತನೆಗಳನ್ನೇ ನೀನು ವ್ಯಕ್ತಪಡಿಸಿದ್ದೀಯ. ನಿನ್ನ ಸ್ವಭಾವ ಮತ್ತು ನನ್ನ ಸ್ವಭಾವ ಬಹಳಷ್ಟು ಒಂದೇ ಇದೆ ಎಂದು ನನಗನ್ನಿಸುತ್ತದೆ ಮತ್ತು ಅದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನಾವುಗಳು ನೀರಿನ ಎರಡು ಹನಿಗಳಂತೆ, ನೀನೊಬ್ಬ ಗಂಡಸು ಮತ್ತು ನಾನೊಬ್ಬಳು ಹೆಂಗಸು ಅನ್ನುವುದನ್ನು ಬಿಟ್ಟರೆ, ಮತ್ತು ನಾನು ಸ್ವಿಟ್ಜರ್ಲೆಂಡಿಗೆ ಹೋಗಿಲ್ಲ, ನೀನು ಹೋಗಿದ್ದೀಯ ಮತ್ತು ನಮ್ಮಿಬ್ಬರಲ್ಲಿನ ವ್ಯತ್ಯಾಸ ಅಷ್ಟೇ.”

“ಆತುರ ಪಡಬೇಡ ಅಮ್ಮ, ಪ್ರಿನ್ಸ್ ಹೇಳುತ್ತಿರುವುದು ಅವನ ಸರಳತೆಯ ಹಿಂದೆ ಒಂದು ಉದ್ದೇಶ ಇದೆ ಎಂದು,” ಅಗ್ಲಾಯ ಹೇಳಿದಳು.

“ಹೌದು, ಹೌದು, ಅವನಿಗೆ ಅದು ಇದೆ,” ಮಿಕ್ಕವರೆಲ್ಲರೂ ನಗುತ್ತಾ ಹೇಳಿದರು.

“ಓ ಪುನಃ ಅವನನ್ನು ಪರಿಹಾಸ್ಯ ಮಾಡಲು ಶುರುಮಾಡಬೇಡಿ,” ತಾಯಿ ಹೇಳಿದಳು. “ನಿಮ್ಮೆಲ್ಲರಲ್ಲೂ ಒಟ್ಟಿಗೇ ಇರುವ ಬುದ್ಧಿಶಕ್ತಿಯು ಅವನೊಬ್ಬನಲ್ಲೇ ಇದೆ. ಮುಂದೆ ನೋಡೋಣ. ನೀನು ಅಗ್ಲಾಯಳ ಬಗ್ಗೆ ಮಾತ್ರ ಏನನ್ನೂ ಹೇಳಲಿಲ್ಲ, ಪ್ರಿನ್ಸ್. ಅಗ್ಲಾಯ ಮತ್ತು ನಾನು, ಇಬ್ಬರೂ ನೀನು ಹೇಳುವುದನ್ನ ಕೇಳಲು ಕಾತುರರಾಗಿದ್ದೇವೆ.”

“ಸದ್ಯಕ್ಕೆ ನನಗೆ ಏನನ್ನೂ ಹೇಳಲಾಗುತ್ತಿಲ್ಲ. ನಂತರ ನಿಮಗೆ ಏನಾದರೂ ಹೇಳುತ್ತೇನೆ.”

“ಯಾಕೆ, ಅವಳ ಮುಖ ಸಾಕಷ್ಟು ಸ್ಪಷ್ಟವಾಗಿದೆ, ಹೌದೊ ಅಲ್ಲವೋ?”

“ಖಂಡಿತ ಹೌದು, ನೀನು ಬಹಳ ಸುಂದರಿ ಅಗ್ಲಾಯ ಇವಾನೊವ್ನ, ಎಷ್ಟು ಸುಂದರಿ ಎಂದರೆ ಯಾರಿಗೇ ಆದರೂ ನಿನ್ನ ಕಡೆ ನೋಡಲೂ ಹೆದರಿಕೆಯಾಗುತ್ತದೆ.”

“ಅಷ್ಟೇನ? ಅವಳ ಗುಣಗಳ ಬಗ್ಗೆ ಏನು ಹೇಳುವುದಿಲ್ಲವೇ?” ಮೇಡಮ್ ಎಪಾಂಚಿನ್ ಒತ್ತಾಯಿಸಿದಳು.

“ಆ ರೀತಿಯ ಸೌಂದರ್ಯದಿಂದ ಕೂಡಿದ ಮುಖದ ಬಗ್ಗೆ ತಕ್ಷಣ ತೀರ್ಮಾನಿಸುವುದು ಕಷ್ಟಕರ. ನನ್ನ ಅಭಿಪ್ರಾಯವನ್ನಿನ್ನೂ ನಾನು ಕಲ್ಪಿಸಿಕೊಂಡಿಲ್ಲ. ಸೌಂದರ್ಯ ಒಂದು ಒಗಟಿನಂತೆಯೇ.”

“ಅದರ ಅರ್ಥವೆಂದರೆ ಅಗ್ಲಾಯಳ ಬಗ್ಗೆಗಿನ ಒಂದು ಒಗಟನ್ನು ನೀನು ಬಿಡಿಸಲು ಹೊರಟಿದ್ದೀಯ ಎಂದು!” ಅಡಲೈಡ ಹೇಳಿದಳು. “ಅದನ್ನ ಊಹಿಸು ಅಗ್ಲಾಯ! ಆದರೆ ಅವಳು ಬಹಳ ಸುಂದರಿ, ಹೌದಲ್ಲವೊ ಪ್ರಿನ್ಸ್?”

“ಅತ್ಯಂತ ಅದ್ಭುತವಾಗಿ ಅದು ಹೌದು,” ಅಗ್ಲಾಯ ಕಡೆಗೆ ಮೆಚ್ಚುಗೆಯಿಂದ ನೋಡುತ್ತಾ ಭಾವುಕತೆಯಿಂದ ಪ್ರಿನ್ಸ್ ಹೇಳಿದ. “ಹತ್ತಿರಹತ್ತಿರ ನಸ್ಟಾಸಿಯ ಫಿಲಿಪೊವ್ನಳಷ್ಟೇ ಸುಂದರಿಯಾಗಿದ್ದಾಳೆ. ಆದರೆ ಇವಳ ಸೌಂದರ್ಯವು ಸಾಕಷ್ಟು ಬೇರೇ ಬಗೆಯದ್ದು.”

ಎಲ್ಲರೂ ಆಶ್ಚರ್ಯಚಕಿತರಾಗಿ ಪರಸ್ಪರ ತಮ್ಮ ನೋಟಗಳನ್ನ ಬದಲಾಯಿಸಿಕೊಂಡರು.

“ಸುಂದರವಾಗಿರುವುದು ಯಾರಷ್ಟು?” ಮೇಡಮ್ ಎಪಾಂಚಿನ್ ಕೇಳಿದಳು. “ನಸ್ಟಾಸಿಯ ಫಿಲಿಪೊವ್ನಳೊಷ್ಟು, ನೀನು ನಸ್ಟಾಸಿಯ  ಫಿಲಿಪೊವ್ನಳನ್ನು ಎಲ್ಲಿ ನೋಡಿದ್ದೀಯ? ಯಾವ ನಸ್ಟಾಸಿಯ ಫಿಲಿಪೊವ್ನ?”

“ಗವ್ರಿಲ ಅರ್ಡಲಿಯೊನೊವಿಚ್ ಅವಳ ಭಾವಚಿತ್ರವನ್ನ ಈಗ ತಾನೆ ಜನರಲ್‌ಗೆ ತೋರಿಸಿದ.”

“ಅದು ಹೇಗೆ? ಅವನು ಆ ಭಾವಚಿತ್ರವನ್ನ ನನ್ನ ಗಂಡನಿಗೋಸ್ಕರ ತೆಗೆದುಕೊಂಡು ಬಂದನೇ?”

“ಬರೀ ತೋರಿಸುವುದಕ್ಕೆ ಅಷ್ಟೆ. ನಸ್ಟಾಸಿಯಾ ಫಿಲಿಪೊವ್ನ ಗವ್ರಿಲ ಅರ್ಡಲಿಯೊವಿಚ್‌ಗೆ ಇವತ್ತು ಕೊಟ್ಟಳು, ಮತ್ತು ಅವನು ಅದನ್ನು ಜನರಲ್‌ಗೆ ತೋರಿಸಲು ತೆಗೆದುಕೊಂಡು ಬಂದ.”

“ನಾನೀಗ ಅದನ್ನ ನೋಡಲೇಬೇಕು!” ಮೇಡಮ್ ಎಪಾಂಚಿನ್ ಕೂಗಿಕೊಂಡಳು, “ಆ ಭಾವಚಿತ್ರ ಈಗ ಎಲ್ಲಿದೆ? ಅವಳು ಅವನಿಗೆ ಕೊಟ್ಟಿದ್ದರೆ ಅದು ಅವನ ಬಳಿ ಇರಬೇಕು; ಅವನಿನ್ನೂ ಓದುವ ಕೋಣೆಯಲ್ಲಿದ್ದಾನೆ. ಅವನು ಬುಧವಾರದಂದು ನಾಲ್ಕು ಗಂಟೆಗೆ ಮುಂಚೆ ಮನೆಗೆ ಹೋಗುವುದಿಲ್ಲ. ತಕ್ಷಣ ಗವ್ರಿಲ ಅರ್ಡಲಿಯೊನೊವಿಚ್‌ನನ್ನು ಬರಲು ಹೇಳಿ ಕಳುಹಿಸಿ. ಬೇಡಬೇಡ, ನನಗೇನೂ ಅವನನ್ನು ನೋಡುವ ಹಂಬಲ ಅಷ್ಟೊಂದಿಲ್ಲ. ಇಲ್ಲಿ ನೋಡು ಪ್ರಿನ್ಸ್, ಪ್ರೀತಿಯ ಪ್ರಿನ್ಸ್, ದಯಮಾಡಿ ಒಂದು ಕೆಲಸ ಮಾಡುತ್ತೀಯ? ಸುಮ್ಮನೇ ಓದುವ ಕೋಣೆಯೊಳಗೆ ಹೋಗಿ ಈ ಭಾವಚಿತ್ರವನ್ನ ತೆಗೆದುಕೊಂಡು ಬಾ! ನಾವು ಅದನ್ನ ನೋಡಬೇಕೆಂದು ಹೇಳು. ನನಗೋಸ್ಕರ ದಯವಿಟ್ಟು ಇದನ್ನು ಮಾಡುತ್ತೀಯ, ನನಗೋಸ್ಕರ?”

“ಅವನು ಒಳ್ಳೆಯ ಮನುಷ್ಯ, ಆದರೆ ಸ್ವಲ್ಪ ಜಾಸ್ತಿಯೇ ಸರಳತೆಯಿಂದ ಕೂಡಿದ ಮನುಷ್ಯ,” ಪ್ರಿನ್ಸ್ ಕೋಣೆಯಿಂದ ಆಚೆ ಹೋಗುತ್ತಿದ್ದಂತೆ ಅಡಲೈಡ ಪ್ರಿನ್ಸ್ ಬಗ್ಗೆ ಹೇಳಿದಳು.

“ಖಂಡಿತವಾಗಿಯೂ ಹೌದು,” ಅಲೆಕ್ಸಾಂಡ್ರ ಹೇಳಿದಳು; “ಕೆಲವು ಬಾರಿ ನಗೆಪಾಟಲಿಗೀಡಾಗುವಷ್ಟು.”

ಅವರಲ್ಲಿ ಯಾರೊಬ್ಬರೂ ಅವಳ ಸಂಪೂರ್ಣವಾದ ಅನಿಸಿಕೆಗಳಿಗೆ ತಮಗೇನನ್ನಿಸುತ್ತಿದೆಯೆಂಬುದನ್ನು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-2)

“ಅವನು ನಮ್ಮಗಳ ಮುಖಗಳನ್ನು ನೋಡಿ ಹೇಳಿದ್ದೆಲ್ಲಾ ಕರಾರುವಾಕ್ಕಾಗಿತ್ತು.” ಅಗ್ಲಾಯ ಹೇಳಿದಳು. “ಅವನು ನಮ್ಮೆಲ್ಲರ ಬಗ್ಗೆ, ಜೊತೆಗೆ ಅಮ್ಮನನ್ನೂ ಸೇರಿದಂತೆ ಚೆನ್ನಾಗಿ ಮುಖಸ್ತುತಿ ಮಾಡಿದ.”

“ಅರ್ಥವಿಲ್ಲದ ಮಾತು!” ಮೇಡಮ್ ಎಪಾಂಚಿನ್ ಕೂಗಿ ಹೇಳದಳು. “ಅವನು ನನ್ನ ಮುಖಸ್ತುತಿಯನ್ನೇನೂ ಮಾಡಲಿಲ್ಲ. ಅವನು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನ, ನನ್ನನ್ನು ಅವನು ಹೊಗಳಿದ ಎಂದು ನಾನೇ ಅಂದುಕೊಂಡೆ. ನನ್ನ ಪ್ರಕಾರ ಅವನಿಗಿಂತಲೂ ನೀನು ಹೆಚ್ಚು ಮೂರ್ಖಳು. ಅವನೊಬ್ಬ ಖಂಡಿತವಾಗಿಯೂ ಸರಳ ವ್ಯಕ್ತಿ, ನನ್ನ ಹಾಗೆಯೇ ಅವನು ಹೆಚ್ಚು ತಿಳಿದುಕೊಂದಿದ್ದಾನೆ.”

ಓದುವ ಕೋಣೆಯೊಳಗಡೆಗೆ ಕಾಲಿಡುತ್ತಾ ಪ್ರಿನ್ಸ್, “ಭಾವಚಿತ್ರದ ಬಗ್ಗೆ ಮಾತನಾಡಿ ನಾನೆಂತಹ ಮೂರ್ಖತನದ ಕೆಲಸಮಾಡಿದೆ,” ಎಂದು ತನ್ನ ಹೃದಯದಲ್ಲಿ ಪಾಪಪ್ರಜ್ಞೆಯ ಭಾವನೆಯನ್ನ ಹೊತ್ತಿಕೊಂಡು ಆಲೋಚಿಸಿದ. “ಮತ್ತಾದರೂ ಬಹುಶಃ ನಾನು ಸರಿಯಾದದ್ದನ್ನೇ ಮಾಡಿದೆನೇನೊ.” ಅವನಲ್ಲಿ ಒಂದು ವಿಚಾರ ಇತ್ತು, ಇನ್ನೂ ರೂಪತಾಳದ ವಿಚಾರ, ಆದರೆ ಅದೊಂದು ವಿಚಿತ್ರವಾದ ವಿಚಾರ.

ಗವ್ರಿಲ ಅರ್ಡಲಿನೊವಿಚ್ ಇನ್ನೂ ಓದುವ ಕೋಣೆಯಲ್ಲಿಯೇ ಕುಳಿತಿದ್ದ, ಕಾಗದಗಳ ಮಧ್ಯೆ ಹುದುಗಿಕೊಂಡು. ಅವನ ಮುಖದಲ್ಲಿ ತಾನು ಕೆಲಸ ಮಾಡುತ್ತಿದ್ದ ಸಾರ್ವಜನಿಕ ಸಂಸ್ಥೆಯಿಂದ ತನ್ನ ಕೆಲಸಕ್ಕೆ ತಕ್ಕಷ್ಟು ಸಂಬಳವನ್ನ ತೆಗೆದುಕೊಳ್ಳುತ್ತಿಲ್ಲ ಅನ್ನುವ ಭಾವನೆ ಇತ್ತು.

ಆ ಭಾವಚಿತ್ರದ ಬಗ್ಗೆ ತಾನು ಹೆಂಗಸರ ಮುಂದೆ ಮಾತನಾಡಿದ್ದರಿಂದ ಈ ಸಂಗತಿ ಉದ್ಭವಿಸಿತು ಎಂದು ಪ್ರಿನ್ಸ್ ಹೇಳಿ ಆ ಭಾವಚಿತ್ರವನ್ನ ಕೊಡುವಂತೆ ಕೇಳಿದಾಗ ಗವ್ರಿಲ ಗೊಂದಲಗೊಂಡು ಕುಪಿತನಾದ.

“ಅದು ಹೇಗೆ ವಿವೇಚನೆಯಿಲ್ಲದೆ ನೀನು ಆ ಭಾವಚಿತ್ರದ ಬಗ್ಗೆ ಅವರಿಗೆ ಹೇಳಿದೆ, ನಿನಗೆ ಅದರ ವಿಷಯದ ಬಗ್ಗೆ ಇನ್ನೂ ಏನೂ ಕೂಡ ಗೊತ್ತಿಲದೇ ಇದ್ದಾಗ, ಮೂರ್ಖ!” ಅವನು ಹೇಳಿದ. ಕೊನೆಯ ಪದವನ್ನ ತನಗೆ ತಾನೇ ಕೋಪವನ್ನ ತಡೆದುಕೊಳ್ಳಲಾರದೇ ಹೇಳಿಕೊಂಡ.

“ನನ್ನನ್ನು ದಯವಿಟ್ಟು ಕ್ಷಮಿಸು; ಆ ಸಮಯದಲ್ಲಿ ನಾನು ಏನನ್ನೂ ಯೋಚಿಸಲೇ ಇಲ್ಲ. ನಾನು ಬರೀ ಹೇಳಿದ್ದು, ಅಗ್ಲಾಯ, ನಸ್ಟಾಸಿಯಾ ಫಿಲಿಪೊವ್ನಳಷ್ಟೇ ಸುಂದರವಾಗಿದ್ದಾಳೆ” ಎಂದು.

ಗಾನಿಯ ಇನ್ನೂ ಹೆಚ್ಚು ವಿವರಗಳನ್ನು ಹೇಳುವಂತೆ ಕೇಳಿದ; ಪ್ರಿನ್ಸ್ ಇನ್ನೊಂದು ಬಾರಿ ಅಲ್ಲಿ ನಡೆದ ಸಂಭಾಷಣೆಯನ್ನ ಪುರುಚ್ಚರಿಸಿದ. ಗಾನಿಯ ಅವನ ಕಡೆಗೆ ವ್ಯಂಗ್ಯದಿಂದ ಕೂಡಿದ ತಿರಸ್ಕಾರದಿಂದ ನೋಡಿದ,

“ನಸ್ಟಾಸಿಯ ಫಿಲಿಪೊವ್ನ” ಅವನು ಶುರುಮಾಡಿದ, ಮತ್ತು ಸ್ವಲ್ಪ ಹೊತ್ತು ಸುಮ್ಮನಿದ್ದ; ಅವನು ಸ್ಪಷ್ಟವಾಗಿ ಬಹಳ ತಳಮಳಗೊಂಡು ಸಿಟ್ಟಾಗಿದ್ದ. ಪ್ರಿನ್ಸ್ ಅವನಿಗೆ ಭಾವಚಿತ್ರದ ಬಗ್ಗೆ ನೆನಪಿಸಿದ.

“ನನ್ನ ಮಾತನ್ನ ಕೇಳು ಪ್ರಿನ್ಸ್,” ಒಂದು ಉಪಾಯ ಇದ್ದಕ್ಕಿದ್ದಂತೆ ಹೊಳೆದ ರೀತಿಯಲ್ಲಿ ಗಾನಿಯ ಹೇಳಿದ. “ನಾನೀಗ ನಿನ್ನನ್ನು ಒಂದು ಮಹತ್ತರವಾದ ಸಹಾಯ ಕೇಳಲು ಇಷ್ಟಪಡುತ್ತೇನೆ, ಅದನ್ನು ಹೇಗೆ ಕೇಳಬೇಕೆಂದು ನನಗೆ ತಿಳಿಯುತ್ತಿಲ್ಲ.”

ಅವನು ಪುನಃ ಸುಮ್ಮನಾದ, ಏನನ್ನೊ ಹೇಳಲು ಮನಸ್ಸಿನಲ್ಲಿಯೇ ನಿರ್ಧರಿಸಲು ಹವಣಿಸುತ್ತಿದ್ದ, ಮತ್ತು ಆ ವಿಷಯವನ್ನ ಮನಸ್ಸಿನಲ್ಲಿಯೇ ಮೆಲಕು ಹಾಕುತ್ತಿದ್ದ. ಪ್ರಿನ್ಸ್ ನಿಶ್ಯಬ್ದವಾಗಿ ಕಾಯುತ್ತಿದ್ದ. ಮತ್ತೊಮ್ಮೆ ಗಾನಿಯ ಅವನ ಮೇಲೆ ತನ್ನ ಪ್ರಶ್ನಿಸುವಂತಹ ದೃಷ್ಟಿಯನ್ನ ಕೇಂದ್ರೀಕರಿಸಿದ.

“ಪ್ರಿನ್ಸ್,” ಅವನು ಪ್ರಾರಂಬಿಸಿದ, “ಅವರೆಲ್ಲಾ ನನ್ನ ಬಗ್ಗೆ ಕೋಪಗೊಂಡಿದ್ದಾರೆ, ನಾನು ವಿವರಿಸಲಾಗದಂತಹ ಪರಿಸ್ಥಿತಿ ಉಂಟು ಮಾಡಿದ್ದಕ್ಕೋಸ್ಕರ, ಆದ್ದರಿಂದ ಅವರು ಕರೆಯದೆಯೇ ನನಗೆ ಒಳಗೆ ಹೋಗಲು ಆಗುವುದಿಲ್ಲ. ನಾನು ನಿರ್ದಿಷ್ಟವಾಗಿ ಅಗ್ಲಾಯಳ ಜೊತೆ ಮಾತನಾಡಬೇಕು ಮತ್ತು ಅವಳನ್ನು ನಾನು ನೋಡಲು ಆಗದೇ ಇರಬಹುದೆಂಬ ಕಾರಣ್ದದಿಂದ, ಅವಳಿಗಾಗಿ ಒಂದು ಸಂದೇಶವನ್ನ ಈ ಕಾಗದದಲ್ಲಿ ಬರೆದಿದ್ದೇನೆ.” (ಆಗ ಪ್ರಿನ್ಸ್ ಒಂದು ಸಣ್ಣ ಪೇಪರಿನಲ್ಲಿ ಬರೆದ ಅವನ ಕೈಲಿದ್ದ ಸಂದೇಶವನ್ನ ಗಮನಿಸಿದ), “ನನಗೀಗ ನನ್ನ ಸಂದೇಶವನ್ನ ಅವಳಿಗೆ ಹೇಗೆ ಮುಟ್ಟಿಸಬಹುದೆಂಬುದು ತಿಳಿಯದಾಗಿದೆ. ನೀನು ಬಹುಶಃ ಅದನ್ನ ತಕ್ಷಣ ಅವಳ ಕೈಗೆ ಕೊಡುವ ಸಾಹಸ ಮಾಡಬಹುದು ಅಂತ ನಿನಗನ್ನಿಸುವುದಿಲ್ಲವೇ, ಅದೂ ಅವಳಿಗೆ ಮಾತ್ರ, ಗಮನದಲ್ಲಿಟ್ಟುಕೊ, ನೀನು ಅವಳ ಕೈಗೆ ಕೊಟ್ಟೆ ಅನ್ನುವುದು ಯಾರಿಗೂ ತಿಳಿಯಬಾರದು. ಅದರಲ್ಲಿ ಯಾವುದೇ ರಹಸ್ಯವಿಲ್ಲ, ಆದರೂ, ಅದು, ನೀನೀ ಕೆಲಸವನ್ನ ಮಾಡುತ್ತೀಯ?”

“ನಾನು ನಿಜವಾಗಲೂ ಇದನ್ನ ಇಷ್ಟ ಪಡುವುದಿಲ್ಲ,” ಪ್ರಿನ್ಸ್ ಉತ್ತರಿಸಿದ.

“ಓ, ಅದರ ಅಗತ್ಯ ನನಗೆ ತುಂಬಾನೇ ಇದೆ,” ಗಾನಿಯ ಬೇಡಿಕೊಂಡು. “ನನ್ನನ್ನು ನಂಬು, ಅದು ಅಷ್ಟೊಂದು ಗಹನವಾದದ್ದಲ್ಲದಿದ್ದರೆ ನಾನು ನಿನ್ನನ್ನು ಕೇಳುತ್ತಲೇ ಇರಲಿಲ್ಲ; ಇನ್ನು ಹ್ಯಾಗೆ ಅವಳನ್ನ ನಾನು ಸಂಧಿಸಬಹುದು? ಅದು ಬಹಳ ಪ್ರಾಮುಖ್ಯತೆಯಿಂದ ಕೂಡಿದ್ದು, ಭಯಂಕರ ಮುಖ್ಯವಾದದ್ದು!”

ಅವನ ಸಂದೇಶವನ್ನ ಪ್ರಿನ್ಸ್ ತೆಗೆದುಕೊಂಡು ಹೋಗಲು ಒಪ್ಪದಿದ್ದರೆ ಏನು ಮಾಡುವುದು ಎಂದು ಗಾನಿಯಾ ಈಗ ಸ್ಪಷ್ಟವಾಗಿ ಎಚ್ಚೆತ್ತುಕೊಂಡಿದ್ದು, ಮತ್ತು ತನ್ನ ಮುಖವನ್ನ ಸಂಪೂರ್ಣವಾಗಿ ಬೇಡಿಕೊಳ್ಳುವವನ ರೀತಿ ಮಾಡಿದ.

“ಸರಿ, ಹಾಗಾದರೆ ನಾನದನ್ನು ತೆಗೆದುಕೊಂಡುಹೋಗುತ್ತೇನೆ.”

“ಆದರೆ ಅದನ್ನು ಯಾರೂ ನೋಡಬಾರದೆಂಬುದು ನಿನ್ನ ಗಮನದಲ್ಲಿರಲಿ.” ಗಾನಿಯ ಸಂತೋಷದಿಂದ ಹೇಳಿದ, “ನಾನು ನಿನ್ನನ್ನು ಸಂಪೂರ್ಣವಾಗಿ ನಂಬಿದ್ದೇನೆ.”

“ನಾನದನ್ನ ಯಾರಿಗೂ ತೋರಿಸುವುದಿಲ್ಲ.” ಪ್ರಿನ್ಸ್ ಹೇಳಿದ.

“ಈ ಕಾಗದವನ್ನ ಅಂಟಿಸಿಲ್ಲ,” ಗಾನಿಯ ಮುಂದುವರಿಯುತ್ತಾ ಹೇಳಿದ ಮತ್ತು ಸ್ವಲ್ಪ ಗೊಂದಲಗೊಂಡು ಸುಮ್ಮನಾದ.

“ಓ, ನಾನದನ್ನ ಓದುವುದಿಲ್ಲ,” ಪ್ರಿನ್ಸ್ ಸರಳತೆಯಿಂದಲೇ ಹೇಳಿದ,

ಅವನು ಆ ಭಾವಚಿತ್ರವನ್ನ ತೆಗೆದುಕೊಂಡು ರೂಮಿನಿಂದ ಆಚೆಗೆ ಹೋದ.

ಗಾನಿಯ ರೂಮಿನಲ್ಲಿ ಈಗ ಒಬ್ಬನೇ ಆದ, ತಲೆಯ ಮೇಲೆ ಕೈಹೊತ್ತು ಕೂತ.

“ಅವಳಿಂದ ಒಂದೇಒಂದು ಮಾತು ಬಂದರೆ ಸಾಕು”, ಅವನು ಹೇಳಿದ, “ಒಂದು ಮಾತು, ನಾನು ಸಂಪೂರ್ಣವಾಗಿ ಸ್ವತಂತ್ರನಾಗಬಲ್ಲೆ.”

ಅವನಿಗೆ ಆಗಲೇ ತಾನು ಮಾಡುತ್ತಿದ್ದ ಕೆಲಸದ ಮೇಲಿನ ಏಕಾಗ್ರತೆ ಹೊರಟುಹೋಯಿತು, ಕಾರಣ ಅವನ ತಳಮಳ ಮತ್ತು ಉದ್ರೇಕ ಸ್ಥಿತಿ; ಮೂಲೆಯಿಂದ ಮೂಲೆಗೆ ಕೋಣೆಯ ಮೇಲಕ್ಕೂ ಕೆಳಕ್ಕೂ ಅತ್ತಿಂದಿತ್ತ ಓಡಾಡಲು ಶುರುಮಾಡಿದ.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...