Homeಕರ್ನಾಟಕ'ಬಿಜೆಪಿ ತೋಡಿರುವ ಖೆಡ್ಡಕ್ಕೆ ಬೀಳಬೇಡಿ’: ವರುಣಾದಲ್ಲಿ ಪ್ರಚಾರ ವೇಳೆ ದೇವನೂರ ಮಹಾದೇವ ಮನವಿ

‘ಬಿಜೆಪಿ ತೋಡಿರುವ ಖೆಡ್ಡಕ್ಕೆ ಬೀಳಬೇಡಿ’: ವರುಣಾದಲ್ಲಿ ಪ್ರಚಾರ ವೇಳೆ ದೇವನೂರ ಮಹಾದೇವ ಮನವಿ

ಯಡಿಯೂರಪ್ಪ ಎಂಬ ಬೃಹತ್‌ ವೃಕ್ಷಕ್ಕೆ ವಿಷದ ಇಂಜಕ್ಷನ್‌ ಚುಚ್ಚಿ ಅದು ತಾನೆ ಒಣಗುವಂತೆ ಮಾಡಲಾಗಿದೆ ಎಂದು ದೇಮ ಹೇಳಿದ್ದಾರೆ

- Advertisement -
- Advertisement -

“ನಾನು ಅವರು-ಇವರು ಎನ್ನದೆ ಎಲ್ಲರನ್ನು ನನ್ನ ಬಂಧುಗಳೆಂದು ಭಾವಿಸುವುದರಿಂದ ಒಂದು ಮನವಿ ಮಾಡುತ್ತೇನೆ. ದಯವಿಟ್ಟು ಬಿಜೆಪಿ ತೋಡಿರುವ ಖೆಡ್ಡಕ್ಕೆ ಬೀಳಬೇಡಿ, ಬಲೆಗೆ ಸಿಲುಕಬೇಡಿ. ಮುಖ ನೋಡಬೇಡಿ, ನಡೆ ನೋಡಿ. ಬಲೆಗೆ ಬಿದ್ದು ಮತ ನೀಡಿದರೆ ನಿಮ್ಮ ಬದುಕು ಇನ್ನಷ್ಟು ನರಕವಾಗುತ್ತದೆ’’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಮನವಿ ಮಾಡಿದ್ದಾರೆ.

ರಾಜ್ಯದ ಗಮನ ಸೆಳೆದಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮತಯಾಚಿಸಿ ಮಾತನಾಡಿರುವ ಅವರು, ‘’ಪೆಟ್ರೊಲ್‌, ಗ್ಯಾಸ್‌, ಕಾಳು, ಎಣ್ಣೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈಗಾಲೇ ಮಹಿಳೆಯರು ಬಲೆ ಏರಿಕೆ ಬವಣೆಯಿಂದ ಶಾಪ ಹಾಕುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ರಾಜಕೀಯ ಪಕ್ಷಗಳ ಪ್ರಣಾಳಿಕೆ ಎಂದರೆ ಜನತಾ ಜನಾರ್ಧನನಿಗೆ ನೀಡುವ ವಾಗ್ದಾನ. ಅದನ್ನು ಪಕ್ಷ ಈಡೇರಿಸದೇ ಇದ್ದರೆ ಮಹಾಪಾಪ’ ಎಂದು ತುಂಬಾ ಖಚಿತವಾಗಿ ಆತ್ಮವಿಶ್ವಾಸದಿಂದ ನುಡಿದಿದ್ದರು. ಅಧಿಕಾರಕ್ಕೆ ಬರುವವರು ಹೇಗಿರಬೇಕು ಎನ್ನುವಂತೆ ಇವರ ಮಾತಗಳಿದ್ದವು. ಆದರೆ, ಅವರ ಅಧಿಕಾರದಲ್ಲಿ ನಡೆದದ್ದೆಲ್ಲವೂ ಜನ ವಿರೋಧಿ ಕೆಲಸಗಳೇ,” ಎಂದರು.

“ಇರಲಿ, ವರ್ಷಕ್ಕೆ ಒಂದು ಕೋಟಿ ಉದ್ಯೋಗ ನೀಡುತ್ತೇನೆ ಎಂಬ ಮೋದಿಯವರ ಮಾತನ್ನು ನಂಬಿ ಮತ ಕೊಟ್ಟು ಗೆಲ್ಲಿಸಿ ಇದ್ದಬದ್ದ ಉದ್ಯೋಗವನ್ನು ಕಳೆದುಕೊಂಡಿದ್ದೀವಿ. ಉದ್ಯೋಗ ಸೃಷ್ಠಿಸುತ್ತಿದ್ದ ಸಣ್ಣ ಕೈಗಾರಿಕೆ, ಅತೀಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡದೆ ಅವು ಕೋಟಿ ಸಂಖ್ಯೆಯಲ್ಲಿ ಮುಚ್ಚಿ ಹೋಗಿವೆ. ಆದರೆ, ಇನ್ನೊಂದು ಕಡೆ ಮೋದಿ ಅವರ ಪರಮಾಪ್ತ ಅದಾನಿ, ಅಂಬಾನಿ ಮುಂತಾದ ಬಂಡವಾಳಶಾಹಿಗಳ ಸಂಪತ್ತು ದ್ವಿಗುಣ ಆಗಿದೆ. ಇದುವರೆಗೂ ಉಳ್ಳವರ ಸಂಪತ್ತು ಡಬಲ್‌ ಆಗುತ್ತಿದೆ ಬಡವರ ಸಂಖ್ಯೆ ಹೆಚ್ಚುತ್ತಿದೆಯಲ್ಲ? ಮಧ್ಯಮ ವರ್ಗ ಬಡತನ ರೇಖೆ ಕಡೆ ಚಲಿಸುತ್ತಿದೆಯಲ್ಲ” ಎಂದು ವಿಷಾದಿಸಿದರು.

“2013-14ನೇ ಸಾಲಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ನೀಡಿದ್ದ ಪ್ರಣಾಳಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಶೇ.50 ರಷ್ಟು ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿದ್ದರು. ಅದು ಏನಾಯ್ತು? ಕೃಷಿ ಉತ್ಪನ್ನಗಳಿಗೆ ಕಾಂಗ್ರೆಸ್ ಕಾಲದಲ್ಲಿ ಸಿಗುತ್ತಿದ್ದಕ್ಕಿಂತ ಕಡಿಮೆ ಬೆಲೆ ಸಿಗುತ್ತಿದೆ” ಎಂದು ಹೇಳಿದರು.

ದೇವನೂರ ಮಹಾದೇವ

“ಮೋದಿ ಆಡಿದ ಮಾತುಗಳನ್ನು ಮತದಾರರು ತುಂಬಾ ನಂಬಿದ್ದರು. ಬಹಳ ಬೆಲೆ ಕೊಟ್ಟಿದ್ದರು. ಈಗಲೂ ಒಂದಿಷ್ಟು ಜನ ನಂಬುತ್ತಿದ್ದಾರೆ. ನನ್ನ ಪ್ರಶ್ನೆ ಇಷ್ಟೆ, ಮೋದಿಯವರೇ ನಿಮ್ಮ ಮಾತಿಗೆ ನಮ್ಮ ಜನ ಇಷ್ಟೊಂದು ಬೆಲೆ ಕೊಟ್ಟಿದ್ದಾರೆ, ಇಷ್ಟೊಂದು ಗೌರವ ಕೊಟ್ಟಿದ್ದಾರೆ, ನಂಬಿದ್ದಾರೆ, ಹೀಗಿರುವಾಗ ನಿಮ್ಮ ಮಾತಿನ ಬಗ್ಗೆ ನಿಮಗೆ ಬೆಲೆ ಇಲ್ಲವೆ? ನಿಮ್ಮ ಮಾತನ್ನು ನೀವೇ ನಂಬೋದಿಲ್ಲವೇ” ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಎಂಬ ಬೃಹತ್‌ ವೃಕ್ಷಕ್ಕೆ ವಿಷದ ಇಂಜಕ್ಷನ್ ಚುಚ್ಚಲಾಗಿದೆ: ದೇಮ

ಬಿಜೆಪಿಯಲ್ಲಾಗಿರುವ ಬದಲಾವಣೆಗಳನ್ನು ಉಲ್ಲೇಖಿಸಿ ಮಾತನಾಡಿರುವ ದೇವನೂರ ಮಹಾದೇವ ಅವರು, “ಇಂದಿನ ರಾಜಕಾರಣದ ಒಳಹೊಕ್ಕು ನೋಡುವುದಾದರೆ ಯಡಿಯೂರಪ್ಪ ಎಂಬ ಬೃಹತ್‌ ವೃಕ್ಷಕ್ಕೆ ವಿಷದ ಇಂಜಕ್ಷನ್‌ ಚುಚ್ಚಿ ಅದು ತಾನೆ ಒಣಗುವಂತೆ ಮಾಡಲಾಗಿದೆ. ಇನ್ನೆರಡು ಬಲಿಷ್ಠ ವೃಕ್ಷಗಳಾದ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ್‌ ಸವದಿಯನ್ನು ಬುಡಸಮೇತ ಕತ್ತರಿಸಿ ಎಸೆಯಲಾಗಿದೆ. ಇನ್ನೊಂದು ಸ್ವಲ್ಪ ಗಟ್ಟಿ ಮರ ಅನ್ನಬಹುದಾದ ಸೋಮಣ್ಣನವರಿಗೆ ಫನಿಷ್‌ಮೆಂಟ್‌ ಟ್ರಾನ್ಸ್‌ಫರ್‌ ಮಾಡಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಲಾಗಿದೆ. ಮುಂದೆ ತುಂಬಾ ಚೆನ್ನಾಗಿ ಬೆಳೆದುಬಿಡುತ್ತಾರೆ ಎಂಬ ಭರವಸೆ ಹಿಡಿಸಿ ಎಳೆಕರುವನ್ನು ಸೋಲಿಸಲು ಬಿಜೆಪಿ ಗರ್ಭಗುಡಿಯವರೇ ಸಂಚು ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ” ಎಂದು ಮಾರ್ಮಿಕವಾಗಿ ನುಡಿದರು.

“ಮೇಲೆ ಉಲ್ಲೇಖಿಸಿದ ವ್ಯಕ್ತಿಗಳ ಬಗ್ಗೆ ಆಕ್ಷೇಪಣೆಗಳು ಏನೇ ಇರಲಿ. ಏನಿದರ ಮರ್ಮ? ನನಗೆ ಅನಿಸುವುದು ಇಷ್ಟೆ, ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಜನನಾಯಕರು, ಸಮುದಾಯದ ನಾಯಕರು ಬೇಕಾಗಿಲ್ಲ. ಅವರಿಗೆ ಛಲವಾದಿ ನಾರಾಯಣಸ್ವಾಮಿ ರೀತಿಯ ಕಾಲಾಳುಗಳು ಮಾತ್ರ ಬೇಕು” ಎಂದು ಟೀಕಿಸಿದ್ದಾರೆ.

“ಈಗ ಲಿಂಗಾಯತ ಆಯಿತು, ಮುಂದೆ ಒಕ್ಕಲಿಗ ನಾಯಕರಿಗೆ ಸರದಿ ಕಾದಿದೆ. ರಾಜ್ಯದಲ್ಲಿ ಪ್ರಲ್ಹಾದ್‌ ಜೋಶಿ, ಸಂತೋಷ್‌ ಮತ್ತೊಬ್ಬರಿಗಷ್ಟೇ ಅವಕಾಶ. ಇದು ಬಿಜೆಪಿಯ ಗರ್ಭಗುಡಿ ಆರ್‌ಎಸ್‌ಎಸ್‌ನ ಫರ್ಮಾನ್‌. ಇದು ಎಲ್ಲಿಗೆ ಕೆರೆದುಕೊಂಡು ಹೋಗುತ್ತದೆ ಎಂದರೆ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಮತ್ತು ಇಟಲಿಯ ಮುಸಲೋನಿಯ ಮಿಶ್ರ ಆಳ್ವಿಕೆ ಕಡೆಗೆ ಕೊಂಡೊಯ್ಯುತ್ತದೆ” ಎಂದು ಎಚ್ಚರಿಸಿದರು.

“ಬಿಜೆಪಿ ಕಾಲಾಳು ಪಕ್ಷ ಮಾಡುತ್ತಿರುವುದು, ಯಾಕೆಂದರೆ ಅದು ಸಂವಿಧಾನವನ್ನು ಬದಲಾಯಿಸಬೇಕು. ಚಾತುರ್ವರ್ಣದ ಮನುಧರ್ಮಶಾಸ್ತ್ರವನ್ನು ಭಾರತದ ಸಂವಿಧಾನವನ್ನಾಗಿಸಬೇಕು. ಇದು ಅವರ ಹಿಂದೂ ರಾಷ್ಟ್ರ ಎನ್ನುವುದು ಆರ್‌ಎಸ್‌ಎಸ್‌ ಗರ್ಭಗುಡಿಯ ಕಟ್ಟಪ್ಪಣೆ” ಎಂದು ಭವಿಷ್ಯ ನುಡಿದರು.

“ಕೊನೆಯದಾಗಿ ಒಂದು ಮಾತು, ಇಡೀ ವರುಣಾ ಕ್ಷೇತ್ರ ತುಂಬಾ ಎಚ್ಚರಿಕೆಯಿಂದ ಇರಬೇಕು. ಒಳಗೆ ಕಲ್ಲಿಟ್ಟು ಅದರ ಸುತ್ತ ಹೂವು ಸುತ್ತಿ ಡಾ. ಜಿ ಪರಮೇಶ್ವರ್‌ ಅವರ ತಲೆಗೆ ಎಸೆದು ರಕ್ತ ಬರಿಸಿದ್ದಾರೆ. ಇಲ್ಲೂ ಆಗಬಹುದು. ಹೂವು ಸುತ್ತಿ ಕಲ್ಲು ಎಸೆಯುವುದು ಸಂಘ ಪರಿವಾರದ ರಾಜಕಾರಣದ ವೈಖರಿ” ಎಂದು ಆತಂಕ ವ್ಯಕ್ತಪಡಿಸಿದರು.

“ನೆನಪಿಡಿ ರಾಜ್ಯದ ಬಿಜೆಪಿಯ ನಾಯಕರೊಬ್ಬರು ಕ್ಷೇತ್ರದಲ್ಲಿ ಒಂದು ಹೆಣ ಬೀಳಿಸಿದರೆ ಎರಡು ಕ್ಷೇತ್ರ ಗೆದ್ದಂತೆ ಎಂದು ಹೇಳಿದ್ದು ಸುದ್ದಿಯಾಗಿತ್ತು. ಪ್ರಿಯಾಂಕ್‌ ಖರ್ಗೆ ವಿರುದ್ಧ ರೌಡಿಶೀಟರ್‌, ಗಡಿಪಾರು ಆಗಿದ್ದ ವ್ಯಕ್ತಿಯನ್ನು ಬಿಜೆಪಿ ನಿಲ್ಲಿಸಿದೆ. ಇಂತಹ ಭೂಗತ ರಾಜಕಾರಣ ಇಂದು ನಡೆಯುತ್ತಿದೆ. ದಯವಿಟ್ಟು ಎಚ್ಚರವಿರಿ. ಈ ರೀತಿ ಹೊಡಿಬಡಿ ರಕ್ತಪಾತದ ರಾಜಕಾರಣ ಆಗದಂತೆ ಎಚ್ಚರ ವಹಿಸುವುದು ನಮ್ಮ ಪೊಲೀಸ್‌ ಕರ್ತವ್ಯ” ಎಂದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಲೇಖಕಿ ಪ್ರೊ. ಸುಮಿತ್ರಾ ಬಾಯಿ, ದಸಂಸ ಸಂಚಾಲಕರಾದ ಆಲಗೂಡು ಶಿವಕುಮಾರ್ ಮತ್ತಿತರರು ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...

44 ಲಕ್ಷ ಮತದಾರರಿಗೆ ನೋಟಿಸ್: BLA ಗಳಿಗೆ ಪಟ್ಟಿ ನೀಡಿ, ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಾಗೃತ ಕರ್ನಾಟಕ’ ಒತ್ತಾಯ

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಗೊಳ್ಳುತ್ತಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಹಾಗೂ ನೋಟಿಸ್ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಜಾಗೃತ...

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...