ಮಂಡ್ಯ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. 2018ರಲ್ಲಿ 7ಕ್ಕೆ 7 ಕಡೆ ಜೆಡಿಎಸ್ ಗೆಲುವು ಸಾಧಿಸಿತ್ತು. ಆನಂತರ ಕೆ.ಆರ್ ಪೇಟೆಯಲ್ಲಿ ಕೆ.ಸಿ ನಾರಾಯಣಗೌಡ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ 05 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 01 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ ಬಿಜೆಪಿ ಇದ್ದ ಒಂದು ಸೀಟನ್ನೂ ಕಳೆದುಕೊಂಡಿದೆ. ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಗೆಲುವಿನ ನಗೆ ಬೀರಿದ್ದಾರೆ.
ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಮೂರು ಪಕ್ಷಗಳ ಸಾಧನೆ, ಅದರ ಪೂರ್ಣ ವಿವರಗಳು ಈ ಕೆಳಗಿನಂತಿವೆ.
ಮಂಡ್ಯ ವಿಧಾನಸಭಾ ಕ್ಷೇತ್ರ – ಕಾಂಗ್ರೆಸ್‌ನ ಗಣಿಗ ರವಿಕುಮಾರ್ ಗೆಲುವು
ಕಾಂಗ್ರೆಸ್: ಗಣಿಗ ರವಿಕುಮಾರ್ – ಗೆಲುವು
ಜೆಡಿಎಸ್: ಬಿ.ಆರ್ ರಾಮಚಂದ್ರು – ಸೋಲು
ಸ್ವಾಭಿಮಾನಿ ಜೆಡಿಎಸ್ – ವಿಜಯಾನಂದ – ಸೋಲು
ಬಿಜೆಪಿ: ಅಶೋಕ್ ಜಯರಾಂ – ಸೋಲು
ಸರ್ವೋದಯ ಕರ್ನಾಟಕ: ಮಧುಚಂದನ್ ಎಸ್.ಸಿ – ಸೋಲು
ಮದ್ದೂರು – ಕಾಂಗ್ರೆಸ್‌ನ ಕದಲೂರು ಉದಯ್ ಗೆಲುವು
ಕಾಂಗ್ರೆಸ್: ಕದಲೂರು ಉದಯ್ ಗೆಲುವು
ಜೆಡಿಎಸ್: ಡಿ.ಸಿ ತಮ್ಮಣ್ಣ – ಸೋಲು
ಬಿಜೆಪಿ: ಎಸ್.ಪಿ ಸ್ವಾಮಿ – ಸೋಲು
ಮಳವಳ್ಳಿ: ಪ.ಜಾ ಮೀಸಲು ಕ್ಷೇತ್ರ – ಕಾಂಗ್ರೆಸ್ ಪಿ.ಎಂ ನರೇಂದ್ರಸ್ವಾಮಿ ಗೆಲುವು
ಕಾಂಗ್ರೆಸ್: ಪಿ.ಎಂ ನರೇಂದ್ರಸ್ವಾಮಿ – ಗೆಲುವು
ಜೆಡಿಎಸ್; ಕೆ.ಅನ್ನದಾನಿ – ಸೋಲು
ಬಿಜೆಪಿ: ಜಿ.ಮುನಿರಾಜು – ಸೋಲು
ಬಿಎಸ್‌ಪಿ: ಎಂ. ಕೃಷ್ಣಮೂರ್ತಿ – ಸೋಲು
ಶ್ರೀರಂಗಪಟ್ಟಣ – ಕಾಂಗ್ರೆಸ್‌ನ ರಮೇಶ್‌ಬಾಬು ಬಂಡಿಸಿದ್ಧೇಗೌಡ ಗೆಲುವು
ಕಾಂಗ್ರೆಸ್: ರಮೇಶ್‌ಬಾಬು ಬಂಡಿಸಿದ್ಧೇಗೌಡ – ಗೆಲುವು
ಜೆಡಿಎಸ್: ರವೀಂದ್ರ ಶ್ರೀಕಂಠಯ್ಯ – ಸೋಲು
ಬಿಜೆಪಿ : ಸಚ್ಚಿದಾನಂದ – ಸೋಲು
ಪಕ್ಷೇತರ: ತಗ್ಗಹಳ್ಳಿ ವೆಂಕಟೇಶ್ – ಸೋಲು
ಮೇಲುಕೋಟೆ – ಸರ್ವೋದಯ ಕರ್ನಾಟಕದ ದರ್ಶನ್ ಪುಟ್ಟಣ್ಣಯ್ಯ ಗೆಲುವು
ಸರ್ವೋದಯ ಕರ್ನಾಟಕ: ದರ್ಶನ್ ಪುಟ್ಟಣ್ಣಯ್ಯ – ಗೆಲುವು
ಜೆಡಿಎಸ್: ಸಿ.ಎಸ್ ಪುಟ್ಟರಾಜು – ಸೋಲು
ಬಿಜೆಪಿ: ಡಾ.ಇಂದ್ರೇಶ್ – ಸೋಲು
ನಾಗಮಂಗಲ – ಕಾಂಗ್ರೆಸ್‌ನ ಚಲುವರಾಯಸ್ವಾಮಿ ಗೆಲುವು
ಕಾಂಗ್ರೆಸ್: ಚಲುವರಾಯಸ್ವಾಮಿ – ಗೆಲುವು
ಜೆಡಿಎಸ್: ಕೆ.ಸುರೇಶ್ ಗೌಡ – ಸೋಲು
ಬಿಜೆಪಿ: ಸುಧಾ ಶಿವರಾಮೇಗೌಡ – ಸೋಲು
ಪಕ್ಷೇತರ: ಫೈಟರ್ ರವಿ – ಸೋಲು
ಕೆ.ಆರ್ ಪೇಟೆ – ಜೆಡಿಎಸ್‌ನ ಹೆಚ್.ಟಿ ಮಂಜು ಗೆಲುವು
ಜೆಡಿಎಸ್‌ನ ಹೆಚ್.ಟಿ ಮಂಜು ಗೆಲುವು
ಬಿಜೆಪಿ: ಕೆ.ಸಿ ನಾರಾಯಣಗೌಡ – ಸೋಲು
ಕಾಂಗ್ರೆಸ್: ಬಿ.ಎಲ್ ದೇವರಾಜು – ಸೋಲು
ಪಕ್ಷೇತರ: ಚಂದನ್ ಗೌಡ – ಸೋಲು
ಇದನ್ನೂ ಓದಿ: ಚಿತ್ರದುರ್ಗ: 6ರಲ್ಲಿ 5 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್


