Homeಮುಖಪುಟಚಿತ್ರದುರ್ಗ: 6ರಲ್ಲಿ 5 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

ಚಿತ್ರದುರ್ಗ: 6ರಲ್ಲಿ 5 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

- Advertisement -
- Advertisement -

ಚಿತ್ರದುರ್ಗ ಜಿಲ್ಲೆಯಲ್ಲಿ ಚಿತ್ರದುರ್ಗ ಸೇರಿ, ಹಿರಿಯೂರು, ಹೊಸದುರ್ಗ ಸಾಮಾನ್ಯ ಕ್ಷೇತ್ರಗಳಿದ್ದರೆ, ಚಳ್ಳಕೆರೆ, ಮೊಳಕಾಲ್ಮೂರು ಪ.ಪಂ ಮೀಸಲು ಕ್ಷೇತ್ರ ಮತ್ತು ಹೊಳಲ್ಕೆರೆ ಪ.ಜಾ ಮೀಸಲು ಕ್ಷೇತ್ರಗಳಿವೆ. ಕಳೆದ ಬಾರಿ ಚಿತ್ರದುರ್ಗದ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಚಳ್ಳಕೆರೆ ಹೊರತುಪಡಿಸಿ ಉಳಿದ 5 ಕಡೆ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಫಲಿತಾಂಶ ಉಲ್ಟಾ ಆಗಿದ್ದು 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ 1 ಕಡೆ ಮಾತ್ರ ಬಿಜೆಪಿ ಗೆಲುವು ಕಂಡಿದೆ. ಸಂಪೂರ್ಣ ವಿವರ ಈ ರೀತಿಯಿದೆ.

ಚಿತ್ರದುರ್ಗ (ಸಾಮಾನ್ಯ ಕ್ಷೇತ್ರ) – ಕಾಂಗ್ರೆಸ್‌ನ ವೀರೇಂದ್ರ ಪಪ್ಪಿಗೆ ಗೆಲುವು

ಆರಂಭದಲ್ಲಿ ಚಿತ್ರದುರ್ಗ ಕಾಂಗ್ರೆಸ್ ನೆಲೆಯಾಗಿತ್ತು. 1994 ಮತ್ತು 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಜಿ.ಎಚ್ ತಿಪ್ಪಾರೆಡ್ಡಿಯವರು 2004ರಲ್ಲಿ ಕಾಂಗ್ರೆಸ್ ಸೇರಿ ಹ್ಯಾಟ್ರಿಕ್ ಸಾಧಿಸಿದ್ದರು. ಆದರೆ 2008ರಲ್ಲಿ ಜೆಡಿಎಸ್ ಅಭ್ಯರ್ಥಿ ಬಸವರಾಜನ್ ಎದುರು ಸೋಲು ಕಂಡರು. ನಂತರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ 2013 ಮತ್ತು 2018ರಲ್ಲಿ ಜಯಗಳಿಸಿ, 5ನೇ ಬಾರಿಗೆ ಶಾಸಕರಾಗಿರುವ ಅವರು ಚಿತ್ರದುರ್ಗವನ್ನು ಬಿಜೆಪಿಯ ಭದ್ರಕೋಟೆಯಾಗಿಸಿದ್ದರು.

ಕಾಂಗ್ರೆಸ್: ಕೆ.ಸಿ ವಿರೇಂದ್ರ ಪಪ್ಪಿ – ಗೆಲುವು

ಬಿಜೆಪಿ: ಜಿ.ಎಚ್ ತಿಪ್ಪಾರೆಡ್ಡಿ – ಸೋಲು

ಜೆಡಿಎಸ್: ರಘು ಆಚಾರ್ – ಸೋಲು

ಪಕ್ಷೇತರ: ಸೌಭಾಗ್ಯ ಬಸವರಾಜನ್‌ – ಸೋಲು

ಮೊಳಕಾಲ್ಮೂರು (ಪರಿಶಿಷ್ಟ ಪಂಗಡ ಮೀಸಲು) – ಕಾಂಗ್ರೆಸ್‌ನ ಎನ್.ವೈ ಗೋಪಾಲಕೃಷ್ಣ ಗೆಲುವು

2018ರ ಚುನಾವಣೆಯಲ್ಲಿ ಬಾದಾಮಿ ಜೊತೆಗೆ ಮೊಳಕಾಲ್ಮೂರಿನಲ್ಲಿಯೂ ಬಿ.ಶ್ರೀರಾಮುಲು ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರು.

ಕಾಂಗ್ರೆಸ್: ಎನ್.ವೈ ಗೋಪಾಲಕೃಷ್ಣ – ಗೆಲುವು

ಬಿಜೆಪಿ: ಎಸ್.ತಿಪ್ಪೇಸ್ವಾಮಿ – ಸೋಲು

ಜೆಡಿಎಸ್: ವೀರಭದ್ರಪ್ಪ – ಸೋಲು

ಹಿರಿಯೂರು (ಸಾಮಾನ್ಯ ವಿಧಾನಸಭಾ ಕ್ಷೇತ್ರ) – ಕಾಂಗ್ರೆಸ್‌ನ ಡಿ.ಸುಧಾಕರ್ ಗೆಲುವು

2008ರಲ್ಲಿ ಸಾಮಾನ್ಯ ವಿಧಾನಸಭಾ ಕ್ಷೇತ್ರವಾದಾಗ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಜೈನ ಸಮುದಾಯದ ಡಿ.ಸುಧಾಕರ್ ಹಿರಿಯೂರಿಗೆ ಬಂದು ಗೆಲುವು ಸಾಧಿಸಿದರು. ಅವರು 2013ರಲ್ಲಿಯೂ ಸಹ ಯಾದವ ಸಮುದಾಯದ ಜೆಡಿಎಸ್‌ನ ಕೃಷ್ಣಪ್ಪನವರನ್ನು ಸೋಲಿಸಿ ಶಾಸಕರಾದರು. ಆದರೆ 2018ರ ವೇಳೆಗೆ ಕೃಷ್ಣಪ್ಪನವರ ಪುತ್ರಿ ಕೆ.ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಸೇರಿ ಜಯ ಕಂಡರು.

ಕಾಂಗ್ರೆಸ್: ಡಿ.ಸುಧಾಕರ್ – ಗೆಲುವು

ಬಿಜೆಪಿ: ಕೆ.ಪೂರ್ಣಿಮಾ ಶ್ರೀನಿವಾಸ್ – ಸೋಲು

ಜೆಡಿಎಸ್: ವೀರಭದ್ರಪ್ಪ – ಸೋಲು

ಹೊಸದುರ್ಗ (ಸಾಮಾನ್ಯ ವಿಧಾನಸಭಾ ಕ್ಷೇತ್ರ) – ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ಗೆಲುವು

ಬಿ.ಜಿ.ಗೋವಿಂದಪ್ಪನವರು ಆರಂಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಆನಂತರ ಕಾಂಗ್ರೆಸ್ ಸೇರಿ ಒಟ್ಟು ಮೂರು ಬಾರಿ ಶಾಸಕರಾಗಿದ್ದಾರೆ. ಇನ್ನು ಈ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಬೋವಿ ಸಮುದಾಯದ ಗೂಳಿಹಟ್ಟಿ ಶೇಖರ್‌ರವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು, 2018ರಲ್ಲಿ ಬಿಜೆಪಿ ಸೇರಿ ಶಾಸಕರಾಗಿದ್ದರು.

ಕಾಂಗ್ರೆಸ್: ಬಿ.ಜಿ.ಗೋವಿಂದಪ್ಪ ಗೆಲುವು

ಬಿಜೆಪಿ: ಎಸ್.ಲಿಂಗಮೂರ್ತಿ – ಸೋಲು

ಜೆಡಿಎಸ್: ತಿಪ್ಪೇಸ್ವಾಮಿ – ಸೋಲು

ಪಕ್ಷೇತರ: ಗೂಳಿಹಟ್ಟಿ ಶೇಖರ್‌ – ಸೋಲು

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) – ಬಿಜೆಪಿಯ ಎಂ.ಚಂದ್ರಪ್ಪ ಗೆಲುವು

2008ರಿಂದ ಇದು ಪರಿಶಿಷ್ಟ ಜಾತಿ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಬಿಜೆಪಿಯ ಎಂ.ಚಂದ್ರಪ್ಪನವರು ಜಯ ಗಳಿಸಿದ್ದರು. 2013ರಲ್ಲಿ ಅವರನ್ನು ಕಾಂಗ್ರೆಸ್‌ನ ಹೆಚ್.ಆಂಜನೇಯರವರು ಮಣಿಸಿ ಸಚಿವರೂ ಆಗಿದ್ದರು. 2018ರಲ್ಲಿ ಮತ್ತೆ ಬಿಜೆಪಿಯ ಎಂ.ಚಂದ್ರಪ್ಪನವರು ಗೆಲುವು ಸಾಧಿಸಿದ್ದಾರೆ.

ಬಿಜೆಪಿ: ಎಂ.ಚಂದ್ರಪ್ಪ ಗೆಲುವು

ಕಾಂಗ್ರೆಸ್: ಹೆಚ್.ಆಂಜನೇಯ – ಸೋಲು

ಜೆಡಿಎಸ್: ಇಂದ್ರಜೀತ್ ನಾಯ್ಕ್ – ಸೋಲು

ಚಳ್ಳಕೆರೆ (ಪರಿಶಿಷ್ಟ ಪಂಗಡ ಮೀಸಲು) – ಕಾಂಗ್ರೆಸ್‌ನ ಟಿ.ರಘುಮೂರ್ತಿ ಗೆಲುವು

ಚಳ್ಳಕೆರೆ ಆರಂಭದಲ್ಲಿ ಪ.ಜಾ ಮೀಸಲು ದ್ವಿಸದಸ್ಯ ಕ್ಷೇತ್ರವಾಗಿತ್ತು. 1962ರಿಂದ 2008ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದು, 2008ರಿಂದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದೆ.

2008ರಲ್ಲಿ ಬಿಜೆಪಿಯಿಂದ ತಿಪ್ಪೆಸ್ವಾಮಿ ಗೆದ್ದು ಶಾಸಕರಾಗಿದ್ದರು. ಆದರೆ 2013ರಲ್ಲಿ ಕಾಂಗ್ರೆಸ್ ಪಕ್ಷದ ಟಿ.ರಘುಮೂರ್ತಿ ಆಯ್ಕೆಯಾದರು. 2018ರಲ್ಲಿಯೂ ಅವರು ಪುನರಾಯ್ಕೆಯಾದರು. ಆಗ ಜೆಡಿಎಸ್ ಎರಡನೇ ಸ್ಥಾನ ಪಡೆದರೆ, ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಕಾಂಗ್ರೆಸ್: ಟಿ.ರಘುಮೂರ್ತಿ ಗೆಲುವು

ಬಿಜೆಪಿ: ಅನಿಲ್ ಕುಮಾರ್.ಆರ್ – ಸೋಲು

ಜೆಡಿಎಸ್: ರವೀಶ್‌ಕುಮಾರ್ – ಸೋಲು

ಇದನ್ನೂ ಓದಿ; ಸ್ಪಷ್ಟ ಬಹುಮತದತ್ತ ಕಾಂಗ್ರೆಸ್: 127 ಸ್ಥಾನಗಳಲ್ಲಿ ಗೆಲುವಿನ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...