Homeಮುಖಪುಟಹರಿಯಾಣ ಕೋಮು ಸಂಘರ್ಷ: ಹಿಂದುತ್ವ ಸಂಘಟನೆಗಳಿಂದ ದೆಹಲಿಯಲ್ಲಿ ಪ್ರತಿಭಟನೆ; ಬಿಗಿ ಭದ್ರತೆಗೆ ಸುಪ್ರೀಂ ಸೂಚನೆ

ಹರಿಯಾಣ ಕೋಮು ಸಂಘರ್ಷ: ಹಿಂದುತ್ವ ಸಂಘಟನೆಗಳಿಂದ ದೆಹಲಿಯಲ್ಲಿ ಪ್ರತಿಭಟನೆ; ಬಿಗಿ ಭದ್ರತೆಗೆ ಸುಪ್ರೀಂ ಸೂಚನೆ

- Advertisement -
- Advertisement -

ಸೋಮವಾರ ಹರಿಯಾಣ ರಾಜ್ಯದ ಮುಸ್ಲಿಂ ಪ್ರಾಬಲ್ಯದ ನುಹ್ ಜಿಲ್ಲೆಯಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ ಆರು ಜನರು ಸಾವಿಗೀಡಾಗಿದ್ದಾರೆ. ಮಂಗಳವಾರ ಈ ಪ್ರದೇಶದಲ್ಲಿ ಆರಂಭವಾದ ಹಿಂಸಾಚಾರ ಮುಂದುವರೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾದ ಪೋಸ್ಟ್‌ಗಳು ಹರಿದಾಡುತ್ತಿರುವುದು ಹಿಂಸಾಚಾರದ ಪ್ರಚೋದನೆಗೆ ಕಾರಣವಾಗಿದೆ.

ಹರಿಯಾಣದಲ್ಲಿ ಭುಗಿಲೆದ್ದಿರುವ ಕೋಮುಗಲಭೆ ದೆಹಲಿಗೂ ವ್ಯಾಪಿಸುವ ಭೀತಿ ಎದುರಾಗಿದೆ. ಗುರುಗ್ರಾಮದ ಸಕ್ಕರೆ 70ರಲ್ಲಿ ಹಲವು ಅಂಗಡಿ ಹಾಗೂ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ ಗಲಭೆ ನಿಯಂತ್ರಿಸಲು ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಹರಿಯಾಣದ ನೂಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೆರವಣಿಗೆ ವೇಳೆ ಸೋಮವಾರ ಪ್ರಾರಂಭವಾದ ಘರ್ಷಣೆಯು ಮಂಗಳವಾರ ಹೊತ್ತಿಗೆ ಪಕ್ಕದ ಗುರುಗ್ರಾಮ ಜಿಲ್ಲೆಗೂ ವ್ಯಾಪಿಸಿತು. ಗುರುಗ್ರಾಮದ ಸೆಕ್ಕರ್ 57ರಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, 26 ವರ್ಷದ ವ್ಯಕ್ತಿಸಿಟ್ಟರು ಮೃತಪಟ್ಟಿದ್ದರು. ಇಬ್ಬರು ಗಾಯಗೊಂಡಿದ್ದರು.

ಹರಿಯಾಣದ ಕೋಮು ಸಂಘರ್ಷದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಬೆಂಬಲಿಗರು ಹರ್ಯಾಣದಲ್ಲಿ ನಡೆದ ಕೋಮು ಹಿಂಸಾಚಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರಣ, ಯಾವುದೇ ಹಿಂಸಾಚಾರ ಉಲ್ಬಣಗೊಳ್ಳುವುದನ್ನು ತಡೆಯಲು ಪ್ರತಿಭಟನೆಗಳ ಬಿಗಿ ಭದ್ರತೆ ಮತ್ತು ಸಿಸಿಟಿವಿ ಕಣ್ಗಾವಲು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.

ಈ ಪ್ರತಿಭಟನೆಗಳಲ್ಲಿ ಯಾವುದೇ ಹಿಂಸಾಚಾರ ಮತ್ತು ದ್ವೇಷದ ಭಾಷಣಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಅರೆಸೇನಾ ಪಡೆಗಳ ಸಿಬ್ಬಂದಿ ಸೇರಿದಂತೆ ಸಾಕಷ್ಟು ಭದ್ರತೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

”ದಯವಿಟ್ಟು ಯಾವುದೇ ಹಿಂಸಾಚಾರ ಮತ್ತು ದ್ವೇಷದ ಭಾಷಣಗಳು ನಡೆಯದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಸಿಸಿಟಿವಿಗಳನ್ನು ನಿಯೋಜಿಸಿ ಇದರಿಂದ ಎಲ್ಲವೂ ರೆಕಾರ್ಡ್ ಆಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಮನೆಯಿಂದಲೇ ಕೆಲಸ ಮಾಡುವಂತೆ ಬಹುರಾಷ್ಟ್ರೀಯ ಕಂಪನಿ ಅಮೆರಿಕನ್ ಎಕ್ಸ್‌ಪ್ರೆಸ್ ಹಾಗೂ ಕೆಪಿಎಂಜಿ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಗುರುಗ್ರಾಮದ ಗಡಿ ಪ್ರದೇಶದ ಸೊಕ್ಕಾದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ದೊಡ್ ಮೂಲಕ ಸಲಕ, ಪ್ರದೇಶಗಳ ಮೇಲೆ ನಿಗಾ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ:

ಕಳೆದ ವರ್ಷ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳ ಹತ್ಯೆಯ ಆರೋಪಿ ಸ್ವಯಂಘೋಷಿತ ‘ಗೋ ರಕ್ಷಕ’ ಅಥವಾ ಗೋರಕ್ಷಕ ಮೋನು ಮಾನೇಸರ್ ಎನ್ನುವವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊ ಪ್ರಸ್ತುತ ನಡೆಯುತ್ತಿರುವ ಘರ್ಷಣೆಗಳಿಗೆ ಭಾಗಶಃ ಕಾರಣವಾಗಿವೆ. ಮನೇಸರ್ ಅವರ ವೀಡಿಯೊದಲ್ಲಿ ಅವರು ಈ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶವನ್ನು ಘೋಷಿಸಿದರು ಮತ್ತು ಇತರರನ್ನು ತನ್ನೊಂದಿಗೆ ಸೇರುವಂತೆ ಕರೆ ಕೊಟ್ಟಿದ್ದಾರೆ. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿತು, ಕೆಲವರು ಮನೇಸರ್‌ಗೆ ಪ್ರತಿಯಾಗಿ ಸವಾಲು ಮತ್ತು ಬೆದರಿಕೆ ಹಾಕಿದರು.

ಮಾನೇಸರ್ ಅಂತಿಮವಾಗಿ ಕಾರ್ಯಕ್ರಮಕ್ಕೆ ಹಾಜರಾಗದಿದ್ದರೂ, ಅವರ ಪೋಸ್ಟ್ ಮಾತ್ರ ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ.

ಈ ಬಗ್ಗೆ ನುಹ್‌ನ ಶಾಸಕ ಚೌಧರಿ ಅಫ್ತಾಬ್ ಅಹ್ಮದ್ ಎನ್‌ಡಿಟಿವಿ ಜೊತೆ ಮಾತನಾಡಿದ್ದು, ”ಇದು ಆಡಳಿತದ ವೈಫಲ್ಯ. ವಾತಾವರಣವು ಉದ್ವಿಗ್ನಗೊಳ್ಳುವ ಮೊದಲು ನಾವು ಅಧಿಕಾರಿಗಳ ಬಳಿಗೆ ಹೋಗಿ ಅದು ಉಲ್ಬಣಗೊಳ್ಳುವ ಮೊದಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ಸಮಯದಲ್ಲಿ  ಕ್ರಮ ಕೈಗೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಮೋನು ಮನೇಸರ್ ಇಲ್ಲಿದ್ದಾರೆ ಎಂಬ ವದಂತಿಯೂ ಇದಕ್ಕೆ ಸೇರಿದೆ.

ನುಹ್ ಮತ್ತು ಗುರುಗ್ರಾಮ್ ಎರಡರಲ್ಲೂ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮಂಗಳವಾರ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ, ಶಾಂತವಾಗಿರುವಂತೆ ಮನವಿ ಮಾಡಿದರು. ಆದರೆ ಗುರುಗ್ರಾಮ್ ಅಶಾಂತಿಯ ಪರಿಸ್ಥಿತಿ ಮುಂದುವರೆದಿದೆ. ಕೋಮು ಗುಂಪುಗಳು ಬೀದಿಗಳಿದಿವೆ, ಸ್ಕ್ರ್ಯಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿವೆ ಮತ್ತು ಸಣ್ಣ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ.

ಹರಿಯಾಣದ ನೂಹ್ ಜಿಲ್ಲೆಯಲ್ಲಿ ಸೋಮವಾರ ಪ್ರಾರಂಭವಾದ ಘರ್ಷಣೆಯು ಮಂಗಳವಾರ ಹೊತ್ತಿಗೆ ಪಕ್ಕದ ಗುರುಗ್ರಾಮ ಜಿಲ್ಲೆಗೂ ವ್ಯಾಪಿಸಿತು. ಗುರುಗ್ರಾಮದ ಸೆಕ್ಕರ್ 57ರಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, 26 ವರ್ಷದ ವ್ಯಕ್ತಿಸಿಟ್ಟರು ಮೃತಪಟ್ಟಿದ್ದರು. ಇಬ್ಬರು ಗಾಯಗೊಂಡಿದ್ದರು.

ಸೆಕ್ಸ‌ 57ರಲ್ಲಿರುವ ಅಂಜುಮನ್ ಮಸೀದಿಗೆ ಮಧ್ಯರಾತ್ರಿ ಗುಂಪು ತಲುಪಿದ್ದು, ಗುಂಪಿನಲ್ಲಿದ್ದವರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ, ಗಲಭೆಯು ಬುಧವಾರ ಸೆಕ್ಕ‌ 70ರವರೆಗೂ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ನೂಹ್ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಗ್ರಹರಕ್ಷಕ ದಳದ ಇಬ್ಬರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. 20 ಜನ ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ. ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಬಗ್ಗೆ ಪೊಲೀಸರು ಏಕೆ ಕ್ರಮಕೈಗೊಳ್ಳಲಿಲ್ಲ, ಮೋನು ಮಾನೇಸರ್‌ನನ್ನು ಇನ್ನೂ ಏಕೆ ಪತ್ತೆ ಮಾಡಿ ಬಂಧಿಸಲಾಗಿಲ್ಲ, ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ನಿರೀಕ್ಷಿಸಲು ಏಕೆ ವಿಫಲರಾದರು ಎಂಬ ಪ್ರಶ್ನೆಗಳು ಕಾಡುತ್ತಿವೆ.

ಗಲಭೆಯಲ್ಲಿ ಗಾಯಗೊಂಡ ಭಜರಂಗದಳದ 6 ಜನ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಮತಪಟ್ಟಿದ್ದಾರೆ ಎಂದು ವಿಶ್ವ ಹಿಂದು ಪರಿಷತ್‌ ಹೇಳಿದೆ. ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ತನ್ಮಾರ್ ಅವರು ಮಾಹಿತಿ ನೀಡಿ, ನೂಹನಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ಭಜರಂಗದಳದ ಕಾರ್ಯಕರ್ತ ಪ್ರದೀಪ್ ಶರ್ಮಾ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ನಡೆಸಿ ಗಾಯಗೊಳಿಸಿತ್ತು. ಅವರನ್ನು ದೆಹಲಿಯ ಸಪದರ್ರಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವದಂತಿಗಳನ್ನು ನಾಗರಿಕರು ನಂಬದಂತೆ ಪೊಲೀಸರು ಕೋರಿದ್ದಾರೆ ದೆಹಲಿಯಲ್ಲಿ ಶಾಲಾ, ಕಾಲೇಜು ಹಾಗೂ ಕಚೇರಿಗಳು ಮುಚ್ಚಲಾಗಿವೆ ಎಂಬ ವದಂತಿ ಸುಳ್ಳು, ಎಲ್ಲವೂ ಎಂದಿನಂತೆಯೇ ಇದೆ’ ಎಂದು ಗುರುಗ್ರಾಮದ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೇ ಪೊಲೀಸ್‌ ಗುಂಡಿನ ದಾಳಿ ಕುರಿತು ಪತ್ರಕರ್ತೆ ಅಯ್ಯೂಬ್‌, ಓವೈಸಿ ಮಾಡಿದ ಟ್ವೀಟ್‌ಗೆ ಕೇಂದ್ರದ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...