Homeಮುಖಪುಟರೈಲ್ವೇ ಪೊಲೀಸ್‌ ಗುಂಡಿನ ದಾಳಿ ಕುರಿತು ಪತ್ರಕರ್ತೆ ಅಯ್ಯೂಬ್‌, ಓವೈಸಿ ಮಾಡಿದ ಟ್ವೀಟ್‌ಗೆ ಕೇಂದ್ರದ ತಡೆ

ರೈಲ್ವೇ ಪೊಲೀಸ್‌ ಗುಂಡಿನ ದಾಳಿ ಕುರಿತು ಪತ್ರಕರ್ತೆ ಅಯ್ಯೂಬ್‌, ಓವೈಸಿ ಮಾಡಿದ ಟ್ವೀಟ್‌ಗೆ ಕೇಂದ್ರದ ತಡೆ

- Advertisement -
- Advertisement -

ರೈಲ್ವೇ ಸಂರಕ್ಷಣಾ ಪಡೆಯ ಕಾನ್‌ಸ್ಟೆಬಲ್‌ ಚೇತನ್ ಸಿಂಗ್ ಎನ್ನುವವರು ಮೂವರು ಮುಸ್ಲಿಂ ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಿದ ಕುರಿತು ಪತ್ರಕರ್ತೆ ರಾಣಾ ಅಯ್ಯೂಬ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮಾಡಿದ ಟ್ವೀಟ್‌ಗಳನ್ನು ಕೇಂದ್ರ ಸರ್ಕಾರದ ಬೇಡಿಕೆಯ ಮೇರೆಗೆ ತೆಗೆದುಹಾಕಲಾಗಿದೆ.

ಸೋಮವಾರ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಎಫ್‌ಪಿ) ಕಾನ್‌ಸ್ಟೆಬಲ್ ಚೇತನ್ ಸಿಂಗ್ ಎನ್ನುವ ವ್ಯಕ್ತಿ ಆರ್‌ಪಿಎಫ್ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಟಿಕಾ ರಾಮ್ ಮೀನಾ ಸೇರಿದಂತೆ ನಾಲ್ವರನ್ನು ಕೊಂದ ಭೀಕರ ಘಟನೆ ನಡೆದಿದೆ.

ಚೇತನ್ ಸಿಂಗ್ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಜುಲೈ 31ರಂದು ಬೆಳಗ್ಗೆ 5 ಗಂಟೆಗೆ ತನ್ನ ಆಟೊಮ್ಯಾಟಿಕ್ ಗನ್‌ನಿಂದ ಆರ್‌ಪಿಎಫ್‌ನ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಟಿಕಾ ರಾಮ್ ಮೀನಾ (58), ಮೂವರು ಪ್ರಯಾಣಿಕರಾದ ಅಬ್ದುಲ್ ಖಾದಿರ್ ಭಾಯ್ ಮುಹಮ್ಮದ್ ಹುಸೈನ್ ಭಾನುಪುರ್ವಾಲ (62), ಅಖ್ತರ್ ಅಬ್ಬಾಸ್ ಅಲಿ (48) ಹಾಗೂ ಸದಾರ್ ಮುಹಮ್ಮದ್ ಹುಸೈನ್ (48) ಅವರನ್ನು ಹತ್ಯೆಗೈದಿದ್ದರು.

ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಚೇತನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಪ್ರಶಂಸಿಸುತ್ತಿರುವುದು ಕೇಳಿ ಬಂದಿದೆ.

”ಅವರು (ಮುಸ್ಲಿಮರು) ಪಾಕಿಸ್ತಾನದ ಪರವಾಗಿ ಕಾರ್ಯನಿರ್ವಹಿಸುತ್ತಾರೆ. ಇದನ್ನೇ ಮಾಧ್ಯಮಗಳು ತೋರಿಸುತ್ತಿರುವುದು. ನೀವು ಭಾರತದಲ್ಲಿ ಬದುಕಲು ಬಯಸುವುದಾದರೆ ಮೋದಿ, ಯೋಗಿ ಹಾಗೂ ನಿಮ್ಮ ಠಾಕ್ರೆಗೆ ಮತ ಚಲಾಯಿಸಿ” ಎಂದು ಸಿಂಗ್ ಹೇಳಿರುವುದು ಕೂಡ ವೀಡಿಯೊದಲ್ಲಿ ಕೇಳಿ ಬಂದಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕ್ರೇನ್ ಅವಘಡ: 18 ಜನರ ಸಾವು

ಘಟನೆಯ ಕುರಿತು ಸಮಗ್ರ ತನಿಖೆಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರೈಲ್ವೆ ಮಂಡಳಿ ರೂಪಿಸಿದೆ. ಈ ಉನ್ನತ ಮಟ್ಟದ ಸಮಿತಿ ಮಂಗಳವಾರ ಮುಂಬೈಗೆ ತಲುಪಿದೆ ಹಾಗೂ ತನಿಖೆ ಆರಂಭಿಸಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ. ಅಯ್ಯೂಬ್ ಮತ್ತು ಒವೈಸಿ ಅವರು ತಮ್ಮ ಟ್ವೀಟ್‌ಗಳಲ್ಲಿ “ಮುಸ್ಲಿಂ ವಿರೋಧಿ ದ್ವೇಷದ ಭಾಷಣ” ಕ್ಕೆ ನರೇಂದ್ರ ಮೋದಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

”ಭಾರತ ಸರ್ಕಾರದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ರೈಲು ಘಟನೆಯ ಕುರಿತು ನನ್ನ ಟ್ವೀಟ್ ಅನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಈ ಬಗ್ಗೆ ತಿಳಿಸಲು ಟ್ವಿಟರ್ ನನಗೆ ಪತ್ರ ಬರೆದಿದೆ. ಪ್ರಜಾಪ್ರಭುತ್ವದ ಮಾತೇ ಇಷ್ಟು” ಎಂದು ಆಯ್ಯೂಬ್ ಟ್ವೀಟ್ ಮಾಡಿದ್ದಾರೆ.

”#JaipurExpressTerrorAttack ಕುರಿತ ನನ್ನ ಟ್ವೀಟ್ ಅನ್ನು ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಭಾರತದಲ್ಲಿ ತಡೆಹಿಡಿಯಲಾಗಿದೆ. ಇದು ಯಾವ ಕಾನೂನನ್ನು ಉಲ್ಲಂಘಿಸಿದೆ? ಭಯೋತ್ಪಾದಕ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಕರೆಯುವುದು ಅಪರಾಧವೇ? ಮುಸ್ಲಿಮರ ವಿರುದ್ಧದ ದ್ವೇಷದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮೋದಿ ಸರ್ಕಾರವು ಈ ಪೂರ್ವಭಾವಿಯಾಗಿದೆ ಎಂದು ಹಾರೈಸುತ್ತೇನೆ” ಎಂದು ಒವೈಸಿ ಪ್ರಶ್ನೆ ಮಾಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಭಾರತದಲ್ಲಿ ವೀಡಿಯೊವನ್ನು ತೆಗೆದುಹಾಕಲು ಕೇಂದ್ರವು Twitter ಗೆ ಆದೇಶಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...