Homeಮುಖಪುಟಮೋದಿ ಸರ್ಕಾರದಿಂದ ಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ವಿವರ ಸೋರಿಕೆ: ಸ್ಕ್ರೀನ್‌ಶಾಟ್‌ ಹಂಚಿಕೊಂಡ ಟಿಎಂಸಿ ಮುಖಂಡ

ಮೋದಿ ಸರ್ಕಾರದಿಂದ ಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ವಿವರ ಸೋರಿಕೆ: ಸ್ಕ್ರೀನ್‌ಶಾಟ್‌ ಹಂಚಿಕೊಂಡ ಟಿಎಂಸಿ ಮುಖಂಡ

ಕೋವಿಡ್ ಲಸಿಕೆ ಪಡೆದ ಪ್ರತಿಯೊಬ್ಬ ಭಾರತೀಯರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆ, ಪಾಸ್‌ಪೋರ್ಟ್ ಸಂಖ್ಯೆ, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಸೋರಿಕೆಯಾಗಿವೆ.

- Advertisement -
- Advertisement -

ಮೋದಿ ಸರ್ಕಾರದಿಂದ ಪ್ರಮುಖ ದತ್ತಾಂಶ ಉಲ್ಲಂಘನೆಯಾಗಿದೆ. ಕೋವಿಡ್ ಲಸಿಕೆ ಪಡೆದ ಪ್ರತಿಯೊಬ್ಬ ಭಾರತೀಯರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಇತ್ಯಾದಿ ಸೇರಿದಂತೆ ಇತರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ ಮತ್ತು ಉಚಿತವಾಗಿ ಲಭ್ಯವಿವೆ ಎಂದು ಟಿಎಂಸಿ ಮುಖಂಡ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ರಾಜ್ಯಸಭಾ ಸಂಸದ ಮತ್ತು ಟಿಎಂಸಿ ನಾಯಕ ಡೆರೆಕ್ ಒ’ಬ್ರೇನ್, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ & ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಪತ್ರಕರ್ತರ ವೈಯಕ್ತಿಕ ಮಾಹಿತಿಗಳು ಟೆಲಿಗ್ರಾಂನಲ್ಲಿ ಸೋರಿಕೆಯಾಗಿರುವುದರ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿದ್ದಾರೆ.

ಮೋದಿ ಸರ್ಕಾರವು “ಬಲವಾದ ಡೇಟಾ ಭದ್ರತೆ” ಅನ್ನು ಅನುಸರಿಸುತ್ತದೆ ಎಂದು ಹೇಳಿಕೊಳ್ಳುವಾಗ ಪಾಸ್‌ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ, ಇತ್ಯಾದಿ ಸೇರಿದಂತೆ ವೈಯಕ್ತಿಕ ವಿವರಗಳು ಹೇಗೆ ಸೋರಿಕೆಯಾದವು? ಈ ಸೋರಿಕೆಯ ಬಗ್ಗೆ ಮೋದಿ ಸರ್ಕಾರ ಸೇರಿದಂತೆ ಗೃಹ ಸಚಿವಾಲಯಕ್ಕೆ ಏಕೆ ತಿಳಿದಿಲ್ಲ ಮತ್ತು ಡೇಟಾ ಉಲ್ಲಂಘನೆಯ ಬಗ್ಗೆ ಭಾರತೀಯರಿಗೆ ಏಕೆ ಮಾಹಿತಿ ನೀಡಿಲ್ಲ ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರವು ಆಧಾರ್ ಮತ್ತು ಪಾಸ್‌ಪೋರ್ಟ್ ಸಂಖ್ಯೆಗಳನ್ನು ಒಳಗೊಂಡಂತೆ ಭಾರತೀಯರ ಸೂಕ್ಷ್ಮ ವೈಯಕ್ತಿಕ ಡೇಟಾಗೆ ಹೊರಗಿನವರಿಗೆ ಪ್ರವೇಶವನ್ನು ನೀಡಿದೆ. ಹಾಗಾಗಿ ಈ ಸೋರಿಕೆ ಕಂಡುಬಂದಿದೆ. ಇದು ಗಂಭೀರ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ರೈಲ್ವೆಯ ಜೊತೆಗೆ ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಷನ್ಸ್ ಮತ್ತು ಐಟಿ ಖಾತೆಯ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಏನು ಮಾಡುತ್ತಿದ್ದಾರೆ? ಅವರ ಸಮರ್ಥತೆಯನ್ನು ಪ್ರಧಾನಿ ಮೋದಿ ಎಷ್ಟು ದಿನ ಕಡೆಗಣಿಸುತ್ತಾರೆ ಎಂದು ಗೋಖಲೆ ಪ್ರಶ್ನಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹಿರಿಯ ಪತ್ರಕರ್ತರಾದ ರಾಜರಾಂ ತಲ್ಲೂರುರವರು, “ಕೋವಿಡ್ ಲಸಿಕೆಯ ನೀತಿ-ನಿಯಮಗಳ ಪ್ರಕಾರ ಲಸಿಕೆ ಪಡೆದವರ ಮಾಹಿತಿಯನ್ನು ಆರು ತಿಂಗಳ ಒಳಗೆ ಡಿಲೀಟ್ ಮಾಡಬೇಕು. ಡಿಲೀಟ್ ಮಾಡಿರುವುದಾಗಿಯೂ ಕೇಂದ್ರ ಸರ್ಕಾರ ಹೇಳಿದೆ. ಒಂದು ವೇಳೆ ಮಾಡಿಲ್ಲದಿದ್ದರೆ ಅದು ದೊಡ್ಡ ಅಪರಾಧವಾಗುತ್ತದೆ” ಎಂದರು.

ಮುಂದುವರಿದು “ಸಾಕೇತ್ ಗೋಖಲೆಯವರಿಗೆ ಈ ಮಾಹಿತಿಗಳು ಹೇಗೆ ಸಿಕ್ಕವು? ಅವುಗಳ ಮೂಲವೇನು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಡೇಟಾವನ್ನು ಯರ್ಯಾರು ಬಳಸಿರಬಹುದು ಎಂಬುದರ ಅಂದಾಜು ಕೂಡ ಇಲ್ಲ. ಆದರೆ ಈ ಕುರಿತು ಸಮಗ್ರ ತನಿಖೆ ನಡೆಯುವ ಅಗತ್ಯವಿದೆ” ಎಂದರು.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2023ರ ಫೆಬ್ರವರಿ 08 ರಂದು ‘ಆರೋಗ್ಯ ಸೇತು ಡೇಟಾ ಕುರಿತ ಶಿಷ್ಟಾಚಾರ’ ಹೆಸರಿನಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ “ಈ ಶಿಷ್ಟಾಚಾರದ ನಿಬಂಧನೆಗಳಿಗೆ ಅನುಸಾರವಾಗಿ, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್‌ನ ಸಂಪರ್ಕ ಪತ್ತೆ ಹಚ್ಚುವಿಕೆಯ ವೈಶಿಷ್ಟ್ಯವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಅದರ ಮೂಲಕ ಸಂಗ್ರಹಿಸಲಾದ ಸಂಪರ್ಕ ಪತ್ತೆಹಚ್ಚುವಿಕೆಯ ಡೇಟಾವನ್ನು ಅಳಿಸಲಾಗಿದೆ. ಮತ್ತು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾದ ಸಂಪರ್ಕ ಪತ್ತೆಹಚ್ಚುವಿಕೆಯ ಡೇಟಾವನ್ನು ಅಳಿಸಲಾಗಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ” ಎಂದು ಘೋಷಿಸಿದೆ. ಆದರೂ ಈ ಡೇಟಾಗಳು ಹರಿದಾಡುತ್ತಿರುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ.

ಇದನ್ನೂ ಓದಿ: ಡೇಟಾ ಸಂರಕ್ಷಣೆ: ಹೇಳಿದ್ದೇನು? ಮಾಡಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read