Homeಮುಖಪುಟದಾಭೋಲ್ಕರ್ ರೀತಿ ಕೊಲ್ಲುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಜೀವ ಬೆದರಿಕೆ: ಆರೋಪಿ ಅರೆಸ್ಟ್

ದಾಭೋಲ್ಕರ್ ರೀತಿ ಕೊಲ್ಲುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಜೀವ ಬೆದರಿಕೆ: ಆರೋಪಿ ಅರೆಸ್ಟ್

- Advertisement -
- Advertisement -

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್‌ಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮುಂಬೈ ಅಪರಾಧ ವಿಭಾಗವು ಭಾನುವಾರ ಪುಣೆಯಲ್ಲಿ ಶಂಕಿತನನ್ನು ಬಂಧಿಸಿದೆ.

ಆರೋಪಿ ಸಾಗರ್ ಬರ್ವೆ (35) ಅವರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಜೂನ್ 13 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಶುಕ್ರವಾರ, ಪವಾರ್ ಅವರಿಗೆ ಆರೋಪಿ ಸಾಗರ್ ಬರ್ವೆ ಅವರು ಫೇಸ್‌ಬುಕ್‌ನಲ್ಲಿ “ಅವರು (ಪವಾರ್) ಶೀಘ್ರದಲ್ಲೇ (ನರೇಂದ್ರ) ದಾಭೋಲ್ಕರ್ ಅವರಿಗಾದ ರೀತಿಯಲ್ಲೇ ನಿಮಗು ಆಗುತ್ತದೆ” ಎಂದು ಸಂದೇಶ ಕಳುಹಿಸಿದ್ದಾರೆ. 2013ರಲ್ಲಿ ಪುಣೆಯಲ್ಲಿ ನಾಗರಿಕ ಕಾರ್ಯಕರ್ತ ದಾಭೋಲ್ಕರ್ ಕೊಲೆಯಾಗಿದ್ದರು.

”ಆರೋಪಿ ಬಾರ್ವೆ ಅವರು ಪ್ರಮುಖ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಸಧ್ಯ ಅವರನ್ನು ಬಂಧಿಸಿರುವ ಪೊಲೀಸರು, ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಸೈಬರ್ ಪೊಲೀಸರು ತಾಂತ್ರಿಕ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರು ಏಕೆ ಬೆದರಿಕೆ ಹಾಕಿದರು ಎಂಬುದನ್ನು ತಿಳಿಯಲು ನಾವು ಬಾರ್ವೆ ಅವರನ್ನು ಪ್ರಶ್ನಿಸುತ್ತೇವೆ” ಎಂದು ಹಿರಿಯ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಉದ್ಘಾಟನೆಯಲ್ಲಿ ನಡೆಸಿದ ಆಚರಣೆಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ: ಶರದ್ ಪವಾರ್ ಆಕ್ರೋಶ

ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ತನ್ನ ತಂದೆಗೆ ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಎನ್‌ಸಿಪಿ ನಾಯಕರ ನಿಯೋಗದೊಂದಿಗೆ ಸುಪ್ರಿಯಾ ಸುಳೆ ಅವರು ಶುಕ್ರವಾರ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿದರು. ಎಲ್‌ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 506 (2) ಮತ್ತು 504 ಮತ್ತು 153 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಮುಂಬೈ ಅಪರಾಧ ವಿಭಾಗದ ಘಟಕ 2ಕ್ಕೆ ವರ್ಗಾಯಿಸಲಾಗಿದೆ.

ಟ್ವಿಟ್ಟರ್ ಹ್ಯಾಂಡಲ್ ‘@SbhBJP’ ನಿಂದ ಸೌರಭ್ ಪಿಂಪಾಲ್ಕರ್ ಪ್ರೊಫೈಲ್ ಹೆಸರಿನಲ್ಲಿ ಪವಾರ್ ವಿರುದ್ಧ ಮತ್ತೊಂದು ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದೆ.

ಸೈಬರ್ ಪೊಲೀಸರೊಂದಿಗೆ ಹಲವು ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಈ ಬಗ್ಗೆ ಪವಾರ್ ಮಾತನಾಡಿದ ಪವಾರ್ ಅವರು, ನಾನು ಬೆದರಿಕೆಯ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ. ಮಹಾರಾಷ್ಟ್ರದ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿರುವವರು ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read