Homeಮುಖಪುಟರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

- Advertisement -
- Advertisement -

ಪ್ರಸ್ತುತ ಪ್ರಜಾಸತ್ತೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಪ್ರಭುತ್ವದ ಆಚರಣೆಗಳು ಬ್ರಾಹ್ಮಣಶಾಹಿಯ ದಿಗ್ವಿಜಯದಂತಿವೆ. ಪ್ರಧಾನಿ ನರೇಂದ್ರ ಮೋದಿಯವರು ಬ್ರಾಹ್ಮಣ ಪುರೋಹಿತರ ದಂಡಿನೊಂದಿಗೆ ದಕ್ಷಿಣದ ಚೋಳ ರಾಜರ ಕಾಲದ್ದೆಂಬ ರಾಜದಂಡ “ಸೆಂಗೋಲ್”ಅನ್ನು ಸಂಸತ್ ಭವನದಲ್ಲಿ ಯಜ್ಞದೀಕ್ಷಿತರಾಗಿ ಪ್ರತಿಷ್ಠಾಪಿಸಿದರು-ರಾಜನ ಪಟ್ಟಾಭಿಷೇಕದಂತೆ.

ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಶಿಷ್ಟಾಚಾರ’ ಕಾರಣದಿಂದ ಆಹ್ವಾನಿಸಿರಲಿಲ್ಲ. ಆದರೆ, ಆ ಶಿಷ್ಟಾಚಾರ ಏನೆಂದು ತಿಳಿದುಬರುವುದಿಲ್ಲ. ಮೊದಲಿಗೆ, ಮುರ್ಮು ಅವರು ಒಬ್ಬ ವಿಧವೆ, ಅದೂ ಬುಡಕಟ್ಟು (ಎಸ್.ಟಿ) ಮಹಿಳೆ. ಆದ್ದರಿಂದ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರೆ ಅದರ ಪಾವಿತ್ರ್ಯತೆಗೆ ಭಂಗ ಬರುತ್ತದೆ ಎಂಬ ಸನಾತನ ’ಶಿಷ್ಟತೆ’ಗಳು ಕಾರಣವಾದವೇ? ಅಥವಾ ’ಸೆಂಗೋಲ್’ ಎಂಬ ರಾಜದಂಡವನ್ನು ಪುರುಷನು ಮಾತ್ರ ಸ್ವೀಕರಿಸಲರ್ಹ ಎಂಬ ರಾಜಪ್ರಭುತ್ವದ ಸಂಪ್ರದಾಯವೋ?- ಈ ಚರ್ಚೆಗಳು ಜಾರಿಯಲ್ಲಿವೆ. ಒಟ್ಟಾರೆ ಮುರ್ಮು ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಸ್ತ್ರೀ ಸಂಕುಲವನ್ನೇ ಅವಮಾನಿಸಲಾಯಿತು. ಇದು ಪ್ರಜಾತಂತ್ರದಲ್ಲಿ ದೇಶದ ಪ್ರಥಮ ಮಹಿಳೆಗೆ ನಾವು ತೋರಿದ ಅಕ್ಷಮ್ಯ ಅಪರಾಧ!

ಎರಡನೆಯದಾಗಿ, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನ ವಿರುದ್ಧ ಕಳೆದೊಂದು ತಿಂಗಳಿನಿಂದ ಜಂತರ್‌ಮಂತರ್‌ನಲ್ಲಿ ಆತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಧರಣಿ ಸತ್ಯಾಗ್ರಹ ಹಿಡಿದಿದ್ದಾರೆ. ಅವರು ಇದೇ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದ ದಿನ ಇಂಡಿಯಾ ಗೇಟ್ ಬಳಿ ಧರಣಿ ಕೂರಲು ಹೊರಟರು. ಆದರೆ ಇದರಿಂದ ಶಾಂತಿ ಭಂಗವಾಗುತ್ತದೆಂದು ನೆಪವೊಡ್ಡಿ ಪೊಲೀಸರು ಅವರನ್ನು ಬಡಿದು ಎಳೆದು ಹಾಕಿದರು. ಆ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಹರಿದುಬಂತು. ಅತ್ತ ಉದ್ಘಾಟನೆಯ ಮಂತ್ರಘೋಷ ದಿಗ್ಮಂಡಲ ತುಂಬಿದರೆ, ಇತ್ತ ಒಲಂಪಿಕ್ಸ್‌ನಲ್ಲಿ ಪದಕಗಳಿಸಿ ದೇಶದ ಕೀರ್ತಿಯನ್ನು ದಿಗಂತ ವಿಸ್ತಾರಗೊಳಿಸಿದ ಮಹಿಳಾ ಕುಸ್ತಿಪಟುಗಳ ಅಸಹಾಯಕ ಅರಣ್ಯ ರೋದನ. ಈ ಪ್ರಹಸನದ ಬಗ್ಗೆ ಪ್ರಧಾನಿ ಮೋದಿಯವರು ತುಟಿಬಿಚ್ಚುತ್ತಿಲ್ಲ; ಗುಟ್ಟು ಏನೆಂದು ತಿಳಿಯುತ್ತಿಲ್ಲ. ನಮ್ಮ ರಾಷ್ಟ್ರಪತಿಗಳಾದರೂ ಮೌನ ಮುರಿಯುತ್ತಿಲ್ಲ. ಏಕೆ? ಕಾರಣ ತಿಳಿಯುತ್ತಿಲ್ಲ!

ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಈ ದೇಶದಲ್ಲಿ ಮಹಿಳೆಯರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಹೆಣ್ಣು ಏನಿದ್ದರೂ ಗೃಹಸ್ವಾಮಿನಿ ಮಾತ್ರ ಎನ್ನುತ್ತದೆ ಮನುಧರ್ಮ ಶಾಸ್ತ್ರ. ಈ ಎಲ್ಲ ಬೆಳವಣಿಗೆಯನ್ನು ಮನಗಂಡು ನಮ್ಮ ರಾಷ್ಟ್ರಪತಿಯವರು ಸರ್ಕಾರಕ್ಕೆ ಸ್ಪಷ್ಟೀಕರಣ ಕೋರಿ ಒಂದು ದಿಟ್ಟ ಕ್ರಮಕ್ಕಾದರೂ ಮುಂದಾಗಬಹುದೇ?. ಹಾಗೆ ಮಾಡಬೇಕೆಂಬುದು ಪ್ರಜಾತಂತ್ರವಾದಿಗಳ ಅದಮ್ಯ ಅಪೇಕ್ಷೆ! ಇದು ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಮಾಡಬಹುದಾಗಿದ್ದರೆ, ಅಧಿಕಾರದಾಚೆಗೂ ಪ್ರತಿಭಟಿಸುವ ಅವಕಾಶ ಅವರಿಗಿದೆ.

ಇದಕ್ಕೆ ಪೂರಕವಾಗಿ ಭಾರತೀಯ ಸಂಸ್ಕೃತಿಯ ಕೆನೆಯಂತಿರುವ ರಾಮಾಯಣದ ಹಾಗೂ ಶಾಕುಂತಲ ನಾಟಕದ ಸೀತಾ-ಶಕುಂತಲೆಯರ ಪಾತ್ರಗಳ ನಿರ್ಧಾರವನ್ನು ಇಲ್ಲಿ ಪ್ರಸ್ತಾಪಿಸಬಹುದು. ಈ ಇಬ್ಬರು ನಾಯಕಿಯರು ತಾವು ತೀವ್ರ ಅವಮಾನಿತರಾದಾಗ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಅನುಪಮ. ಮೊದಲಿಗೆ, ಲವ-ಕುಶರ ಕಾಳಗದ ನಂತರ ಪುರುಷೋತ್ತಮ ರಾಮನು ಸೀತೆಯನ್ನು ಸಂಧಿಸಿ ಅಯೋಧ್ಯೆಗೆ ಬರಲು ಆಹ್ವಾನಿಸುತ್ತಾನೆ. ಆದರೆ ಅಂದು ಪರಿತ್ಯಾಗಗೊಂಡ ಭೂಜಾತೆ ಸೀತೆ ತಣ್ಣಗೆ ರಾಜನ ಆಹ್ವಾನವನ್ನು ನಿರಾಕರಿಸಿ ವಾಲ್ಮೀಕಿ ಆಶ್ರಮದಲ್ಲೇ ಉಳಿಯುತ್ತಾಳೆ. ಇದು ಉತ್ತರ ರಾಮಾಯಣದ ಅಮೋಘ ದರ್ಶನ ಸಾರ.

ಇನ್ನು ಶಾಕುಂತಲ ನಾಟಕದಲ್ಲಿ ಬೇಟೆಗೆಂದು ಬಂದ ದುಷ್ಯಂತ ಕಣ್ವಾಶ್ರಮದಲ್ಲಿ ಮಗ ಭರತ ಹಾಗೂ ಅವನ ತಾಯಿ ಶಕುಂತಲೆಯನ್ನು ಕಂಡು ’ವಸಂತಕಾಲಕ್ಕೆ ಬಳ್ಳಿ ಹೂ ತಳೆಯುವಂತೆ ನೀನು ಈ ಅಭಿಜ್ಞಾನವನ್ನು ಪುನಃ ತೊಡು’ ಎಂದು ಗುರುತಿನ ಉಂಗುರವನ್ನು ನೀಡುತ್ತಾನೆ. ಆದರೆ ’ಸರಿಯಾದ ಸಮಯಕ್ಕೆ ಅದು ನನಗೆ ಕೈ ಕೊಟ್ಟಿತು, ಬೇಡ’ ಎಂದು ತಣ್ಣಗೆ ನಿರಾಕರಿಸುತ್ತಾಳೆ. ಮತ್ತು ಋಷ್ಯಾಶ್ರಮದಲ್ಲೇ ಉಳಿಯುತ್ತಾಳೆ ಶಕುಂತಲೆ. ಈ ಎರಡೂ ಜಾಗತಿಕ ಪ್ರತಿರೋಧಗಳು ಸ್ತ್ರೀ ಸಂವೇದನೆಯ ಸಂಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸಂದರ್ಭಗಳಾಗಿವೆ.

ಅದಿರಲಿ, ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ಸಂದರ್ಭದಲ್ಲಿ ವಿಚಾರ ಮಾಡಿದರೆ ಪುರುಷಪಾರಮ್ಯದ ನೀತಿಯನ್ನನುಸರಿಸುವ ಪ್ರಧಾನಿ ಮೋದಿಯವರ ನಡೆ ನೋಡಿದರೆ ಈ ಸರ್ಕಾರ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬೀಗುತ್ತಿದೆಯೇ ಹೊರತು ವಾಸ್ತವವಾಗಿ ಮಹಿಳೆಯರಿಗೆ ನೀಡುವ ಘನತೆ ಗೌರವಗಳಿಗೆ ಲೋಪವೆಸಗುತ್ತಾ ಬರುತ್ತಿದೆ. ಆದ ಪ್ರಯುಕ್ತ ಈ ಸಂಘರ್ಷ ಸಮಯದಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ದೃಢನನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಭವನದಿಂದ ಹೊರಬರುವುದು ಪ್ರತಿಭಟನೆಯ ಸಂಕೇತವಾದೀತು. ಈ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವೆ? ಹಾಗೇನಾದರೂ ಅವರು ಮಾಡಿದರಾದರೆ ಇದೊಂದು ಅನನ್ಯ ಐತಿಹಾಸಿಕ ಘಟನೆಯಾಗುತ್ತದೆ. ಮುರ್ಮು ಅವರ ಹೆಸರು ಸೀತಾ-ಶಕುಂತಲೆಯರ ಸಾಲಿಗೆ ನಿಲ್ಲುತ್ತದೆ. ಮತ್ತು ಜಾಗತಿಕ ಸ್ತ್ರೀ ಸಂಕುಲದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮುರ್ಮು ಅವರು ಬಡತನ ಸಿರಿತನಗಳನ್ನು ಕಂಡುಂಡು ಬಾಳಿ ಬದುಕಿದವರು. ಅವರಿಗೆ ರಾಷ್ಟ್ರಪತಿ ಭವನವನ್ನು ತೊರೆದು ಬರಲು ಅಂಥ ಮೋಹವೇನೂ ಇರಲಾರದು. ಹೇಗೂ ಐದು ವರ್ಷದ ತರುವಾಯ ತೆರವುಗೊಳಿಸಲೇಬೇಕಲ್ಲಾ! ’ನಾಳೆ ಬಪ್ಪುದು ಇಂದೇ ಬರಲಿ’ ಎಂದು ಹೊರಬಂದರೆ ಅದೊಂದು ಅಮೃತ ಮುಹೂರ್ತ! ಅದು ಎಷ್ಟೋ ದಮನಿತ ಮಹಿಳೆಯರಿಗೆ ಸ್ಪೂರ್ತಿದಾಯಕವೂ ಆದೀತು ಮತ್ತು ಅವರ ಹೆಸರು ಹಿಮಾಲಯದೆತ್ತರಕ್ಕೆ ಏರುತ್ತದೆ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...