ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಹಾಕಿ ಉನ್ನತ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್‌ಗಳ ಒಂದು ಫಲಕವನ್ನು ಹಾಕಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಅಲೋಕ್ ಮೋಹನ್ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಅವರು ಹೊರಡಿಸಿದ ಸುತ್ತೋಲೆಯಲ್ಲಿ ”ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಉನ್ನತ ಪೊಲೀಸ್ ಅಧಿಕಾರಿಗಳ ಫೋನ್ ಸಂಖ್ಯೆಗಳನ್ನು ನಮೂದಿಸುವ ಬೋರ್ಡ್ಅನ್ನು ಹಾಕಬೇಕು. ಇದರಿಂದ ಸಾರ್ವಜನಿಕರು ನೀಡಿದ ದೂರುಗಳಿಗೆ ಪೊಲೀಸರು ಸ್ಪಂದಿಸದಿದ್ದರೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಜನರಿಗೆ ಇದರಿಂದ ಸಾಧ್ಯವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
DGP Karnataka Alok Mohan issues a circular stating that all Police Stations of the state shall put up a board mentioning the phone numbers of higher Police officials so that the public can approach them if their complaints are unattended. pic.twitter.com/UywROOrFOr
— ANI (@ANI) June 16, 2023
ಸಾರ್ವಜನಿಕರ ದೂರುಗಳನ್ನು ದೂರುಗಳನ್ನು ಸ್ವೀಕರಿಸದೇ ಹೋದಲ್ಲಿ ಪೊಲೀಸ್ ಮುಖ್ಯಸ್ಥರು, ಡಿಸಿಪಿ, ಎಸಿಪಿಯನ್ನು ಸಂಪರ್ಕಿಸಿ ಎಂದು ಬರೆದು, ದೂರವಾಣಿ ಸಂಖ್ಯೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಮೂದಿಸಬೇಕು ಎಂದು ತಿಳಿಸಲಾಗಿದೆ.
ಕಮೀಷನರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ದೂರವಾಣಿ ಸಂಖ್ಯೆಗಳನ್ನೂ ನಮೂದಿಸಬೇಕು. 20 ಜೂನ್ 2023ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಮರಳು ಮಾಫಿಯಾ ತಡೆಯಲು ಮುಂದಾದ ಪೊಲೀಸ್ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ
ಅಪರಾಧ ಕೃತ್ಯ ತಡೆಗೆ ಗೃಹ ಇಲಾಖೆ ದಿಟ್ಟ ಕ್ರಮ: ಸಚಿವ ಡಾ.ಜಿ.ಪರಮೇಶ್ವರ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯ ತಡೆಗೆ ಗೃಹ ಇಲಾಖೆ ದಿಟ್ಟ ಕ್ರಮಕ್ಕೆ ಮುಂದಾಗಿದ್ದು, ಜನಸಂದಣಿ, ಇಂಟರ್ ಸೆಕ್ಷನ್, ಮಹಿಳೆಯರು ಓಡಾಡುವ ಸ್ಥಳಗಳು ಸೇರಿದಂತೆ ಹಲವು ಕಡೆ 7 ಸಾವಿರ ಹೈ ರೆಸಲ್ಯೂಷನ್ ಕ್ಯಾಮರಾ ಅಳವಡಿಸಲಾಗಿದೆ. 80 ಠಾಣೆಗಳಲ್ಲಿ ಕ್ಯಾಮರಾ ದೃಶ್ಯಾವಳಿ ನೋಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ”ಬೆಂಗಳೂರಿನ 30 ಕಡೆ ಸೇಫ್ಟಿ ಐಲ್ಯಾಂಡ್ ಓಪನ್ ಮಾಡಲಾಗಿದೆ. ಸೇಫ್ಟಿ ಐಲ್ಯಾಂಡ್ನಲ್ಲಿ ಬಟನ್ ಒತ್ತಿದ್ರೆ ಪೊಲೀಸರಿಗೆ ಮಾಹಿತಿ ಬರುತ್ತೆ. ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದು ರಕ್ಷಣೆ ಮಾಡುತ್ತಾರೆ” ಎಂದು ತಿಳಿಸಿದರು.
ಠಾಣೆಯಲ್ಲಿ ದೂರು ಸ್ವೀಕರಿಸಲ್ಲ ಎಂಬ ದೂರು ಬರಬಾರದು
”ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕು. ಪೊಲೀಸ್ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ತಿಳಿಹೇಳಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಠಾಣೆಯಲ್ಲಿ ದೂರು ಸ್ವೀಕರಿಸಲ್ಲ ಎಂಬ ದೂರುಗಳು ಬರಬಾರದು. ನಾನು ಕೂಡ ಠಾಣೆಗಳಿಗೆ ಭೇಟಿ ನೀಡುತ್ತೇನೆ. ಸರ್ಕಾರ ಪೊಲೀಸರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಿದೆ” ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.


