2024ರ ಲೋಕಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟವನ್ನು PDA (ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯತರು) ಸೇರಿ ಸೋಲಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಲಕ್ನೋದಲ್ಲಿ ನಡೆದ ಎನ್‌ಡಿಟಿವಿ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, “ಪಿಡಿಎ (ಪಿಚ್ಲೆ, ದಲಿತ, ಅಲ್ಪಸಂಖ್ಯೆಕ್) ಎನ್‌ಡಿಎಯನ್ನು ಸೋಲಿಸುತ್ತೇವೆ. “’80 ಸೋಲಿಸಿ, ಬಿಜೆಪಿಯನ್ನು ಕಿತ್ತುಹಾಕಿ’ ಎಂಬ ಘೋಷಣೆ ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲಾ ಕಡೆ ವಿರೋಧ ಪಕ್ಷಗಳು ಸೇರಿ ಬಿಜೆಪಿಯನ್ನು ಸೋಲಿಸುವ ಗುರಿ ಇಟ್ಟುಕೊಂಡಿದ್ದಾರೆ.
“ದೊಡ್ಡ ರಾಷ್ಟ್ರೀಯ ಪಕ್ಷಗಳು ನಮಗೆ ಬೆಂಬಲ ನೀಡಿದರೆ ಯುಪಿಯಲ್ಲಿ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಹಿಂದೆ ನಾವು ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಬಿಎಸ್‌ಪಿಯೊಂದಿಗಿನ ತಮ್ಮ ಪಕ್ಷದ ಮೈತ್ರಿಗಳನ್ನು ಉಲ್ಲೇಖಿಸಿದ ಅವರು, ಸಮಾಜವಾದಿ ಪಕ್ಷವು ಯಾವಾಗಲೂ ಪ್ರಾಮಾಣಿಕ ಮತ್ತು ಹೊಂದಾಣಿಕೆಯ ಮೈತ್ರಿ ಪಾಲುದಾರ ಎಂದಿದ್ದಾರೆ. ಎಸ್‌ಪಿ ಎಲ್ಲೆಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ನಾವು ಸೀಟು ವಿಚಾರದಲ್ಲಿ ಜಗಳವಾಡುತ್ತಿರುವುದನ್ನು ನೀವು ಕೇಳುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೋಮುದ್ವೇಷದಿಂದ ಸಾವು: ಬಿಜೆಪಿ ಸರ್ಕಾರದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದ 4 ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ…


