Homeಕರ್ನಾಟಕಕೋಮುದ್ವೇಷದಿಂದ ಸಾವು: ಬಿಜೆಪಿ ಸರ್ಕಾರದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದ 4 ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಕೋಮುದ್ವೇಷದಿಂದ ಸಾವು: ಬಿಜೆಪಿ ಸರ್ಕಾರದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದ 4 ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ದಕ್ಷಿಣ ಕನ್ನಡ ಜಿಲ್ಲೆಯ ಮಸೂದ್, ಫಾಝಿಲ್, ಜಲೀಲ್, ದೀಪಕ್ ರಾವ್ ಕುಟುಂಬಗಳಿಗೆ ನೂತನ ಕಾಂಗ್ರೆಸ್ ಸರ್ಕಾರ ತಲಾ 25 ಲಕ್ಷ ರೂಗಳ ಪರಿಹಾರ ಘೋಷಿಸಿದೆ.

- Advertisement -
- Advertisement -

ಬಿಜೆಪಿ ಆಡಳಿತದಲ್ಲಿ ಕೋಮು ದ್ವೇಷದಿಂದ ಕೊಲೆಗೀಡಾಗಿ, ಆಗಿನ ಸರ್ಕಾರದ ತಾರತಮ್ಯದಿಂದ ಪರಿಹಾರ ವಂಚಿತರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಸೂದ್, ಫಾಝಿಲ್, ಜಲೀಲ್, ದೀಪಕ್ ರಾವ್ ಕುಟುಂಬಗಳಿಗೆ ನೂತನ ಕಾಂಗ್ರೆಸ್ ಸರ್ಕಾರ ತಲಾ 25 ಲಕ್ಷ ರೂಗಳ ಪರಿಹಾರ ಘೋಷಿಸಿದೆ.

ಕಳೆದ 5 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಕೋಮು ದ್ವೇ‍ಷದಿಂದಾಗಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಬೆಳ್ಳಾರೆಯ ಮಹಮ್ಮದ್ ಮಸೂದ್, ಸುರತ್ಕಲ್‌ನ ಮೊಹಮ್ಮದ್ ಫಾಝಿಲ್, ಕಾಟಿಪಳ್ಳದ ಅಬ್ದುಲ್ ಜಲೀಲ್ ಮತ್ತು ಕಾಟಿಪಳ್ಳದ ದೀಪಕ್ ರಾವ್ ಅವರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 19 ಜುಲೈ 2022ರಂದು ಮಸೂದ್ ಎಂಬ ಮುಸ್ಲಿಂ ಯುವಕನನ್ನು ಕೊಲೆ ಮಾಡಲಾಯಿತು. ಕ್ಷುಲ್ಲಕ ಕಾರಣಕ್ಕೆ ಮಸೂದ್ (18) ಮೇಲೆ ಕೆಲವರು ಹಲ್ಲೆ ನಡೆಸಿ ಕೊಂದಿದ್ದರು. ನಂತರ ಅದೇ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಎಂಬ ಯುವಕನನ್ನು 26 ಜುಲೈ 2022ರಂದು ದುಷ್ಕರ್ಮಿಗಳು ಹತ್ಯೆ ಮಾಡಿದರು. ಇಷ್ಟಕ್ಕೆ ನಿಲ್ಲದೆ ಒಂದು ದಿನದ ನಂತರದಲ್ಲಿ ಮಂಗಳೂರಿನ ಸುರತ್ಕಲ್‌ನಲ್ಲಿ 28 ಜುಲೈ 2022ರಂದು ಫಾಝಿಲ್‌ ಎಂಬ ಅಮಾಯಕನನ್ನು ಕೊಲ್ಲಲಾಯಿತು. ಈ ಪ್ರಕರಣಗಳ ಹಿಂದೆ ಕೋಮುದ್ವೇಷ ಕೆಲಸ ಮಾಡಿತ್ತು.

ಪ್ರವೀಣ್‌ ಮನೆಗೆ ಬಿಜೆಪಿಯ ಜನಪ್ರತಿನಿಧಿಗಳು ಭೇಟಿ ನೀಡಿದರು. ಸಿಎಂ ತೆರಳಿ 25 ಲಕ್ಷ ರೂ ಪರಿಹಾರ ಘೋಷಿಸಿದರು. ಆದರೆ ಅದೇ ಸಂದರ್ಭದಲ್ಲಿ ಕೊಲೆಯಾದ ಮಸೂದ್‌ಗಾಗಲೀ, ಫಾಝಿಲ್‌ಗಾಗಲೀ ಸರ್ಕಾರ ಪರಿಹಾರವನ್ನು ಘೋಷಿಸಲಿಲ್ಲ. ಅಮಾಯಕರಾದ ಮಸೂದ್‌, ಫಾಝಿಲ್‌ ಕುಟುಂಬವನ್ನು ಭೇಟಿ ಮಾಡಿ ಕನಿಷ್ಠ ಸಂತ್ವಾನವನ್ನು ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಸಂವಿಧಾನವನ್ನು ಪಾಲಿಸುವುದಾಗಿ, ಯಾವುದೇ ಜಾತಿ, ಮತದ ಆಧಾರದಲ್ಲಿ ಅಧಿಕಾರ ನಡೆಸುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಿದ ಸಿಎಂ ವರ್ತನೆ ಅತ್ಯಂತ ಬಾಲಿಶವಾಗಿತ್ತು. ಈ ಕೊಲೆಗಳಿಂದ ಜರ್ಜರಿತವಾದ ಪೋಷಕರ ನೋವಿಗೆ ಧರ್ಮ, ಜಾತಿಯ ಸೋಂಕು ಇರುವುದಿಲ್ಲ ಎಂಬ ಕನಿಷ್ಠ ಅಂತಃಕರಣವೂ ರಾಜ್ಯವನ್ನಾಳುವ ಪಕ್ಷಕ್ಕೆ ಇಲ್ಲವೇ ಎಂಬ ಪ್ರಶ್ನೆ ಎದುರಾಗಿತ್ತು.

ಮಂಗಳೂರಿನ ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ 2022ರ ಡಿಸೆಂಬರ್ 24ರಂದು ಅಬ್ದುಲ್ ಜಲೀಲ್‌ ಎಂಬುವವರನ್ನು ಧರ್ಮದ್ವೇಷದ ಕಾರಣಕ್ಕಾಗಿ ಕೊಲ್ಲಲಾಗಿತ್ತು.

ಜನವರಿ 3 2018 ರಂದು ದೀಪಕ್‌ ರಾವ್ ಎಂಬ ಯುವಕ ಕೊಲ್ಲಲ್ಪಟ್ಟರು. ಆ ಸಮಯದಲ್ಲಿ ದೀಪಕ್ ಬಜರಂಗದಳ ಮತ್ತು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹೇಳಿತ್ತು. ಆಗಿನ್ನೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಮತೀಯ ಗೂಂಡಾಗಿರಿಯಿಂದ ಹಿಡಿದು ಶಾಲಾ ಕೊಠಡಿಯ ಕೇಸರಿ ಬಣ್ಣದವರೆಗೆ: ಬೊಮ್ಮಾಯಿ ಸರ್ಕಾರದ ಕೋಮು ರಾಜಕಾರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...