Homeಮುಖಪುಟನಿಂದನಾತ್ಮಕ ಟ್ವೀಟ್: ತಮಿಳುನಾಡು ರಾಜ್ಯ ಬಿಜೆಪಿ ಕಾರ್ಯದರ್ಶಿಯ ಬಂಧನ

ನಿಂದನಾತ್ಮಕ ಟ್ವೀಟ್: ತಮಿಳುನಾಡು ರಾಜ್ಯ ಬಿಜೆಪಿ ಕಾರ್ಯದರ್ಶಿಯ ಬಂಧನ

- Advertisement -
- Advertisement -

ಇತ್ತೀಚೆಗೆ ಮಧುರೈ ಸಂಸದ ಸು ವೆಂಕಟೇಶನ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ ಜಿ ಸೂರ್ಯಹ್ ಅವರನ್ನು ಮಧುರೈ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಮಲದಿಂದ ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕರೊಬ್ಬರು ಸಾವನ್ನಪ್ಪಿದ ನಂತರ ವೆಂಕಟೇಶನ್ ಅವರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸೂರ್ಯಹ್‌ರವರು ತೀವ್ರವಾಗಿ ಟೀಕಿಸಿಸಿದ್ದರು. “ನಿಮ್ಮ ಪ್ರತ್ಯೇಕತಾವಾದದ ನಕಲಿ ರಾಜಕೀಯವು ಆ ಮೋರಿಗಿಂತ ಕೆಟ್ಟದಾಗಿ ಗಬ್ಬು ನಾರುತ್ತಿದೆ, ಮನುಷ್ಯನಾಗಿ ಬದುಕುವ ಮಾರ್ಗವನ್ನು ಕಂಡುಕೊಳ್ಳಿ!” ಎಂದು ಟ್ವೀಟ್ ಮಾಡಿದ್ದರು.

ಈ ಕುರಿತು ದೂರು ದಾಖಲಾದ ಕಾರಣ ಸೂರ್ಯಹ್‌ರವರನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ. ಈ ಬಂಧನವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ.

“ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯಹ್ ಅವರನ್ನು ಬಂಧಿಸಿರುವುದು ಖಂಡನೀಯ. ಡಿಎಂಕೆಯ ಮಿತ್ರಪಕ್ಷಗಳಾದ ಕಮ್ಯುನಿಸ್ಟರ ಅಸಹ್ಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿರುವುದು ಅವರ ಏಕೈಕ ತಪ್ಪು … ಈ ಬಂಧನಗಳು ನಮ್ಮನ್ನು ತಡೆಯುವುದಿಲ್ಲ ಮತ್ತು ನಾವು ಅಹಿತಕರ ಸತ್ಯದ ಧಾರಕರಾಗಿ ಮುಂದುವರಿಯುತ್ತೇವೆ” ಎಂದು ಅಣ್ಣಾಮಲೈ ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಬಂಧಿಸಿತ್ತು. ಅದರ ಬೆನ್ನಲ್ಲೇ ಈಗ ವಿರೋಧ ಪಕ್ಷದ ಮುಖಂಡನ ಬಂಧನ ಸಹ ನಡೆದಿದೆ.

ಇದನ್ನೂ ಓದಿ ; ಕೇರಳ: ಸಾಲು ಸಾಲಾಗಿ ಬಿಜೆಪಿ ತೊರೆಯುತ್ತಿರುವ ಚಿತ್ರರಂಗದ ಪ್ರಮುಖರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್‌: ನಿರಾಶೆ ವ್ಯಕ್ತಪಡಿಸಿದ ಕುಸ್ತಿಪಟುಗಳು

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಶನ್‌ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಅವರನ್ನು ಆ ಬಳಿಕ ಕುಸ್ತಿ...